Connect with us

DAKSHINA KANNADA

ಉಮ್ರಾ ಯಾತ್ರೆಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿ ನಿಧನ

Published

on

ರಿಯಾದ್‌: ಮುಸ್ಲಿಂಮರ ಪವಿತ್ರ ಕಾರ್ಯ ಉಮ್ರಾ ಯಾತ್ರೆಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೋರ್ವರು ಮದೀನಾ ಭೇಟಿ ವೇಳೆ ನಿಧನರಾಗಿದ್ದಾರೆ.


ದಕ್ಷಿಣ ಕನ್ನಡದ ಪುತ್ತೂರಿನ ಕುಂಬ್ರದ ನಿವಾಸಿ ಅಬ್ದುರಹ್ಮಾನ್ (72) ಮೃತರು.
ಮದೀನಾಕ್ಕೆ ಭೇಟಿ ನೀಡಲು ಮತ್ತು ಉಮ್ರಾ ಮಾಡಲು ಅವರು ತಮ್ಮ ಮಗನೊಂದಿಗೆ ಜಿಜಾನ್‌ನಿಂದ ಹೊರಟಿದ್ದರು.

ಅವರು ಇಂಡಿಯನ್ ಕಲ್ಚರಲ್ ಫೌಂಡೇಶನ್ (ಐಸಿಎಫ್) ನ ಜೀಸನ್ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಹೊರಟಿದ್ದ ಬಸ್‌ನಲ್ಲಿ ಮದೀನಾಕ್ಕೆ ಪ್ರಯಾಣಿಸುತ್ತಿದ್ದರು.

ಶುಕ್ರವಾರ ಜುಮುಆದಲ್ಲಿ ಪಾಲ್ಗೊಂಡು ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಿಧನರಾದರು. ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ನಾಯಕರಾದ ಅಬ್ದುಲ್ ರಜಾಕ್ ಉಳ್ಳಾಲ್,

ತಾಜುದ್ದೀನ್ ಸುಳ್ಯ, ಜಬ್ಬಾರ್ ಉಪ್ಪಿನಂಗಡಿ, ಹುಸೈನರ್ ಮಾಪಲ್ ಹಾಗೂ ಫೈಝಲ್ ಸಂತೋಷ್ ನಗರ ಇವರ ತಂಡದ ಮೂಲಕ ಜನಾಝದ ಅಂತ್ಯಕ್ರಿಯೆಗೆ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಮದೀನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ.

DAKSHINA KANNADA

ಮಂಡ್ಯದಲ್ಲಿ ಅವಳಿ ಮಕ್ಕಳ ಸಾ*ವಿನ ಪ್ರಕರಣಕ್ಕೆ ಟ್ವಿಸ್ಟ್..! ತಾಯಿಯಿಂದ ಕೃತ್ಯ..!

Published

on

ಮಂಗಳೂರು,(ಮಂಡ್ಯ): ಮಂಡ್ಯದಲ್ಲಿ ಐಸ್‌ ಕ್ರೀಮ್‌ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಬುಧವಾರ ಅವಳಿ ಮಕ್ಕಳು ಸಾವನ್ನಪ್ಪಿದ್ದರು. ಐಸ್ ಕ್ರೀಂ ತಿಂದು ಮಕ್ಕಳು ಇಹಲೋಕ ತ್ಯಜಿಸಿವೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲಾಗಿದೆ. ತಾಯಿಯೇ ಮಕ್ಕಳಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಹೆತ್ತ ಮಕ್ಕಳಿಗೆ ವಿಷವಿಕ್ಕಿದ ತಾಯಿ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವನ್ನಪ್ಪಿದ್ದವು.

ಪೊಲೀಸ್‌ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದಾಳೆಂಬುದು ಗೊತ್ತಾಗಿದೆ.

ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಈ ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾಳೆ. ಬಳಿಕ ತಾನೂ ಸೇವಿಸಿದ್ದಳು. ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು.

ಸದ್ಯ ತಾಯಿ ಹಾಗೂ ಮೊದಲ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

DAKSHINA KANNADA

ಕಾರ್ಪೋರೇಟರ್ ಮಗಳ ಹ*ತ್ಯೆ..! ಒಂಬತ್ತು ಬಾರಿ ಇರಿದ ಪಾಪಿ…!

Published

on

ಮಂಗಳೂರು (ಹುಬ್ಬಳ್ಳಿ) : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ. ನೇಹಾ ಹಿರೇಮಠ ಕೊಲೆಗೀಡಾದಾಕೆ. ಕಾಲೇಜ್ ಕ್ಯಾಂಪಸ್​ನಲ್ಲಿರುವ ಕ್ಯಾಂಟೀನ್​ನಲ್ಲಿ ಫೈಜಲ್ ಎಂಬಾತ 9 ಬಾರಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ನೇಹಾಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನೇಹಾ ಮೃತಪಟ್ಟಿದ್ದಾಳೆ.

                  ತಂದೆ ನಿರಂಜನ್ ಹಿರೇಮಠ ಜೊತೆಗೆ ನೇಹಾ

ಪ್ರೀತಿ ನಿರಾಕರಣೆಗೆ ಪಾಪಿಯಿಂದ ಹೇಯ ಕೃತ್ಯ..!

ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿರುವ ನೇಹಾ ಹಿರೇಮಠಗೆ ಆರೋಪಿ ಫೈಜಲ್ ಎಂಬಾತ ಪ್ರೀತಿಸುವಂತೆ ಪೀಡಿಸಿದ್ದಾನೆ. . ಆದರೆ, ನೇಹಾ ಇದನ್ನು ನಿರಾಕರಿಸುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.
ಆರೋಪಿ ಫೈಜಲ್ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ‌ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.ಇನ್ನು ನೇಹಾ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

Continue Reading

DAKSHINA KANNADA

“ಸೆಕ್ಸ್‌” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್‌..!

Published

on

ಮಂಗಳೂರು ( ಪಶ್ಚಿಮ ಬಂಗಾಳ ) : ಮಾಜಿ  ಸಂಸದೆ ಮಹುವಾ ಮೋಯಿತ್ರಾ ( Mahua Moitra ) ವಿವಾದದ ಕಾರಣದಿಂದ ಸಂಸತ್‌ನಿಂದ ಉಚ್ಚಾಟಿತರಾಗಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದರು ಎಂಬ ಆರೋಪ ಅವರ ಮೇಲಿತ್ತು. ಈಗ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದು ಅವರ ಹೇಳಿಕೆ ಬಾರಿ ವೈರಲ್ ಆಗಿದೆ. ಕೃಷ್ಣ ನಗರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿರುವ ಅವರನ್ನ ಪತ್ರಕರ್ತರೊಬ್ಬರು ಸಂದರ್ಶನ ನಡೆಸಿದ್ದಾರೆ. ಈ ವೇಳೆ ಪತ್ರಕರ್ತ ನಿಮ್ಮ ಸಾಮಾರ್ಥ್ಯದ ರಹಸ್ಯ ಏನು ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೊಯಿತ್ರಾ ಅವರು “ಸೆಕ್ಸ್‌” ಎಂದು ಹೇಳಿರುವ ವಿಡಿಯೋವನ್ನು ಮೋದಿ ಕಾ ಪರಿವಾರ ವೈರಲ್ ಮಾಡಿದೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಟೀಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಸಂಸದೆಯಾಗಿ ಬಹಿರಂಗವಾಗಿ ಹೀಗೆ ಹೇಳುವುದು ತಪ್ಪು ಎಂದು ಖಂಡಿಸಿದ್ದಾರೆ.

ನ್ಯೂಸ್‌ ದಿ ಟ್ರುತ್‌ ಎಂಬ ಮಾದ್ಯಮ ಮಾಡಿದ ಸಂದರ್ಶನ

ಸ್ಪಷ್ಟನೆ ನೀಡಿದ ಸಂದರ್ಶನ ನೀಡಿದ ವರದಿಗಾರ..!

“ಮಹುವಾ ಮೊಯಿತ್ರಾ ಅವರನ್ನು ಸಂದರ್ಶನ ಮಾಡಿದ್ದು ನಾನೇ. ನಿಮ್ಮ ಸಾಮರ್ಥ್ಯದ ಗುಟ್ಟೇನು ಎಂಬುದಾಗಿ ಕೇಳಿದೆ. ಅದಕ್ಕೆ ಅವರು, ಎಗ್ಸ್‌ (ಮೊಟ್ಟೆಗಳು) ಎಂಬುದಾಗಿ ಎರಡು ಬಾರಿ ಉತ್ತರಿಸಿದರು. ಆದರೆ, ಭಕ್ತ ಮಂಡಳಿಯು ಎಗ್ಸ್‌ ಎಂಬುದನ್ನು ಸೆಕ್ಸ್‌ ಎಂಬುದಾಗಿ ತಿರುಚಿದೆ” ಎಂಬುದಾಗಿ ನ್ಯೂಸ್‌ ದಿ ಟ್ರುತ್‌ ಎಂಬ ಮಾಧ್ಯಮ ಸಂಸ್ಥೆ ವರದಿಗಾರ ತಮಲ್‌ ಸಾಹ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ವರದಿಗಾರ ಸ್ಪಷ್ಟನೆ ನೀಡುವ ಹೊತ್ತಿಗೆ ವಿಡಿಯೊ ಭಾರಿ ವೈರಲ್‌ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು.  ಈ ಹಿನ್ನೆಲೆಯಲ್ಲಿ ಅವರನ್ನು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

 

Continue Reading

LATEST NEWS

Trending