Connect with us

    FILM

    ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟ “ರಾಕ್‌ಸ್ಟಾರ್‌ ರೂಪೇಶ್‌ ಶೆಟ್ಟಿ”

    Published

    on

    ಮಂಗಳೂರು: ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಷೋ ಬಿಗ್‌ಬಾಸ್‌ ಓಟಿಟಿ ಸೀಸನ್‌-1 ಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್‌ ಗೂರೂಜಿ, ಸೋನು ಶ್ರೀನಿವಾಸ್‌ ಗೌಡ ಬಿಗ್‌ ಬಾಸ್‌ ಮನೆ ಸೇರಿದ್ದಾರೆ. ಅಂದ ಹಾಗೆ ಈ ಬಾರಿ ಕರಾವಳಿಯಿಂದ ನಟ, ನಿರೂಪಕ ರೂಪೇಶ್‌ ಶೆಟ್ಟಿ ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದಾರೆ.


    ರೂಪೇಶ್‌ ಹೆಸರು ಕರಾವಳಿ ಮಾತ್ರವಲ್ಲ ಕರ್ನಾಟಕದಾದ್ಯಂತ ಚಿರಪರಿಚಿತ ಹೆಸರು. ನಿಶ್ಯಬ್ಧ-2, ಡೇಂಜರ್‌ ಝೋನ್‌, ಪಿಶಾಚಿ-2 ಮುಂತಾದ ಚಿತ್ರಗಳಲ್ಲಿ ಭಾಗವಹಿಸಿದ್ದಾರೆ. 2018ರಲ್ಲಿ ರೂಪೇಶ್‌ ಶೆಟ್ಟಿ ನಾಯಕನಾಗಿ ನಟಿಸಿದ ‘ಅಮ್ಮರ್‌ ಪೊಲೀಸಾ’, ಇತ್ತೀಚೆಗೆ ಬಿಡುಗಡೆಯಾದ ಗಿರ್‌ಗಿಟ್‌ ಸಿನಿಮಾ ಹಿಟ್‌ ಆಗಿ ಹೆಸರು ತಂದಿತ್ತು.

    BIG BOSS

    ಸಾಕು ನಾಯಿಗೋಸ್ಕರ ಬ್ರೇಕಪ್ ಮಾಡಿಕೊಂಡ ‘ಬಿಗ್ ಬಾಸ್ ಸೀಸನ್ 10’ರ ಸ್ಪರ್ಧಿ !

    Published

    on

    ಮಂಗಳೂರು/ಬೆಂಗಳೂರು: ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಆಗಿರುವ ಪವಿ ಪೂವಪ್ಪ ಅವರು ‘ಬಿಗ್ ಬಾಸ್ ಸೀಸನ್ 10’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ಇವರ ಬ್ರೇಕಪ್ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ.

     

    ನಾನು ಏಕೆ ಬ್ರೇಕಪ್ ಮಾಡಿಕೊಂಡೆ ಅನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ. ಯುಟ್ಯೂಬ್ ಚಾನಲ್ ವೊಂದಕ್ಕೆ ನೀಡಿರುವ ಸಂದರ್ಶನವಿಗ ಸಖತ್ ವೈರಲ್ ಆಗುತ್ತಿದೆ. ಬಿಗ್ ಬಾಸ್ ಸಮಯದಲ್ಲಿ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದ ಪವಿ,’ನನ್ನ ಬಾಯ್ ಫ್ರೆಂಡ್ ಐರ್ ಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ನಾವಿಬ್ಬರು ಮದುವೆಯಾಗುತ್ತಿದ್ದೇವೆ’ ಅಂತಾ ಹೇಳಿದ್ದರು.

    ಹೌದು, ಡಿಜೆ ಮ್ಯಾಡಿ ಎಂಬುವವರ ಜೊತೆ ಪವಿ ಪೂವಪ್ಪ ಕಳೆದ ಐದು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದರು. ಈ ಜೋಡಿ ಶೀಘ್ರವೇ ಮದುವೆ ಆಗಲಿದೆ ಅಂತಾ ಅನೇಕರು ಅಂದುಕೊಂಡಿದ್ದರಂತೆ. ಆದರೆ ಇದು ಹುಸಿಯಾಗಿದ್ದು, ‘ನಮ್ಮಿಬ್ಬರ ನಡುವೆ ಬ್ರೇಕಪ್ ಆಗಿದೆ’ ಅಂತಾ ಸ್ವತಃ ಪವಿ ಅವರೇ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಟೀಂ ಇಂಡಿಯಾದ WTC ಫೈನಲ್ ಭವಿಷ್ಯ !

    ಈ ಬಗ್ಗೆ ಮಾತನಾಡಿರುವ ಪವಿ,”ನಾವು ಐದು ವರ್ಷಗಳಿಂದ ಜೊತೆಗಿದ್ದೇವೆ. ನಮ್ಮಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು. ಆದರೆ ಬರುಬರುತ್ತಾ ನನ್ನ ನಾಯಿ ಬಗ್ಗೆ ಅವರಿಗೆ ಸಮಸ್ಯೆ ಶುರುವಾಯಿತು. ಮದುವೆಯಾದ ಮೇಲೆ ಮನೆಯಲ್ಲಿ ನಾಯಿಯನ್ನು ಬಿಡುವುದಿಲ್ಲ ಅಂತಾ ಹೇಳಿದರು. ಇದರಿಂದಲೇ ನಮ್ಮಿಬ್ಬರ ನಡುವೆ ಸಮಸ್ಯೆ ಶುರುವಾಯ್ತು. ಸಣ್ಣಪುಟ್ಟ ವಿಚಾರಗಳಿಗೆ ಕಾರಣ ಕೊಡಲು ಶುರು ಮಾಡಿದರು. ಹೀಗಾಗಿ ನಾನು ಬ್ರೇಕಪ್ ತೀರ್ಮಾನಕ್ಕೆ ಬಂದೆ. ಇದರಿಂದ ನಾನೇ ಹಿಂದೆ ಸರಿದರೆ ಒಳ್ಳೆದು ಅನಿಸಿತು” ಅಂತಾ ಅವರು ಹೇಳಿಕೊಂಡಿದ್ದಾರೆ.

    ಐದು ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿದ್ದ ಜೋಡಿ ಇದೀಗ ಬ್ರೇಕಪ್ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಯಲ್ಲಿದೆ.

    Continue Reading

    FILM

    ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳುತ್ತಿರುವ ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ ಗಣ್ಯರು

    Published

    on

    ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು ಪ್ರಮುಖ ಶಸ್ತ್ರಚಿಕಿತ್ಸೆಯೊಂದಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಇಂದು ಶಿವಣ್ಣ ತೆರಳಲಿದ್ದು, ಸುದೀಪ್ ಸೇರಿದಂತೆ ಹಲವು ಗಣ್ಯರು ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ್ದಾರೆ.

    ಕಿಚ್ಚ ಸುದೀಪ್ ಅವರು ಶಿವಣ್ಣ ಅವರ ನಿವಾಸಕ್ಕೆ ತೆರಳಿ ಅವರಿಗೆ ಶುಭ ಹಾರೈಸಿದ್ದಾರೆ. ಧೈರ್ಯ ತುಂಬವ ಕಾರ್ಯ ಮಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಹಲವು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಇದ್ದಾರೆ.

    ಮಾಜಿ ಸಚಿವ, ನಟ ಬಿಸಿ ಪಾಟೀಲ್ ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಹೂಗುಚ್ಛ ನೀಡಿ ಶೀಘ್ರ ಗುಣಮುಖವಾಗಿ ಮರಳುವಂತೆ ಶುಭ ಹಾರೈಸಿದ್ದಾರೆ.

    ಸಚಿವ ಮಧು ಬಂಗಾರಪ್ಪ ಅವರು ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಶುಭ ಹಾರೈಸಿದ್ದಾರೆ. ಮಧು ಬಂಗಾರಪ್ಪ ಅವರು ಶಿವಣ್ಣ ಅವರ ಆಪ್ತ ಸಂಬಂಧಿ. ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಸಹ.

    ನಟ ವಿನೋದ್ ರಾಜ್​ ಕುಮಾರ್ ಅವರು ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರೊಟ್ಟಿಗೆ ಕೆಲ ಸಮಯ ಕಳೆದಿದ್ದಾರೆ. ಹಳೆಯ ಗೆಳೆಯರಾದ ಇಬ್ಬರೂ ತುಸು ಸಮಯ ಹರಟೆ ಹೊಡೆದಿದ್ದಾರೆ. ವಿನೋದ್ ತಮ್ಮ ತೋಟದಿಂದ ಹಣ್ಣು-ತರಕಾರಿಗಳನ್ನು ಶಿವಣ್ಣನಿಗೆ ನೀಡಿದ್ದಾರೆ.

     

    ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ಹೋಗುತ್ತಿದ್ದಾರೆ. ಇಂದು ರಾತ್ರಿ 8:30ಗೆ ಶಿವಣ್ಣ ತೆರಳಲಿದ್ದು, ಅವರೊಟ್ಟಿಗೆ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಸಹ ತೆರಳುವ ಸಾಧ್ಯತೆ ಇದೆ.

    Continue Reading

    FILM

    ರೇಣುಕಾಸ್ವಾಮಿ ಕೊ*ಲೆ ಪ್ರಕರಣ; A4 ಜಗದೀಶ್ ಗೆ ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ ?

    Published

    on

    ಮಂಗಳೂರು/ಬೆಂಗಳೂರು: ಕಳೆದ ಶುಕ್ರವಾರ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಸೇರಿ ಒಟ್ಟು 7 ಮಂದಿಗೆ ಹೈಕೋರ್ಟ್ ಪೂರ್ಣಾವಧಿಯ ಜಾಮೀನು ಮಂಜೂರು ಮಾಡಿದೆ. ಆದರೆ ನಾಲ್ಕನೇ ಆರೋಪಿಯಾಗಿರುವ ಜಗದೀಶ್ ಗೆ ಜಾಮೀನು ಸಿಕ್ಕಿಲ್ಲ.

    ಈ ಬಗ್ಗೆ ಮಾತನಾಡಿರುವ ಜಗದೀಶ್ ತಾಯಿ ಸುಲೋಚನಮ್ಮ, ಇಡೀ ದಿನ ನಮ್ಮವರು ತಮ್ಮವರು ಎನ್ನುವವರ ಬಳಿ ಹೋಗಿ ಕೇಳಿದ್ವಿ, ಯಾರೂ ಶ್ಯೂರಿಟಿ ಕೊಡಲು ಮುಂದೆ ಬರುತ್ತಿಲ್ಲ ಅಂತ ಹೇಳಿದ್ದಾರೆ.

    ನಮಗೆ ಆತ್ಮೀಯರು ಒಬ್ಬರು ಶ್ಯೂರಿಟಿ ಹಾಕಲು ಮುಂದೆ ಬಂದಿದ್ದಾರೆ. ಆದ್ರೆ ಶ್ಯೂರಿಟಿ ಹಾಕಲು ಇಬ್ಬರು ಬೇಕು ಹಾಗಾಗಿ ಇನ್ನೊಬ್ಬರಿಗಾಗಿ ಹುಡುಕುತ್ತಿದ್ದೇವೆ. ಊಟ, ನೀರು ಬಿಟ್ಟು ಊರೂರು ಅಲೆದಾಟ ಮಾಡ್ತಿದ್ದೇವೆ. ದರ್ಶನ್ ಅವರು ಈ ಸಮಯದಲ್ಲಿ ಕೈ ಹಿಡಿಯಬೇಕಿದೆ. 6 ತಿಂಗಳು ನಂತರವಾದರೂ ಮಗ ಮನೆಗೆ ಬರುತ್ತಾರೆಂದು ಖುಷಿಯಾಗಿದೆ.

    ಇದನ್ನೂ ಓದಿ: ಉಕ್ರೇನ್ ಕೈವಾಡದ ಶಂಕೆ; ರಷ್ಯಾದ ನ್ಯೂಕ್ಲಿಯರ್ ಡಿಫೆನ್ಸ್ ಫೋರ್ಸ್ ನ ಮುಖ್ಯಸ್ಥ ಸಾವು 

    ಈಗ ನೋಡಿದ್ರೆ ಸಮಸ್ಯೆಗಳು ಒಂದರ ಮೇಲೆ ಒಂದು ಬರುತ್ತಿವೆ. ದರ್ಶನ್ ಅವರೇ ಶ್ಯೂರಿಟಿ ವ್ಯವಸ್ಥೆ ಮಾಡಬೇಕು ಅಂತ ಆರೋಪಿ ಜಗದೀಶ್ ತಾಯಿ ಮನವಿ ಮಾಡಿದ್ದಾರೆ. ಹೇಗೋ ನಮ್ಮ ಮಗ ಮನೆಗೆ ಬಂದರೆ ನಮಗೆ ಅನುಕೂಲವಾಗುತ್ತದೆ. ಆರು ತಿಂಗಳು ನಂತರವಾದರೂ ಮಗ ಮನೆಗೆ ಬರುತ್ತಾರೆಂದು ಖುಷಿಯಾಗಿದೆ. ಈಗ ನೋಡಿದ್ರೆ ಸಮಸ್ಯೆಗಳು ಒಂದರ ಮೇಲೆ ಒಂದು ಬರುತ್ತಿವೆ ಎಂದು ಕಣ್ಣಿರು ಹಾಕುತ್ತಿದ್ದಾರೆ.

    Continue Reading

    LATEST NEWS

    Trending