ಮಂಗಳೂರು: ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಷೋ ಬಿಗ್‌ಬಾಸ್ ಓಟಿಟಿ ಸೀಸನ್-1 ಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗೂರೂಜಿ, ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆ ಸೇರಿದ್ದಾರೆ. ಅಂದ ಹಾಗೆ ಈ ಬಾರಿ ಕರಾವಳಿಯಿಂದ ನಟ, ನಿರೂಪಕ ರೂಪೇಶ್ ಶೆಟ್ಟಿ ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.
ರೂಪೇಶ್ ಹೆಸರು ಕರಾವಳಿ ಮಾತ್ರವಲ್ಲ ಕರ್ನಾಟಕದಾದ್ಯಂತ ಚಿರಪರಿಚಿತ ಹೆಸರು. ನಿಶ್ಯಬ್ಧ-2, ಡೇಂಜರ್ ಝೋನ್, ಪಿಶಾಚಿ-2 ಮುಂತಾದ ಚಿತ್ರಗಳಲ್ಲಿ ಭಾಗವಹಿಸಿದ್ದಾರೆ. 2018ರಲ್ಲಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ ‘ಅಮ್ಮರ್ ಪೊಲೀಸಾ’, ಇತ್ತೀಚೆಗೆ ಬಿಡುಗಡೆಯಾದ ಗಿರ್‌ಗಿಟ್ ಸಿನಿಮಾ ಹಿಟ್ ಆಗಿ ಹೆಸರು ತಂದಿತ್ತು.