sports
ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಅವರ ಸಾಲಿಗೆ ಸೇರಿದ ರೋಹಿತ್ ಶರ್ಮಾ…!
Published
9 months agoon
By
Adminಓಪನರ್ ಆಗಿ ಉತ್ತಮ ಫಾರ್ಮ್‌ನಲ್ಲಿರೋ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೀಗ ಕ್ರಿಕೆಟ್ ದಂತಕತೆ ಭಾರತದ ಸುನಿಲ್ ಗಾವಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಶತಕ ಬಾರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಇದು ರೋಹಿತ್ ಶರ್ಮಾರ 12ನೇ ಶತಕವಾಗಿದ್ದು, IPL ನ 5 ಶತಕ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 48 ನೇ ಶತಕವಾಗಿದೆ. ಇನ್ನು ಇಂಗ್ಲೆಂಡ್ ತಂಡದ ವಿರುದ್ಧ ಇದು ರೋಹಿತ್ ಶರ್ಮಾ ಅವರ ನಾಲ್ಕನೇ ಶತಕವಾಗಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಸುನಿಲ್ ಗವಾಸ್ಕರ್ ಹೊಡೆದಿದ್ದ ನಾಲ್ಕು ಶತಕವನ್ನು ಸಮಗಟ್ಟಿದ್ದಾರೆ.
ಮತ್ತೊಂದು ದಾಖಲೆ :
ಇನ್ನು ಇದೇ ವೇಳೆ ಇನ್ನೊಂದು ದಾಖಲೆ ಬರೆದಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಓಪನಿಂಗ್ ಬ್ಯಾಟರ್‌ಗಳ ಪಟ್ಟಿಯಲ್ಲೂ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಆರಂಭಿಕ ಬ್ಯಾಟರ್ ಕ್ರಿಸ್ ಗೇಲ್ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ.
49 ಶತಕದೊಂದಿಗೆ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ರೆ, 45 ಶತಕದೊಂದಿಗೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದಾರೆ.
ಇದೀಗ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ರೋಹಿತ್ ಶರ್ಮಾ 43 ಶತಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ದಾಖಲೆ ಮುರಿದ ರೋಹಿತ್ ಶರ್ಮಾ 162 ಎಸೆತಗಳಲ್ಲಿ 103 ರನ್ ಗಳಿಸಿ ಔಟ್ ಆಗಿದ್ದಾರೆ.
You may like
Baindooru
ಕದ್ರಿ ಪಾರ್ಕ್‌ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್‌ನಿಂದ ಲಾಂಛನ ಬಿಡುಗಡೆ
Published
48 minutes agoon
22/11/2024ಮಂಗಳೂರು : ಜನವರಿ 11 ಮತ್ತು 12 ರಂದು ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಶರಧಿ ಪ್ರತಿಷ್ಟಾನವು ಆಯೋಜಿಸುವ ‘ ಕಲಾ ಪರ್ಬ ‘ ಇದರ ಲಾಂಛನ ಮತ್ತು ಕರಪತ್ರವನ್ನು ಇಂದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ಬಿಡುಗಡೆ ಗೊಳಿಸಿದರು.
ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಮತ್ತು ಇದರ ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶವನ್ನು ಇಟ್ಟುಕೊಂಡು ಈ ಕಲಾ ಪರ್ಬವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಮೂರ್ತ – ಅಮೂರ್ತ, ಹಿರಿಯ – ಕಿರಿಯ ಎಂಬ ಯಾವುದೇ ಅಂತರ, ಬೇಧ ಇಲ್ಲದೇ ಎಲ್ಲಾ ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಕಲಾ ವೀಕ್ಷಕರಿಗೆ, ಕಲಾಭಿಮಾನಿಗಳಿಗೆ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸುವುದು ಪ್ರಮುಖವಾಗಿರುತ್ತದೆ. ಚಿತ್ರ ಕಲೆ, ಶಿಲ್ಪಕಲೆ ಮತ್ತು ನೃತ್ಯ ಪ್ರಕಾರಗಳ ವಿವಿಧ ರೂಪಗಳ ಅಭಿವ್ಯಕ್ತ ಹರಿವು, ಸೆಳವುಗಳ ಮೂಲಕ ಮೇಳದ ರೂಪದಲ್ಲಿ ಇಲ್ಲಿ ಆಗುತ್ತಿರುವುದು ಕಲಾ ಸಂಭ್ರಮ ಮತ್ತು ಕಲಾ ಜಂಗಮ.
ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾ ಚಿತ್ರ 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರುವುದು. ಕಲಾಕೃತಿಗಳನ್ನು ಮಿತ ದರದಲ್ಲಿ ಖರೀದಿಸುವವರಿಗೆ ಉತ್ತಮ ಅವಕಾಶವಿದು.
ಲಾಂಛನದ ಅರ್ಥ :
ಈ ಕಲಾಪರ್ಬದ ಲಾಂಛನವು ಒಂದು ಸಂದೇಶವನ್ನು ನೀಡುತ್ತಿದೆ. ಇಲ್ಲಿ ಒಂದು ಕ್ಯಾನ್ವಾಸ್ ನಲ್ಲಿ 3 ಬಣ್ಣಗಳ ಸಂಗಮ ( K ) ಇಲ್ಲಿ ಕ್ಯಾನ್ವಾಸ್ ಕಲಾಕೃತಿಯ ಪ್ರತೀಕವಾದರೂ ನಮ್ಮ ಸಮಾಜವೇ ಒಂದು ರೀತಿಯ ಕ್ಯಾನ್ವಾಸ್ ಎಂಬ ಚೌಕಟ್ಟು. ಈ ಬದುಕಿನ ಚೌಕಟ್ಟಿನ ಒಳಗೆ ಎಲ್ಲರದ್ದೂ ಒಂದು ರೀತಿಯ ಬಣ್ಣದ ಬದುಕು. ನಮ್ಮ ನಿತ್ಯ ದಿನಚರಿ, ಚಟುವಟಿಕೆಗಳಿಂದ ಸಮಾಜಕ್ಕೆ, ಪ್ರಕೃತಿಗೆ ಒಂದು ಕೊಡುಗೆಯನ್ನು ನೀಡಬೇಕಾದರೆ ನಮ್ಮ ಸೀಮಿತ ಚೌಕಟ್ಟಿನಿಂದ ವಾದ ಮತ್ತು ಪಾದಗಳನ್ನು ಹೊರಗಿಡಲೇ ಬೇಕು. ಇದರ ಪ್ರತಿ ರೂಪವಾಗಿ ಕ್ಯಾನ್ವಾಸ್ ನಿಂದ ಒಂದು ಕಡೆ ಕುಂಚ ( ವಾದ…ತತ್ವ, ಸಿದ್ದಾಂತ ) ಹೊರಗೆ ಬಂದಿರುತ್ತದೆ. ಇನ್ನೊಂದು ಕಡೆ ಹೆಜ್ಜೆ ( ಪಾದ…ನಡೆ, ನಡತೆ ) ಹೊರಗೆ ಬಂದಿರುತ್ತದೆ.
ಅಂದರೆ ಕಲಾಕ್ಷೇತ್ರದಲ್ಲಿ ಆಗಲಿ, ಸಮಾಜದಲ್ಲಾಗಲಿ ನಾವು ನಮ್ಮದೇ ಸೀಮಿತ ಬಣ್ಣ, ಬದುಕು ಎಂಬ ಚೌಕಟ್ಟಿನಲ್ಲಿ ಕಂಡು ಕೊಂಡದ್ದಕ್ಕಿಂತ, ನಾವು ಚೌಕಟ್ಟು ಮೀರಿ ಹೊರ ಆಯಾಮವನ್ನು ತಲುಪಲು ಪ್ರಯತ್ನಿಸಿದರೆ ( ಖಾಸಗಿ ಬದುಕಿನಿಂದ ಸಾಮಾಜಿಕ ಬದುಕಿಗೆ ) ಉತ್ತಮವಾದ ಕಲಾಕೃತಿಯನ್ನು ಮತ್ತು ಸಮಾಜವನ್ನು ರೂಪಿಸಬಹುದು ಎಂಬುದು ಈ ಲಾಂಛನದ ಒಳಾರ್ಥ.
ಅದೇ ರೀತಿ ಕರ ಪತ್ರದಲ್ಲಿ ಬಣ್ಣದ ಹುಡುಗಿಯೊಬ್ಬಳು ಸಂಭ್ರಮಿಸುತ್ತಿದ್ದಾಳೆ. ಆಕೆಯ ಮುಖ ಬಣ್ಣದ ಪಾಲೇಟ್ ಮತ್ತು ನೀರಿನ ಹೂಜಿ, ಕೈ, ಕಾಲುಗಳು ಕುಂಚ ( ಚಿತ್ರ ಕಲಾ ಮೇಳ ಆಗಿರುವುದರಿಂದ ) ಕೆಳಗಿನ ಪಾದದ ಕುಂಚಗಳಲ್ಲಿ ಹೆಜ್ಜೆ – ಗೆಜ್ಜೆ ( ಈ ಪರ್ಬದಲ್ಲಿ ನೃತ್ಯವೂ ಇರುವುದರಿಂದ ) ಉಟ್ಟ ಲಂಗವು ಶಿಲಾ ಹಾಸುಗಳ ಪ್ರತಿರೂಪ ( ಈ ಪರ್ಬದಲ್ಲಿ ಶಿಲ್ಪ ಕಲೆಯೂ ಇರುವುದರಿಂದ ) ಎದೆ ಭಾಗದಲ್ಲಿ ಕ್ಯಾಮೆರಾ ಲೆನ್ಸ್ ( ಈ ಪರ್ಬದಲ್ಲಿ ಛಾಯಾ ಚಿತ್ರ ಪ್ರದರ್ಶನವೂ ಇರುವುದರಿಂದ ) ಇದೆಲ್ಲರ ಪ್ರತೀಕವಾಗಿ ಈ ಚಿತ್ರವನ್ನು ರಚಿಸಲಾಗಿದೆ.
ಬನ್ನಿ ಕಲಾ ಪರ್ಬ ನಿಮ್ಮದೇ…ಬಣ್ಣದ ಲೋಕದಲ್ಲಿ ಸಂಭ್ರಮಿಸೋಣ. ನಿಮ್ಮ ಬೆಂಬಲವೇ ಈ ಪರ್ಬದ ಯಶಸ್ಸು
Baindooru
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
Published
1 hour agoon
22/11/2024By
NEWS DESK4ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿಯೊಂದು ಪಲ್ಟಿಯಾದ ಘಟನೆ ಉಡುಪಿಯ ಅಂಬಾಗಿಲು – ಪೆರಂಪಳ್ಳಿ ಕ್ರಾಸ್ ನಲ್ಲಿ ಸಂಭವಿಸಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಘಟನೆಯ ಸಂದರ್ಭ ಸ್ಥಳದಲ್ಲಿ ಯಾವುದೇ ವಾಹನ ಇರದೇ ಇದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಸಿಮೆಂಟ್ ರೆಡಿಮಿಕ್ಸ್ ಲಾರಿ ಅಂಬಾಗಿಲಿನಿಂದ ಮಣಿಪಾಲದ ಕಡೆಗೆ ತೆರಳುತ್ತಿತ್ತು.
ಇದನ್ನೂ ಓದಿ : ಶೀಘ್ರದಲ್ಲೇ ಉಬರ್‌ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಪೆರಂಪಳ್ಳಿಗೆ ತೆರಳುವ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Baindooru
ಶೀಘ್ರದಲ್ಲೇ ಉಬರ್‌ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
Published
1 hour agoon
22/11/2024By
NEWS DESK2ಬೆಂಗಳೂರು: ಇನ್ಮುಂದೆ ಟ್ರಾಫಿಕ್ ಸಮಸ್ಯೆಗೆ ಮುಕ್ತಿ! ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉಬರ್‌ನಿಂದ ಹೊಸ ಯೋಜನೆ. ಹೌದು, ಬೆಂಗಳೂರು ಎಂದಾಕ್ಷಣ ತಟ್ಟನೆ ನೆನಪಾಗುವುದು ಟ್ರಾಫಿಕ್ ಜಾಮ್.. ಇದನ್ನು ಗಮನದಲ್ಲಿಟ್ಟುಕೊಂಡು ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸಲು ಉಬರ್ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಶೀಘ್ರವೇ ಬೆಂಗಳೂರಿನಲ್ಲಿ ಉಬರ್ ಶಟಲ್ ಬಸ್ ಸೇವೆಯನ್ನು ಪರಿಚಯಿಸುತ್ತಿದೆ. ಈ ಬಗ್ಗೆ ಈಗಾಗಲೇ ಘೋಷಣೆ ಕೂಡ ಮಾಡಲಾಗಿದೆ. ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ. ದೆಹಲಿ, ಕೋಲ್ಕತ್ತಾ ಬಳಿಕ ಬೆಂಗಳೂರಿನಲ್ಲಿ ಈ ಉಬರ್ ಶಟಲ್ ಬಸ್ ಸೇವೆ ಜಾರಿಗೆ ಬರುತ್ತಿದೆ.
ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಜಾಗತಿಕ ರೈಡ್-ಹೇಲಿಂಗ್ ಸಂಸ್ಥೆಯ ಭಾರತದಲ್ಲಿನ ಹೊಸ ಕೊಡುಗೆಯಾದ ಉಬರ್ ಷಟಲ್ ಅನ್ನು ಅವರು ಪರಿಶೀಲಿಸಿದರು.ಈಗಲೇ ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಉಬರ್ ಷಟಲ್ ಅನ್ನು ಪ್ರಾರಂಭಿಸಲಾಗಿದೆ, ಹೆಚ್ಚಿನ ಜನರು ತಮ್ಮ ಪ್ರಯಾಣಗಾಗಿ ದೊಡ್ಡ ವಾಹನಗಳಲ್ಲಿ ಕಾಯ್ದಿರಿಸಲು ಸಹಾಯ ಮಾಡುತ್ತದೆ. ಇದು ನಿಗದಿತ ಮಾರ್ಗಗಳಲ್ಲಿ ಚಲಿಸುತ್ತದೆ ಮತ್ತು ಮುಂಚಿತವಾಗಿ ಬುಕ್ ಮಾಡಿದ ಸೀಟುಗಳನ್ನು ನೀಡುತ್ತದೆ.
ಉಬರ್ ಶಟಲ್ ಬಸ್ ಸೇವೆಯಿಂದ ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸಲು ಮತ್ತು ಬೆಂಗಳೂರಿನಂತಹ ನಗರಗಳಿಗೆ ಇದು ಉತ್ತಮವಾಗಿದೆ. ಹೆಚ್ಚು ಪರಿಣಾಮಕಾರಿ ಸಾರಿಗೆ ವ್ಯವಸ್ಥೆಯನ್ನು ರಚಿಸಲು ತಂತ್ರಜ್ಞಾನ ಆಧಾರಿತ ಪರಿಹಾರಗಳ ಅಗತ್ಯವನ್ನು ಖರ್ಗೆ ಪ್ರತಿಪಾದಿಸಿದ್ದಾರೆ ಎಂದು ಉಬರ್ ಹೇಳಿಕೆಯಲ್ಲಿ ತಿಳಿಸಿದೆ.
ಉಬರ್ ಇಂಡಿಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು ಈ ಹಿಂದೆ ಕಂಪನಿಯು “ಬೆಂಗಳೂರಿನಲ್ಲಿ ಬಸ್ ಸೇವೆಯನ್ನು ಪ್ರಾರಂಭಿಸಲು ಬಹು ಮಧ್ಯಸ್ಥಗಾರರೊಂದಿಗೆ ಸಕ್ರಿಯ ಮಾತುಕತೆ ನಡೆಸುತ್ತಿದೆ” ಎಂದು ಹೇಳಿದ್ದರು. “ಈ ರೀತಿಯ ಸೇವೆಯನ್ನು ಪ್ರಾರಂಭಿಸಲು ನಮಗೆ ನಿಯಂತ್ರಣದ ಅಗತ್ಯವಿದೆ ಮತ್ತು ಅದನ್ನು ಸ್ವೀಕರಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು. “ನಿಯಂತ್ರಕರು ನಮಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಭಾವಿಸಿ ನಾವು ಉಬರ್ ಬಸ್ ಅನ್ನು ಬೆಂಗಳೂರಿಗೆ ತರಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಉತ್ಸಾಹದ ಯೋಜನೆಯಾಗಿದೆ, ಆದರೆ ಇದು ಗ್ರಾಹಕರು ಬಯಸಿದ ರೀತಿಯಲ್ಲಿ ನಾವು ತಿರುಗುತ್ತಿರುವ ಸ್ಥಳೀಕರಣದ ಪ್ರಯಾಣವನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ. ಸಿಂಗ್ ಪ್ರಕಾರ, ಶಟಲ್ ಸೇವೆಯು ಹೆಬ್ಬಾಳದಿಂದ ಮತ್ತು ಹೊರವರ್ತುಲ ರಸ್ತೆಯಲ್ಲಿರುವ ಟೆಕ್ ಹಬ್‌ನವರೆಗೆ ಚಲಿಸಬಹುದು.
LATEST NEWS
ಶೀಘ್ರದಲ್ಲೇ ಉಬರ್‌ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಉತ್ತರ ಕನ್ನಡದಲ್ಲಿ ಮಂಗನಬಾವು ಸೋಂಕು 125 ಕ್ಕೆ ಏರಿಕೆ
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
ಧರ್ಮಸ್ಥಳದಲ್ಲಿ ಪೊಣ್ಣಂ ಪ್ರಭಾಕರ್ ವಿಶೇಷ ಪೂಜೆ
ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾ*ವು: ಮೂವರ ಬಂಧನ
ಕಾಸರಗೋಡು: ಮಹಿಳಾ ಪೊಲೀಸ್ಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ