Connect with us

    sports

    ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಅವರ ಸಾಲಿಗೆ ಸೇರಿದ ರೋಹಿತ್ ಶರ್ಮಾ…!

    Published

    on

    ಓಪನರ್ ಆಗಿ ಉತ್ತಮ ಫಾರ್ಮ್‌ನಲ್ಲಿರೋ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೀಗ ಕ್ರಿಕೆಟ್ ದಂತಕತೆ ಭಾರತದ ಸುನಿಲ್ ಗಾವಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ದ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಶತಕ ಬಾರಿಸಿದ್ದಾರೆ.

    ಟೆಸ್ಟ್‌ ಕ್ರಿಕೆಟ್‌ ನಲ್ಲಿ ಇದು ರೋಹಿತ್ ಶರ್ಮಾರ 12ನೇ ಶತಕವಾಗಿದ್ದು, IPL ನ 5 ಶತಕ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 48 ನೇ ಶತಕವಾಗಿದೆ. ಇನ್ನು ಇಂಗ್ಲೆಂಡ್ ತಂಡದ ವಿರುದ್ಧ ಇದು ರೋಹಿತ್‌ ಶರ್ಮಾ ಅವರ ನಾಲ್ಕನೇ ಶತಕವಾಗಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಸುನಿಲ್ ಗವಾಸ್ಕರ್ ಹೊಡೆದಿದ್ದ ನಾಲ್ಕು ಶತಕವನ್ನು ಸಮಗಟ್ಟಿದ್ದಾರೆ.

    ಮತ್ತೊಂದು ದಾಖಲೆ :

    ಇನ್ನು ಇದೇ ವೇಳೆ ಇನ್ನೊಂದು ದಾಖಲೆ ಬರೆದಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಓಪನಿಂಗ್ ಬ್ಯಾಟರ್‌ಗಳ ಪಟ್ಟಿಯಲ್ಲೂ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಆರಂಭಿಕ ಬ್ಯಾಟರ್ ಕ್ರಿಸ್ ಗೇಲ್ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ.

    49 ಶತಕದೊಂದಿಗೆ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ರೆ, 45 ಶತಕದೊಂದಿಗೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದಾರೆ.


    ಇದೀಗ ಕ್ರಿಸ್‌ ಗೇಲ್ ಅವರನ್ನು ಹಿಂದಿಕ್ಕಿ ರೋಹಿತ್ ಶರ್ಮಾ 43 ಶತಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ದಾಖಲೆ ಮುರಿದ ರೋಹಿತ್ ಶರ್ಮಾ 162 ಎಸೆತಗಳಲ್ಲಿ 103 ರನ್ ಗಳಿಸಿ ಔಟ್ ಆಗಿದ್ದಾರೆ.

    LATEST NEWS

    ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಹಿಟ್‌ಮ್ಯಾನ್ ನಾಯಕ

    Published

    on

    ನವದೆಹಲಿ : ಟಿ20 ವಿಶ್ವಕಪ್ ಭಾರತ ಗೆದ್ದು ಬೀಗಿತ್ತು. ಈ ಪಂದ್ಯದೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದರು. ಮುಂದೆ ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಮುಂದುವರೆಯಲಿದ್ದಾರ? ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಅನುಮಾನ ಪರಿಹರಿಸಿದ್ದಾರೆ.


    ರೋಹಿತ್ ಶರ್ಮಾ ನಾಯಕತ್ವ :

    ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ವೀಡಿಯೋ ಹೇಳಿಕೆಯನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಟಿ20 ವಿಶ್ವಕಪ್ ಗೆಲುವಿಗೆ ಭಾರತ ತಂಡವನ್ನು ಅಭಿನಂದಿಸಿರುವ ಅವರು, ಭಾರತದ ವಿಜಯಯಾತ್ರೆ ಮುಂದುವರಿಯುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಾವು ಎರಡು ಬಾರಿ ಫೈನಲ್​ ಆಡಿದ್ದೆವು. 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡಿದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಹಾಗೆಯೇ ಕಳೆದ ವರ್ಷ ನವೆಂಬರ್ 23 ರಂದು ಏಕದಿನ ವಿಶ್ವಕಪ್​ನಲ್ಲಿ 10 ಪಂದ್ಯಗಳನ್ನು ಗೆದ್ದ ನಂತರ ನಾವು ಹೃದಯಗಳನ್ನು ಗೆದ್ದವು. ಆದರೆ ನಮಗೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿ, ಜೂನ್ 29 ರಂದು ನಾವು ಹೃದಯಗಳನ್ನು ಗೆಲ್ಲುವುದರ ಜೊತೆ ಕಪ್ ಅನ್ನು ಸಹ ಗೆದ್ದಿದ್ದೇವೆ. ಬಾರ್ಬಡೋಸ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುತ್ತೇವೆ ಎಂದು ನಾನು ರಾಜ್‌ಕೋಟ್‌ನಲ್ಲಿ ಹೇಳಿದ್ದೇನೆ. ಅದರಂತೆ ನಮ್ಮ ಕ್ಯಾಪ್ಟನ್ ಭಾರತದ ಧ್ವಜ ಹಾರಿಸಿದರು ಎಂದು ಜಯ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಜಯಭೇರಿ ಬಾರಿಸಲಿದೆ ಎಂದು ಜಯ್ ಶಾ ಹೇಳಿದ್ದಾರೆ.

    ಇದನ್ನೂ ಓದಿ : ಪ್ಯಾರಿಸ್‌ ಒಲಿಂಪಿಕ್ಸ್ 2024: ಒಲಿಂಪಿಕ್ಸ್‌ಗೆ ಆಗಮಿಸುವ ಆಟಗಾರರಿಗೆ ಏನೇನು ಸೌಲಭ್ಯ ಸಿಗಲಿದೆ ಗೊತ್ತಾ!?

    ಮುಂದಿನ ವರ್ಷ ಫೆಬ್ರವರಿ – ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಜೂನ್ 2025 ರಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಶಾ ಖಚಿತಪಡಿಸಿದ್ದಾರೆ.

     

    Continue Reading

    LATEST NEWS

    ಪ್ಯಾರಿಸ್‌ ಒಲಿಂಪಿಕ್ಸ್ 2024: ಒಲಿಂಪಿಕ್ಸ್‌ಗೆ ಆಗಮಿಸುವ ಆಟಗಾರರಿಗೆ ಏನೇನು ಸೌಲಭ್ಯ ಸಿಗಲಿದೆ ಗೊತ್ತಾ!?

    Published

    on

    ಮಂಗಳೂರು / ನವದೆಹಲಿ : ಒಲಿಂಪಿಕ್ಸ್ ಅನ್ನೋದು ಜಗತ್ತಿನ ಅತೀ ದೊಡ್ಡ ಕ್ರೀಡಾಕೂಟವಾಗಿದ್ದು, 32 ಕ್ರೀಡೆಗಳ ಸುಮಾರು 329 ಸ್ಪರ್ಧೆಗಳು ಇಲ್ಲಿ ಆಯೋಜಿಸಲಾಗುತ್ತದೆ. ಈ ಬಾರಿ ಜುಲೈ 26 ರಿಂದ ಆಗಸ್ಟ್‌ 11 ರ ವರೆಗೆ ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಆಟಗಾರರು ಈಗಾಗಲೇ ಪ್ಯಾರಿಸ್‌ಗೆ ಆಗಮಿಸಿದ್ದಾರೆ. ಒಲಿಂಪಿಕ್ಸ್‌ಗೆ ಆಗಮಿಸುವ ಆಟಗಾರರಿಗೆ ಅಲ್ಲಿ ಏನೇನು ಸೌಲಭ್ಯ ಸಿಗಲಿದೆ ಅನ್ನೋ ಬಗ್ಗೆ ಇಲ್ಲಿದೆ ಡಿಟೈಲ್ಸ್.


    ಹೀಗಿರುತ್ತೆ ವ್ಯವಸ್ಥೆ:

    ಒಲಿಂಪಿಕ್‌ನಲ್ಲಿ ಭಾಗವಹಿಸಲು ರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಎನ್‌ಒಸಿ) ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಇರುತ್ತದೆ. ಈ ಬಾರಿ 206 ಎನ್‌ಒಸಿಯಿಂದ 10,500 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಪ್ಯಾರಿಸ್‌ ತಲುಪಿರುವ ಈ ಕ್ರೀಡಾಪಟುಗಳಿಗೆ ಸೇಂಟ್‌-ಡೆನಿಸ್, ಸೇಂಟ್‌-ಔನ್ ಮತ್ತು ಎಲ್‌ಲೆ-ಸೇಂಟ್‌-ಡೆನಿಸ್‌ನಲ್ಲಿ ನಿರ್ಮಿಸಲಾದ ಒಲಿಂಪಿಕ್ ಗ್ರಾಮದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ : ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿ : ಚಿನ್ನ ಗೆದ್ದ ವಿನೇಶ್ ಫೋಗಟ್

    ಒಲಿಂಪಿಕ್ ಗ್ರಾಮ ವಿಶೇಷವಾಗಿ ಈ ಕ್ರೀಡಾಕೂಟಕ್ಕಾಗಿಯೇ ನಿರ್ಮಾಣ ಮಾಡುವ ಗ್ರಾಮವಾಗಿದೆ. ಇಲ್ಲಿ ಕ್ರೀಡಾಪಟುಗಳಿಗೆ ತಂಗಲು ವ್ಯವಸ್ಥೆ ಇರಲಿದೆ. ಇದಕ್ಕಾಗಿ 2,500 ಹೊಸ ಮನೆಗಳು, ವಿದ್ಯಾರ್ಥಿ ನಿವಾಸ, ಹೊಟೇಲ್‌, 7 ಹೆಕ್ಟೇರ್ ಪ್ರದೇಶದಲ್ಲಿ ಉದ್ಯಾನವನ, ದೊಡ್ಡ ದೊಡ್ಡ ಕಚೇರಿಗಳು, ಅಂಗಡಿಗಳನ್ನು ಒಳಗೊಂಡ ಗ್ರಾಮವಾಗಿರುತ್ತದೆ. ಒಲಿಂಪಿಕ್ಸ್ ಮುಗಿಯುವವರೆಗೂ ಇದು ಕ್ರೀಡಾಪಟುಗಳು ಹಾಗೂ ಅವರ ಜೊತೆಗೆ ತೆರಳುವ ಅಧಿಕಾರಿ ವರ್ಗಕ್ಕೆ ಮೀಸಲಾಗಿರುತ್ತದೆ. ಒಲಿಂಪಿಕ್ಸ್ ಮುಗಿದ ಬಳಿಕ ಇದು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತದೆ.

    Continue Reading

    LATEST NEWS

    ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿ : ಚಿನ್ನ ಗೆದ್ದ ವಿನೇಶ್ ಫೋಗಟ್

    Published

    on

    ನವದೆಹಲಿ : ಮ್ಯಾಡ್ರಿಡ್​ನಲ್ಲಿ ನಡೆದ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಕುಸ್ತಿ ಟೂರ್ನಿಯಲ್ಲಿ ಭಾರತದ ಒಲಿಂಪಿಯನ್​ ಕುಸ್ತಿಪಟು ವಿನೇಶ್ ಫೋಗಟ್ 50 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ವಿನೇಶ್ ಫೋಗಟ್ ಕೊನೆಯ ಕ್ಷಣದಲ್ಲಿ ವೀಸಾ ಪಡೆದು ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಗೆ ಪ್ರವೇಶಿಸಿದ್ದರು.

    ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಎದುರಾಳಿ ಮರೀರಾ ತ್ಯುಮೆರ್ಕೋವಾ ವಿರುದ್ಧ 10-5 ಅಂಕಗಳ ಭರ್ಜರಿ ಗೆಲುವು ಸಾಧಿಸುವ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿನೇಶ್ ಫೋಗಟ್​ ಸೆಮಿಫೈನಲ್​ ಪಂದ್ಯದಲ್ಲಿ ಕೆನಡಾದ ಕೇಟಿ ಡುಚಾಕ್ ಅವರನ್ನು 9-4 ಅಂಕಗಳಿಂದ ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಫೈನಲ್​ನಲ್ಲಿಯೂ ಗೆದ್ದು ಬೀಗಿದ್ದಾರೆ.

    ಇದನ್ನೂ ಓದಿ : WATCH : ನೋಡು ನೋಡುತ್ತಿದ್ದಂತೆ ಕೆಂಪಾದ ಸಮುದ್ರ…ವೀಡಿಯೋ ವೈರಲ್

    ಈ ಹಿಂದೆ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಈಗ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

    Continue Reading

    LATEST NEWS

    Trending