Monday, January 24, 2022

ಉಡುಪಿ: ಸ್ಟುಡಿಯೋಗೆ ನುಗ್ಗಿ ನಗದು ಕಳವು-CCTVಯಲ್ಲಿ ಕೃತ್ಯ ಬಯಲು

ಉಡುಪಿ: ಇಲ್ಲಿನ ಹೊಸ ಬಸ್ ನಿಲ್ದಾಣ ಸಮೀಪ ಮುಖ್ಯರಸ್ತೆಯಲ್ಲಿರುವ ಸೈಂಟ್ ಅಂತೋನಿ ಸ್ಟುಡಿಯೋದಲ್ಲಿ ನಿನ್ನೆ ತಡರಾತ್ರಿ ಕಳ್ಳತನ ನಡೆದಿರುವ ದೂರು ದಾಖಲಾಗಿದೆ.


ರಾತ್ರಿ ಸುಮಾರು 12.30ರ ಆಸುಪಾಸು ಸ್ಟುಡಿಯೋದ ಹಿಂಬದಿಯ ಮೇಲ್ಛಾವಣಿಯ ಹಂಚುಗಳನ್ನು ಸರಿಸಿ ಒಳ ಪ್ರವೇಶಿಸಿದ ಕಳ್ಳ ಡ್ರಾವರ್ ನಲ್ಲಿದ್ದ ಸುಮಾರು 2 ಸಾವಿರದಷ್ಟು ನಗದು ಹಾಗೂ ಒಂದೆರಡು ಪೆನ್ ಡ್ರೈವ್ ಗಳನ್ನು ಎಗರಿಸಿದ್ದಾನೆ.


ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡೊಂದನ್ನು ಮಾಡಿನ ಮೇಲೆ ಬಿಟ್ಟು ಹೋಗಿದ್ದಾನೆ. ಸ್ಟುಡಿಯೋದಲ್ಲಿ ಆಳವಡಿಸಿರುವ ಸಿಸಿ ಫೂಟೇಜ್ ನಲ್ಲಿ ಕಳ್ಳನ ಸಂಪೂರ್ಣ ಚಲನವಲಗಳು ದಾಖಲಾಗಿದ್ದು,

ಮೇಲ್ನೋಟಕ್ಕೆ ಪಕ್ಕದಲ್ಲಿರುವ ವೈನ್ ಶಾಪ್ ಗೆ ಬರುವ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೆಂದು ಸಂಶಯಿಸಲಾಗಿದೆ.

ಬೆಳಿಗ್ಗೆಯೇ ನಂತರವೇ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Hot Topics

ಸುಳ್ಯ: ಅಂಗಡಿಗೆ ಬಂದ ಗ್ರಾಹಕನಿಗೆ ಮಾಲಕನಿಂದ ಹಲ್ಲೆ- ದೂರು ದಾಖಲು

ಸುಳ್ಯ: ಬೆಳ್ಳಿಯ ಚೈನಿಗೆ ಲೇಪನ ಮಾಡಲು ಬಂದ ಗ್ರಾಹಕನೊಬ್ಬನಿಗೆ ಅಂಗಡಿ ಮಾಲಕನೇ ಕಬ್ಬಿಣದ ಪೈಪಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಸುಳ್ಯದಲ್ಲಿ ನಿನ್ನೆ ನಡೆದಿದೆ.ಗಾಯಗೊಂಡ ಗ್ರಾಹಕರನ್ನು ಗೋಪಾಲ ಶೇಟ್ ಕೆ (47) ಎಂದು ಗುರುತಿಸಲಾಗಿದೆ. ಗೋಪಾಲ...

ಮೂಡುಬಿದಿರೆ: ಕಾರು ಢಿಕ್ಕಿ- ಪಾದಾಚಾರಿ ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ: ಇಲ್ಲಿನ ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಸಂಪಿಗೆಯ ಇಡ್ಡಬೆಟ್ಟು ನಿವಾಸಿ 53 ವರ್ಷದ ಹರೀಶ್...

ಕುಂಪಲ: ಪ್ರಯಾಣಿಕರನ್ನು ಇಳಿಸುವ ವೇಳೆ ಖಾಸಗಿ ಸಿಟಿ ಬಸ್‌ಗಳ ಢಿಕ್ಕಿ

ಮಂಗಳೂರು: ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸುವ ಸಂದರ್ಭ ಬಸ್‌ಗೆ ಮತ್ತೊಂದು ಬಸ್‌ ಢಿಕ್ಕಿ ಹೊಡೆದ ಘಟನೆ ಉಳ್ಳಾಲ ಕುಂಪಲದ ಬೈಪಾಸ್ ಬಸ್ಸು ತಂಗುದಾಣದಲ್ಲಿ ಇಂದು ನಡೆದಿದೆ.ಕುಂಪಲದಿಂದ ಮಂಗಳೂರು ಕಡೆಗೆ ಸಾಗುವ ಖಾಸಗಿ ಸಿಟಿ...