Monday, January 24, 2022

ಉಡುಪಿ: ಮುಳ್ಳು ಹಂದಿಗೆ ಢಿಕ್ಕಿ ಹೊಡೆದು ಕಾರು ಪಲ್ಟಿ-ಚಾಲಕ ಆಸ್ಪತ್ರೆಗೆ ದಾಖಲು

ಉಡುಪಿ: ಎರ್ಮಾಳು ತೆಂಕ ರಾ.ಹೆ 66ರಲ್ಲಿ ರಸ್ತೆ ದಾಟುತ್ತಿದ್ದ ಮುಳ್ಳು ಹಂದಿಯೊಂದಕ್ಕೆ ಕಾರೊಂದು ಢಿಕ್ಕಿಯಾಗಿ ನಿಯಂತ್ರಣ ಕಳೆದು ಕೊಂಡು ಪೊದೆಯೊಂದಕ್ಕೆ ಪಲ್ಟಿಯಾಗಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.


ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ, ಮಂಗಳೂರು ನೋಂದಣಿ ಸಂಖ್ಯೆಯ ಕಾರು ತೆಂಕ ಎರ್ಮಾಳು ಗರೋಡಿ ಬಳಿ ಸಾಗುತ್ತಿದಂತೆ ಮುಳ್ಳು ಹಂದಿಯೊಂದು ರಸ್ತೆಗಡ್ಡವಾಗಿ ಬಂದಿತ್ತು. ಈ ಸಂದರ್ಭ ಕಾರು ನಿಯಂತ್ರಣ ಕಳೆದುಕೊಂಡು ಸುಮಾರು ನೂರು ಮೀಟರ್ ಸಾಗಿ ಪೊದೆಗೆ ಉರುಳಿದೆ.
ಕಾರಿನಲ್ಲಿ ಚಾಲಕನೊರ್ವನೇ ಪ್ರಯಾಣಿಸುತ್ತಿದ್ದು ಪಲ್ಟಿಯಾದ ಪರಿಣಾಮ ತಲೆಗೆ ಏಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.


ಕಾರಿನ ಹೊಡೆತಕ್ಕೆ ಮುಳ್ಳು ಹಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದೇ ಸ್ಥಳದಲ್ಲಿ ಎರಡು ತಿಂಗಳ ಹಿಂದೆ ನವಿಲೊಂದು ಸ್ಕೂಟಿಗೆ ಅಡ್ಡ ಬಂದು ಸ್ಕೂಟಿ ಸವಾರ ಮೃತಪಟ್ಟ ಘಟನೆಯನ್ನು ಸ್ಥಳೀಯರು ನೆನಪಿಸುತ್ತಿರುವುದ ಕಂಡು ಬಂದಿದೆ.

Hot Topics

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...

ಸುಳ್ಯ: ಅಂಗಡಿಗೆ ಬಂದ ಗ್ರಾಹಕನಿಗೆ ಮಾಲಕನಿಂದ ಹಲ್ಲೆ- ದೂರು ದಾಖಲು

ಸುಳ್ಯ: ಬೆಳ್ಳಿಯ ಚೈನಿಗೆ ಲೇಪನ ಮಾಡಲು ಬಂದ ಗ್ರಾಹಕನೊಬ್ಬನಿಗೆ ಅಂಗಡಿ ಮಾಲಕನೇ ಕಬ್ಬಿಣದ ಪೈಪಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಸುಳ್ಯದಲ್ಲಿ ನಿನ್ನೆ ನಡೆದಿದೆ.ಗಾಯಗೊಂಡ ಗ್ರಾಹಕರನ್ನು ಗೋಪಾಲ ಶೇಟ್ ಕೆ (47) ಎಂದು ಗುರುತಿಸಲಾಗಿದೆ. ಗೋಪಾಲ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...