Connect with us

LATEST NEWS

“ನಾನು ಕೊಟ್ಟಿರುವ ಚೆಕ್‌ಗಳನ್ನು ವಾಪಸ್‌ ಕೊಡಿ”: ಚುನಾವಣೆಯಲ್ಲಿ ಸೋತ ಕೆಜಿಎಫ್‌ ಬಾಬು ಮನವಿ

Published

on

ಬೆಂಗಳೂರು: ನಾನು ಕೊಟ್ಟಿರುವ ಚೆಕ್‌ಗಳನ್ನು ವಾಪಸ್‌ ಕೊಡಿ!. ಇದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಮಾಡಿಕೊಂಡಿರುವ ಮನವಿ ಮತ್ತು ನೀಡಿರುವ ನೋಟಿಸ್‌. ತಾನು ಸ್ಪರ್ಧಿಸಿದ್ದ‌ ಚಿಕ್ಕಪೇಟೆ ಕ್ಷೇತ್ರ ವ್ಯಾಪ್ತಿಯ 64 ಮಸೀದಿಗಳಿಗೆ ಸ್ಥಳೀಯ ಉರ್ದು ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿದ್ದ ಅವರು ಚಿಕ್ಕಪೇಟೆ ಕ್ಷೇತ್ರದಿಂದ ತನಗೆ ಟಿಕೆಟ್‌ ಕೊಡಿ ಎಂದು ಅವರು ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್‌ ಹಳೆ ಅಭ್ಯರ್ಥಿ ಆರ್‌.ವಿ ದೇವರಾಜು ಅವರಿಗೆ ಟಿಕೆಟ್‌ ನೀಡಿತ್ತು.

ಇದರಿಂದ ಅಸಮಾಧಾನಗೊಂಡ ಕೆಜಿಎಫ್ ಬಾಬು ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಈ ಹಿನ್ನೆಲೆ ಬಿಜೆಪಿಯ ಉದಯ ಗರುಡಾಚಾರ್‌ ಗೆಲುವು ಸಾಧಿಸಿದ್ದರು.

ಉದಯ ಗರುಡಾಚಾರ್‌ ಅವರಿಗೆ 57,299 ಮತಗಳು ಬಿದ್ದರೆ, ಕಾಂಗ್ರೆಸ್‌ ದೇವರಾಜ್‌ ಅವರಿಗೆ 45,186 ಮತಗಳು ಬಿದ್ದಿವೆ. ಪಕ್ಷೇತರರಾಗಿ ನಿಂತ ಕೆಜಿಎಫ್‌ ಬಾಬು ಅವರು 20,931 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಚುನಾವಣೆ ವೇಳೆ ಚಿಕ್ಕಪೇಟೆಯ ಸ್ಲಂ ನಿವಾಸಿಗಳಿಗೆ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪ್ರಚಾರದ ವೇಳೆ ಬಾಬು ಭರವಸೆ ನೀಡಿದ್ದರು. ಚಿಕ್ಕಪೇಟೆ ಅಭಿವೃದ್ಧಿಗೆ 300 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಪ್ರಣಾಳಿಕೆಯನ್ನೂ ಮಂಡಿಸಿದ್ದರು.

ಬಾಬು ಅವರು 1,621 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ ಮತ್ತು 62.32 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅವರು ಹಲವು ಕಾಂಗ್ರೆಸ್‌ ನಾಯಕರಿಗೆ ದೊಡ್ಡ ಮೊತ್ತದ ಸಾಲವನ್ನೂ ನೀಡಿದ್ದರು.

ಬಾಬು ಅವರು ಎಲ್ಲಾ ಮಸೀದಿಗಳಿಗೆ ಆಹ್ವಾನಿಸಿ ಎಸ್‌ಆರ್‌ನಗರದ ಹಕ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಚೆಕ್‌ಗಳನ್ನು ವಿತರಿಸಿದ್ದರು. ಇದು ಅವರ ದೇಣಿಗೆಯಾಗಿದ್ದು, ಮಸೀದಿಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಬಾಬು ಆ ಸಂದರ್ಭದಲ್ಲಿ ಹೇಳಿದ್ದರು.

ಅವರು 64 ಮಸೀದಿಗಳಿಗೆ ನೀಡಿದ ದೇಣಿಗೆ (ಚೆಕ್)‌ ಮೊತ್ತ ಸುಮಾರು 17.30 ಕೋಟಿ ರೂ. ಇದೀಗ ಚುನಾವಣೆಯಲ್ಲಿ ಸೋತಿರುವ ಬಾಬು ಅವರು ಕೋಪಿಸಿಕೊಂಡಿದ್ದು, ತನ್ನಿಂದ ಸಹಾಯ ಪಡೆದರೂ ಮತ ಹಾಕಿಲ್ಲ ಎನ್ನುವುದು, ಎರಡನೆಯದು, ಮೊದಲೇ ಹೇಗೂ ಸೋತಾಗಿದೆ.

ಚೆಕ್‌ ಪಡೆದುಕೊಂಡವರು ಅದನ್ನು ನಗದೀಕರಿಸಿಕೊಂಡರೆ ಏನು ಗತಿ ಎನ್ನುವುದು. ಹೀಗಾಗಿ ಅವರು ಈ ಚೆಕ್‌ಗಳನ್ನು ನಗದೀಕರಿಸದಂತೆ ಸೂಚಿಸಿದ್ದಾರೆ. ʻʻನಾನು ಕೊಟ್ಟ ಹಣ ಹರಾಮ್ ಆಗಿದ್ದು ಅದನ್ನು ಖರ್ಚು ಮಾಡಬೇಡಿ, ಸಾಧ್ಯವಾದಷ್ಟೂ ಬೇಗ ಅದನ್ನು ವಾಪಸ್ ಕೊಡಿʼʼ ಎಂದು ಹೇಳಿದ್ದಾರೆ.

ದಾರುಲ್ ಉಲೂಮ್ ನ ಫತ್ವಾವನ್ನು ಉಲ್ಲೇಖಿಸಿರುವ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಇಂತಹ ದೇಣಿಗೆಗಳನ್ನು ಪಡೆಯುವುದು ಹರಾಮ್ ಆಗಿದೆ ಎಂದು ಸಿದ್ದಾಪುರದ ಟ್ಯಾಂಕ್ ಗಾರ್ಡನ್‌ನಲ್ಲಿರುವ ಮಸೀದಿ-ಇ-ಅತಿಕ್ ಮತ್ತು ಕೃಷ್ಣಪ್ಪ ಗಾರ್ಡನ್‌ನ ಮಸೀದಿ-ಇ-ಹುಸ್ನಾ ಸೇರಿದಂತೆ ಮಸೀದಿಗಳ ಸಮಿತಿಗಳಿಗೆ ಬಾಬು ತಮ್ಮ ಚೆಕ್‌ಗಳನ್ನು ಹಿಂದಿರುಗಿಸುವಂತೆ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಪ್ರಜ್ವಲ್‌ ಅಶ್ಲೀಲ್ ವಿಡಿಯೋ ಡಿಲೀಟ್ ಮಾಡಿ..! ಎಸ್‌ಐಟಿ ವಾರ್ನಿಂಗ್..!

Published

on

ಮಂಗಳೂರು : ಸದ್ಯ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಕರಣ ಬೆಂಬತ್ತಿರುವ ಎಸ್ ಐ ಟಿ ಖಡಕ್ ವಾರ್ನ್ ಮಾಡಿದೆ. ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡದಂತೆ ಹೇಳಿದೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿದ್ದರೆ, ಒಂದು ವೇಳೆ ಡಿಲೀಟ್‌ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಯಾವುದೇ ಅಶ್ಲೀಲ ವೀಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಇದ್ದರೆ ಅದರ ರಚನಕಾರರು ನೀವು ಎಂದು ಪರಿಗಣಿಸಿ ಕ್ರಿಮಿನಲ್ ಕೇಸ್ ಬೀಳುತ್ತದೆ. ಆದ್ದರಿಂದ, ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

BANTWAL

ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!

Published

on

ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ‌ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.


ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

WATCH : ಕೋಳಿಗೂ ಯುವತಿಗೂ ನಡುವೆ ಫೈಟ್; ಗೆದ್ದವರು ಯಾರು? ವೀಡಿಯೋ ವೈರಲ್

Published

on

ಮಂಗಳೂರು : ಇದೊಂತರ ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಎಲ್ಲವೂ ವೈರಲ್ ವೈರಲ್. ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಗಳು ಸದ್ದು ಮಾಡುತ್ತಲೇ ಇರುತ್ತವೆ. ಮನುಷ್ಯರದ್ದೇ ಆಗಿರಲಿ, ಪ್ರಾಣಿ, ಪಕ್ಷಿಗಳದೇ ಆಗಿರಲಿ ಇಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ. ಸದ್ಯ ಅಂತಹುದೇ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕೋಳಿ ಹಾಗೂ ಯುವತಿಯ ನಡುವೆ ಫೈಟ್ ನಡೆದಿದೆ.


ವೀಡಿಯೋದಲ್ಲಿ ಏನಿದೆ?

ವೀಡಿಯೋ ಆರಂಭದಲ್ಲಿ ಯುವತಿಯೊಬ್ಬಳು ತನ್ನಷ್ಟಕ್ಕೆ ಬರುತ್ತಿರುವುದನ್ನು ಕಾಣಬಹುದು. ಈ ವೇಳೆ, ಪಕ್ಕದಲ್ಲಿದ್ದ ಕೋಳಿ ಸುಖಾಸುಮ್ಮನೆ ಆಕೆಯ ಕಾಲಿಗೆ ಬಂದು ಕುಕ್ಕುತ್ತದೆ. ಇದರಿಂದ ಕೋಪಗೊಂಡ ಯುವತಿ ಆ ಕೋಳಿಗೆ ಒದೆಯುತ್ತಾಳೆ. ಅದು ಮತ್ತೆ ಅಟ್ಯಾಕ್ ಮಾಡಲು ಬಂದಾಗ, ಕೈಯಿಂದ ಚೆನ್ನಾಗಿ ಬಾರಿಸುತ್ತಾಳೆ. ಆದರೆ, ಆ ಕೋಳಿ ಹೆದರಿ ಓಡುವುದಿಲ್ಲ. ಬದಲಿಗೆ ಅದು ಮತ್ತೆ ದಾಳಿ ನಡೆಸುತ್ತದೆ.

ಆಗ ಕೋಪದಲ್ಲಿ ಯುವತಿ ಅದಕ್ಕೆ ಒಂದೇಟು ಬಾರಿಸುತ್ತಾಳೆ. ಅವಳಿಗೆ ಇದರಿಂದ ಸಿಟ್ಟು ಬರುತ್ತದೆ. ಅದನ್ನು ಎತ್ತಿ ನೆಲಕ್ಕೆ ಕುಕ್ಕುತ್ತಾಳೆ. ಅಯ್ಯೋ ಓಡೋಗ್ಹೋಣ ಅಂತ ಯೋಚಿಸದ ಕೋಳಿ ಮತ್ತೆ ಅಟ್ಯಾಕ್ ಗೆ ಬರುತ್ತದೆ. ಆಗ ಆಕೆ ತಿರುಗಿಸಿ ತಿರುಗಿಸಿ ಎಸೆಯುತ್ತಾಳೆ. ಆದರೆ, ಅದು ಮತ್ತೆ ಎದ್ದು ಬರುತ್ತೆ. ಆಕೆ ಅಲ್ಲೇ ಸಿಕ್ಕಿದ ವಸ್ತುವಿನಿಂದ ಹೊಡೆಯುತ್ತಾಳೆ.

ಇದನ್ನೂ ಓದಿ : ತಾಯಿಯನ್ನು ಕೊಂ*ದ ಮಗನಿಗೆ ವಿಶಿಷ್ಟ ಶಿಕ್ಷೆ; ಅಪರೂಪದ ಆದೇಶ ನೀಡಿದ ಹೈಕೋರ್ಟ್

ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ವೀಡಿಯೋ ನೋಡಿದವರು ಕಮೆಂಟ್ಸ್ ಮಾಡುತ್ತಿದ್ದು, ಚಿಕನ್ ವರ್ಸಸ್ ಚಿಕ್ ಎಂದು ಕಮೆಂಟ್ಸ್ ಮಾಡಿದ್ದಾರೆ. ಸೋಲೊಪ್ಪಿಕೊಳ್ಳಬೇಡ ಕೋಳಿ, ನೀನು ಆಕೆಯನ್ನು ಸೋಲಿಸಬಲ್ಲೆ, ಎಂತಹ ಫೈಟ್ ಇದು, ಚಿಕನ್ ಟಕ್ಕರ್ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

 

 

Continue Reading

LATEST NEWS

Trending