ಉಡುಪಿ: ಸಮುದ್ರಕ್ಕೆ ಇಳಿದು ಜೀವಾಂತ್ಯಗೊಳಿಸಲು ಪ್ರಯತ್ನಿಸಿದ ಮಹಿಳೆಯೋರ್ವರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಿನ್ನೆ ನಡೆದಿದೆ.
ಇಲ್ಲಿ ಯಾರೂ ಕೂಡ ನೀರಿಗೆ ಇಳಿಯದಂತೆ ಜೀವ ರಕ್ಷಕ ತಂಡ ನಿಗಾ ವಹಿಸಿತ್ತು. ಬೀಚ್‌ಗೆ ಇಳಿಯುವಲ್ಲಿ ನೆಟ್ ಆಳವಡಿಸಿ ಪ್ರವಾಸಿಗರು ನೀರಿಗಿಳಿದು ಅಪಾಯಕ್ಕೀಡಾಗದಂತೆ ಎಚ್ಚರ ವಹಿಸಲಾಗುತ್ತಿದೆ.
ಆದರೆ ನಿನ್ನೆ ಸಂಜೆ ಪುಣೆ ಮೂಲದ ಮಹಿಳೆ ನೀರಿಗಿಳಿದು ಅಪಾಯವನ್ನು ಆಹ್ವಾನಿಸಿದ್ದು ಜೀವರಕ್ಷಕರು ಆಕೆಯನ್ನು ರಕ್ಷಿಸಿದ್ದಾರೆ. ಮಗನೊಂದಿಗೆ ಕಡಲ ತೀರಕ್ಕೆ ಬಂದಿದ್ದು ಆತನನ್ನು ಬದಿಯಲ್ಲಿ ನಿಲ್ಲಿಸಿ ತಾನು ನೀರಿಗಿಳಿದು ಮುಂದೆ ಮುಂದೆ ಹೋಗುತ್ತಿದ್ದಳು.
ಇದನ್ನು ತತ್‌ಕ್ಷಣ ಗಮನಿಸಿದ ಜೀವರಕ್ಷಕರು ಧಾವಿಸಿ ಆಕೆಯನ್ನು ದಡ ಸೇರಿಸಿದರು. ಆಕೆ ಮತ್ತೆ ಅದೇ ಪ್ರಯತ್ನಕ್ಕೆ ಮುಂದಾದಾಗ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯು ಸ್ವಲ್ಪ ಮಟ್ಟಿನ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದು, ಹಿಂದಿ ಭಾಷೆ ಮಾತನಾಡುತ್ತಿದ್ದಳು.
ತನ್ನ ಹೆಸರನ್ನು ಹೇಳುತ್ತಿರಲಿಲ್ಲ, ಊರು ಪುಣೆ ಎಂದಷ್ಟೇ ಹೇಳುತ್ತಿದ್ದಳು.
ಆಕೆ ಆತ್ಮಹತ್ಯೆಗೆ ಯತ್ನಿಸಿದಂತಿದೆ ಎಂದು ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.