Friday, August 19, 2022

ಗುರುಬೆಳದಿಂಗಳು ಫೌಂಡೇಶನ್‌ ‘ಅಬ್ಬಕ್ಕ ಸಾಲುಮರ ಯೋಜನೆ’ಗೆ ಚಾಲನೆ

ಮಂಗಳೂರು: ಪರಿಸರ ಜಾಗೃತಿ, ಸ್ವಚ್ಛತೆ ಕಾರ್ಯಕ್ರಮ ಇಂದಿನ ಅಗತ್ಯ. ಬಡವರ ಸೇವೆ ಜತೆಗೆ ಪರಿಸರ ಕಾಳಜಿ ಮೂಡಿಸುತ್ತಿರುವ ಗುರುಬೆಳದಿಂಗಳು ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು.


ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ವತಿಯಿಂದ ಮಂಗಳೂರು ವಲಯ ಅರಣ್ಯ ಇಲಾಖೆ, ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರ ಸಹಕಾರದಲ್ಲಿ ಉಳ್ಳಾಲ ಅಬ್ಬಕ್ಕನ ಪ್ರತಿಮೆಯಿಂದ ಉಳ್ಳಾಲಬೈಲ್ ಪ್ರದೇಶದವರೆಗೆ ‘ಅಬ್ಬಕ್ಕ ಸಾಲುಮರ ಯೋಜನೆ’ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಉಳ್ಳಾಲ ಕ್ಷೇತ್ರ ಎಲ್ಲ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಸಾಲು ಮರ ಅಭಿವೃದ್ಧಿಪಡಿಸುವ ಯೋಜನೆ ರೂಪಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.

ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಗುರುಬೆಳದಿಂಗಳು ಸಂಸ್ಥೆ ಶಾಂತಿ ಮತ್ತು ಸೌಹಾರ್ದತೆಯ ಕೊಂಡಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯ ಇಲಾಖಾ ಅಧಿಕಾರಿ ಮಹಾಬಲ,

ಅರಣ್ಯ ರಕ್ಷಕಿ ಸೌಮ್ಯಾ, ಉಳ್ಳಾಲ ನಗರಸಭೆ ಪೌರಾಯುಕ್ತೆ ವಿದ್ಯಾ, ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉದ್ಯಮಿಗಳಾದ ಧರ್ಮರಾಜ್ ಅಮ್ಮುಂಜೆ, ಸತೀಶ್ ಕುಮಾರ್ ಬಜಾಲ್, ಯುವವಾಹಿನಿ ಕೊಲ್ಯ ಘಟಕ ಅಧ್ಯಕ್ಷ ಮೋಹನ್ ಮಾಡೂರು,

ಕಣಚೂರು ಮೆಡಿಕಲ್ ಕಾಲೇಜು ಲೆಕ್ಕಪರಿಶೋಧಕ ಯು.ಎ.ಪ್ರೇಮನಾಥ್, ಸಾಮಾಜಿಕ ಕಾರ್ಯಕರ್ತ ಉದಯ ಆರ್.ಕೆ, ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಮನೋಜ್ ಸಾಲ್ಯಾನ್,

ಹೈಕೋರ್ಟ್ ವಕೀಲೆ ರಾಜಲಕ್ಷ್ಮೀ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್ ಪೂಜಾರಿ, ಮಂಗಳೂರು ವಿಶ್ವವಿದ್ಯಾಲಯ ನಾರಾಯಣಗುರು ಅಧ್ಯಯನ‌ ಪೀಠ ಸದಸ್ಯೆ ನಮಿತಾ ಶ್ಯಾಮ್,

ಬಿಲ್ಲವ ಸಂಘ ಬಂಡಿಕೊಟ್ಯ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಮಮತಾ, ಕೊಲ್ಯ ಬಿಲ್ಲವ ಸಂಘದ ಟ್ರಸ್ಟ್ ಅಧ್ಯಕ್ಷ ವೇಣುಗೊಪಾಲ್, ಕಾರ್ಯದರ್ಶಿ ಭಾಸ್ಕರ್ ಮಡ್ಯಾರ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಉಳ್ಳಾಲ ಘಟಕ ಯೋಜನಾಧಿಕಾರಿ ಜಯಂತಿ,

ಲೋಹಿತ್, ವಿವಿಧ ಸಂಸ್ಥೆಗಳ ಸದಸ್ಯರು ಇದ್ದರು. ಕುಸುಮಾಕರ್ ಕುಂಪಲ ಕಾರ್ಯಕ್ರಮ‌ ನಿರೂಪಿಸಿದರು. ಗುರು ಬೆಳದಿಂಗಳು ಫೌಂಡೇಶನ್ ಪ್ರಧಾನ‌ ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು.

LEAVE A REPLY

Please enter your comment!
Please enter your name here

Hot Topics

ದೆಹಲಿ ಉಪ ಮುಖ್ಯಮಂತ್ರಿ ಮನೆ ಮೇಲೆ CBI ದಾಳಿ: ಶೋಧ ಕಾರ್ಯ

ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೊಡಿಯಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರಿಸಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ...

ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ಕಲ್ಲಡ್ಕ ಬಸ್ಟ್ಯಾಂಡ್ ಕ್ಲೀನ್: ಮೆಲ್ಕಾರ್ ಟ್ರಾಫಿಕ್ ಪೊಲೀಸರ ಸಮಾಜಮುಖಿ ಕಾರ್ಯ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ‌ ಧೂಳು ಕೆಸರಿನಿಂದ ಕೂಡಿದ್ದ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ಪೊಲೀಸರ ತಂಡ ನೀರು ಹಾಕಿ ತೊಳೆಯುವ ಅದ್ಭುತ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆಯುತ್ತಿದೆ.ಕಲ್ಲಡ್ಕದ ಪೇಟೆಯಲ್ಲಿರುವ ಬಸ್ ನಿಲ್ದಾಣ...

ಮಂಗಳೂರು: ಆ.22ರಂದು ನಾಡದೋಣಿ ಎಂಜಿನ್ ತಪಾಸಣೆ

ಮಂಗಳೂರು: 2022-23ನೇ ಸಾಲಿಗೆ ಮೀನುಗಾರಿಕೆ ಉದ್ದೇಶಕ್ಕಾಗಿ ಬಳಸುವ ಸೀಮೆಎಣ್ಣೆಯ ಪರವಾನಿಗೆಯನ್ನು ನವೀಕರಿಸುವ ಹಿನ್ನಲೆಯಲ್ಲಿ ನಾಡದೋಣಿ ಎಂಜಿನ್ ತಪಾಸಣೆ ಆ.22ರ ಸೋಮವಾರ ನಡೆಯಲಿದೆ.ದೋಣಿ ಮಾಲಕರು ದೋಣಿಯ ನೋಂದಣಿ ಪತ್ರದ ಪ್ರತಿ, ಆಧಾರ್ ಪ್ರತಿ ಮತ್ತು...