Saturday, October 1, 2022

ಪದೇ ಪದೇ ಬ್ಯಾನ್ ಮಾಡುವುದು ಮೂಲ ಹಿಂದುತ್ವಕ್ಕೆ ದ್ರೋಹ: BJP ವಿರುದ್ಧ ಹರಿಹಾಯ್ದ ಮುತಾಲಿಕ್

ಉಡುಪಿ: ಪದೇ ಪದೇ ನನಗೆ ನಿರ್ಬಂಧ ಹೇರುವುದು ಬಿಜೆಪಿಗೆ ಶೋಭೆ ತರುವುದಿಲ್ಲ. ನೀವು ತಡೆಯುತ್ತಿರುವುದು ಮುತಾಲಿಕ್ ನನ್ನು ಅಲ್ಲ ಹಿಂದುತ್ವವನ್ನು. ಹಿಂದುತ್ವದ ಶಕ್ತಿ ಸೇರುವ ಜಾಗಕ್ಕೆ ನಾಯಕನನ್ನು ತಡೆದು ದ್ರೋಹ ಮಾಡುತ್ತಿದ್ದೀರಿ. ಇದು ಸಂವಿಧಾನ ವಿರೋಧಿ ನಡೆ ಮತ್ತು ಸ್ವಾತಂತ್ರ್ಯ ಹರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಕಾರಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು ‘ಸರ್ಕಾರ ಪದೇ ಪದೇ ನನ್ನ ಮೇಲೆ ನಿರ್ಬಂಧ ಹೇರುವುದು ತಪ್ಪು.ಕಾಂಗ್ರೆಸ್ ಕಾಲದಲ್ಲಿ ಬ್ಯಾನ್ ಮಾಡಿದಾಗ ನೀವು ವಿರೋಧ ಮಾಡಿದ್ದೀರಿ. ಈಗ ಪ್ರವೀಣ್ ನೆಟ್ಟಾರು ಮನೆಗೆ ಸಾಂತ್ವನ ಹೇಳುವಾಗಲೂ ನಿರ್ಬಂಧ ಮಾಡಿದ್ದೀರಿ.

ಅಷ್ಟೇ ಅಲ್ಲದೆ ಗಂಗೊಳ್ಳಿಯ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲೂ ಭಾಗವಹಿಸಲು ಬಿಟ್ಟಿಲ್ಲ. ನಾನು ಮಾತನಾಡಿದರೆ ಗಲಭೆ ಆಗುತ್ತೆ ಅನ್ನುತ್ತೀರಿ. ಗಲಾಟೆಯಾದರೆ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿ. ಸಾಧ್ಯವಾದರೆ ಗಲಾಟೆ ಮಾಡುವವರನ್ನು ಹದ್ದುಬಸ್ತಿನಲ್ಲಿ ಇಡಿ. ಹಿಂದುಗಳಿಂದ ಯಾವತ್ತೂ ಗಲಭೆಯಾಗಿಲ್ಲ ತಿಳಿದಿರಲಿ.

ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿಯಲ್ಲಿ ಮನೆ ಮನೆಗೆ ಹೋಗಿ ತೆಗಿತೀನಿ. ಪದೇಪದೇ ನಿರ್ಬಂಧ ಹೇರಿ ನಾಟಕ ಮಾಡ್ತಾ ಇದ್ದೀರಾ? ಮುಸ್ಲಿಮರನ್ನು, ಶತ್ರುಗಳನ್ನು ,ದಂಗೆ ಕೋರರನ್ನು ನನ್ನ ಮೇಲೆ ಎತ್ತಿ ಕಟ್ಟುತ್ತೀರಾ? ಹಿಂದುಗಳ ಕೊಲೆಯಾಗುವಾಗ ಸಂಘಟನೆಗಳಿಗೆ ನೀವು ಬಲ ತುಂಬಬೇಕು. ಅದನ್ನು ನೀವು ಮಾಡುತ್ತಿಲ್ಲ. ನ್ಯಾಯಾಲಯದಿಂದ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿಸ್ತೀನಿ’ ಎಂದು ಆಕ್ರೋಶಭರಿತವಾಗಿ ನುಡಿದರು.


ಇನ್ನು ಶಿವಮೊಗ್ಗ ಶಂಕಿತ ಭಯೋತ್ಪಾದಕರ ಬಂಧನ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ ‘ಶಿವಮೊಗ್ಗ ಅಂದರೆ ಹಿಂದುತ್ವದ ಭದ್ರಕೋಟೆ. ಮಲೆನಾಡಿನಲ್ಲಿ ಹಿಂದೂಗಳ ಜಾಗೃತ ಸಮಾಜವಿದೆ. ಮಲೆನಾಡಿನಲ್ಲಿ ಭಯೋತ್ಪಾದಕರ ಅಡಗು ತಾಣಗಳಾಗುತ್ತಿದೆ.

ಸರಕಾರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಿಂದೂ ಭದ್ರಕೋಟೆ ಶಿಥಿಲವಾಗುತ್ತಿದೆ, ಇದು ಅಪಾಯಕಾರಿ ಬೆಳವಣಿಗೆ. ಸರಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಯಾನಕ ಸ್ಥಿತಿ ನಿರ್ಮಾಣವಾಗುತ್ತೆ’ ಎಂದು ಎಚ್ಚರಿಸಿದರು.

ಇನ್ನು ಇರಾನ್ ನಲ್ಲಿ ಹಿಜಾಬ್ ವಿರುದ್ಧ ಮಹಿಳೆಯರ ಹೋರಾಟ ವಿಚಾರವಾಗಿ ಮಾತನಾಡಿ ‘ಇರಾನ್ ಒಂದು ಇಸ್ಲಾಮಿಕ್ ರಾಷ್ಟ್ರ. ಇಸ್ಲಾಮಿಕ್ ರಾಷ್ಟ್ರದಲ್ಲಿ ಹಿಜಾಬ್‌ನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಟ್ಟರ್ ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಶಿಕ್ಷಣದಿಂದ ವಂಚಿಸಲು ಮನೆಯಿಂದ ಹೊರಗೆ ಬಿಡುತ್ತಿಲ್ಲ. ಪ್ರಾಣಿಗಳಂತೆ ಮಹಿಳೆಯರ ಜೊತೆ ವರ್ತಿಸಲಾಗುತ್ತಿದೆ.

ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಕೊಲ್ಲುವ ಮೂಲಕ ಇದು ಬಯಲಾಗಿದೆ. ಇರಾನಿನ ಮುಸ್ಲೀಂ ಮಹಿಳೆಯರು ಸಿಡಿದೆದ್ದಿದ್ದಾರೆ. ಹಿಜಾಬ್ ನ ಪರ ನಿಂತಿರುವ ಕರ್ನಾಟಕದ ವಿದ್ಯಾರ್ಥಿನಿಯರು ಇರಾನ್ ನಿಂದ ಪಾಠ ಕಲಿಯಬೇಕು.

ಕರ್ನಾಟಕದಲ್ಲಿ ನಿಮಗೆ ಹಿಜಾಬ್ ಬ್ಯಾನ್ ಮಾಡಿಲ್ಲ. ನಿಮಗೆ ಎಲ್ಲಿ ಬೇಕಾದರೂ ಹಿಜಾಬ್ ಧರಿಸಿ ಹೋಗಬಹುದು. ಆದರೆ ಕ್ಲಾಸ್ ರೂಮ್ ಒಳಗಡೆ ಹಿಜಾಬ್ ಬೇಡ ಎಂದಷ್ಟೇ ನಿಯಮವಿದೆ. ಇರಾನ್ ನಲ್ಲಿ ಏನಾಗ್ತಿದೆ ಹೋಗಿ ನೋಡಿ. ನಮ್ಮಲ್ಲಿ ಶೋಷಣೆ ಇಲ್ಲ ಸ್ವಾತಂತ್ರ ಕೊಟ್ಟಿದ್ದೇವೆ.

ನ್ಯಾಯಾಲಯದ ಆದೇಶವನ್ನು ಪರಿಪಾಲನೆ ಮಾಡಿ. ನಮ್ಮಲ್ಲಿ ಶರಿಯಾ, ಕುರಾನ್ ,ಹದೀಸ್ ನಡೆಯಲ್ಲ. ನಿಮ್ಮನ್ನು ಶೋಷಣೆ ಮಾಡುತ್ತಿರುವ ಮುಸ್ಲಿಂ ಪುರುಷ ಸಮಾಜದ ಬಗ್ಗೆ ಎಚ್ಚರವಿರಲಿ’ ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಪ್ರವೀಣ್ ನೆಟ್ಟಾರು ಪತ್ನಿಗೆ ಒಲಿದು ಬಂತು ಸರ್ಕಾರಿ ಕೆಲಸ: ಅಧಿಕೃತ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರಿಗೆ ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ನೆಲೆಯಲ್ಲಿ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ...

ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 38 ಲಕ್ಷ ರೂ ಮೌಲ್ಯದ ಚಿನ್ನ ಪತ್ತೆ

ಮಂಗಳೂರು: ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಮಸ್ಕತ್‌ನಿಂದ ಮಂಗಳೂರಿಗೆ ಬಂದಿಳಿದ ಪ್ರಯಾಣಿಕರಿಂದ 752 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.ಭಟ್ಕಳ ಮೂಲದ...

ಎಲ್ಲಿಯಾದ್ರು SDPI ಕಚೇರಿ ಸೀಲ್ ಮಾಡಿದ್ರೆ ನನಗೆ ತಿಳಿಸಿ-ADGP ಅಲೋಕ್ ಕುಮಾರ್

ಬೆಂಗಳೂರು: ನಿಷೆಧಿತ ಸಂಘಟನೆ ಪಿಎಫ್‌ಐ ಕಚೇರಿಗಳಿಗೆ ಪೊಲೀಸರು ಕಾರ್ಯಾಚರಣೆ ಮಾಡುವುದರ ಮುಖೇನ ಹಲವು ಕಚೇರಿಗಳನ್ನು ಸೀಲ್ ಮಾಡಿದ್ದಾರೆ ಹೊರತು ಪ್ರತ್ಯೇಕವಾಗಿ ಎಸ್‌ಡಿಪಿಐ ಕಚೇರಿಗಳನ್ನು ಸೀಲ್ ಮಾಡಿಲ್ಲ. ಪಿಎಫ್‌ಐ ತನ್ನ ಕಾರ್ಯಚಟುವಟಿಕೆಗಳಿಗೆ ಬಳಸುತ್ತಿದ್ದ ಎಸ್‌ಡಿಪಿಐ...