ನವದೆಹಲಿ: ಖ್ಯಾತ ಹಾಸ್ಯ ಕಲಾವಿದನಾಗಿ ತಮ್ಮ ನಗಿಸುವ ಪ್ರತಿಭೆಯಿಂದ ಸಿನಿ ಪ್ರಿಯರ ನಗೆಗಡಲಿನಲ್ಲಿ ತೇಲಸಿದ ಬಾಲಿವುಡ್ ಕಾಮೆಡಿ ಕಿಂಗ್ ರಾಜು ಶ್ರೀವಾಸ್ತವ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿರುವ ಇವರ ಬಿಪಿ ಮಟ್ಟ ನಿನ್ನೆ ರಾತ್ರಿ ತೀವ್ರವಾಗಿ ಕುಸಿದಿತ್ತು.
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.