Connect with us

    LATEST NEWS

    ಪದ್ಮ ಪ್ರಶಸ್ತಿ ಪುರಸ್ಕೃತ ಖ್ಯಾತ ಭರತ ನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಇನ್ನಿಲ್ಲ

    Published

    on

    ಮಂಗಳೂರು/ನವದೆಹಲಿ : ಕಲಾಲೋಕ ಒಬ್ಬ ಮಹಾನ್ ಕಲಾವಿದೆಯನ್ನು ಕಳೆದುಕೊಂಡಿದೆ. ಹೌದು, ಖ್ಯಾತ ಭರತನಾಟ್ಯ ಕಲಾವಿದೆ, ಪದ್ಮ ಪ್ರಶಸ್ತಿ ಪುರಷ್ಕೃತೆ ಯಾಮಿನಿ ಕೃಷ್ಣಮೂರ್ತಿ(84) ಇಹಲೋಕ ತ್ಯಜಿಸಿದ್ದಾರೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ(ಆ.3) ನಿಧ*ನರಾಗಿದ್ದಾರೆ.


    ಯಾಮಿನಿ ಕೃಷ್ಣಮೂರ್ತಿ ವಯೋಸಹಜ ಕಾ*ಯಿಲೆಗಳಿಂದ ಬಳಲುತ್ತಿದ್ದು, ಕಳೆದ 7 ತಿಂಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
    ಯಾಮಿನಿ ಕೃಷ್ಣಮೂರ್ತಿ ಭರತ ನಾಟ್ಯ ಮತ್ತು ಕೂಚಿಪುಡಿ ನೃತ್ಯದ ಮೂಲಕ ಭಾರತದ ಕೀರ್ತಿ ದೇಶ, ವಿದೇಶಕ್ಕೆ ಪಸರಿಸಿದ ಮೇರು ಪ್ರತಿಭೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ 1940ರ ಡಿಸೆಂಬರ್‌ 20 ರಂದು ಅವರು ಜನಿಸಿದ್ದರು. ಅವರ ತಂದೆ ಸಂಸ್ಕೃತ ವಿದ್ವಾಂಸ ಎಂ. ಕೃಷ್ಣಮೂರ್ತಿ. ಯಾಮಿನಿ ಕೃಷ್ಣಮೂರ್ತಿ ತಮ್ಮ ಐದನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯಲ್ಲಿ ತೊಡಗಿದ್ದರು.

    ಪದ್ಮಪ್ರಶಸ್ತಿ ಮುಡಿಗೇರಿಸಿಕೊಂಡ ಕಲಾವಿದೆ :
    ಯಾಮಿನಿ ಅವರು 28ನೇ ವಯಸ್ಸಿನಲ್ಲಿದ್ದಾಗಲೇ 1968ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾಗಿರುವುದು ಅವರ ಹಿರಿಮೆ. 2001ರಲ್ಲಿ ಪದ್ಮಭೂಷಣ, 2016ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಅವರಿಗೆ ಸಂದಿವೆ. 1977ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಲಭಿಸಿದೆ.

    ಇದನ್ನೂ ಓದಿ : ಬೆಸ್ಟ್ ಆ್ಯಕ್ಟರ್ ಆಗಿ ರಕ್ಷಿತ್ ಶೆಟ್ಟಿ..! 6 ಪ್ರಶಸ್ತಿಗಳನ್ನು ಬಾಚಿಕೊಂಡ ‘ಸಪ್ತಸಾಗರದಾಚೆ ಎಲ್ಲೋ..’
    ಕೂಚಿಪುಡಿಯಲ್ಲಿಯೂ ಪ್ರವೀಣರಾಗಿದ್ದ ಯಾಮಿನಿ ಕೃಷ್ಣಮೂರ್ತಿಯವರು ಪಂಕಜ್ ಚರಣ್ ದಾಸ್ ಮತ್ತು ಕೇಲುಚರಣ್ ಮೊಹಾಪಾತ್ರ ಅವರಂತಹವರಿಂದ ಒಡಿಸ್ಸಿ ಕಲಿತರು. ವಿವಿಧ ನೃತ್ಯ ಪ್ರಕಾರಗಳನ್ನು ಕಲಿಯುವುದರ ಜೊತೆಗೆ, ಕೃಷ್ಣಮೂರ್ತಿಯವರು ಕರ್ನಾಟಕ ಗಾಯನ ಮತ್ತು ವೀಣೆಯಲ್ಲಿ ತರಬೇತಿ ಪಡೆದರು.
    ಮಹಾನ್ ಸಾಧಕಿ ಯಾಮಿನಿ ಕೃಷ್ಣಮೂರ್ತಿ ಅವರ ನಿಧನಕ್ಕೆ ಗಣ್ಯರು, ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಅಮೋಘ ಸಾಧನೆಯ ಮೆಲುಕು ಹಾಕುತ್ತಿದ್ದಾರೆ.

    LATEST NEWS

    ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದ ಲಾರಿ; ಇಬ್ಬರು ಸಾ*ವು

    Published

    on

    ಮಂಗಳೂರು/ವಿಜಯನಗರ : ಲಾರಿಯೊಂದು ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಬೆಂಗಳೂರಿನಿಂದ ರಾಜಸ್ಥಾನದತ್ತ ಹೊರಟಿದ್ದ ಲಾರಿಯು ಮೂವರ ಮೇಲೆ ಹರಿದು ಈ ದುರ್ಘಟನೆ ನಡೆದಿದೆ.

    ಆಲೂರಿನ ಸಿದ್ದಲಿಂಗಯ್ಯ(39), ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ದೇವಸಮುದ್ರದ ಕೊಟ್ರಯ್ಯ(26) ಮೃ*ತ ರ್ದುದೈವಿಗಳು.

    ಇದನ್ನೂ ಓದಿ : ಅಮಾ*ನವೀಯ ಕೃ*ತ್ಯ; ಲೈಂ*ಗಿಕ ಕಿರು*ಕುಳ ನೀಡಿ ಬಾಲಕಿಯ ಹ*ತ್ಯೆ

    ಗಾ*ಯಗೊಂಡ ಮತ್ತೊಬ್ಬ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಕುರಿತು ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ರೋಗಿ ಕೊಳಲು ನುಡಿಸುತ್ತಿದ್ದಾಗಲೇ ಮೆದುಳಿನ ಆಪರೇಷನ್

    Published

    on

    ಬೆಳಗಾವಿ: ರೋಗಿ ಕೊಳಲು ನುಡಿಸುತ್ತಾ ಮಾತನಾಡುತ್ತಿರುವಾಗಲೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಬೆಳಗಾವಿಯ ಕೊಲ್ಲಾಪುರ ಕನೇರಿ ಮಠದ ಸಿದ್ದಗಿರಿ ಆಸ್ಪತ್ರೆಯಲ್ಲಿ ನಡೆದಿದೆ.

    ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸುವಾಗ ಮೆದುಳಿಗೆ ಅರಿವಳಿಕೆ ನೀಡಿರಲಿಲ್ಲ. ಹೀಗಾಗಿ ರೋಗಿ ಸಂಪೂರ್ಣವಾಗಿ ಪ್ರಜ್ಞಾಸ್ಥಿತಿಯಲ್ಲೇ ಇದ್ದರು. ಕೇವಲ ಮೆದುಳಿನ ಭಾಗದ ಹೊರಭಾಗದಲ್ಲಿ ಮಾತ್ರ ಅರಿವಳಿಕೆ ನೀಡಲಾಗಿತ್ತು. ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ ರೋಗಿ ನಿರಂತರವಾಗಿ ಕೊಳಲು ನುಡಿಸುತ್ತಿದ್ದರು.

    ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದ ಡಾ| ಶಿವಶಂಕರ ಮರಜಕ್ಕೆ, ಹಳ್ಳಿ ಭಾಗದಲ್ಲಿ ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿರುವ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಇದೂ ಒಂದು. ಬೇರೆ ಕಡೆಗೆ ಇದಕ್ಕೆ 10 ರಿಂದ 15 ಲಕ್ಷ ರೂ. ವೆಚ್ಚ ಆಗುತ್ತದೆ. ನಮ್ಮಲ್ಲಿ ಕೇವಲ 1.20 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

    Continue Reading

    LATEST NEWS

    ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ : ಸಿಎಂ ಸಿದ್ಧರಾಮಯ್ಯ

    Published

    on

    ಮೈಸೂರು : ಈ ಬಾರಿಯ ಮೈಸೂರು ದಸರಾವನ್ನು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ  ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಘೋಷಿಸಿದ್ದಾರೆ.

    ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮೈಸೂರು ಅರಮನೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಗಜಪಡೆ ತಾಲೀಮು ಆರಂಭವಾಗಿದೆ. ಅಕ್ಟೋಬರ್​ 3 ರಂದು ಮೈಸೂರು ದಸರಾಕ್ಕೆ ಚಾಲನೆ ಸಿಗಲಿದೆ.

    ಇದನ್ನೂ ಓದಿ : ಮೈಸೂರು ದಸರಾಗೆ ಒಂದು ಲಕ್ಷ ವಿದ್ಯುತ್ ದೀಪಗಳಿಂದ ಅರಮನೆ ಅಲಂಕಾರ

    2024ರ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು ಅದೇ ತಿಂಗಳ 12 ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆಗೊಳ್ಳಲಿದೆ.

    Continue Reading

    LATEST NEWS

    Trending