ಅಪರೂಪದ ಇರ್ತಲೆ ಹಾವಿನ ರಕ್ಷಣೆ : 5 ಆರೋಪಿಗಳ ಬಂಧನ..!
ಮೈಸೂರು: ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ ಅರಣ್ಯ ಸಂಚಾರ ದಳದ ಅಧಿಕಾರಿಗಳು 3 ಅಡಿ ಉದ್ದದ ಇರ್ತಲೆ ಹಾವನ್ನು ರಕ್ಷಿಸಿ, ಐವರನ್ನು ಬಂಧಿಸಿದ್ದಾರೆ.
ದೊಡ್ಡಯ್ಯ (45), ಹೇಮಂತ್ (19), ಯೋಗೇಶ್ (24), ರವಿ (35) ಹಾಗೂ ಭರಮೇಗೌಡ (23) ಬಂಧಿತ ಆರೋಪಿಗಳಾಗಿದ್ದಾರೆ.
ಈ ಹಾವಿನಿಂದ ಅದೃಷ್ಟ ಬರುತ್ತದೆ ಎಂದು ನಂಬಿಸಿ ಮಾರಾಟ ಮಾಡಲೆಂದು ಆರೋಪಿಗಳು ಕಾರಿನಲ್ಲಿ ಹಾವಿನೊಂದಿಗೆ ಮೈಸೂರಿನತ್ತ ಬರುತ್ತಿದ್ದರು ಎನ್ನಲಾಗಿದೆ. ಈ ಮಾಹಿತಿ ಆಧರಿಸಿ ಮೈಸೂರಿನ ಸಿದ್ಧಲಿಂಗಪುರದ ಬಳಿ ತಪಾಸಣೆ ನಡೆಸಲಾಯಿತು.
ಈ ವೇಳೆ ಹಾವಿನೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ.