Monday, July 4, 2022

ಮಂಗಳೂರಿನ ಹೋಟೆಲ್‌ನಲ್ಲಿ ತಿಂಡಿ ವಿಚಾರಕ್ಕೆ ದಾಂಧಲೆ ಗುಂಡಿನ ದಾಳಿ : ಓರ್ವ ಆಸ್ಪತ್ರೆಗೆ ದಾಖಲು..!

ಮಂಗಳೂರಿನ ಹೋಟೆಲ್‌ನಲ್ಲಿ ತಿಂಡಿ ವಿಚಾರಕ್ಕೆ ದಾಂಧಲೆ ಗುಂಡಿನ ದಾಳಿ : ಓರ್ವ ಆಸ್ಪತ್ರೆಗೆ ದಾಖಲು..!

ಮಂಗಳೂರು :  ಮಂಗಳೂರು ನಗರದಲ್ಲಿ ಗುಂಡಿನ ದಾಳಿ ನಡೆದಿದೆ. ನಗರದ ಫಳ್ನಿರ್ ಬಳಿಯ ಹೋಟೆಲ್ ಒಂದರಲ್ಲಿ ಇಂದು ಸಂಜೆ ನಡೆದ ತಿಂಡಿ ವಿಚಾರ ಸಂದರ್ಭ ಮಾತಿಗೆ ಮಾತು ಬೆಳೆದು ಶೂಟೌಟ್ ನಡೆದಿದೆ.

ಫಳ್ನಿರ್ ಮಲಬಾರ್ ಗೋಲ್ಡ್‌ ಸಮೀಪದ MFC ರೆಸ್ಟೋರೆಂಟಿಗೆ ಸುಮಾರು 5.15 ರ ಸುಮಾರಿಗೆ ತಿಂಡಿ ತಿನ್ನಲು ಬಂದಿದ್ದ ನಾಲ್ವರು ಯುವಕರು ಮಾರಾಟಕ್ಕೆ ಇಟ್ಟ ತಿಂಡಿಗೆ ಕೈ ಹಾಕಿ ತೆಗೆಯುತ್ತಿದ್ದಾಗ ಹೊಟೇಲ್ ಬೆರಳೆಣಿಕೆಯ ಸಿಬಂದಿಗಳು ಅಕ್ಷೇಪ ವ್ಯಕ್ತ ಪಡಿಸಿದಾಗ ಮಾತಿಗೆ ಮಾತು ಬೆಳೆದು ಯುವಕರ ತಂಡ ಹೊಟೇಲ್ ಸಿಬಂದಿಗಳ ಮೇಲೆ ಹಲ್ಲೆ ನಡೆಸಿ ಹೋಟೇಲಿನ ಗಾಜು- ಪಿಠೋಪಕರಣಗಳನ್ನು ಧ್ವಂಸ ಮಾಡಿ ದಾಂಧಲೆ ನಡೆಸಿದ್ದಾರೆ.

ಕೂಡಲೇ ಸನಿಹದಲ್ಲಿದ್ದ ಎಂ ಎಫ್ ಸಿಯ ಇನ್ನೊಂದು ಹೊಟೇಲಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಅರೋಪಿಗಳನ್ನು ಹಿಡಿಯಲು ಮುಂದಾದ ಎಂ ಎಫ್‌ ಸಿ ಹೊಟೇಲಿನ ಸಿಬಂದಿಗಳ ಮೇಲೆ ಏರ್ ರಿವಾಲ್ವಾರಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಬಳಿಕ ನಾಲ್ವರಲ್ಲಿ ಇಬ್ಬರನ್ನು ಸ್ಥಳಿಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ ಉಳಿದ ಇಬ್ಬರು ತಪ್ಪಿಕೊಂಡು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಹೋಟೆಲ್ ಓರ್ವ ಸಿಬಂದಿಗೆ ಗಾಯವಾಗಿದ್ದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ MFC ಮಾಲಕ ಸಿದ್ದಿಕ್ ಅವರು ದೂರು ನೀಡಿದ್ದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

LEAVE A REPLY

Please enter your comment!
Please enter your name here

Hot Topics

ಪುತ್ತೂರಿನಲ್ಲಿ ಬೈಕ್‌ – ಕಾರು ಡಿಕ್ಕಿ: ಓರ್ವ ಜೀವಾಂತ್ಯ

ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ...

“ಪೀ ಬನ್ನಗ ಬಿತ್ತಿಲ್‌ ನಾಡುನ ಪರಿಸ್ಥಿತಿ” ಮಳೆ ಅವಾಂತರದ ಬಗ್ಗೆ ಮಾಜಿ ಶಾಸಕ ಲೋಬೊ ವ್ಯಂಗ್ಯ

ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರು ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದಾದ್ಯಂತ ಅವ್ಯವಸ್ಥೆ ಉಂಟಾಗಿದೆ. ಮಳೆ ಪ್ರಾರಂಭವಾಗುವ ಮೊದಲು ಪೂರ್ವ ತಯಾರಿ ಮಾಡದಿದ್ದರೆ ಇಂದಿನ ಅವಾಂತರಕ್ಕೆ ಕಾರಣವಾಗುತ್ತದೆ.ಇದು ಪೀ ಬನ್ನಗ ಬಿತ್ತಿಲ್‌...

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲು-ಓರ್ವನ ರಕ್ಷಣೆ

ಬಂಟ್ವಾಳ: ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದರೆ, ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು...