Connect with us

FILM

ಓಟಿಟಿಯಿಂದ ದಿಢೀರ್ ಮಾಯವಾಯ್ತು ರಕ್ಷಿತ್ ಶೆಟ್ಟಿ ಸಿನಿಮಾ!…ಯಾಕೆ?

Published

on

ಹೇಮಂತ್ ರಾವ್ ನಿರ್ದೇಶನದ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಚಲನಚಿತ್ರ ‘ಸಪ್ತಸಾಗರದಾಚೆ ಎಲ್ಲೋ’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಥಿಯೇಟರ್ ನಲ್ಲಿ ಸುದೀರ್ಘ ಅವಧಿಯತ್ತ ಸಾಗಿದ  ಮನು-ಪ್ರಿಯಾ ಪ್ರೇಮ್ ಕಹಾನಿ ‘ಸಪ್ತಸಾಗರದಾಚೆ ಎಲ್ಲೋ’ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದರು. 2ನೇ ಭಾಗಕ್ಕೆ ಚೈತ್ರಾ ಆಚಾರ್ ಜೊತೆಯಾಗಿದ್ದರು. ಚಿತ್ರತಂಡದ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೆಪ್ಟೆಂಬರ್ 1 ರಂದು ಸರಣಿಯ ಮೊದಲ ಸಿನಿಮಾ ತೆರೆಗೆ ಬಂದಿತ್ತು.  ಸಪ್ತ ಸಾಗರದಾಚೆ ಎಲ್ಲೋ ಸೈಟ್ – ಎ ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮನಗೆದ್ದಿತ್ತಾದರು, ಸೈಡ್ -ಬಿ ಗೆ ಮಿಶ್ರ ಫಲಿತಾಂಶ ವ್ಯಕ್ತವಾಗಿತ್ತು. ಕೆಲವರಿಗೆ ಸಿನಿಮಾ ಬಹಳ ಇಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಬೋರ್ ಎನಿಸಿತ್ತು. ಇದು ಓಟಿಟಿಗೆ ಸೂಕ್ತ ಸಿನಿಮಾ ಎಂದು ಕೆಲವರು ಹೇಳಿಬಿಟ್ಟಿದ್ದರು.

rakshith shetty

ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್ ಶೋಗಳ ಮೂಲಕ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಗೆದ್ದಿತ್ತು. ಮೊದಲ ಭಾಗ ನೋಡಿದ ಕೆಲವರು ಎರಡನೇ ಭಾಗಕ್ಕೆ ಬಹಳ ಕಾತರದಿಂದ ಕಾದು ಕೂತಿದ್ದರು. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗ ಥಿಯೇಟರ್‌ಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.

‘ಸಪ್ತಸಾಗರದಾಚೆ ಎಲ್ಲೋ’ ಸೈಡ್-A ಹಿಟ್ ಆಗಿದ್ದು ಸುಳ್ಳಲ್ಲ. ಕನ್ನಡದಲ್ಲಿ ತೆರೆಕಂಡು ಗೆದ್ದ ಚಿತ್ರವನ್ನು ತೆಲುಗಿಗೂ ಡಬ್ ಮಾಡಿ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದರು. ತಕ್ಕಮಟ್ಟಿಗೆ ಅಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಮಾಡಲಾಗಿತ್ತು. ಬಳಿಕ ನವೆಂಬರ್ 17ಕ್ಕೆ ಸೈಡ್- B ತೆರೆಕಂಡಿದ್ದು, ಜನವರಿ 26ರಿಂದ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿತ್ತು.

ಆದರೆ, ಇದೀಗ ದಿಢೀರನೆ ಸಿನಿಮಾವನ್ನು ಒಟಿಟಿ ಫ್ಲಾಟ್ ಫಾರ್ಮ್‌ನಿಂದ ತೆಗೆಯಲಾಗಿದೆ.  ಕಳೆದೆರಡು ದಿನಗಳಿಂದ ‘ಸಪ್ತಸಾಗರದಾಚೆ ಎಲ್ಲೋ’ ಸೈಡ್- B ಪ್ರೈಂ ವೀಡಿಯೋದಲ್ಲಿ ಸಿಗುತ್ತಿಲ್ಲ. ಇದಕ್ಕೆ ಕಾರಣ ಏನು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಕೊಂಡೊಕೊಳ್ಳಲು ಅಮೇಜಾನ್ ಪ್ರೈಂ ಹಿಂದೇಟು ಹಾಕುತ್ತಿದೆ. ಕೆಲ ಸಿನಿಮಾಗಳನ್ನು ಸಣ್ಣ ಅವಧಿಯವರೆಗೆ ಮಾತ್ರ ಸ್ಟ್ರೀಮಿಂಗ್ ಮಾಡಲು ಒಪ್ಪಂದ ಮಾಡಿಕೊಳ್ಳುತ್ತಿದೆ.

ಒಟಿಟಿಯಿಂದ ಹೊರಬರಲು ಕಾರಣವಾದ್ರು ಏನು?

‘ಸಪ್ತಸಾಗರದಾಚೆ ಎಲ್ಲೋ’ ಸೈಡ್- B ಚಿತ್ರವನ್ನು ಓಟಿಟಿಯಿಂದ ಯಾಕೆ ತೆಗೆದರು ಎನ್ನುವ ಬಗ್ಗೆ ಚಿತ್ರತಂಡ ಇದುವರೆಗೂ ಮಾಹಿತಿ ಹೊರಬಿದ್ದಿಲ್ಲ. ಕೆಲವರ ಪ್ರಕಾರ ಶೀಘ್ರದಲ್ಲೇ ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗುತ್ತಿದೆ. ಸೈಡ್- B ರಿಲೀಸ್‌ ಮೊದಲಿಗೆ ಪ್ರೈಂ ವಿಡಿಯೋ ಹಿಂದೇಟು ಹಾಕಿತ್ತು. ಬಳಿಕ ಒಪ್ಪಿಕೊಂಡಿತ್ತು. ಇದೀಗ ಒಪ್ಪಂದ ಮುಗಿದಿದ್ದು ಸಿನಿಮಾವನ್ನು ತೆಗೆದಿದೆ ಎನ್ನುವ ಚರ್ಚೆ ಜೋರಾಗಿದೆ. ಮೊದಲಿಗೆ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಪುಷ್ಕರ್, ಅಮೇಜಾನ್ ಪ್ರೈಂ ಜೊತೆ ಸಿನಿಮಾ ಡಿಜಿಟಲ್ ರೈಟ್ಸ್ ಒಪ್ಪಂದ ಮಾಡಿಕೊಂಡಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಪುಷ್ಕರ್ ಹಾಗೂ ರಕ್ಷಿತ್ ದೂರಾಗಿದ್ದರು. ಹಾಗಾಗಿ ರಕ್ಷಿತ್ ತಾವೇ ಸಿನಿಮಾ ನಿರ್ಮಾಣದ ಹೊಣೆ ಹೊರುವಂತಾಯಿತು. ಆರಂಭದಲ್ಲಿ ಒಂದು ಸಿನಿಮಾ ಆಗಬೇಕಿದ್ದ ಕಥೆ ಬಳಿಕ 2 ಭಾಗವಾಯಿತು. ಹಾಗಾಗಿ ಎರಡನೇ ಭಾಗದ ಓಟಿಟಿ ಡೀಲ್ ರಕ್ಷಿತ್ ಶೆಟ್ಟಿ ಮಾಡಿಕೊಂಡಿದ್ದರು.

ಈ ಸಿನೆಮಾದಲ್ಲಿ ಬರುವ ಮನು- ಪ್ರಿಯಾ  ಲವ್‌ಸ್ಟೋರಿಗೆ ಪರಭಾಷಿಕರು ಕೂಡ ಫಿದಾ ಆಗಿದ್ದು, ಅದೇ ಕಾರಣಕ್ಕೆ ಓಟಿಟಿಯಲ್ಲಿ ಸಿನಿಮಾ ಕಾಣೆಯಾಗುತ್ತಿದ್ದಂತೆ ಗೊಂದಲಕ್ಕೀಡಾಗಿದ್ದಾರೆ ಎನ್ನಲಾಗಿದೆ.  ಸೈಡ್‌-B ಯ ಹಿಂದಿ ವರ್ಷನ್ ಅಂತೂ ಓಟಿಟಿಗೆ ಬಂದೇ ಇಲ್ಲ. ಹಾಗಾಗಿ ಯಾವಾಗ ಸಿನಿಮಾ ವೀಕ್ಷಣೆಗೆ ಸಿಗುವುದು  ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರು ಕೇಳುತ್ತಿದ್ದಾರೆ. ಈ ಕುರಿತು ಪರಂವಃ ಸಂಸ್ಥೆ ಪ್ರತಿಕ್ರಿಯೆ ನೀಡಬೇಕಾಗಿದೆ.

Click to comment

Leave a Reply

Your email address will not be published. Required fields are marked *

FILM

ನಾಳೆ ದ್ವಾರಕೀಶ್ ಅಂತ್ಯಕ್ರಿಯೆ.. ಸ್ಥಳ.. ಸಮಯ.. ಇಲ್ಲಿದೆ ಮಾಹಿತಿ

Published

on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ​​ಇಂದು ಕತ್ತಲು ಆವರಿಸಿದೆ. ಹಿರಿಯ ನಟ ದ್ವಾರಕೀಶ್ ಇಂದು ಸಾವನ್ನಪ್ಪಿದ್ದಾರೆ. ಅನೇಕ ನಟರು ಈ ಹಿರಿಯ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.

81ನೇ ವಯಸ್ಸಿನಲ್ಲಿ ನಟ ದ್ವಾರಕೀಶ್​ ಸಾವನ್ನಪ್ಪಿದ್ದಾರೆ. ಪತ್ನಿ ಅಂಬುಜ ಸಾವನ್ನಪ್ಪಿದ ದಿನ, ತಿಂಗಳಂದೇ ದ್ವಾರಕೀಶ್​ ಕೊನೆಯುಸಿರೆಳೆದಿದ್ದಾರೆ. ಮಗನ ಬಳಿ ಕೊಂಚ ಹೊತ್ತು ಮಗಲುತ್ತೇನೆಂದು ಹೇಳಿದವರು ಇಹಲೋಕ ತ್ಯಜಿಸಿದ್ದಾರೆ.

ದ್ವಾರಕೀಶ್​ ಪಾರ್ಥಿವ ಶರೀರ ಕಾಣಲು ಅನೇಕ ಮಂದಿ ಅವರ ಮನೆಯತ್ತ ತೆರಳುತ್ತಿದ್ದಾರೆ. ಹಿರಿಯ ನಟರು ಕೂಡ ದ್ವಾರಕೀಶ್​​ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಹಿರಿಯ ನಟನನ್ನು ಕಾಣಲು ಸಾರ್ವಜನಿಕರಿಗೂ ಅವಕಾಶ ಮಾಡಲಾಗಿದ್ದು, ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ದರ್ಶನ ಪಡೆಯಬಹುದಾಗಿದೆ.

ನಾಳೆ ಬೆಳಗ್ಗೆ 6 ಕ್ಕೆ ಮನೆಯಿಂದ ಹೊರಟು 7 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತೆ. 11 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಗೆ ಚಾಮರಾಜಪೇಟೆಯ ಟಿಆರ್ ಮೀಲ್ ನತ್ತ ಪಾರ್ಥಿವ ಶರೀರ ರವಾನಿಸಲಾಗುತ್ತದೆ. ನಂತರ ಅವರ ಅಂತ್ಯಕ್ರಿಯೆ ನೆರವೇರಲಿದೆ. 1 ಗಂಟೆಯ ನಂತರ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗುತ್ತದೆ.

Continue Reading

FILM

ಹಿರಿಯ ನಟ ನಿರ್ಮಾಪಕ…ಕಳ್ಳ ‘ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ

Published

on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೇರು ನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್(81 ವ) ರವರು ಎ.16ರಂದು ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಇನ್ನಿಲ್ಲ ಎಂಬ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ. ಹಲವು ದಿಗ್ಗಜರ ಜೊತೆ ನಟಿಸಿದ್ದ ಇವರು ವಿಷ್ಣುವರ್ದನ್ ಜೊತೆ ನಡಿಸಿದ್ದ ಕಳ್ಳ-ಕುಳ್ಳ ಸಿನೆಮಾದಲ್ಲಿ ಇವರಿಬ್ಬರ ಜೋಡಿ ಬಹಳಷ್ಟು ಸದ್ದು ಮಾಡಿತ್ತು.

ರಾತ್ರಿ ಭೇದಿ ಆರಂಭ ಆಗಿದ್ದರಿಂದ ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ಮಲಗಿದ್ದವರು ಮತ್ತೆ ಏಳಲೇ ಇಲ್ಲ.  ಅವರಿಗೆ ಹೃದಯಾಘಾತ ಆಗಿದೆ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ದ್ವಾರಕೀಶ್ ಸಾವಿನ ಸುಳ್ಳು ಸುದ್ದಿ ಹರಡಿತ್ತು…!
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಸಂತಾಪ ಸೂಚಿಸುತ್ತಿದ್ದಾರೆ. ಈ ಹಿಂದೆ ದ್ವಾರಕೀಶ್ ಮರಣ ಫೇಕ್ ಸುದ್ದಿ ಹರಿದಾಡಿತ್ತು. ಇದೇ ರೀತಿ ಈ ಬಾರಿಯೂ ಆಗಿರಬಹುದು ಎಂದು ಹಲವರು ಭಾವಿಸಿದ್ದರು. ಇದೀಗ ದ್ವಾರಕೀಶ್ ರವರ ಕುಟುಂಬದವರು ಅವರ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ.

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ರಾಜ್‌ಕುಮಾರ್, ವಿಷ್ಣವರ್ಧನ್, ಶ್ರೀನಾಥ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದರು. ಇವರ ಮಂಕು ತಿಮ್ಮ ಸಿನೆಮಾ ಸುಪರ್ ಹಿಟ್ ಆಗಿತ್ತು. ನಟಿ ಮಂಜುಳಾ ಜೊತೆ ಹಲವು ಸಿನೆಮಾದಲ್ಲಿ ನಟಿಸಿದ್ದರು. ನಟನಾಗಿ ನಿರ್ದೇಶನಕ್ಕೂ ಇಳಿದಿದ್ದ ಇವರು ಹಲವು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಮಮತೆಯ ಬಂಧನ ಇವರ ಮೊದಲ ನಿರ್ಮಾಣದ ಚಿತ್ರವಾಗಿದ್ದು, ‘ವೀರ ಸಂಕಲ್ಪ’ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ.

 

Continue Reading

FILM

ಮೂಗುತಿ ಸುಂದರಿ ಮೇಲೆ ತೆಲುಗು ಹೀರೋ ಕಣ್ಣು…!

Published

on

ಮಂಗಳೂರು ( ಸ್ಯಾಂಡಲ್‌ವುಡ್‌ ) : ಸುಪರ್ ಹಿಟ್ ಕಾಂತಾರದ ಮೂಲಕ ಮೂಗುತಿ ಸುಂದರಿ ಅಂತ ಫೇಮಸ್ ಆಗಿದ್ದ ಸಪ್ತಮಿ ಗೌಡ ಮೇಲೆ ತೆಲುಗು ನಿರ್ಮಾಪಕರ ಕಣ್ಣು ಬಿದ್ದಿದೆ. ಹೀಗಾಗಿ ಸಪ್ತಮಿ ಗೌಡಗೆ ತೆಲುಗು ಸಿನೆಮಾದಲ್ಲಿ ಉತ್ತಮ ಅವಕಾಶ ನೀಡಿ ಕರೆಸಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದ ಮೂಗುತಿ ಸುಂದರಿ ಸಪ್ತಮಿ ಗೌಡ ತೆಲುಗಿನ ‘ತಮ್ಮುಡು’ ಸಿನೆಮಾದಲ್ಲಿ ಹೀರೋ ನಿತಿನ್ ಜೊತೆ ನಟಿಸಲಿದ್ದಾರೆ.

ಕೆಲ ನಟಿಯರು ಇರೋ ಉದ್ಯಮದಲ್ಲಿ ಏನಾದರೂ ಸಾಧಿಸಿ ಬೇರೆ ಭಾಷೆಯತ್ತ ಮುಖ ಮಾಡ್ತಾರೆ. ಇನ್ನು ಕೆಲ ನಟಿಯರು ಏನಾದರೂ ಸಾಧಿಸಲೆಬೇಕು ಅಂತ ಪಕ್ಕದ ಮನೆಗಳತ್ತ ಮುಖ ಮಾಡ್ತಾರೆ. ಇದಕ್ಕೆ ಸಪ್ತಮಿಗೌಡ ಅತ್ಯುತ್ತಮ ಉದಾಹರಣೆ.ಹೌದು. ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ ‘ಯುವ’ದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಕಳೆದ ನಾಲ್ಕು ವರ್ಷದಲ್ಲಿ ಪಾಪ್‌ ಕಾರ್ನ್ ಮಂಕಿ ಟೈಗರ್, ಕಾಂತಾರ, ಯುವ ಹೀಗೆ ಮೂರು ಕನ್ನಡ ಸಿನಿಮಾಗಳನ್ನ ಮಾಡಿರುವ ಸಪ್ತಮಿ ಗೌಡ, ಇದೀಗ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. `ಜಯಂ’ ಸಿನಿಮಾ ಹೀರೊ ನಿತಿನ್‌ ಅವರ ಮುಂದಿನ ಚಿತ್ರ ʻತಮ್ಮುಡುʼದಲ್ಲಿ ಸಪ್ತಮಿ ಗೌಡ ಹೀರೊಯಿನ್.

ತಮ್ಮುಡು ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನೂ ರೇಸ್‌ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನ ಕಲಿತಿದ್ದಾರೆ.

ಇನ್ನೂ ತಮ್ಮ ಮೊದಲ ತೆಲುಗು ಚಿತ್ರದಲ್ಲಿಯೇ ನಿತಿನ್ ಅವರಂತಹ ಪ್ರತಿಭಾವಂತ ನಟನ ಜೊತೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಸಪ್ತಮಿಗೌಡ ಅವರಿಗೆ ಸಿಕ್ಕಾಪಟ್ಟೆ ಖುಷಿ ಇದೆ. ಸೋನೆ ಪೆ ಸುಹಾಗ ಅನ್ನುವಂತೆ ವಕೀಲ್ ಸಾಬ್ ಅಂತಹ ಚಿತ್ರವನ್ನ ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಸಪ್ತಮಿ ಗೌಡ ಸದ್ಯಕ್ಕೆ ಕ್ಲೌಡ್ ನೈನ್‌ ನಲ್ಲಿದ್ದಾರೆ. ಒಟ್ನಲ್ಲಿ ಕನ್ನಡದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಕನ್ನಡಿಗರ ಮನಗೆದ್ದ ಸಪ್ತಮಿ ಗೌಡ ಈಗ ಬಾಲಿವುಡ್‌ ನಂತರ ಟಾಲಿವುಡ್‌ ಕಡೆ ಹೊರಟಿದ್ದಾರೆ.

Continue Reading

LATEST NEWS

Trending