Connect with us

bangalore

ಸದ್ದು ಮಾಡ್ತಾ ಇದೆ ‘ಕಾಂತಾರ ಚಾಪ್ಟರ್‌ 1’…! ಚಿತ್ರೀಕರಣಕ್ಕೂ ಮೊದಲೇ ಫುಲ್ ಡಿಮ್ಯಾಂಡ್‌..!

Published

on

ಮುಂಬೈ : ರಿಷಬ್ ಶೆಟ್ಟಿ ( Rishab Shetty ) ನಿರ್ದೇಶನ ಮಾಡಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್‌ 1’ ( Kanthara Chapter 1 ) ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ.  ಆದ್ರೆ ಈ  ಸಿನೆಮಾ ಚಿತ್ರೀಕರಣ ಆರಂಭಕ್ಕೂ ಮೊದಲೇ ಭಾರಿ ಸದ್ದು ಮಾಡಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು ಭಾರೀ ನಿರೀಕ್ಷೆ ಹೊಂದಿದೆ. ವಿಶೇಷ ಅಂದ್ರೆ ಈ ಚಿತ್ರದ ಒಟಿಟಿ ಹಕ್ಕು ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವಾಗಿದೆ.

ಕಾಂತಾರ ಸೀನ್

 

 

 

 

 

 

2022 ರಲ್ಲಿ ಕನ್ನಡ ಫಿಲ್ಮ ಇಂಡಸ್ಟ್ರೀ ಮಾತ್ರವಲ್ಲದೆ ಇಡೀ ದೇಶದಲ್ಲಿ ‘ಕಾಂತಾರ’ (Kanthara ) ಸದ್ದು ಮಾಡಿತ್ತು.  ಬಾಕ್ಸ್‌ ಆಫೀಸ್ ದಾಖಲೆಯನ್ನು ಚಿಂದಿ ಉಡಾಯಿಸಿ ‘ಕಾಂತಾರ’ ಯಶಸ್ಸು ಗಳಿಸಿತ್ತು.  ಈ ಯಶಸ್ಸಿನ ಬಳಿಕ ಪಾರ್ಟ್‌ 2 ತೆರೆಗೆ ಬರಲಿದೆ ಅನ್ನೋ ಸುದ್ದಿ ಅಭಿಮಾನಿಗಳು ಹಾಗೂ ಸಿನಿರಂಗದಲ್ಲೂ ಹರಿದಾಡಿತ್ತು. ನಿರೀಕ್ಷೆ ಹುಸಿಯಾಗದಂತೆ ರಿಶಬ್‌ ಶೆಟ್ಟಿ ‘ಕಾಂತಾರ ಚಾಪ್ಟರ್‌ 1’ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಕರಾವಳಿಯ ಪೌರಾಣಿಕ ಹಿನ್ನಲೆಯನ್ನು ಇಟ್ಟುಕೊಂಡು ‘ಕಾಂತಾರ ಚಾಪ್ಟರ್‌ 1’ ತೆರೆಗೆ ಬರಲಿದೆ ಅನ್ನೋದು ಪೋಸ್ಟರ್‌ ( poster )ನೋಡಿದ ಹಲವು ಫ್ಯಾನ್ಸ್‌ ಚರ್ಚೆ ಮಾಡಿದ್ದರು. ‘ಕಾಂತಾರ’ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.  ‘ಕಾಂತಾರ’ ಸಿನೆಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್‌ ಪಡೆದುಕೊಂಡಿತ್ತು.  ಇದೀಗ ‘ಕಾಂತಾರ ಚಾಪ್ಟರ್‌ 1’ ಶೂಟಿಂಗ್ ಆರಂಭಕ್ಕೂ ಮೊದಲೇ ಅಮೇಜಾನ್ ಪ್ರೈಮ್ ಕೋಟ್ಯಾಂತರ ರೂಪಾಯಿಗಳಿಗೆ ಒಟಿಟಿ ಹಕ್ಕು ಪಡೆದುಕೊಂಡಿದೆ.

ಮುಂಬೈಯಲ್ಲಿ ಮಂಗಳವಾರ (ಮಾರ್ಚ್‌ 19) ನಡೆದ ಅಮೇಜಾನ್‌ ಪ್ರೈಂನ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗವಾಗಿದೆ. ಐಷಾರಾಮಿ ಆಸೆಗಳಿಗಿಂತ ದೊಡ್ಡ ವಿಪತ್ತು ಇನ್ನೊಂದಿಲ್ಲ. ಒಬ್ಬ ಕ್ಷುಲ್ಲಕ ರಾಜನಿಂದ ಉಂಟಾಗುವ ಇಂತಹ ವಿಪತ್ತು, ದೇವರು ಆಯ್ಕೆ ಮಾಡಿದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಪ್ರಚೋದಿಸುತ್ತದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಇಲ್ಲಿ ಪ್ರಸಾರವಾಗಲಿದೆʼʼ ಎಂದು ಪ್ರೈಂ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.
‘ಕಾಂತಾರ ಚಾಪ್ಟರ್‌ 1’ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನೆಮಾ ಅಲ್ಲದೇ ಇದ್ರೂ ‘ಕಾಂತಾರʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಕನ್ನಡ ಜೊತೆಗೆ ವಿವಿಧ ಭಾಷೆಯಲ್ಲಿ ತೆರೆಗೆ ಬರಲಿದ್ದು, ಅಂದಾಜು 125 ಕೋಟಿ ಬಜೆಟ್‌ನಲ್ಲಿ ಸಿನೆಮಾ ತಯಾರಾಗುತ್ತಿದೆ.

‘ಕಾಂತಾರ ಚಾಪ್ಟರ್ 1’  ರಿಷಬ್ ಶೆಟ್ಟಿ ಹೇಳಿದ್ದೇನು?

ಅಮೇಜಾನ್‌ ಪ್ರೈಂನ (amazon prime ) ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್‌ ಶೆಟ್ಟಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂತಹ ಒಂದು ಸಿನೆಮಾ ನೀಡಬೇಕು ಅನ್ನೋದು ನನ್ನ ಕಾಲೇಜು ದಿನಗಳ ಕನಸಾಗಿತ್ತು. ‘ಕಾಂತಾರ’ ಸಿನೆಮಾಗೆ ಜನರು ಅಭೂತಪೂರ್ವ ಬೆಂಬಲ ನೀಡಿದ ಕಾರಣ ಈಗ ‘ಕಾಂತಾರ ಚಾಪ್ಟರ್‌ 1’ ಮಾಡಲು ಹೊರಟಿದ್ದೇವೆ. ನಮ್ಮ ಊರಿನಲ್ಲಿ ( ಕುಂದಾಪುರ ) ದೊಡ್ಡ ಸೆಟ್ಟ ಹಾಕುತ್ತಿದ್ದು, ಅಲ್ಲಿ ಶೀಘೃ ಚಿತ್ರೀಕರಣ ( shooting ) ಆರಂಭವಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ‘ಕಾಂತಾರ’ದಲ್ಲಿ ನಟಿ ಸಪ್ತಮಿ ಗೌಡ (Sapthami Gowda ) ನಟಿಸಿದ್ದು ಇದರಲ್ಲೂ ಇರ್ತಾರಾ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

bangalore

ಶೋಭಾ ಕರಂದ್ಲಾಜೆ ಕಾರಿಗೆ ಸಿಕ್ಕಿ ಯುವಕನ ದುರ್ಮ*ರಣ..!

Published

on

ಬೆಂಗಳೂರು : ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಅಸು ನೀಗಿದ್ದಾನೆ.

ಟಿಸಿ ಪಾಳ್ಯ ನಿವಾಸಿ ಪ್ರಕಾಶ್( 35 ) ಎಂಬವರು ಅಸುನೀಗಿದ ದುರ್ದೈವಿ. ಬೆಂಗಳೂರಿನ ಕೆ.ಆರ್.ಪುರಂ ಸಮೀಪ ಈ ಅಪ*ಘಾತ ಸಂಭವಿಸಿದ್ದು, ಕೆ.ಆರ್‌.ಪುರಂ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.  ದೇವಸಂದ್ರ ವಿನಾಯಕ ದೇವಸ್ಥಾನ ಬಳಿ ಕಾರು ನಿಲ್ಲಿಸಿದ ಕಾರಿನಿಂದ ಸಡನ್ ಆಗಿ ಬಾಗಿಲು ತೆರೆದು ಈ ದುರ್ಘಟನೆ ನಡೆದಿದೆ. ಕಾರಿನ ಡೋರ್ ತೆಗೆದಾಗ ಹಿಂಬಂದಿಯಿಂದ ಬಂದಿದ್ದ ಬೈಕ್‌ ಸವಾರ ಕಾರಿನ ಡೋರ್‌ಗೆ ತಾಗಿ ಕೆಳಗೆ ಬಿದ್ದಿದ್ದಾನೆ.

 

ತಲೆಗೆ ಗಂ*ಭೀರ ಗಾಯಗೊಂಡಿದ್ದ ಬೈಕ್ ಸವಾರ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ : ಬೇಸಿಗೆಯ ಬಿಸಿ ತಡೆಯಲಾರದೆ 14 ಲಕ್ಷ ವೆಚ್ಚದಲ್ಲಿ ಕೂಲ್ ಹೋಮ್ ನಿರ್ಮಾಣ ಮಾಡಿದ ಯುವ ಇಂಜಿನಿಯರ್

Continue Reading

bangalore

ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ದಿಢೀರ್ ಅಸ್ವ*ಸ್ಥ..!! ಆಸ್ಪತ್ರೆ ದಾಖಲು

Published

on

ಬೆಂಗಳೂರು:  47 ವಿದ್ಯಾರ್ಥಿನಿಯರು ಅಸ್ವ*ಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(BMCRI) ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವ*ಸ್ಥಗೊಂಡಿದ್ದು ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

medical college of bangalore

ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐವರಿಗೆ ಹೆಚ್​​ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.  ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸದ್ಯ ವಿದ್ಯಾರ್ಥಿಗಳು ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿನಿಯರು ಅಸ್ವ*ಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಂಸಿಆರ್‌ಐ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಮೇಶ್‌ ಕೃಷ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಲರ ಭೀತಿ ಶುರುವಾಗಿದ್ದು, ಈ ಮಧ್ಯೆ ಹಾಸ್ಟೆಲ್ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಸ್ವಸ್ಥಗೊಂಡಿರುವುದು ಆತಂಕಕ್ಕೆ ಎಡೆ ಮಾಡಿದೆ.

ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದಕ್ಕೆ ನೈಜ ಕಾರಣವೇನು ಅನ್ನೋದು ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.

Continue Reading

bangalore

ಧಗಧಗನೇ ಹೊ*ತ್ತಿ ಉ*ರಿದ ಖಾಸಗಿ ಕಂಪನಿಯ ಕಟ್ಟಡ!

Published

on

ಬೆಂಗಳೂರು : ಶುಕ್ರವಾರ ಮಧ್ಯಾಹ್ನ 1:50ರ ಸುಮಾರಿಗೆ ಬೆಂಗಳೂರಿನ ಆರ್‌.ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರಿಂಕ್ಸ್ ಕಟ್ಟಡದ ಕೆಳ ಮಹಡಿಯಲ್ಲಿ ಬೆಂ*ಕಿ ಅವಘ*ಡ ಸಂಭವಿಸಿದೆ.

ಕೂಡಲೇ ಘಟನಾ ಸ್ಥಳಕ್ಕೆ ಎರಡು ಅ*ಗ್ನಿಶಾಮಕ ವಾಹನ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬೆಂಕಿ ಅವಘ*ಡ ಸಂಭವಿಸಿದಾಗ ಕೆಲ ಉದ್ಯೋಗಿಗಳು ಕಟ್ಟಡದಲ್ಲಿ ಸಿಲುಕಿದ್ದರು. ಕೂಡಲೇ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು, RT ನಗರ ಪೊಲೀಸರು ದೌಡಾಯಿಸಿ ರಕ್ಷಣಾ ಕಾರ್ಯ ಆರಂಭಿಸಿದರು.

ಅ*ಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಯಾರಿಗೂ ಪ್ರಾಣಾಪಾಯವಿಲ್ಲ. ಲಕ್ಷಾಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಅ*ಗ್ನಿಗೆ ಆ*ಹುತಿಯಾಗಿದೆ. ಅ*ಗ್ನಿ ಅ*ನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

Continue Reading

LATEST NEWS

Trending