Connect with us

    BANTWAL

    ಬೀದಿಗೆ ಬಿದ್ದ ಕುಟುಂಬಕ್ಕೆ ಆಸರೆಯಾದ ಶಾಸಕ ರಾಜೇಶ್ ನಾಯ್ಕ್ : ಶಾಸಕರ ನಡೆಗೆ ಎಲ್ಲೆಡೆ ಪ್ರಶಂಸೆ..!

    Published

    on

    ಬಂಟ್ವಾಳ:ಅನಾಥ ಕುಟುಂಬವೊಂದಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಕಾಲದಲ್ಲಿ ನೆರವಿನ ಭರವಸೆ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಲಾಕ್ ಡೌನ್ ಬಳಿಕ ಮನೆಕಳೆದುಕೊಂಡು, ಕೆಲಸ, ಊಟ ಇಲ್ಲದೇ ಬೀದಿಯಲ್ಲಿದ್ಧ ಕುಟುಂಬಕ್ಕೆ ಆಸರೆಯಾಗಿ ನಿಂತ ಬಂಟ್ವಾಳ ಶಾಸಕರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಮೂಲತಃ ಬಂಟ್ವಾಳ ತಾಲೂಕಿನ  ಬಡಗಬೆಳ್ಳೂರು ಮುಟ್ಟಿಕಲ್ಲು ಎಂಬಲ್ಲಿನ  ಕುಟುಂಬ ವಗ್ಗದ ಕುಜಿಲಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಗಂಡ ಮೇಸ್ತ್ರಿ ಕೆಲಸ ಸಹಾಯಕರಾಗಿ ದುಡಿದು ಹೆಂಡತಿ ಮತ್ತು ಎರಡು ವರ್ಷದ ಮಗುವಿನೊಂದಿಗೆ ಜೀವನ ಮಾಡುತ್ತಿದ್ದರು.  ಕೆಲಸ ವಿಲ್ಲದ ಕುಟುಂಬ ಮನೆ ಬಾಡಿಗೆಕೊಡಲು ಕೈಯಲ್ಲಿ ಡುಡ್ಡಿಲ್ಲ,

    ಊಟಕ್ಕೆ ಗತಿಯಿಲ್ಲ ಎಂಬ ಸ್ಥಿತಿಯಲ್ಲಿರುವಾಗ ಬಾಡಿಗೆ ಮನೆ ಬಿಟ್ಟು ಹೊರಗೆ ಬರಬೇಕಾಯಿತು. ಹೀಗೆ ಮನೆ ಬಿಟ್ಟು ಬೀದಿಗೆ ಬಂದ ಪತ್ನಿಯೊಂದಿಗೆ ಎರಡು ವರ್ಷದ ಎಳೆಯ ಕಂದಮ್ಮನ ಜೊತೆಯಲ್ಲಿ ಬಿಸಿರೋಡು ಬಸ್ ನಿಲ್ದಾಣ ದಲ್ಲಿ ಕುಳಿತುಕೊಂಡಿದ್ದರು.

    ಇವರ ಪರಿಸ್ಥಿತಿಯನ್ನು ಅರಿತ ಕರ್ಪೆ ಗ್ರಾಮದ ಅಡಂಗಾಜೆ ನಿವಾಸಿ ಪ್ರಶಾಂತ್ ಶಾಂತಿ ಎಂಬವರು ಕುಟುಂಬ ವನ್ನು ತನ್ನ  ಮನೆಗೆ  ಕರೆದುಕೊಂಡು ಬಂದು ವಾಸ್ತವ್ಯ  ಸಮೇತ ಊಟೋಪಚಾರ ವ್ಯವಸ್ಥೆ ಮಾಡಿದ್ದರು.

    ಕರ್ಪೆ ಗ್ರಾಮದಲ್ಲಿ ತಾತ್ಕಾಲಿಕ ವಾಗಿ ಆಸರೆ ಪಡೆದ ಕುಟುಂಬದ ಸದಸ್ಯೆ ವಿಮಲ ಅವರು  ತನ್ನ  ಕುಟುಂಬದ ಪರಿಸ್ಥಿತಿ ಯನ್ನು  ವಾಟ್ಸಪ್ ನಲ್ಲಿ ವಿಡಿಯೋ ಮೆಸೇಜ್ ಮೂಲಕ  ತಿಳಿಸಿ   ತನ್ನ ಅಳಲನ್ನು  ತೋಡಿಕೊಂಡಿರುವ ವಿಷಯವು  ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿಯಲು ಬಿಟ್ಟಿದ್ದರು.

    ನಾವು ಕೂಲಿ ಕಾರ್ಮಿಕರು ನಮಗೆ ಮನೆಯಿಲ್ಲ, ಊಟಕ್ಕೆ ಗತಿಯಿಲ್ಲ ಸಾಧ್ಯ ವಾದವರು ಸಹಾಯಮಾಡಿ ಬಂಟ್ವಾಳ ಶಾಸಕರಿಗೆ ಮುಟ್ಟುವವರೆಗೆ ಶೇರ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ವೀಡಿಯೋ  ಕಂಡ  ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಯವರು ತಕ್ಷಣವೇ ಸ್ಪಂದಿಸಿದ್ದಾರೆ.  ಶಾಸಕರ  ವಾರ್ ರೂಮ್ ಸದಸ್ಯರು ಹಾಗೂ ಸ್ಥಳೀಯ ತಾಲೂಕು  ಪಂಚಾಯತ್ ಸದಸ್ಯರಾದ  ಪ್ರಭಾಕರ  ಪ್ರಭು ಮತ್ತು ಬಿಜೆಪಿ  ನಾಯಕರಾದ  ರತ್ನಕುಮಾರ್ ಚೌಟರ  ಮೂಲಕ ಮನೆಗೆ ಭೇಟಿ ನೀಡಿ ನೊಂದ  ಮಹಿಳೆ ಯೊಂದಿಗೆ ಶಾಸಕರು ದೂರವಾಣಿ ಕರೆಯಲ್ಲಿ ಮಾತನಾಡಿ  ನಾಳೆಯಿಂದಲೇ ಸಕಲ  ವ್ಯವಸ್ಥೆಯನ್ನು  ಪೂರೈಸುವುದಾಗಿ ಭರವಸೆ ನೀಡಿದರು.

    ಶಾಸಕರ ಸ್ಪಂದನೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    BANTWAL

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕ ಮೃ*ತ್ಯು

    Published

    on

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃ*ತಪಟ್ಟಿದ್ದಾರೆ.

    ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಮೃ*ತಪಟ್ಟವರು.

    ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃ*ತಪಟ್ಟಿದ್ದಾರೆ

    Continue Reading

    BANTWAL

    ಬಂಟ್ವಾಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಹಾನಿ

    Published

    on

    ಬಂಟ್ವಾಳ: ರಾತ್ರಿ ಬೀಸಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.

    ಬಿಸಿ ರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ, ಕಾಂಪೌಂಡ್, ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.

    ಇನ್ನು ಬಂಟ್ವಾಳ ತಾಲೂಕಿನ ಮಾಧ್ವ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.

    Continue Reading

    BANTWAL

    ವಿಟ್ಲ: ಯುವಕ ನೇಣು ಬಿಗಿದು ಆತ್ಮಹ*ತ್ಯೆ..!

    Published

    on

    ವಿಟ್ಲ: ವಿಟ್ಲ ಬುಡೋಳಿ ಮಡಲ ನಿವಾಸಿ ಸುಶಾಂತ್(25 ವ) ಮನೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ರವರು ಇತ್ತೀಚೆಗೆ ಮಿನಿ ಬಸ್‌ ಖರೀದಿಸಿದ್ದು ಬಸ್ಸನ್ನು ತಾನೇ ಚಾಲನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಈತ ಸಂಘಟನೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ ಈತನ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಸುರತ್ಕಲ್: ಖಾಸಗಿ ಬಸ್ ಢಿ*ಕ್ಕಿ; ದ್ವಿಚಕ್ರ ಸವಾರನಿಗೆ ಗಾ*ಯ

    Continue Reading

    LATEST NEWS

    Trending