Monday, August 15, 2022

ದಿನೇ ದಿನೇ ಹೆಚ್ಚುತ್ತಿದೆ ಕೊರೊನಾ ಪ್ರಕರಣ;ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜಿಲ್ಲಾಧಿಕಾರಿ ಜಿ.ಜಗದೀಶ್..!

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದೆಯೇ ಹೊರತು ಕಡಿಮೆಯಾಗುವಂತಹ ಯಾವುದೇ  ಲಕ್ಷಣಗಳು ಗೋಚರಿಸುತ್ತಿಲ್ಲ.

ಈ ಕುರಿತು ಉಡುಪಿ ಜಿಲ್ಲಾಧಿಕಾರಿಯಾಗಿರುವ  ಜಿ.ಜಗದೀಶ್ ಸ್ವತಃ ಆತಂಕ ವ್ಯಕ್ತಪಡಿಸಿದ್ದಾರೆ.ಈ ಕುರಿತು  ಮಾಧ್ಯಮಗಳಿಗೆ  ಮಾಹಿತಿ  ನೀಡಿರುವ ಅವರು

ಜಿಲ್ಲೆಯಲ್ಲಿ  ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದೆ.ದಿನಾ ಒಂದು ಸಾವಿರ, ಒಂದು ಸಾವಿರದ ಇನ್ನೂರು ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್‍ನಲ್ಲಿ ಕಡಿಮೆಯಾಗುತ್ತಿಲ್ಲ.

ಪಾಸಿಟಿವ್ ಬಂದವರು ಹೊರಗಡೆ ತಿರುಗುತ್ತಿದ್ದಾರೆ, ಎನ್ನುವ ದೂರು ಕೇಳಿ ಬರುತ್ತಿದೆ. ಅಂಥಹವರ ವಿರುದ್ಧ ಕ್ರೀಮಿನಲ್ ಕೇಸುಗಳನ್ನು ದಾಖಲು ಮಾಡಲಾಗುತ್ತದೆ.

ಮಾತ್ರವಲ್ಲ ಅಂತಹವರನ್ನು ಅಲ್ಲಿಂದಲೇ ಕೋವಿಡ್ ಕೇರ್ ಸೆಂಟರ್‍ಗೆ ಶಿಫ್ಟ್ ಮಾಡುತ್ತೇವೆ. ಪಾಸಿಟಿವ್ ಬಂದು ಮನೆಯಲ್ಲಿ ವ್ಯವಸ್ಥೆ ಇಲ್ಲದವರು , ಮನೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಕೊವೀಡ್ ಕೇರ್ ಸೆಂಟರ್‍ಗೆ ಬನ್ನಿ . ಅಲ್ಲಿ ಬಂದರೆ ನಿಮ್ಮ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿ ಜಿಲ್ಲಾಡಳಿತದ್ದು ಎಂದು ಮನವಿ ಮಾಡಿದರು..

LEAVE A REPLY

Please enter your comment!
Please enter your name here

Hot Topics

ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್‌ನಲ್ಲಿ ವೆಲಂಕಣಿ ಮಾತೆಯ ಮೂರ್ತಿ ಮೆರವಣಿಗೆ

ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ಚರ್ಚ್‌ನ 50ನೇ ವರ್ಷಾಚರಣೆ ಹಾಗೂ ಪುಣ್ಯಕ್ಷೇತ್ರ ಘೋಷಣೆಯ ಪ್ರಯುಕ್ತ ವೆಲಂಕಣಿ ಮಾತೆಯ ಪವಿತ್ರ ಮೆರವಣಿಗೆ ನಡೆಯಿತು. ಇದಕ್ಕೆ ಉಡುಪಿ ಶಾಸಕ ಕೆ. ರಘುಪತಿ ಭಟ್ ರವರು ಚಾಲನೆ...

ಕುದ್ರೋಳಿ ಕ್ಷೇತ್ರದಲ್ಲಿ ಕೈಚಳಕದ ಮೋಡಿ: ಮೂಡಿಬಂತು ಹೂ-ಧಾನ್ಯಗಳ ಸಿಂಗಾರದಲ್ಲಿ ಸ್ವಾತಂತ್ರ್ಯದ ಚಿತ್ರಾಕೃತಿ

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ರಚಿಸಿದ ಚಿತ್ರಾಕೃತಿ ಎಲ್ಲರ ಗಮನಸೆಳೆಯುತ್ತಿದೆ.ಇದನ್ನು ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ...

ಮೂಡುಬಿದಿರೆ: ರಕ್ತಚಂದನ ದಿಮ್ಮಿ ಕದ್ದ ಪ್ರಕರಣ-ಆರೋಪಿಗಳಿಗೆ ಜಾಮೀನು ಮಂಜೂರು

ಮೂಡುಬಿದಿರೆ: ಮೂರು ತಿಂಗಳ ಹಿಂದೆ ಆಂಧ್ರದಿಂದ ಭಾರಿ ಮೌಲ್ಯದ ರಕ್ತಚಂದನ ದಿಮ್ಮಿಗಳನ್ನು ಕಳವು ಮಾಡಿ ಲಾರಿಯಲ್ಲಿ ಮಂಗಳೂರು ಬಂದರಿಗೆ ಸಾಗಣೆ ಮಾಡುವಾಗ ಮೂಲ್ಕಿ ಕೆಂಚನಕೆರೆ ಬಳಿ ಮಂಗಳೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ...