Wednesday, October 20, 2021

ನಾದಿನಿಯ ಜೊತೆಗೂ ಸಿನಿಮಾ ಮಾಡಲು ಪ್ಲ್ಯಾನ್‌ ರೂಪಿಸಿದ್ದ ರಾಜ್‌ ಕುಂದ್ರಾ

ನೀಲಿ ಚಿತ್ರಗಳ ನಿರ್ಮಾಣದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್​ ಕುಂದ್ರಾ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಜೊತೆಗೂ ಸಿನಿಮಾ ಮಾಡಲು ರಾಜ್​ ಕುಂದ್ರಾ ಪ್ಲ್ಯಾನ್ ಮಾಡಿದ್ದರು ಎಂಬ ವಿಷಯ ಈಗ ಬಹಿರಂಗ ಆಗಿದೆ.


ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬೇವಫಾ, ಜೆಹರ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆದರೆ 2008ರ ನಂತರ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ. ಅವರ ಜೊತೆ ಒಂದು ಸಿನಿಮಾ ಮಾಡಲು ರಾಜ್​ ಕುಂದ್ರಾ ಪ್ಲ್ಯಾನ್​ ಮಾಡಿದ್ದರು ಎಂಬ ವಿಚಾರವನ್ನು ನಟಿ ಗೆಹನಾ ವಸಿಷ್ಠ ಬಾಯಿ ಬಿಟ್ಟಿದ್ದಾರೆ.


ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಗೆಹನಾ ಬಹಿರಂಗಪಡಿಸಿದ್ದಾರೆ. ‘ರಾಜ್​ ಕುಂದ್ರಾ ಅರೆಸ್ಟ್​ ಆಗುವುದಕ್ಕಿಂತ ಕೆಲವೇ ದಿನಗಳ ಮುನ್ನ ನಾನು ಅವರು ಆಫೀಸ್​ಗೆ ಹೋಗಿದ್ದೆ. ಅವರು ಬಾಲಿಫೇಮ್​ ಎಂಬ ಹೊಸ ಆ್ಯಪ್​ ಲಾಂಚ್​ ಮಾಡಲು ಪ್ಲ್ಯಾನ್​ ರೂಪಿಸಿದ್ದಾರೆ ಎಂಬುದು ನನಗೆ ಆಗ ಗೊತ್ತಾಯಿತು. ಆ ಆ್ಯಪ್​ಗಾಗಿ ಸಿನಿಮಾ, ಚಾಟ್​ ಶೋ, ರಿಯಾಲಿಟಿ ಶೋ, ಮ್ಯೂಸಿಕ್​ ವಿಡಿಯೋಗಳನ್ನು ತಯಾರಿಸುವ ಐಡಿಯಾ ಇತ್ತು. ಹಲವು ಸ್ಕ್ರಿಪ್ಟ್​ಗಳ ಬಗ್ಗೆ ನಾವು ಚರ್ಚೆ ಮಾಡಿದ್ವಿ. ಆ ಪೈಕಿ ಒಂದು ಸಿನಿಮಾದಲ್ಲಿ ಶಮಿತಾ ಶೆಟ್ಟಿ ನಟಿಸುವುದು ಎಂದು ಪ್ಲ್ಯಾನ್​ ಆಗಿತ್ತು’ ಅಂತ ಗೆಹನಾ ವಸಿಷ್ಠ ಹೇಳಿದ್ದಾರೆ.

ಅನೇಕ ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಹಲವು ಸಾಕ್ಷ್ಯಗಳು ಇವೆ ಎನ್ನಲಾಗಿದೆ. ಆದರೂ ಕೂಡ ರಾಜ್ ಕುಂದ್ರಾ ಈ ಆರೋಪಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ಹೊಸ ವಾದವನ್ನು ಮಾಡುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರಗಳಲ್ಲ. ಅವು ಬರೀ ಕಾಮೋದ್ರೇಕ ಸಿನಿಮಾಗಳು’ ಎಂದು ರಾಜ್​ ಕುಂದ್ರಾ ಹೇಳುತ್ತಿದ್ದಾರೆ. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸುತ್ತಾ ತಿರಸ್ಕರಿಸುತ್ತಾ ನೋಡಬೇಕಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...