ಬೆಳ್ತಂಗಡಿ: ತಾಲೂಕಿನ ವೇಣೂರಿನಲ್ಲಿ ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದನವೊಂದನ್ನು ಯುವಕರ ತಂಡವೊಂದು ರಕ್ಷಣೆ ಮಾಡಿದೆ.
ವೇಣೂರಿನ ಜಯರಾಮ್ ಶೆಟ್ಟಿ ಎಂಬವರಿಗೆ ಸೇರಿದ ದನ ಇದಾಗಿದ್ದು, ಪಲ್ಗುಣಿ ನದಿಯ ಮಧ್ಯೆ ಕೊಚ್ಚಿ ಹೋಗುವ ಸ್ಥಿತಿಯಲ್ಲಿತ್ತು.
ಈ ವೇಳೆ ಇದನ್ನು ಗಮನಿಸಿದ ನುರಿತ ಈಜುಗಾರರಾದ ಇಂತಿಯಾಝ್ ನಡ್ತಿಕಲ್ ಹಾಗು ಹಸನಬ್ಬ ಕೈರೋಳಿ ಎಂಬವರು ನದಿಗೆ ಇಳಿದು, ದನದ ರಕ್ಷಣೆ ಮಾಡಿದ್ದಾರೆ. ನದಿ ತಟದ ಬಳಿ ಮೇಯಲು ಹೋಗಿದ್ದ ವೇಳೆ ನದಿ ನೀರಿನ ಹರಿವು ಹೆಚ್ಚಾದ ಕಾರಣ ದನ ನದಿಗೆ ಬಿದ್ದಿದೆ ಎನ್ನಲಾಗಿದೆ.