Sports
ಟೆನಿಸ್ ವೃತ್ತಿ ಬದುಕಿಗೆ ರಫೆಲ್ ನಡಾಲ್ ಭಾವುಕ ವಿದಾಯ
Published
22 hours agoon
By
NEWS DESK4ಮಂಗಳೂರು/ಸ್ಪೇನ್ : ಟೆನಿಸ್ ದಿಗ್ಗಜ, ದಿ ಕಿಂಗ್ ಆಫ್ ಕ್ಲೇ ರಫೆಲ್ ನಡಾಲ್ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ನ.19 ರಂದು ನಡೆದ ನೆದರ್‌ಲ್ಯಾಂಡ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರು. ಇದರೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ನಿವೃತ್ತಿ ಘೋಷಿಸಿದ ಬಳಿಕ ಸ್ಪ್ಯಾನಿಷ್ ರಾಷ್ಟ್ರಗೀತೆಯ ಸಂದರ್ಭದಲ್ಲಿ ರಫೆಲ್ ಭಾವುಕರಾಗಿದ್ದು ಕಂಡು ಬಂತು. ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಅಭಿಮಾನಿಗಳು ‘ರಾಫಾ, ರಾಫಾ’ ಎಂದು ಕೂಗುವ ಮೂಲಕ ತಮ್ಮ ನೆಚ್ಚಿನ ಸಾಧಕನನ್ನು ಬೀಳ್ಕೊಟ್ಟಿದ್ದಾರೆ.
ಇದನ್ನೂ ಓದಿ : IPL 2025 : ಎಲ್ಲಾ ತಂಡಗಳ ಕಣ್ಣು ಈ ಆಟಗಾರನ ಮೇಲೆ ?
2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಿದ್ದಾರೆ. 23 ವರ್ಷಗಳ ಟೆನಿಸ್ ಜೀವನದಲ್ಲಿ ನಡಾಲ್ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನೆದರ್‌ಲ್ಯಾಂಡ್ ನ ಬೋಟಿಕ್ ವ್ಯಾನ್ ಡೆ ಝಾಂಡ್ ಸ್ಕಲ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ1-2 ರ ಅಂತರದಲ್ಲಿ ಸೋಲುವ ಮೂಲಕ ಈ ಮೊದಲೇ ಹೇಳಿದ್ದಂತೆ ತಮ್ಮ ವೃತ್ತಿ ಬದುಕಿಗೆ ಗುಡ್ ಬಾಯ್ ಹೇಳಿದ್ದಾರೆ.
ಮಂಗಳೂರು/ಮುಂಬೈ : ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಸೀಸನ್-18ರ ಮೆಗಾ ಹರಾಜಿನ ಮಾರ್ಕ್ಯೂ ಲಿಸ್ಟ್ ನ ಮೊದಲ ಸೆಟ್ ನಲ್ಲಿ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಇಂಗ್ಲೆಂಡ್ ನ ಈ ಆಟಗಾರನೇ ಮೊದಲ ಸ್ಥಾನದಲ್ಲಿರೋದು ವಿಶೇಷ. ಹತ್ತು ಫ್ರಾಂಚೈಸಿಗಳ ಕಣ್ಣು ಈ ಆಟಗಾರನ ಮೇಲೆ ಬಿದ್ದಿದೆ.
ಯಾರು ಆ ಆಟಗಾರ?
ಐಪಿಎಲ್ ನಲ್ಲಿ ಎಲ್ಲಾ ಫ್ರಾಂಚೈಸಿಗಳು ತಾವು ಬಯಸುವ ಆಟಗಾರರನ್ನು ಮಾರ್ಕ್ಯೂ ಲಿಸ್ಟ್ ನಲ್ಲಿ ಸೇರ್ಪಡೆಗೊಳಿಸುವ ಕ್ರಮವಿದೆ. ಅದರಂತೆ ಈ ಬಾರಿ ಕೂಡ 12 ಆಟಗಾರರು ಮಾರ್ಕ್ಯೂ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಎಲ್ಲಾ ಫ್ರಾಂಚೈಸಿಗಳ ಫೇವರೇಟ್ ಆಟಗಾರನಾಗಿ ಜೋಸ್ ಬಟ್ಲರ್ ಕಾಣಿಸಿಕೊಂಡಿದ್ದಾರೆ.
2024ರ ಸೀಸನ್ ನಲ್ಲಿ ರಾಜಸ್ತಾನ್ ರಾಯಲ್ಸ್ ಪರ 11 ಪಂದ್ಯಗಳನ್ನಾಡಿದ ಬಟ್ಲರ್ 2 ಶತಕಗಳೊಂದಿಗೆ ಒಟ್ಟು 359 ರನ್ ಕಲೆಹಾಕಿದ್ದಾರೆ. ಇದುವರೆಗೂ 107 ಐಪಿಎಲ್ ಪಂದ್ಯಗಳಿಂದ ಒಟ್ಟು 3582 ರನ್ ಗಳಿಸಿದ್ದಾರೆ. ಅದರಲ್ಲಿ 7 ಶತಕ ಹಾಗೂ 19 ಅರ್ಧಶತಕಗಳು ಸೇರಿವೆ. ಅದಲ್ಲದೆ, ಬಟ್ಲರ್ ಖರೀದಿಯಿಂದ ಮೂರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದು ಎಂಬುದು ಫ್ರಾಂಚೈಸಿಗಳ ಬಯಕೆಯಾಗಿದೆ. ಹೀಗಾಗಿ ಜೋಸ್ ಬಟ್ಲರ್ ಖರೀದಿಗಾಗಿ ಭರ್ಜರಿ ಪೈಪೊಟಿಯನ್ನು ಅಪೇಕ್ಷಿಸಬಹುದು.
ಮಂಗಳೂರು/ಮುಂಬೈ : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ಎಂದರೆ ಸಾಕು ಎದುರಾಳಿ ಬ್ಯಾಟ್ಸ್ ಮ್ಯಾನ್ ನಡುಗಿಬಿಡುತ್ತಾನೆ. ಅವರು ಬೌಲಿಂಗ್ ನಲ್ಲಿ ಮಾಡುವ ಮೋಡಿ ಎಲ್ಲರಿಗೂ ಚಿರಪರಿಚಿತ. ಆದರೆ 2023ರ ಏಕದಿನ ವಿಶ್ವಕಪ್ ಬಳಿಕ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಇತ್ತೀಚೆಗೆ ಗಾ*ಯದಿಂದ ಚೇತರಿಸಿಕೊಂಡು ರಣಜಿ ಟೂರ್ನಿಯ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿ, ಮೊದಲ ಪಂದ್ಯದಲ್ಲೇ 7 ವಿಕೆಟ್ ಪಡೆದುಬಂಗಾಳ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈಗ ಶಮಿ ವಿರುದ್ದ ಗಂಭೀ*ರ ಆರೋಪ ಕೇಳಿಬಂದಿದೆ. ಅದುವೇ ವಯಸ್ಸು ಮರೆಮಾಚಿದ ಆರೋಪ.
ಹೌದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೃಷ್ಣ ಮೋಹನ್ ಎಂಬವರು, ಮೊಹಮ್ಮದ್ ಶಮಿ ತಮ್ಮ ವಯಸ್ಸು ಮರೆಮಾಚಿದ್ದಾರೆ ಎಂದು ಗಂಭೀ*ರ ಆರೋಪ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಹಮ್ಮದ್ ಶಮಿ ಅವರ ಡ್ರೈವಿಂಗ್ ಲೈಸನ್ಸ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದರೆ, ಶಮಿ ತನಿಖೆಗೆ ಒಳಪಡಲಿದ್ದಾರೆ. ಒಂದು ವೇಳೆ ಈ ಆರೋಪ ನಿಜವಾದರೆ ಟೀಮ್ ಇಂಡಿಯಾದಿಂದ ಬ್ಯಾನ್ ಆಗುವ ಸಾಧ್ಯತೆ ಕೂಡ ಇದೆ.
ಬಿಸಿಸಿಐ ನಿಯಮ ಏನು ?
ಬಿಸಿಸಿಐ ನಿಯಮದ ಪ್ರಕಾರ, ವಯಸ್ಸನ್ನು ಮರೆಮಾಚುವುದು ಗಂಭೀರ ಅಪರಾಧ. ಈ ಹಿಂದೆಯೂ ಕೂಡ ಸಾಮಾನ್ಯವಾಗಿ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ತಮ್ಮ ವಯಸ್ಸನ್ನು ಒಂದು ಅಥವಾ ಎರಡು ವರ್ಷ ಕಡಿಮೆ ಎಂದು ಘೋಷಿಸುತ್ತಾರೆ. ವಯಸ್ಸು ಬದಲಿಸಿ ಈ ಹಿಂದೆಯೂ ಕೂಡ ಹಲವಾರು ಆಟಗಾರರು ಸಿಕ್ಕಿಬಿದ್ದಿದ್ದರು. ಅಂತಹ ಆಟಗಾರರನ್ನು ಬಿಸಿಸಿಐ ಅಮಾನತುಗೊಳಿಸಿತ್ತು.
LATEST NEWS
ರಾಜಕೀಯ ಅಖಾಡದಲ್ಲಿ ಗೆದ್ದು ಬೀಗಿದ ವಿನೇಶ್ ಪೋಗಟ್..!
Published
1 month agoon
08/10/2024By
NEWS DESK4ಮಂಗಳೂರು/ಹರಿಯಾಣ : ಹರಿಯಾಣ ವಿಧಾನಸಭಾ ಚುನಾವಣಾ ಅಖಾಡದಲ್ಲಿ ನಡೆಸಿದ ಹೋರಾಟದಲ್ಲಿ ಕುಸ್ತಿಪಟು ವಿನೇಶ್ ಪೋಗಟ್ ಗೆಲುವಿನ ನಗೆ ಬೀರಿದ್ದಾರೆ. ಜೂಲಾನ ಕ್ಷೇತ್ರದಿಂದ ಕಾಂಗ್ರೆಸ್‌ನಲ್ಲಿ ಸ್ಪರ್ಧೆ ಮಾಡಿದ್ದ ಪೋಗಟ್ ಪ್ರತಿಸ್ಪರ್ಧಿ ಯೋಗೇಶ್ ಕುಮಾರ್ ವಿರುದ್ಧ 6015 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಸೆಪ್ಟಂಬರ್ 6 ರಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿನೇಶ್ ಫೋಗಟ್ ಅವರು ಅಕ್ಟೋಬರ್ 5 ರಂದು ಹರಿಯಾಣ ವಿಧಾನ ಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಜಿಂದ್ ಜಿಲ್ಲೆಯ ಜೂಲಾನ ಕ್ಷೇತ್ರ ವಿನೇಶ್ ಸ್ಪರ್ಧೆಯಿಂದ ಹೈ ಪ್ರೋಫೈಲ್ ಕ್ಷೇತ್ರವಾಗಿ ಬದಲಾಗಿತ್ತು.
ಮತ ಎಣಿಕೆ ಆರಂಭವಾದಾಗ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಪೋಗಟ್ ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿದ್ದರು. ಬಳಿಕ ಮತ್ತೆ ಮುನ್ನಡೆ ಸಾಧಿಸಿದ ಪೋಗಟ್ ಕೊನೆಗೂ ಜಯದ ನಗೆ ಬೀರಿದ್ದಾರೆ. 2009 ರಿಂದ ಈ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿದ್ದು, ಈ ಭಾರಿ ವಿನೇಶ್ ಪೋಗಟ್ ಮೂಲಕ ಮತ್ತೆ ಪಡೆದುಕೊಂಡಿದೆ.
ಇದನ್ನೂ ಓದಿ : BBK11: ಬಿಗ್ ಬಾಸ್ ನರಕ ನಿವಾಸಿಗಳಿಗೆ ಬಂಪರ್ ಆಫರ್
ಬಿಜೆಪಿ ಸಂಸದ ಮತ್ತು ಕುಸ್ತಿ ಫೆಡರೇಶ್ ಆಫ್ ಇಂಡಿಯಾದ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿ ವಿನೇಶ್ ಪೋಗಟ್ ಸುದ್ದಿಯಾಗಿದ್ದರು. ಬಳಿಕ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50ಕೆಜಿ ವಿಭಾಗದಲ್ಲಿ ತೂಕ ಹೆಚ್ಚಾದ ಕಾರಣಕ್ಕೆ ಫೈನಲ್ ಪ್ರವೇಶಿಸಿದ್ರೂ ಪದಕದಿಂದ ವಂಚಿತರಾಗಿದ್ದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ವಿನೇಶ್ ಪೋಗಟ್ ಇದೀಗ ರಾಜಕೀಯ ಅಖಾಡದಲ್ಲಿ ತನ್ನ ಗೆಲವು ದಾಖಲಿಸಿಕೊಂಡಿದ್ದಾರೆ
LATEST NEWS
ಮಂಗಳೂರು: ನವೆಂಬರ್ 23 ರಂದು ಎನ್ಐಟಿಕೆ ಘಟಿಕೋತ್ಸವ
ಬ್ಯಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್ ಈಗ ಹೇಗಿದ್ದಾರೆ ಗೊತ್ತಾ ?
ಪ್ರಧಾನಿ ಮೋದಿಗೆ ಗಯಾನಾ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ
ಶ್ರೀ ಎಂ.ಎಸ್.ಗುರುರಾಜ್ಗೆ ಪ್ರತಿಷ್ಟಿತ ‘ಶ್ರೇಷ್ಠ ಸಹಕಾರಿ’ ರಾಜ್ಯ ಪ್ರಶಸ್ತಿ !!
ಮುಖ್ಯಮಂತ್ರಿಯೊಡನೆ ಲವ್; ಮದುವೆಯಾಗದೆ ತಾಯಿಯಾದ ಆ ನಟಿ ಯಾರು ಗೊತ್ತಾ ?
ಮದುವೆ ವಿರೋಧ ; ಶಾಲಾ ಆವರಣದಲ್ಲೇ ಶಿಕ್ಷಕಿಯ ಬ*ರ್ಬರ ಹ*ತ್ಯೆ
Trending
- LATEST NEWS3 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS4 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS22 hours ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS22 hours ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ