Connect with us

FILM

ನಟಿ ರಾಧಿಕಾ ಕುಮಾರಸ್ವಾಮಿ ಅಣ್ಣ ರವಿರಾಜ್ ಚಿತ್ರರಂಗಕ್ಕೆ ಎಂಟ್ರಿ…

Published

on

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

 

ಬೆಂಗಳೂರು : ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ರವಿರಾಜ್ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ತಂಗಿ ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡವರಾಗಿದ್ದಾರೆ.


ಇದೀಗ ಸಹೋದರ ರವಿರಾಜ್ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

ರಾಧಿಕಾ ಅವರ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ರವಿರಾಜ್ ಲಕ್ಕಿ, ‘ಸ್ವೀಟಿ ನನ್ನ ಜೋಡಿ, ಭೈರಾದೇವಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಿನಿಮಾ ವಿತರಣೆ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ.

ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆ ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ನಡಿ ಮೊದಲ ಹಾರರ್ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ರಿಲೀಸಿಗೆ ರೆಡಿಯಾಗಿದೆ.

ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿರುವ ರವಿರಾಜ್ ಅತೀವ ಯಶಸ್ಸನ್ನು ಗಳಿಸಲಿ. ತಂಗಿಯಂತೆ ತಾನೂ ಕೂಡ ದೊಡ್ಡ ಮಟ್ಟದ ಖ್ಯಾತಿಗಳಿಸಲಿ ಎಂಬುದು ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಆಶಯ.

FILM

ಖಡಕ್ ಪೊಲೀಸ್ ಅಧಿಕಾರಿಯಾದ ರೂಪೇಶ್ ಶೆಟ್ಟಿ

Published

on

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 9ರ ರೂಪೇಶ್ ಶೆಟ್ಟಿ  ‘ಅಧಿಪತ್ರ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿನ ರೂಪೇಶ್ ಲುಕ್  ಇದೀಗ ರಿವೀಲ್ ಆಗಿದೆ.

ಚಹನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಅಧಿಪತ್ರ ಚಿತ್ರದಲ್ಲಿ ಹೀರೋ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ಬೃಹತಿ ಎಂಬ ಪಾತ್ರಕ್ಕೆ ಗಿಚ್ಚಿ ಗಿಲಿ ಗಿಲಿ ನಟಿ ಬಣ್ಣ ಹಚ್ಚಿದ್ದಾರೆ.‌ ಸದ್ಯ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದೆ.

‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಬೈಕ್ ಮೇಲೆ ಕುಳಿತು ಖಡಕ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪೇಶ್ ಪೋಸ್ ನೀಡಿದ್ದಾರೆ.

 

 

Continue Reading

bangalore

ನ. 29ಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮದುವೆ…

Published

on

ಬೆಂಗಳೂರು : ಮಳೆ ಹುಡುಗಿ ಪೂಜಾ ಗಾಂಧಿ ಕೊನೆಗೂ ಮದುವೆ ಆಗುತ್ತಿದ್ದಾರೆ. ಬಹು ದಿನಗಳ ಗೆಳೆಯ ಉದ್ಯಮಿ ವಿಜಯ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ, ಮಕ್ಕಳು, ಸಂಸಾರ ಅನ್ನುವ ವಿಚಾರದ ಬಗ್ಗೆ ಪೂಜಾ ಯೋಚನೆ ಮಾಡಿದ್ದರು. ಆದರೆ ಅದು ಈಗಲೇ ಅಲ್ಲ ಅನ್ನುವ ಮಾತನ್ನು ಹೇಳಿಕೊಳ್ಳುತ್ತಿದ್ದರು. ಅದರ ಮಧ್ಯೆ ಆನಂದ್ ಗೌಡ ಜೊತೆಗೆ ನಿಶ್ಚಿತಾರ್ಥವೂ ಆಗಿತ್ತು. ಅದು ಅಷ್ಟೇ ಬೇಗ ಮುರಿದು ಬಿತ್ತು. ಆದರೆ ಇದೀಗ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡಲು ಡಿಸೈಡ್ ಮಾಡಿದ್ದಾರೆ.


ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಶೇಷ ಅಂದರೆ, ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ಈ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.ಪೂಜಾಗಾಂಧಿ ಮೂಲತ: ಉತ್ತರ ಪ್ರದೇಶದ ಮೀರತ್‌ನವರು. ಪಂಜಾಬಿ ಕುಟುಂಬದಲ್ಲಿ ಜನಿಸಿದ್ದ ಪೂಜಾ ಗಾಂಧಿ ದೆಹಲಿಯಲ್ಲಿ ನೆಲೆಸಿದ್ದರು. ಜಾಹೀತಾರು ಹಾಗೂ ಮಾಡಲಿಂಗ್ ಮೂಲಕ ಜನಪ್ರಿಯರಾಗಿದ್ದ ನಟಿ ‘ಮುಂಗಾರು ಮಳೆ’ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಒಂದರ ಹಿಂದೊಂದರಂತೆ ಯಶಸ್ಸು ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು.


2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿ, ನಂತರ ಮುರಿದು ಬಿದ್ದಿತ್ತು. ಆದರೆ, ಈಗ ಹರಿದಾಡುತ್ತಿರುವ ಮದುವೆ ವಿಷಯದ ಬಗ್ಗೆ ನಟಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.ಕನ್ನಡವನ್ನು ಕಲಿತು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿರೋ ಮುಂಗಾರು ಮಳೆ ಬೆಡಗಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಮದುವೆಗೆ ರೆಡಿ ಆಗಿದ್ದಾರೆ. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಕರ್ನಾಟಕದ ಸೊಸೆ ಆಗಲು ಪೂಜಾ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ

Continue Reading

FILM

ಆಲಿಯಾ ಭಟ್ ಡೀಫ್ ಫೇಕ್ ವಿಡಿಯೋ ವೈರಲ್ – ವಿಡಿಯೋ ನೋಡಿದ್ರಾ..?

Published

on

ಮುಂಬೈ: ರಶ್ಮಿಕಾ ಮಂದಣ್ಣ, ಕಾಜೋಲ್ ಡೀಫ್ ಫೇಕ್ ವಿಡಿಯೋ ವೈರಲ್  ಬೆನ್ನಲ್ಲೇ ಇದೀಗ ಮತ್ತೊಂದು ನಟಿ ಆಲಿಯಾ ಭಟ್ ನ ಡೀಫ್ ಫೇಕ್ ವಿಡಿಯೋ ವೈರಲ್ ಆಗ್ತಾ ಇದೆ.

ಕೆಲವು ದಿನಗಳ ಹಿಂದೆಯಿಂದ ಡೀಫ್ ಫೇಕ್ ಎಂಬ ಫೇಸ್ ಆ್ಯಪ್ ಮೂಲಕ ಸಿನಿಮಾ ತಾರೆಯರ ಫೋಟೋಗಳನ್ನು ಅರೆ ಬಟ್ಟೆಯಲ್ಲಿ ಹಾಟ್ ಕಾಣಿಸುವಂತೆ ವಿಡಿಯೋ ಮಾಡಿ ವೈರಲ್ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರೆ ಬಟ್ಟೆಯಲ್ಲಿ ಹಾಟ್ ಕಾಣಿಸಿಕೊಂಡಿರುವ ಯಾವುದೋ ಯುವತಿಯ ದೇಹಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ನ ಮುಖವನ್ನು ಅಂಟಿಸಿ ವಿಡಿಯೋ ಮಾಡಿರೋದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಹಿಂದೆ ಹಲವು ನಟಿಗಳ ಡೀಫ್ ಫೇಕ್ ವಿಡಿಯೋ ವೈರಲ್ ಅದಾಗ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಂಡರೂ ಈ ಡೀಫ್ ಫೇಕ್ ವಿಡಿಯೋ ವೈರಲ್ ಮಾಡೋ ಕಿಡಿಗೇಡಿಗಳ ಕಾಟ ನಿಲ್ಲಿಸ್ತಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಂತಹ ವಿಡಿಯೋಗಳು ಇನ್ನು ಹೆಚ್ಚಾಗುತ್ತದೆ ಎಂದು ನೆಟ್ಟಿಗರು ಹೇಳ್ತಾ ಇದ್ದಾರೆ.

 

Continue Reading

LATEST NEWS

Trending