Connect with us

    DAKSHINA KANNADA

    ಪ್ರವೀಣ್‌ ಜೀವ ಉಳಿಸಲು ಪ್ರಯತ್ನಿಸಿದ ಎಸ್‌ಕೆಎಸ್‌ಎಸ್‌ಎಫ್‌ ಅಂಬುಲೆನ್ಸ್‌

    Published

    on

    ಮಂಗಳೂರು: ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್‌ನನ್ನು ಎಸ್‌ಕೆಎಸ್‌ಎಸ್‌ಎಫ್‌ನ ಅಂಬುಲೆನ್ಸ್‌ನಲ್ಲಿ ಕರೆದೊಯ್ದು ಜೀವ ಉಳಿಸುವ ಪ್ರಯತ್ನ ನಡೆಸಿದ್ದರು. ಆದರೆ ಜೀವ ಉಳಿಸಲಾಗಲಿಲ್ಲ ಎಂದು ಶಂಸುಲ್‌ ಉಲಮಾ ಚಾರಿಟೇಬಲ್‌ ಸಂಚಾಲಕ ಜಮಾಲುದ್ದೀನ್‌ ಹೇಳಿದ್ದಾರೆ.


    ಘಟನೆ ಬಗ್ಗೆ ವಿವರಿಸಿದ ಅವರು, ಪ್ರವೀಣ್‌ಗೆ ಮಾರಾಣಾಂತಿಕ ಹಲ್ಲೆಯಾದ ತಕ್ಷಣ ಬೆಳ್ಳಾರೆ ಪೊಲೀಸರು ನನಗೆ ಕಾಲ್‌ ಮಾಡಿ ಅಂಬುಲೆನ್ಸ್‌ ಬೇಕು ಎಂದರು.

    ಈ ವೇಳೆ ನಾನು ಬೇರೆಡೆ ಇದ್ದೆ ಆಗ ನಮ್ಮದೇ ಸಂಘಟನೆಯ ಆಶಿಕ್‌ ಎಂಬಾತ ಬೆಳ್ಳಾರೆಯಿಂದ ಪ್ರವೀಣ್‌ನನ್ನು ಪುತ್ತೂರಿಗೆ ಕರೆದುಕೊಂಡು ಬಂದಿದ್ದರು.

    ಈ ವೇಳೆ ಅವರ ಅಂಗಡಿಯಲ್ಲಿದ್ದ ಓರ್ವ ಸಹಾಯಕ ಜೊತೆಗೆ ಬಂದಿದ್ದರು. ದಾರಿ ಮಧ್ಯೆ ಅವರನ್ನು ಕರೆದುಕೊಂಡು ಬರುತ್ತಿದ್ದಾಗ ನೋವಿನ ಆರ್ತನಾದ ಕೇಳುತ್ತಿತ್ತು.

    ಕುಂಬ್ರ ಬಳಿ ತಲುಪುವ ವೇಳೆ ಅವರ ಜೀವ ಹಾರಿಹೋಗಿತ್ತು. ಪ್ರವೀಣ್‌ಗೆ ಹಲವು ಮುಸ್ಲಿಂ ಗೆಳೆಯರಿದ್ದರು. ಅವರ ಅಂಗಡಿಯಲ್ಲಿ ನಾವು ಕೋಳಿ ಮಾಂಸ ಕಟ್‌ ಮಾಡಿ ತರುತ್ತಿದ್ದೆವು.

    ಪ್ರವೀಣ್‌ ತನ್ನ ಮುಸ್ಲಿಂ ಸ್ನೇಹಿತರ ಮದುವೆ, ಮನೆ ಒಕ್ಕಲಿಗೆ ಬರುತ್ತಿದ್ದರು. ಅವರ ಹತ್ಯೆ ತುಂಬಾ ದುಃಖವಾಗಿದೆ. ಅಂತಹ ಕೊಲೆಗಡುಕರಿಗೆ ನಾವು ಯಾವತ್ತೂ ಬೆಂಬಲ ನೀಡುವುದಿಲ್ಲ.

    ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು. ನಮ್ಮ ಸಂಸ್ಥೆಯು ಯಾವುದೇ ಜಾತಿ-ಮತ ನೋಡಿ ಸಹಾಯ ಮಾಡುವುದಿಲ್ಲ. ಎಲ್ಲರಿಗೂ ಸಹಾಯ ಮಾಡುತ್ತೇವೆ ಎಂದರು.

    DAKSHINA KANNADA

    ಮಂಗಳೂರಿನ ಮಾರ್ನೆಮಿಕಟ್ಟೆ : ಸಹಸ್ರಾರ್ಚನೆ ಸಹಿತ  ದುರ್ಗಾನಮಸ್ಕಾರ ಪೂಜೆ

    Published

    on

    ಮಂಗಳೂರು : ದೈವ ದೇವರ ನಾಡು ಕರಾವಳಿಯಲ್ಲಿ ಈಗ ನವರಾತ್ರಿ ಸಂಭ್ರಮ. ನವರಾತ್ರಿ ವೇಳೆ ಶಕ್ತಿದೇವತೆಯಾದ ದುರ್ಗಾದೇವಿ ಆರಾಧನೆ ಎಲ್ಲೆಡೆ ನಡೆಯುತ್ತದೆ. ಅದರಲ್ಲೂ ಮಂಗಳವಾರದಂದು ನಡೆಯುವ ದುರ್ಗಾನಮಸ್ಕಾರ ಪೂಜೆ ವಿಶೇಷತೆಯಿಂದ ಕೂಡಿದೆ. ಸಾರ್ವಜನಿಕ ವಿಶೇಷ ಸಹಸ್ರಾರ್ಚನೆ ಸಮೇತ ದುರ್ಗಾನಮಸ್ಕಾರ ಪೂಜೆ ಮಾರ್ನೆಮಿಕಟ್ಟೆಯ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಕ್ಷೇತ್ರದಲ್ಲಿ ಜ್ಯೋತಿಷ್ಯ ವಿದ್ವಾನ್‌ ದೈವಜ್ಞ ಕರಣ್ ಜ್ಯೋತಿಷಿಯವರ ನೇತೃತ್ವದಲ್ಲಿ ಜರುಗಿತು.

    ಮಂಗಳವಾರದಂದು ದುರ್ಗಾ ದೇವಿಯನ್ನು ಪೂಜಿಸುವುದರಿಂದ ದುರ್ಗಾ ಮಂತ್ರವನ್ನು ಪಠಿಸುವುದರಿಂದ ಇಚ್ಛೆಗಳು , ಬಯಕೆಗಳು ಬಹುಬೇಗ ಈಡೇರುತ್ತವೆ. ಶಕ್ತಿದೇವತೆ ದುರ್ಗಾದೇವಿಯನ್ನು ಪೂಜಿಸುವ ವಿಧಿ- ವಿಧಾನಗಳೂ ಅತ್ಯಂತ ಮಹತ್ವದ್ದಾಗಿದೆ. ದುರ್ಗೆಯನ್ನು ಆರಾಧಿಸುವುದರಿಂದ ತಾಯಿ ಪ್ರಸನ್ನಳಾಗುವ ಜೊತೆಗೆ ಭಕ್ತರ ಆಧ್ಯಾತ್ಮಿಕ ಮತ್ತು ಭೌತಿಕ ಬಯಕೆಗಳು ಕೂಡಾ ಈಡೇರುತ್ತವೆ. ಎಲ್ಲರೂ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಇಂತಹ ಪವಿತ್ರವಾದ ದುರ್ಗಾನಮಸ್ಕಾರ ಪೂಜೆ ಮಂಗಳವಾರದಂದು ನಡೆಯಿತು. ಸಂಪೂರ್ಣ ವಿವರಣೆ ಸಹಿತವಾಗಿ ವಿಶೇಷ ಸಹಸ್ರಾರ್ಚನೆ ಸಮೇತ ದುರ್ಗಾನಮಸ್ಕಾರ ಪೂಜೆ ಮಾರ್ನೆಮಿಕಟ್ಟೆಯ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಕ್ಷೇತ್ರದಲ್ಲಿ ಜರುಗಿತು.

    ಜ್ಯೋತಿಷ್ಯ ವಿದ್ವಾನ್‌ ದೈವಜ್ಞ ಶ್ರೀ ಕರಣ್‌ ಜ್ಯೋತಿಷಿಯವರ ಮನೆ ದೇವರಾದ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ಅನುಗ್ರಹದೊಂದಿಗೆ ಅವರ ನಿವಾಸದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ವೈಭವದೊಂದಿಗೆ ಭಜನಾ ಸೇವೆಗಳೊಂದಿಗೆ ದುರ್ಗಾನಮಸ್ಕಾರ ಪೂಜೆ ಕರಣ್‌ಜ್ಯೋತಿಷಿ ಅವರ ನೇತೃತ್ವದಲ್ಲಿ ಜರುಗಿತು. ಸಂಪೂರ್ಣ ವಿವರಣೆ ಸಹಿತ ಈ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

    ಮಹಾಮಂಗಳಾರತಿ ಬಳಿಕ ನೆರೆದ ಎಲ್ಲಾ ಭಕ್ತರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಜನಾ ಸೇವೆ ನಡೆಯಿತು.

    ಇದನ್ನೂ ಓದಿ : ತನ್ನ ಮನೆಯಲ್ಲಿ ತಾನೇ ಕದ್ದು ಠಾಣೆಗೆ ದೂರು ನೀಡಿದ್ದ ಯುವತಿ

    ಪೂಜೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್‌, ಭುಜಂಗ ಕುಲಾಲ್‌, ಪುನೀತ್ ಅತ್ತಾವರ್‌, ನವೀನ್ ಮೂಡುಶೆಡ್ಡೆ, ಕಾರ್ಪೋರೇಟರ್‌ಗಳಾದ ವೀಣಾ ಮಂಗಳ, ಶೈಲೇಶ್‌, ಡಾ. ಪ್ರಜ್ವಲ್‌ ಮಾಣೆ, ಪುತ್ತೂರು ಬಿಜೆಪಿ  ಮುಖಂಡ ದಯಾನಂದ ಶೆಟ್ಟಿ ಉಜಿರೆಮಾರು ಮೊದಲಾದವರು ಪಾಲ್ಗೊಂಡಿದ್ದರು.  ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

    Continue Reading

    DAKSHINA KANNADA

    ಸಾ*ಯುವ ಮೊದಲು ಸಾಲ ತೀರಿಸಿದ ಮುಮ್ತಾಜ್ ಅಲಿ!

    Published

    on

    ಮಂಗಳೂರು : ಮುಮ್ತಾಜ್ ಅಲಿ ಅವರ ಆತ್ಮಹ*ತ್ಯೆ ಒಂದೇ ದಿನದ ನಿರ್ಧಾರ ಆಗಿರಲಿಲ್ಲ ಅನ್ನೋದು ಇದೀಗ ಬೆಳಕಿಗೆ ಬಂದಿದೆ‌. ಹನಿ ಟ್ರ್ಯಾಪ್ ಮಾಡಿ ದುಡ್ಡು ಕೀಳಲು ನಿಂತವರ ಕಿರುಕು*ಳ ತಾಳಲಾರದೆ ಕುಗ್ಗಿ ಹೋಗಿ ಇಂತಹ ಒಂದು ತೀರ್ಮಾನಕ್ಕೆ ಬಂದಿದ್ದಾರೆ.

    ಆತ್ಮಹ*ತ್ಯೆ ಮಾಡಿಕೊಳ್ಳುವ ಮೊದಲು ಸಾಲಗಾರರಿಗೆ ಬಾಕಿ ಇಟ್ಟಿದ್ದ ಒಂದೂವರೆ ಕೋಟಿ ಸಾಲವನ್ನು ಮುಮ್ತಾಜ್ ಅಲಿ ಮರು ಪಾವತಿ ಮಾಡಿದ್ದಾರೆ.

    ಇದನ್ನೂ ಓದಿ : ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ : ಇಬ್ಬರು ಅರೆಸ್ಟ್

    ಅಷ್ಟೇ ಅಲ್ಲದೆ,  ಶಾಲೆ ಹಾಗೂ ತನ್ನ ಫಿಶ್ ಮಿಲ್ ನೋಡಿಕೊಳ್ಳುವಂತೆ ತಮ್ಮ ಸಹೋದರರ ಹೆಸರಿನಲ್ಲಿ ಪತ್ರ ಬರೆದಿಟ್ಟಿದ್ದಾರೆ. ಈ ವಿಚಾರ ಇದೀಗ ಬೆಳಕಿಗೆ ಬಂದಿದ್ದು ಸಾಯುವ ನಿರ್ಧಾರ ಮೊದಲೇ ಮಾಡಿದ್ದರು ಅನ್ನೋದು ಸ್ಪಷ್ಟವಾಗಿದೆ. ಸಾಲಗಾರರಿಗೆ ಮೋಸ ಮಾಡದೇ ಹಣ ಹಿಂತಿರುಗಿಸಿದ ಮುಮ್ತಾಜ್ ಬಳಿಕ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಸಾವಿನಲ್ಲೂ ತನ್ನ ಬದ್ಧತೆ ಮರೆಯದ ಮುಮ್ತಾಜ್ ಅಲಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Continue Reading

    BELTHANGADY

    ಉಕ್ಕಿ ಹರಿದ ನದಿಗಳು; ರಾತ್ರೋ ರಾತ್ರಿ ಭಯಾನಕ ವಾತವರಣ ಸೃಷ್ಠಿ

    Published

    on

    ಬೆಳ್ತಂಗಡಿ: ಅಚಾನಕ್ಕಾಗಿ ಬಂದ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಜನರು ಆತಂಕಕ್ಕೊಳಗಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.


    ನಿನ್ನೆ (ಅ.8) ರಾತ್ರಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಚಾರ್ಮಾಡಿ, ದಿಡುಪೆ, ನೆರಿಯ ಭಾಗದ ನದಿಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆಗೆ ನೀರು ನುಗ್ಗಿದೆ.
    ನೆರಿಯಾದಲ್ಲಿ ಸೇತುವೆ ಮುಳುಗಡೆಯಾಗಿದಲ್ಲದೆ ಅಲ್ಲಲ್ಲಿ ರಸ್ತೆಗೆ ತೋಟಗಳಿಗೆ ನೀರು ನುಗ್ಗಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಉಂಟಾಗಿದೆ. ಸ್ಥಳೀಯರು ಹೇಳುವಂತೆ 2019 ರ ನೆರೆಯ ನಂತರ ಮಂಗಳವಾರ ರಾತ್ರಿ ನದಿಗಳಲ್ಲಿ ಅತೀ ಹೆಚ್ಚು ನೀರು ಬಂದಿದೆ. ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೆ ನೀರಿನ ಮಟ್ಟ ಏರಿಕೆ ಕಂಡಿದ್ದು ಮತ್ತೆ ಇಳಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    LATEST NEWS

    Trending