Connect with us

    Baindooru

    ಗೂಂಡಾಗಿರಿಯೊಂದಿಗೆ ಪಕ್ಷಕ್ಕೆ ಎಂಟ್ರಿಕೊಟ್ಟ ಪುತ್ತಿಲ ಪರಿವಾರ…!

    Published

    on

    ಹಲವು ಗೊಂದಲ ಮತ್ತು ಪುತ್ತೂರು ಬಿಜೆಪಿ ನಾಯಕರ ವಿರೋಧದ ನಡುವೆ ಕೊನೆಗೂ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ಪ್ರಹಸನ ಅಂತ್ಯವಾಗಿದೆ. ಪುತ್ತಿಲ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ವಿಜೇಯಂದ್ರ ಅವರಿಂದ ಹೂಗುಚ್ಛ ಸ್ವೀಕರಿಸಿ ಪಕ್ಷ ಸೇರ್ಪಡೆಯಾಗಿದ್ದರು. ಆದ್ರೆ ಜಿಲ್ಲೆಯಲ್ಲಿ ಪುತ್ತಿಲ ಸೇರ್ಪಡೆ ವಿಚಾರದಲ್ಲಿ ಗೊಂದಲ ಮುಂದುವರೆದಿತ್ತು.ಸದ್ಯ ಗೊಂದಲ ಮುಗಿದು ಪುತ್ತಿಲ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    Puttila joining

    ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಪುತ್ತಿಲ ಚುನಾವಣೆಯಿಂದ ಹಿಂದೆ ಸರಿದು ಪಕ್ಷ ಸೇರುತ್ತಿರುವುದೇ ಪಕ್ಷದೊಳಗಿನ ಗೊಂದಲಕ್ಕೆ ಕಾರಣ ಅನ್ನೋದು ಸ್ಪಷ್ಟ.ನಳಿನ್ ಕುಮಾರ್ ಕಟೀಲ್ ಬೆಂಬಲಿಗರಿಗೆ ಪುತ್ತಿಲ ಪರಿವಾರ ಪಕ್ಷ ಸೇರೋದು ಒಂದಿಷ್ಟೂ ಇಷ್ಟ ಇಲ್ಲ.ಹೀಗಾಗಿ ಪುತ್ತೂರಿನ ಬಿಜೆಪಿ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರ ಎದುರೇ ನಾಯಕರು ಗಲಾಟೆ ಮಾಡಿದ್ದು ಈಗ ಗೌಪ್ಯವಾಗಿ ಉಳಿದಿಲ್ಲ. ಅಂತೂ ಇಂತೂ ಮಂಗಳೂರು ಬಿಜೆಪಿ ಕಛೇರಿಯಲ್ಲಿ ಪುತ್ತಿಲರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.

    ಪಕ್ಷ ಸೇರುತ್ತಿದ್ದಂತೆ ಪುತ್ತಿಲಾ ಬೆಂಬಲಿಗನ ಗೂಂಡಾಗಿರಿ

    ಬಿಜೆಪಿ ಕಚೇರಿಗೆ ಕಾಲಿರಿಸಿದ್ದೆ ತಡ ಪುತ್ತಿಲ ಬೆಂಬಲಿಗ ಪಕ್ಷದ ಕಚೇರಿಯಲ್ಲಿ ಗುಂಡಾಗಿರಿ ನಡೆಸಿದ್ದಾನೆ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಸಮ್ಮುಖದಲ್ಲಿ ಈ ಗೂಂಡಾಗಿರಿ ನಡೆದಿದೆ. ಪಕ್ಷ ಸೇರ್ಪಡೆ ಆಗಿ ನಾವು ಒಂದಾಗಿದ್ದೇವೆ ನಿಮ್ಮ ಅಗತ್ಯ ಇಲ್ಲ ಎಂದು ಮಾಧ್ಯಮದವರ ಮೇಲೆ ಎಗರಾಡಿದ್ದಾನೆ. ಅಷ್ಟೇ ಅಲ್ಲದೆ ಮಾಧ್ಯಮದವರನ್ನು ಹೊರಗೆ ತಳ್ಳುವ ಯತ್ನ ಮಾಡಿದ್ದಾನೆ .ಇದೆಲ್ಲಾ ಕಂಡ ಪುತ್ತಿಲ ಹಾಗೂ ಸತೀಶ್ ಕುಂಪಲ ಧಂಗಾಗಿ ಹೋಗಿದ್ದಾರೆ. ಪುತ್ತಿಲ ಬೆಂಬಲಿಗನ ಉದ್ಧಟತನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾದ್ಯಮದವರು ಬಿಜೆಪಿ ಕಛೇರಿಯಂದಲೇ ಹೊರನಡೆದಿದ್ದಾರೆ. ಪಕ್ಷ ಸೇರ್ಪಡೆಯ ವೇಳೆಯೆ ಇಂತಹ ಗೂಂಡಾಗಿರಿ ನಡೆಸಿದವರು ಮುಂದೆ ಪುತ್ತೂರು ಬಿಜೆಪಿ ಕಛೇರಿ ಪ್ರವೇಶಿಸಿದ್ರೆ ಏನಾಗಬಹುದು ಅನ್ನೋ ಗುಸುಗುಸು ಜಿಲ್ಲಾ ಬಿಜೆಪಿ ಕಛೇರಿಯಲ್ಲೇ ಕೇಳಿಸಿದೆ.

    Rowdy

    ಪಕ್ಷದ ಕಛೇರಿಯಲ್ಲಿ ನಡೆದ ಈ ಘಟನೆ ಬಿಜೆಪಿ ನಾಯಕರಿಗೇ ಮುಜುಗರ ಉಂಟು ಮಾಡಿದೆ. ಘಟನೆಯ ಬಗ್ಗೆ  ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ.

    Baindooru

    ಪತಿ ಪತ್ನಿ ನಡುವೆ ವಿರಸ..! ರಸ್ತೆಯಲ್ಲಿ ಇಬ್ಬರ ಕಿತ್ತಾಟ..! ಮಧ್ಯೆ ಬಂದ ಯುವಕನ ಮೇಲೆ ಬಿತ್ತು ಕೇಸ್

    Published

    on

    ಬೈಂದೂರು: ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ಪತಿಯ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಬೈಂದೂರು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ಪತ್ನಿ ಹಾಗೂ ಪತ್ನಿಯ ತಾಯಿ ಪತಿ ಹಾಗೂ ಆತನ ಬಾವ ಹಲ್ಲೆ ನಡೆಸುವಾಗ ಯವಕ ನಮಗೆ ರಕ್ಷಣೆ ನೀಡಿದ್ದಾನೆ ಎಂದಿದ್ದಾರೆ.

    sirajuddin

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿಯಾಗಿರುವ ಸುರೇಶ್ ಭಟ್‌ ಎಂಬವರು ತನ್ನ ಪತ್ನಿಯನ್ನು ದಾರಿ ಮಧ್ಯೆ ನಿಲ್ಲಿಸಿ ಮಾತನಾಡುವಾಗ ಪತ್ನಿಯ ಸ್ನೇಹಿತ ಸಿರಾಜುದ್ದೀನ್ ಎಂಬ ಅನ್ಯಕೋಮಿನ ಯುವಕ ತನಗೆ ಹಲ್ಲೆ ನಡೆಸಿರುವುದಾಗಿ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾನೋ ಕಾರಿನಲ್ಲಿ ಅನ್ಯ ಕೋಮಿನ ಯುವಕನ ಜೊತೆ ಬರುತ್ತಿರುವುದು ನೋಡಿ ತಾನು ಕಾರು ನಿಲ್ಲಿಸಿ ವಿಚಾರಿಸಿದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಆದರೆ ಸುರೇಶ್ ಭಟ್‌ ಅವರ ದೂರನ್ನು ಅಲ್ಲಗಳೆದಿರುವ ಪತ್ನಿ ಪ್ರತಿಮಾ ಹಾಗೂ ಅತ್ತೆ ಶಿವಕುಮಾರಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರು ನೀಡಿರುವ ಶಿವಕುಮಾರಿ ತನ್ನ ಮಗಳು ಪ್ರತಿಮಾ ಹಾಗೂ ಪತಿ ಸುರೇಶ್ ಭಟ್‌ ಅವರಿಗೆ ಹಲವು ತಿಂಗಳಿನಿಂದ ಭಿನ್ನಾಬಿಪ್ರಾಯ ಇದ್ದು ಹೀಗಾಗಿ ಮಾನ ಹರಾಜು ಹಾಕಲು ಈ ರೀತಿ ಸುಳ್ಳು ದೂರು ದಾಖಲಿಸಿದ್ದಾರೆ. ಸಿರಾಜುದ್ದೀನ್ ಅಂಬ್ಯುಲೆನ್ಸ್‌ನಲ್ಲಿ ಡ್ರೈವರ್ ಆಗಿದ್ದು, ಕೆಲವೊಮ್ಮೆ ತಮ್ಮ ಕಾರಿಗೂ ಡ್ರೈವರ್ ಆಗಿ ಬರುತ್ತಾನೆ. ನನ್ನ ಮಗ ಹಾಗೂ ಮಗಳನ್ನು ಕರೆದುಕೊಂಡು ಹೋಗಲು ತಾನೇ ಸಿರಾಜುದ್ದಿನ್ ಗೆ ಕರೆ ಮಾಡಿದ್ದೆ. ಹೀಗೇ ನನ್ನ ಮಗ ಮತ್ತು ಮಗಳು ಕಾರಿನಲ್ಲಿ ಹೋಗುವಾಗ ಅವರ ಮೇಲೆ ಸುರೇಶ್ ಭಟ್ ಹಾಗೂ ಆತನ ಭಾವ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಸಿರಾಜುದ್ದೀನ್ ರಕ್ಷಣೆ ನೀಡಿದ್ದಾರೆ. ಆದರೆ ಇದಕ್ಕೆ ಬೇರೆ ಕಥೆ ಕಟ್ಟಿ ಈ ರೀತಿ ಸುಳ್ಳು ದೂರು ನೀಡಲಾಗಿದೆ ಎಂದು ಶಿವಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯ ಹಲ್ಲೆಗೆ ಒಳಗಾದ ಸುರೇಶ್ ಭಟ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಸುಳ್ಳು ದೂರು ಎಂದು ಸುರೇಶ್ ಭಟ್‌ ಅವರ ಅತ್ತೆ ಪ್ರತಿ ದೂರನ್ನು ಅದೇ ಠಾಣೆಗೆ ನೀಡಿದ್ದಾರೆ . ಇದೀಗ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    Baindooru

    Udupi: ನಮಾಝ್ ಗೆ ಕುಳಿತಿದ್ದಲ್ಲಿಯೇ ಹೃದಯಾಘಾತ- ವ್ಯಕ್ತಿ ಸಾವು..!

    Published

    on

    ಉಡುಪಿ: ಜುಮಾ ನಮಾಝ್‌ ವೇಳೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.9ರ ಶುಕ್ರವಾರದಂದು ಉಡುಪಿ ಜಿಲ್ಲೆಯ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿ ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್  (55) ಎಂದು ಗುರುತಿಸಲಾಗಿದೆ. ಶುಕ್ರವಾರದ ನಮಾಜ್‌ಗೆ ಬಂದಿದ್ದ ಮುಸ್ತಾಕ ನಮಾಶ್ ಮುಗಿಸಿ ಖುತ್ಭಾ ಕೇಳಲು ಕುಳಿತುಕೊಂಡಿದ್ದರು. ಈ ವೇಳೆ ಅವರಿಗೆ ದೇಹದಲ್ಲಿ ಏನೋ ಆಗುತ್ತಿದೆ ಎಂಬ ಅನುಭವ ಆಗಿದೆಯಾದರೂ ಅಕ್ಕಪಕ್ಕದವರಲ್ಲಿ ಈ ವಿಚಾರ ತಿಳಿಸಿಲ್ಲ. ಕುಳಿತಿದ್ದ ವ್ಯಕ್ತಿ ಏಕಾ ಏಕಿ ನೆಲಕ್ಕೆ ಒರಗಿದಾಗ ಅನುಮಾನಗೊಂಡು ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಫಿಡ್ಸ್ ಕಾಯಿಲೆ ಇರಬಹುದು ಎಂದು ಕೆಲವರು ಕೀಲಿ ಕೈ ಅವರ ಕೈಗಿಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಆ ವೇಳೆಗಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮುಸ್ತಾಕ್ ಅವರು ಮಸೀದಿ ಒಳಗೆ ಹೃದಯಾಘಾತಕ್ಕೆ ಒಳಗಾದ ದೃಶ್ಯ ಮಸೀದಿಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

     

    Continue Reading

    Ancient Mangaluru

    ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

    Published

    on

    ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.

    ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ  ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.  ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ  ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    Continue Reading

    LATEST NEWS

    Trending