Connect with us

LATEST NEWS

ಏಳರ ಬಾಲೆಯ ಕಣ್ಣು ಕುಕ್ಕಿ ವಿಕೃತಿ ಮೆರೆದ ಸೈಕೋ ಕಿಲ್ಲರ್ ವಾಮಂಜೂರು ಪ್ರವೀಣನ ಕಥೆ ಕೇಳಿದ್ರೆ ನೀವೂ ಬೆಚ್ಚಿ ಬೆಳ್ತೀರಾ..!!

Published

on

ಮಂಗಳೂರು: ಸೀರಿಯಲ್ ಕಿಲ್ಲರ್ ಪ್ರವೀಣ್‌ನನ್ನು ಸಾತಂತ್ರ್ಯ ಅಮೃತಮಹೋತ್ಸವ ಸಂದರ್ಭ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳು ನಡೆಯುತ್ತಿರುವ ಬೆನ್ನಲ್ಲೆ ಸರಣಿ ಕೊಲೆಗಳ ಈ ಅಪರಾಧಿಯನ್ನು ಬಿಡುಗಡೆ ಮಾಡಲೇಬಾರದು ಎಂದು ಪ್ರವೀಣ್ ಕೈಯಾರೆ ಕೊಲೆಯಾದ ಕುಟುಂಬಸ್ಥರು ಹಾಗೂ ಸ್ವತಃ ಪ್ರವೀಣ್‌ ಪತ್ನಿ ಮತ್ತು ಊರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರಮುಖರನ್ನೊಳಗೊಂಡ 50 ಜನರ ನಿಯೋಗ ಮಂಗಳೂರು ನಗರ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಎರಡೂವರೆ ದಶಕದ ಹಿಂದೆ ಮಂಗಳೂರು ನಗರದ ಹೊರವಲಯದ ವಾಮಂಜೂರಿನಲ್ಲಿ ಹಂತಕ ಪ್ರವೀಣ್ ನಡೆಸಿದ್ದ ಭೀಬಿತ್ಸ ನರಮೇಧದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸಿಂಗಲ್ ನಂಬರ್ ಚಟಕ್ಕೆ ಅಂಟಿ ಸಾಲದಲ್ಲಿ ಮುಳುಗಿದ್ದ ಲಾಟರಿ ಪ್ರವೀಣ
ಅಪ್ಪಿ ಶೇರಿಗಾರ್‌ ಅವರ ಸಂಬಂಧಿಯಾಗಿದ್ದ ಪ್ರವೀಣ್‌ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯವನಾಗಿದ್ದು ಮಂಗಳೂರು ನಗರದ ಉರ್ವ ಚಿಲಿಂಬಿಯಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದನು.

ಸುಮಾರು 28- 30 ವರ್ಷದ ಪ್ರವೀಣನಿಗೆ ಅದಾಗಲೇ ಮದುವೆಯಾಗಿ ಒಂದೂವರೆ ವರ್ಷದ ಪುಟ್ಟ ಮಗುವಿತ್ತು. ಆದ್ರೆ ಮಂಗಳೂರಿನಲ್ಲಿ ಆ ಕಾಲದಲ್ಲಿ ಸುಂಟರಗಾಳಿಂತೆ ಜೋರಾಗಿದ್ದ ಸಿಂಗಲ್ ನಂಬ್ರದ ಲಾಟರಿ ಚಟಕ್ಕೆ ಅಂಟಿದ್ದ ಪ್ರವೀಣ ಸಾಲದ ಶೂಲಕ್ಕೆ ಸಿಕ್ಕಿ ವಿಪರೀತ ಸಾರಾಯಿ ದಾಸನಾಗಿ ಗಬ್ಬು ನಾರುತ್ತಿದ್ದ.

ತನ್ನ ಈ ಚಟದಿಂದ ಮನೆಯವರೊಂದಿಗೆ ದಿನಾ ಗಲಾಟೆ ಮಾಡುತ್ತಿದ್ದ. ಇದೇ ಕಾರಣಕ್ಕೆ ಆತ ದೂರದ ಉಪ್ಪಿನಂಗಡಿಗೆ ಹೋಗದೆ ಮಂಗಳೂರಿನಲ್ಲೆ ಉಳಿದುಕೊಳ್ಳುತ್ತಿದ್ದ ಮತ್ತು ಕೆಲವೊಮ್ಮೆ ತನ್ನ ದೂರದ ಸಂಬಂಧಿ ವಾಮಂಜೂರಿನ ಅಪ್ಪಿ ಶೇರಿಗಾರ್‌ ಮನೆಗೆ ಬಂದು ಹೋಗುತ್ತಿದ್ದ, ಹಿರಿ ಜೀವ ಅಪ್ಪಿ ಶೇರಿಗಾರ್‌ ಅವರಿಗೆ ಈ ಪ್ರವೀಣನ ಮೇಲೆ ಅದ್ಯಕೋ ತುಂಬಾ ಅಕ್ಕರೆ ಹಾಗೂ ಭಾರಿ ನಂಬಿಕೆ.

ಅಪ್ಪಿ ಶೇರಿಗಾರ್‌ ಮನೆಯಲ್ಲಿ ಆಕೆಯ ಕೊಂಚ ಮಾನಸಿಕತೆಯ ಮಗ ಗೋವಿಂದ, ಮಗಳು ಶಕುಂತಳಾ ಹಾಗೂ ಶಾಲೆಗೆ ಹೋಗುವ ಮೊಮ್ಮಗಳು ದೀಪಿಕಾ ಇದ್ದು ಈ ಪ್ರವೀಣನೇ ಅದೆಷ್ಟೋ ಬಾರಿ ಆಕೆಯನ್ನು ಶಾಲೆಗೆ ಕರೆದೊಯ್ದು ಸಂಜೆ ಕರೆತರ್ತಿದ್ದನಂತೆ.

ಶಕುಂತಳಾ ಪತಿ ದೂರದ ಮಸ್ಕತ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. ಗಲ್ಫ್‌ ಉದ್ಯೋಗಿ ಪತಿ ರಜೆ ನಿಮಿತ್ತ ಊರಿಗೆ ಬರುವಾಗ ಪತ್ನಿ ಶಕುಂತಳಾ ಹಾಗೂ ಮಗುವಿಗೆ ಪ್ರೀತಿಯಿಂದ ಅನೇಕ ಚಿನ್ನಾಭರಣ ತಂದಿದ್ದರು. ಪತ್ನಿ ಶಕುಂತಳಾ ಮನೆಗೆ ಬಂದಿದ್ದ ಪ್ರವೀಣನಿಗೆ ಖುಷಿಯಿಂದ ಅದನ್ನೆಲ್ಲ ತೋರಿಸಿದ್ದಳು.

ಆದ್ರೆ ಇದೇ ಚಿನ್ನಾಭರಣ ಅವಳು ಹಾಗೂ ಕುಟುಂಬಸ್ಥರ ಬರ್ಬರ ಕೊಲೆಗೆ ಹೇತುವಾಗುತ್ತೆ ಅಂತ ಕನಸಿನಲ್ಲೂ ಶಕುಂತಲ ಯೋಚಿಸಿರಲಿಲ್ಲ.

ದಕ್ಷಿಣ ಕನ್ನಡದಲ್ಲಿ ಆ ಕಾಲದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದ ಕಾರಣ ಯಾರೂ ಚಿನ್ನಾಭರಣ, ಹಣವನ್ನು ಕಪಾಟು, ಬೀರುವಿನಲ್ಲಿ ಇಡುತ್ತಿರಲಿಲ್ಲ. ಬದಲಾಗಿ ತಂಬಿಗೆ, ಬಿಂದಿಗೆ, ಅಡಿಗೆಮನೆಯ ಸಾಂಬರು ಡಬ್ಬಗಳಲ್ಲಿ ತುಂಬಿಸಿಡುತ್ತಿದ್ದರು.

ಹಾಗೆಯೇ ಶಕುಂತಲಾ ಭಾರಿ ಭರವಸೆ ಇಟ್ಟುಕೊಂಡಿದ್ದ ಪ್ರವೀಣನ ಕಣ್ಣೆರದುರಲ್ಲೇ ತನ್ನ ಕೋಣೆಯಲ್ಲಿದ್ದ ಒಂದು ತಂಬಿಗೆಯಲ್ಲಿ ಬಚ್ಚಿಟ್ಟಿದ್ದಳು.

ಸಿಂಗಲ್ ನಂಬ್ರ ಲಾಟರಿ- ಸಾರಾಯಿ ದಾಸನಾಗಿ ತೀರಾ ಸಾಲ ಶೂಲದಲ್ಲಿ ಮುಳುಗಿದ್ದ ಈ ಪ್ರವೀಣನ ಕಣ್ಣು ಇದರ ಮೇಲೆ ಬೀಳದಿರುತ್ತಾ..!? ಅಂದು ರಾತ್ರಿ ಮಂಗಳೂರಿನಿಂದ ಕೆಲಸ ಮುಗಿಸಿ ಎಂದಿನಂತೆ ಬಂದ ಪ್ರವೀಣ ಬರುವಾಗ ಒಂದು ಫುಲ್ ಬಾಟಲ್ ರಮ್ ತಗೊಂಡೇ ಬಂದಿದ್ದ.

ತಲೆಯಲ್ಲಿ ಹಲವು ಕ್ರಿಮಿನಲ್ ಐಡಿಯಗಳನ್ನು ಹೊತ್ತು ಬಂದಿದ್ದ ಪ್ರವೀಣ ರಾತ್ರಿ ಎಲ್ಲರ ಜೊತೆ ಊಟ ಮಾಡಿದ್ದ. ಪ್ರೀತಿಯ ಸಂಬಂಧಿ ಬಂದಿದ್ದ ಎಂಬ ಖುಷಿಯಲ್ಲಿದ್ದ ಅಪ್ಪಿ ಶೇರಿಗಾರ್‌ ಪ್ರವೀಣನಿಗೆ ಮೊಟ್ಟೆ ಆಮ್ಲೆಟ್‌ ಮಾಡಿ ತನ್ನ ಕೈಯಾರೆ ಊಟ ಬಡಿಸಿದ್ದಳು.

ಊಟ ಮುಗಿಸಿದ್ದ ಪ್ರವೀಣ ಅಂದು ವರಾಂಡದಲ್ಲಿ ಅಪ್ಪಿ ಶೇರಿಗಾರ್‌ ಮಗ ಗೋವಿಂದ ಜೊತೆ ಮಲಗಿದ್ದ, ಮನೆಯ ಮತ್ತೊಂದು ಕೋಣೆಯಲ್ಲಿ ಶಕುಂತಳಾ ತನ್ನ ಮಗಳು ದೀಪಿಕಾ ಜೊತೆ ನಿದ್ರೆಗೆ ಜಾರಿದ್ದಳು.

ಅದೇ ಕೋಣೆಯಲ್ಲಿ ಆಕೆ ಚಿನ್ನಾಭರಣವಿಟ್ಟಿದ್ದು ನಿದ್ದೆ ನಾಟಕವಾಡುತ್ತಿದ್ದ ಪ್ರವೀಣನ ಕಣ್ಣು ಕುಕ್ಕುತ್ತಿತ್ತು. ಇತ್ತ ದೇವರ ಕೋಣೆಯಲ್ಲಿ ಅಪ್ಪಿ ಶೇರಿಗಾರ್‌ ನಿದ್ರಾ ದೇವಿಗೆ ಶರಣನಾಗಿದ್ದರು.

ಮನೆಯ ವರಾಂಡದಲ್ಲಿ ತಮ್ಮ ಗೋವಿಂದ ಹಾಗೂ ಸಂಬಂಧಿ ಪ್ರವೀಣ ಮಲಗಿದ್ದರಿಂದ ಯಾವಾಗಲೂ ಕೋಣೆಯ ಚಿಲಕ ಹಾಕಿ ಮಲಗುತ್ತಿದ್ದ ಶಕುಂತಳಾ ಅಂದು ಚಿಲಕ ಹಾಕದೇ ಮಲಗಿದ್ದು, ಆಕೆ ಬಚ್ಚಿಟ್ಟ ಚಿನ್ನಾಭರಣದ ಮೇಲೆ ಕಣ್ಣಿಟ್ಟಪ್ರವೀಣನಿಗೆ ಇದು ಪ್ಲಸ್‌ ಪಾಯಿಂಟ್‌ ಆಗಿತ್ತು.

ಚಿನ್ನಾಭರಣದ ಕನವರಿಕೆಯಲ್ಲಿದ್ದ ಪ್ರವೀಣನಿಗೆ ತಡರಾತ್ರಿಯಾದ್ರೂ ನಿದ್ದೆ ಹತ್ಲಿಲ್ಲ.ಮಧ್ಯರಾತ್ರಿ ಸುಮಾರಿಗೆ ಎದ್ದು ಕುಳಿತ ಆತ ಅದ್ಯಕೋ ತುಂಬಾ ಹೊತ್ತು ಯೋಚನೆ ಮಾಡಿ ಕುಳಿತಿದ್ದ.

ಕೊನೆಗೆ ಅದ್ಯಾವುದೋ ನಿರ್ಧಾರಕ್ಕೆ ಬಂದು ಏಕಾಏಕಿ ಎದ್ದು ಮೊದಲೇ ತಂದಿದ್ದ ರಮ್‌ ಬಾಟಲಿಯನ್ನು ಡ್ರೈ ಏರಿಸಿ, ಪಕ್ಕದಲ್ಲೇ ತಂದಿಟ್ಟಿದ್ದ ಬೀಟೆ ಮರದ ಸೋಂಟೆಯಿಂದ ಪಕ್ಕದಲೇ ಮಲಗಿದ್ದ ಗೋವಿಂದನ ತಲೆ ಓಡೆದೇ ಹಾಕಿದ್ದು.

 

ಪ್ರವಿಣ ಹೊಡೆದ ಆ ಎಂದು ಏಟಿಗೆ ಗೋವಿಂದನ ಕಥೆ ಮುಗಿದಿತ್ತು. ನಂತರ ಏಕಾಏಕಿ ಶಕುಂತಳಾ ಮಲಗಿದ್ದಕೊಣೆ ಎಂಟ್ರಿ ಕೊಟ್ಟ ಕಿರಾತಕ ಪ್ರವೀಣ ಅದೇ ರಕ್ತಸಿಕ್ತ ಸೊಂಟೆಯಿಂದ ಗಾಢಾ ನಿದ್ರಾವಸ್ಥೆಯಲ್ಲಿದ್ದ ಶಕುಂತಲ ತಲೆಗೆ ಬಡಿದಾಗ ಹತ್ತಿರದಲ್ಲೇ ಮಲಗಿದ್ದ ಮಗು ಎದ್ದು ಚೀರಾಡಿದೆ.

ಇದರಿಂದ ವಿಚಲಿತನಾದ ಪ್ರವೀಣನ ಮತ್ತೊಂದು ಏಟು ಆ ಪುಟ್ಟ ಮಗುವನ್ನು ಮುಗಿಸಿದೆ. ಈ ಚೀರಾಟ- ಗದ್ದಲಗಳಿಂದ ದೇವರ ಕೋಣೆಯಲ್ಲಿದ್ದ ಅಪ್ಪಿ ಶೇರಿಗಾರ್‌ ಎಚ್ಚರವಾಗಿ ” ಎಂಚಿನ ಆಂಡ್ಂಬೆ ಪ್ರವೀಣ(ಏನಾಯ್ತು ಪ್ರವೀಣ) ಎಂದು ಕತ್ತಲೆಯಲ್ಲಿ ಕೂಗಿಕೊಂಡು ಕೋಣೆಗೆ ಓಡಿ ಬಂದಿದ್ದಾರೆ.

ಆದ್ರೆ ಪಾಪಿ ಪ್ರವೀಣ ಆ 70 ವರ್ಷದ ಹಿರಿ ಜೀವವನ್ನು ಆ ಕರಿ ಕತ್ತಲೆಯಲ್ಲೇ ಹೊಡೆದು ಹಾಕಿದ್ದಾನೆ.
ಆದ್ರೆ ಕ್ರಿಮಿನಲ್ ಬುದ್ದಿಯ ಪ್ರವೀಣ ಇಷ್ಟಕ್ಕೂ ಸುಮ್ಮನಾಗದೆ ಎಲ್ಲರ ಜೀವ ಹೋಗಿದೆಯೇ ಎಂದು ಕನ್ಪರ್ಮ್‌ ಮಾಡಲು ಮತ್ತೊಮ್ಮೆ ಎಲ್ಲರ ತಲೆಗೆ ಅದೇ ರಕ್ತಸಿಕ್ತ ಸೋಂಟೆಯಿಂದ ಬಡಿದಿದ್ದಾನೆ. ಅಬ್ಬಬ್ಬಾ ಈತನ ವಿಕೃತಿ ಎಷ್ಟಿತ್ತು ಅಂದ್ರೆ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆ ಪುಟ್ಟ ಹೆಣ್ಣು ಮಗುವಿನ ಕಣ್ಣನ್ನು ಕತ್ತಿಯಿಂದ ಕುಕ್ಕಿ ಹೊರಹಾಕಿದ್ದ..!

              ಕಿಲ್ಲರ್ ಪ್ರವೀಣ್‌

ಈತನ ಸೋಂಟೆಯ ಹೊಡೆತದ ರಭಸಕ್ಕೆ ಚಿಮ್ಮಿದ್ದ ರಕ್ತ ಮನೆಯ ಸೀಲಿಂಗ್‌, ಗೋಡೆಗಳಲ್ಲೆಲ್ಲ ಹರಿಯುದಿತ್ತು. ಎಲ್ಲರನ್ನು ಮುಗಿಸಿದ್ದ ಸೈಕೋ ಕಿಲ್ಲರ್ ಪ್ರವೀಣ ಕೋಣೆಯಲ್ಲಿ ಶಕುಂತಲ ಬಚ್ಚಿಟ್ಟಿದ್ದ ಚೆಂಬುವಿನ ಒಳಗಿದ್ದ ಆಗಿನ ಕಾಲದ 85 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೀರುವಿನ ಡ್ರವರ್ ನಲ್ಲಿದ್ದ 5 ಸಾವಿರ ರೂಪಾಯಿ ಕ್ಯಾಶ್‌ ಅನ್ನುತೆಗೆದು ಜೇಬಿನೊಳಗೆ ಇಳಿಸಿದ್ದಾನೆ.

ಇಲ್ಲಿಗೆ ಬಿಡದ ಕಿರಾತಕ ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುಟ್ಟ ಮಗು, ಶಕುಂತಳಾ, ಹಾಗೂ ಅಪ್ಪಿ ಶೇರಿಗಾರ್ತಿಯ ಕಿವಿಯೋಲೆ, ಮೂಗುತಿ, ಕಾಲುಂಗುರಗಳನ್ನು ಕಿತ್ತು ತೆಗೆದು ಅಲ್ಲೇ ಮನೆಯ ಸ್ನಾನದ ಕೋಣೆಯಲ್ಲಿ ರಕ್ತ ಸಿಕ್ತವಾಗಿದ್ದ ಚಿನ್ನಾಭರಣಗಳನ್ನು ತೊಳೆದು,

ಬಳಿಕ ತನ್ನ ಮೈಗಂಟಿದ ರಕ್ತವನ್ನೂ ತೊಳೆದು ಸುಮಾರು ಅರ್ಧ ಟಾಂಕಿ ನೀರು ಮುಗಿಸಿ ಚೆನ್ನಾಗಿ ಸ್ನಾನ ಮಾಡಿ ಮುಂಜಾನೆ 5 ಗಂಟೆವರೆಗೆ ಅದೇ ಹೆಣಗಳ ಮಧ್ಯೆ ಕೂತು ಮುಂಜಾನೆ ಮಂಗಳೂರು ಬಸ್ಸು ಹತ್ತಿದ್ದಾನೆ.

ನಾಲ್ವರ ಮರಣಕ್ಕೆ ಬಂದು ಕಾಲು ಮುಟ್ಟಿ ನಮಸ್ಕರಿಸಿದ್ದ ಹಂತಕ 
ಮನೆಯಲ್ಲಿ ನಾಲ್ವರು ಕೊಲೆಯಾದ ವಿಷಯ ಬೆಳಗಾಗುತ್ತಲೇ ಊರು ತುಂಬಾ ಹಬ್ಬಿ ಜನಸ್ತೋಮವೇ ಅಲ್ಲಿ ತುಂಬಿತ್ತು. ಮಧ್ಯಾಹ್ನದೊತ್ತಿಗೆ ಅಲ್ಲಿಗೆ ಬಂದಿದ್ದ ಪ್ರವೀಣ ತನಗೆ ಏನೂ ಗೊತ್ತಿಲ್ಲದವರಂತೆ ನಟಿಸುತ್ತಿದ್ದ.

ಮರಣ ತೆಗೆಯುವ ವೇಳೆ ಮೂರು ಬಾರಿ ಅಪ್ಪಿ ಶೇರಿಗಾರ್‌ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದ. ಅಷ್ಟು ಮಾತ್ರ ಜೊತೆಗೆ ಆಕೆಯ ಕಾಲಿನ ನೀರು ಕುಡಿದಿದ್ದ.

ಭಾವನಿಂದಲೇ ಸಿಕ್ಕಾಕೊಂಡ ನರಹಂತಕ 
ಇಲ್ಲಿ ಹತ್ಯಾಕಾಂಡ ನಡೆಸಿ ಪರಾರಿಯಾಗಿ ಭೂಗತನಾಗಿದ್ದ ಸೈಕೋ ಕಿಲ್ಲರ್ 4 ವರ್ಷ ಪಕ್ಕದ ಗೋವಾದಲ್ಲಿ ತಲೆಮರೆಸಿಕೊಂಡಿದ್ದ, ಈ ಮಧ್ಯೆ ಗೋವಾದಲ್ಲಿ ಒಂದು ಹುಡುಗಿಯನ್ನು ಲವ್‌ ಮಾಡಿ ಮತ್ತೊಂದು ಮದ್ವೆಯಾಗಿ ಆಕೆಯ ಕೈಗೊಂದು ಮಗುವನ್ನು ಕೊಟ್ಟಿದ್ದ. ಇತ್ತ ವಾಮಂಜೂರಿನ ನಾಲ್ಕುಕೊಲೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ದ ಮಂಗಳೂರು ಪೊಲೀಸರಿಗೆ ಒಂದು ಕಗ್ಗಂಟಾಗಿಯೇ ಉಳಿದಿತ್ತು.

ಒಂದೇ ಮನೆಯ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಪ್ರವೀಣನಿಗೆ ತೀವ್ರ ಶೋಧ ನಡೆಸಿದ್ದರು ಯಾವುದೇ ಕುರುಹುಗಳು ಸಿಗದೆ ಹತಾಶರಾಗಿದ್ದರು.

ಅದರ ಜೊತೆಗೆ ಆರೋಪಿಯ ಪತ್ತೆಗಾಗಿ ದಿನ ಪತ್ರಿಕೆಗಳಲ್ಲೂ ಫೊಟೊ ಹಾಕಿ ಬಹುಮಾನ ಘೋಷಿಸಿ ಪ್ರಕಟಣೆ ಹೊರಡಿಸಿದ್ದರು. ಆಗ ಪ್ರಕಟಣೆ ನೋಡಿದ್ದ ಎರಡನೇ ಪತ್ನಿಯ ತಮ್ಮ ಆರೋಪಿಯ ಸುಳಿವನ್ನು ಪೊಲೀಸರಿಗೆ ನೀಡಿದ್ದ.

ಈ ಸುಳಿವನ್ನು ಆಧಾರಿಸಿ ನಾಲ್ಕು ಕೊಲೆಗಳ ಆರೋಪಿ ಸೈಕೋ ಕಿಲ್ಲರ್ ಪ್ರವೀಣನನ್ನು ಆಗಿನ ಮಂಗಳೂರು ಗ್ರಾಮಾಂತರ ಠಾಣಾಧಿಕಾರಿ ಜಯಂತ್‌ ವಿ. ಶೆಟ್ಟಿಯವರು ಖೆಡ್ಡಾಕ್ಕೆ ಬೀಳಿಸಿದ್ದರು. ಪ್ರವೀಣ್ ಸುಳಿವು ನೀಡಿದ್ದ ಎರಡನೇ ಪತ್ನಿಯ ತಮ್ಮನಿಗೆ ರೂ. 1 ಲಕ್ಷ ನಗದು ಬಹುಮಾನವನ್ನು ನೀಡಿದ್ದರು

LATEST NEWS

ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು

Published

on

ಕಾರ್ಕಳ : ಭಾರೀ ಸೆಕೆಯಿಂದಾಗಿ ಮನೆಯೊಳಗಡೆ ಮಲಗಲಾಗದೇ ಮನೆ ಟೆರೇಸ್ ಮೇಲೆ ಮಲಗಲು ಹೋಗಿದ್ದ ಶಿಕ್ಷಕ ಗಾಢ ನಿದ್ದೆಯಲ್ಲಿ ಉರುಳಿ ಬಿದ್ದು ಸಾ*ವನ್ನಪ್ಪಿದ ಘಟನೆ ಅಜೆಕಾರು ಕುಮೇರಿಯಲ್ಲಿ ನಡೆದಿದೆ. ಸುಂದರ ನಾಯ್ಕ(55) ಇಹಲೋಕ ತ್ಯಜಿಸಿದ ಶಿಕ್ಷಕ.

ಸುಂದರ ಅವರು ಆಶ್ರಯ ನಗರದ ನಿವಾಸಿಯಾಗಿದ್ದು, ಕಾರ್ಕಳ ತಾಲೂಕಿನ ಎಣ್ಣೆಹೊಳೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಸೆಕೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದ ಇವರನ್ನು ಮನೆ ಮಂದಿ ಬೆಳಿಗ್ಗೆ 6:30ಕ್ಕೆ ಎಬ್ಬಿಸಲೆಂದು ಹೋದಾಗ ಇವರು ಟೆರೇಸ್‌ನಿಂದ ಕೆಳಕ್ಕೆ ಬಿದ್ದಿರುವುದು ಕಂಡು ಬಂದಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃ*ತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಮೃತ ಶಿಕ್ಷಕ ಸುಂದರ್ ನಾಯ್ಕ್ ಪತ್ನಿ ಪುತ್ರಿಯರನ್ನು ಅಗಲಿದ್ದಾರೆ.

Continue Reading

DAKSHINA KANNADA

ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್‌ಗಳ ಹಗಲು ದರೋಡೆ..! ಏನಿದು ಘಟನೆ?

Published

on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸೇರಿದಂತೆ ಆಸುಪಾಸಿನ ಜನತೆಗೆ ಸರಕಾರಿ ಬಸ್ಸು ಸಿಬ್ಬಂದಿ ಹಗಲು ದರೋಡೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಕ್ಕೆ ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊರಡುವ ಸರಕಾರಿ ಬಸ್ ಸಿಬ್ಬಂದಿ ಹಗಲು ದರೋಡೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಏಪ್ರಿಲ್ 28ರಂದು ಹುಬ್ಬಳ್ಳಿ ಕಡೆಯ ದಂಪತಿ ಕುಕ್ಕೆ ಸುಬ್ರಹ್ಮಣ್ಯದಿಂದ ಹುಬ್ಬಳ್ಳಿ‌ಗೆ ಹೋಗುವ ಸಲುವಾಗಿ ಬಿಎಂಟಿಸಿಯ KA 57 F 3463 ನಂಬರಿನ ಬಸ್ಸಿಗೆ ಹತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಬಸ್ ಹೋಗುತ್ತದೆ ಎಂದು ಬಸ್ಸಿನ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ. ಈ ಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಮತ್ತು ಬಸ್ಸಿನ ಸಿಬ್ಬಂದಿ ಹೇಳಿದ್ದನ್ನೇ ನಂಬಿದ ಹುಬ್ಬಳ್ಳಿ ಈ ದಂಪತಿ ಬೆಂಗಳೂರು ಮಹಾನಗರ ಪಾಲಿಕೆಯ ಡಿಪೋ ನಂಬರ್‌2ರ ಈ ಸರಕಾರಿ ಬಸ್ ಹತ್ತಿದ್ದಾರೆ. ಬಸ್ಸಿನ ನಿರ್ವಾಹಕ ಮಹಿಳೆಗೆ ಧರ್ಮಸ್ಥಳ ದಿಂದ ಸುಬ್ರಹ್ಮಣ್ಯ ಎಂಬುದಾಗಿ ಉಚಿತ ಟಿಕೆಟ್ ನೀಡಿದ್ದೂ, ಜೊತೆಯಲ್ಲಿ ಇದ್ದ ಪತಿ ಮತ್ತು ಮಕ್ಕಳಿಂದ 150 ರೂಪಾಯಿ ಹಣ ಪಡೆದು ಟಿಕೆಟ್ ನೀಡಿಲ್ಲ ಎನ್ನಲಾಗಿದೆ. ಇಷ್ಟು ಹಣ ಪಡೆದು ಇವರನ್ನು ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ಕೈಕಂಬ ಎಂಬಲ್ಲಿ ಬಸ್ಸಿಂದ ಇಳಿಸಿ ಹೋಗಿದ್ದಾರೆ. ನಂತರದಲ್ಲಿ ಈ ದಂಪತಿಗಳು ತಮ್ಮ ಮಕ್ಕಳೊಂದಿಗೆ ಸುಮಾರು ಆರು ಕಿಲೋ ಮೀಟರ್ ದೂರ ನಡೆದು ಕುಕ್ಕೆ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣ ತಲುಪಿದ್ದಾರೆ. ನಂತರದಲ್ಲಿ ಸ್ಥಳೀಯರಲ್ಲಿ ತಮಗಾದ ಅನ್ಯಾಯದ ಬಗ್ಗೆ ಕಣ್ಣೀರಿಟ್ಟು ಇಂತಹ ಬಸ್ಸ್‌ಗಳ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

subrahmanya

ಇಂತಹ ಘಟನೆಗಳು ಈ ಭಾಗದಲ್ಲಿ ಪದೇಪದೇ ಮರುಕಳಿಸುತ್ತಿದ್ದೂ,ಈ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಸಹಾ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮುಂದೆ ಓದಿ..;ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಆದುದರಿಂದ ಈ ಭಾಗದಲ್ಲಿ ನಡೆಯುವ ಈ ಹಗಲು ದರೋಡೆಗೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ರೈಲು ಬಳಕೆದಾರರ ವೇದಿಕೆ ನೆಟ್ಟಣ ಸಂಘವು ಆಗ್ರಹಿಸಿದೆ.

Continue Reading

LATEST NEWS

ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?

Published

on

ಮಹಾರಷ್ಟ್ರ: ಅಪ್ರಾಪ್ತ ಬಾಲಕಿಯೊಬ್ಬಳು ಎರಡು ಬಾರಿ ಅಕ್ರಮ ಗರ್ಭ ಧರಿಸಿ ಇದೀಗ ತನ್ನ ಪೋಷಕರ ವಿರುದ್ಧ ಠಾಣೆ ಮೆಟ್ಟಿಲೇರಿರುವ ಘಟನೆ ಮಹಾರಷ್ಟ್ರದಲ್ಲಿ ನಡೆದಿದೆ. ಹೌದು, 17 ವರ್ಷದ ಬಾಲಕಿಯೊಬ್ಬಳು ಬೇರೆ ಬೇರೆ ಯುವಕರಿಂದ ಎರಡು ಬಾರಿ ಗರ್ಭ ಧರಿಸಿದ್ದಾಳೆ.

pregnant

ಮೊದಲಾಗಿ ಅಕ್ರಮ ಸಂಬಂಧ ಹೊಂದಿದ್ದ ಪುರುಷನಿಂದ ಗರ್ಭ ಧರಿಸಿದ್ದಳು. ಈ ಮಗುವನ್ನು ಪೋಷಕರು ತನಗರಿಯದೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಬಾಲಕಿ ಪೋಷಕರು ಸೇರಿದಂತೆ ಶಿಕ್ಷಕರು, ವಕೀಲರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮುಂದೆ ಓದಿ..; 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ಪೋಷಕರು ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ವಕೀಲರ ನೇತೃತ್ವದಲ್ಲಿ ಕೆಲವು ದಾಖಲೆ ಪತ್ರಗಳಿಗೆ ಸಹಿ ಹಾಕಿಸಿದ್ದಾರೆ.  7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಿದ್ದು, ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಇನ್ನು ಹೆರಿಗೆ ಆದ ಆರು ತಿಂಗಳ ಬಳಿಕ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದ್ದಾಳೆ. ಈ ವೇಳೆ ಆತ ಅವಳನ್ನು ವರಿಸಳು ಸಿದ್ಧನಾಗಿದ್ದೇನೆ ಎಂದು ಹೇಳುತ್ತಾನೆ. ಆದರೆ ಮನೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. , ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆ ಎಂದು ಅಪ್ರಾಪ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಈ ಕುರಿತಾಗಿ ಪ್ರಶ್ನಿಸಿದಕ್ಕೆ ಅಜ್ಜಿ ಮನೆಗೆ ಕಳುಹಿಸಿದ್ದಾರೆ. ಇನ್ನು ಅಲ್ಲಿ ಈ ಬಾಲಕಿಗೆ 23ವರ್ಷದ ಯುವಕನ ಜೊತೆ ಮದುವೆ ಫಿಕ್ಸ್ ಮಾಡಲಾಗಿತ್ತು.  ಈ ವೇಳೆ ವಿವಾಹ ನಿಶ್ಚಯವಾಗಿದ್ದ ಯುವಕನ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಾಳೆ. ಬಳಿಕ ಬಾಲಕಿ ಮತ್ತೊಮ್ಮೆ ಗರ್ಭ ಧರಿಸುತ್ತಾಳೆ. ಅಷ್ಟಾಗಲೇ ವಿವಾಹ ನಿಶ್ಚಯವಾಗಿದ್ದ ಹುಡುಗನಿಗೆ ಇವಳ ಮೊದಲ ಮಗುವಿನ ಕುರಿತಾಗಿ ತಿಳಿದು ಇವಳನ್ನು ಮದುವೆಯಾಗಲು ನಿರಾಕರಿಸುತ್ತಾನೆ. ಬಳಿಕ ಅಜ್ಜಿ ಮನೆಯಿಂದ ಹೊರಟು ಬರ್ತಾಳೆ. ಪರಿಚಯಸ್ಥರ ನೆರವಿನಿಂದ ಗಂಡು ಮಗುವಿಗೆ ಜನ್ಮ ನೀಡಿದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಪೋಷಕರು ಎರಡನೇ ಮಗವನ್ನೂ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದು ಈ ನಿಟ್ಟಿನಲ್ಲಿ ಬಾಲಕಿ ಪೊಲೀಸ್ ಮೆಟ್ಟಿಲೇರಿದ್ದಾಳೆ. ಇನ್ನು ಪೊಲೀಸರು ಮಾರಾಟ ಮಾಡಿದ್ದ ಹೆಣ್ಣು ಮಗುವನ್ನು ಹುಡುಕಲು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

 

 

Continue Reading

LATEST NEWS

Trending