ಕಾರ್ಕಳ: ಕಾರ್ಕಳ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹೃದಯಾಘಾತದಿಂದ ನಿನ್ನೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹೆಬ್ರಿ ತಾಲ್ಲೂಕು ರಂಗನಮಕ್ಕಿ ನಿವಾಸಿ ರಾಮಕೃಷ್ಣ ಹೆಗ್ಡೆ (55) ಮೃತ ಶಿಕ್ಷಕ.
ಇವರು ಮುನಿಯಾಲು ಪದವಿ ಪೂರ್ವ ಕಾಲೇಜಿನಲ್ಲಿ 24 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ, ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಕಾರ್ಕಳ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು.
ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ಅವರ ಆರಂಭದ ಕೋಚ್ ಆಗಿದ್ದ ಇವರು ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು.
ಮೃತರು ಪತ್ನಿ ಶಿಕ್ಷಕಿ ಜಯಂತಿ, ಪುತ್ರ ರಕ್ಷಣ್ ಅವರನ್ನು ಅಗಲಿದ್ದಾರೆ.