Connect with us

DAKSHINA KANNADA

ಕಾರಿಂಜ ಕ್ಷೇತ್ರದಲ್ಲಿ ಚಪ್ಪಲಿ ಹಾಕಿದ ಪ್ರಕರಣ: ಪ್ರವಾದಿ ಅವಹೇಳನ-ದೂರು ದಾಖಲಿಸಿದ SDPI

Published

on

ಸುಳ್ಯ: ಕಾರಿಂಜೇಶ್ವರ ದೇವಸ್ಥಾನಕ್ಕೆ ಚಪ್ಪಲಿ ಹಾಕಿ ಹೋದ ಪ್ರಕರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭ ಪ್ರವಾದಿ ಮುಹಮ್ಮದ್ ಪೈಗಂಬರ್‌ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ಕಮೆಂಟ್‌ ಹಾಕಿದ್ದಾರೆ ಎಂದು ಬೆಳ್ಳಾರೆ ಠಾಣೆಗೆ ದೂರು ದಾಖಲಿಸಿದ್ದಾರೆ.


ಘಟನೆ ಹಿನ್ನೆಲೆ
ಬೆಳ್ತಂಗಡಿ ತಾಲ್ಲೂಕಿನ ಕಾರಿಂಜೇಶ್ವರ ದೇವಸ್ಥಾನಕ್ಕೆ ಚಪ್ಪಲಿ ಹಾಕಿಕೊಂಡು ಹೋದ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಚರ್ಚೆಯಾಗಿತ್ತು.

ಈ ಸಂದರ್ಭ ಸುಳ್ಯ ತಾಲೂಕಿನ ಐವರ್ನಾಡು ನಿವಾಸಿ ಜಗದೀಶ ಕೈವಲ್ತಡ್ಕ ಎಂಬಾತ ಪ್ರವಾದಿ ಮುಹಮ್ಮದ್ ಕುರಿತು ಕಮೆಂಟ್ ಹಾಕಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅದೇ ರೀತಿ ಯತೀನ್ ದೇವಾಡಿಗ ಎಂಬಾತನು ಕೂಡಾ ಅಸಭ್ಯ ಕಮೆಂಟ್ ಹಾಕಿ ಅಶಾಂತಿಯನ್ನು ಹಬ್ಬಿಸಲು ಯತ್ನಿಸಿರುತ್ತಾನೆ ಇವರಿಬ್ಬರ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಎಸ್.ಡಿ.ಪಿ.ಐ. ಬೆಳ್ಳಾರೆಯ ವಲಯದ ಉಪಾಧ್ಯಕ್ಷ ಮಹಮ್ಮದ್ ಶಫೀಕ್ ಎಂಬವರು ಬೆಳ್ಳಾರೆ ಪೋಲೀಸರಿಗೆ ದೂರು ನೀಡಿದ್ದಾರೆ.

DAKSHINA KANNADA

ಮೇ 9 ರಂದು SSLC ಫಲಿತಾಂಶ ಪ್ರಕಟ…!

Published

on

ಮಂಗಳೂರು : 2023-24 ರ SSLC ಪರೀಕ್ಷೆಯ ಫಲಿತಾಂಶ ಮೇ 9 ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್‌ 25 ರಿಂದ ಎಪ್ರಿಲ್ 6 ರ ವರೆಗೆ ಪರೀಕ್ಷೆ ನಡೆಸಲಾಗಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆಗೆ ವಿಳಂಭವಾಗಿದೆ ಎಂದು ಹೇಳಿದೆ


2023- 24ರ SSLC ಪರೀಕ್ಷೆಯಲ್ಲಿ ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ವಿದ್ಯಾರ್ಥಿಗಳು ರೀ ಎಕ್ಸಾಂ ಬರೆದಿದ್ದಾರೆ. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ.

ಫಲಿತಾಂಶವನ್ನು ನೋಡಲು ಈ ವೆಬ್‌ಸೈಟ್ ಬಳಸಿ..!

ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. kseab.karnataka.gov.in ಹಾಗೂ karresults.nic.in ವೆಬ್‌ಸೈಟ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.

Continue Reading

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯ ಕಲಾವೈವಿಧ್ಯತೆಗೆ ಮಾರುಹೋದ ವಿದೇಶಿಗರು

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯು ವಿವಿಧ ವೈವಿಧ್ಯಮಯ ಕ್ಷೇತ್ರವನ್ನು ಒಳಗೊಂಡಿರುವ ಕರಾವಳಿ ನಗರಿ. ಇಲ್ಲಿಗೆ ಬಂದ ವಿದೇಶಿ ಪ್ರಜೆಗಳು ಇಲ್ಲಿನ ವಿಶೇಷತೆಗಳನ್ನು ನೋಡಿ ಮನಸೋಲುತ್ತಾರೆ. ನವಮಂಗಳೂರು ಬಂದರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಹಲವು ವಿದೇಶಿ ಪ್ರವಾಸಿ ಹಡಗುಗಳು ಬಂದಿದ್ದು, ಇಲ್ಲಿನ ವಿಶೇಷ ತಾಣಗಳಿಗೆ ಭೇಟಿ ನೀಡಿ ಆನಂದ ಪಟ್ಟರು.


ವಿದೇಶಿ ಹಡಗಿನಲ್ಲಿ ಬಂದಿಳಿದ ಯುಎಸ್ಎ, ನೆದರ್ ಲ್ಯಾಂಡ್, ಉಕ್ರೇನ್, ಯುನೈಟೆಡ್ ಕಿಂಗ್‌ಡಂ, ಅಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಪಿಲಿಫೈನ್ಸ್ ದೇಶದ ಸುಮಾರು 120 ಜನ ವಿದೇಶಿಗಳು, ಜಗತ್ಪ್ರಸಿದ್ದ ಸಾವಿರ ಕಂಬ ಬಸದಿಗೆ ಭೇಟಿ ನೀಡಿ ಅಲ್ಲಿ ಕಲಾಸೌಂದರ್ಯಕ್ಕೆ ಮಾರು ಹೋದರು.

ಇದನ್ನೂ ಓದಿ : ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!


ಮಂಗಳೂರು ಮೂಲದ ಕ್ಯಾಲಿಫೋರ್ನಿಯ ಉದ್ಯೋಗಿ ಸಚಿನ್ ಪಡಿವಾಳ್ ಅವರನ್ನು ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. ಈ ಸಂದರ್ಭ ಮಂಗಳೂರು ಟ್ರಾವೆಲ್ ಗೈಡ್ ರೋಹನ್, ರೋಷನ್, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!

Published

on

ಮಂಗಳೂರು : ತುಳುನಾಡು ದೈವಾರಾಧನೆಯ ನೆಲೆಬೀಡು. ಇಲ್ಲಿ ದೈವಗಳ ಮೇಲೆ ಅತೀವ ನಂಬಿಕೆಯಿದೆ. ನಂಬಿದವರ ಕೈಬಿಡದು ದೈವ ಎಂಬ ನಂಬಿಕೆ ತುಳವರದು. ಸೆಲೆಬ್ರಿಟಿಗಳೂ ದೈವಗಳನ್ನು ನಂಬುತ್ತಾರೆ. ಊರಿಗೆ ಬಂದು ದೈವಗಳಿಗೆ ಕೈ ಮುಗಿಯುತ್ತಾರೆ. ನಟಿ ಶ್ರೀನಿಧಿ ಶೆಟ್ಟಿ ಸಿನಿರಂಗದಲ್ಲಿ ಯಶಸ್ಸು ಬಾಚಿಕೊಳ್ಳುತ್ತಿದ್ದರೂ ಕೂಡ ದೈವಾರಾಧನೆ ಮರೆತಿಲ್ಲ. ಅವರು ತಾವು ಹೊತ್ತ ಹರಕೆಯನ್ನು ಪೂರೈಸಿದ್ದಾರೆ.

ಅಭಯವಿತ್ತ ದೈವ :


ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಅವರ ಹರಕೆಯ ನೇಮೋತ್ಸವ ಕಿನ್ನಿಗೋಳಿಯ ಅವರ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ನಡೆಯಿತು. ಈ ಹಿಂದೆ ತಾನು ಹರಕೆ ಹೊತ್ತಂತೆ ಸೋಮವಾರ ಕಿನ್ನಿಗೋಳಿ ಸಮೀಪ ತಾಳಿಪಾಡಿಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆದಿದ್ದು, ಶ್ರೀ ನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡರು.

ಇದನ್ನೂ ಓದಿ : ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!


‘ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀರಿ’ ಎಂದು ದೈವಗಳು ಇದೇ ಸಂದರ್ಭ ಶ್ರೀನಿಧಿ ‌ಶೆಟ್ಟಿಗೆ ಅಭಯ ನೀಡಿವೆ. ಸದ್ಯ ಶ್ರೀನಿಧಿ ಶೆಟ್ಟಿ ಸಿನಿಮಾಗಳಲ್ಲು ಬಿಝಿ ಆಗಿದ್ದಾರೆ. ಸಕತ್ ಚ್ಯೂಸಿ ಕೂಡ ಆಗಿದ್ದಾರೆ. ಕೆಜಿಎಫ್ 2 ಚಿತ್ರದಲ್ಲೂ ಬಿಝಿ ಆಗಿದ್ದಾರೆ. ಅತ್ತ ತೆಲುಗು ಸಿನಿರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರ 47 ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Continue Reading

LATEST NEWS

Trending