Connect with us

DAKSHINA KANNADA

ಸಾಮಾಜಿಕ ಚಿಂತಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ನಿಧನ

Published

on

ಖ್ಯಾತ ಚಿಂತಕರಾಗಿದ್ದ ಮಂಗಳೂರಿನ ವಿವಿ ಕಾಲೇಜಿನ ಉಪನ್ಯಾಸಕ ಪ್ರೊ. ಹೆಚ್. ಪಟ್ಟಾಭಿರಾಮ ಸೋಮಯಾಜಿ ತಮ್ಮ 64 ನೇ ವಯಸ್ಸಿನಲ್ಲಿ ಶನಿವಾರ ಮುಂಜಾನೆ ನಿಧನ ಹೊಂದಿದರು.
ಮಂಗಳೂರು: ಸಾಮಾಜಿಕ ಚಿಂತಕ, ಮಂಗಳೂರು ವಿವಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ (64) ಶನಿವಾರ ಮುಂಜಾನೆ ನಿಧನ ಹೊಂದಿದರು.


ಮಂಗಳೂರು ದೇರೆಬೈಲು ಕೊಂಚಾಡಿ ಬಳಿಯಿರುವ ಗಿರಿನಗರದಲ್ಲಿ ಒಂಟಿಯಾಗಿ ವಾಸವಿದ್ದ ಅವರು ಶನಿವಾರ ಬೆಳಗ್ಗೆ ಮನೆಯಲ್ಲಿ ಮೃತಪಟ್ಟಿದ್ದಾರೆ.

ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನಿವೃತ್ತರಾಗಿರುವ ಇವರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋಮುಸೌಹಾರ್ದ ವೇದಿಕೆ ಮೂಲಕ ನಾನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಅರೋಗ್ಯದಿಂದ‌ ಬಳಲುತ್ತಿದ್ದ ಪ್ರೊ.ಪಟ್ಟಾಭಿರಾಮ ಸೋಮಯಾಜಿಯವರು ಕೆಲದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

ಶುಕ್ರವಾರ ರಾತ್ರಿ ಕೆಲ ಆಪ್ತರೊಡನೆ ಫೋನ್ ಮೂಲಕ ಮಾತನಾಡಿದ್ದರು.

ಶನಿವಾರ ಬೆಳಗ್ಗೆ ಮನೆಯಿಂದ ಹೊರಬಾರದಿರುವುದನ್ನು ನೋಡಿ ನೆರೆಮನೆವರು ಪೊಲೀಸರರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಆಗಮಿಸಿ ಮನೆಬಾಗಿಲನ್ನು ಒಡೆದು ನೋಡಿದಾಗ ಅವರು ಮಲಗಿದಲ್ಲೇ ಕೊನೆಯುಸಿರೆಳೆದಿರುವುದು ಕಂಡು ಬಂದಿದೆ.

ಎರಡು ದಶಕಗಳ ಕಾಲ ಸಕ್ರಿಯ:
ಖ್ಯಾತ ಚಿಂತಕರಾಗಿದ್ದ ಪ್ರೊ. ಹೆಚ್.ಪಟ್ಟಾಭಿರಾಮ ಸೋಮಯಾಜಿ ಅವರು ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಕರ್ತವ್ಯ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು.

ಪಟ್ಟಾಭಿರಾಮ ಸೋಮಯಾಜಿ ಅವರು ಕೋಮು ಸೌಹಾರ್ದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರು.

ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ನಂತರ ಅವರು ರಾಮಸೇನೆಯನ್ನು ‘ರಾವಣ ಸೇನೆ’ ಎಂದು ಕರೆದಿದ್ದರು. ಈ ಹೇಳಿಕೆಯ ವಿರುದ್ದ ನಗರದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು.

2012ರಲ್ಲಿ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ ದ್ವೇಷವನ್ನು ಹೊಂದಿದ್ದ ಸಂಘಟನೆಯ ಕಾರ್ಯಕರ್ತರೊಬ್ಬರು ಅವರು ಪತ್ರಿಕಾಗೋಷ್ಠಿ ಮುಗಿಸಿ ತೆರಳುವ ವೇಳೆ ಅವರ ಮುಖದ ಮೇಲೆ ಹಸುವಿನ ಸಗಣಿ ಬಳಿದ ಘಟನೆ ಕೂಡ ನಡೆದಿತ್ತು..

ನಾಳೆ ( ಜು.2) ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುರಾಡಿ ನೀಲಾವರದಲ್ಲಿರುವ ಪಟ್ಟಾಭಿರಾಮ ಸೋಮಯಾಜಿ ಅವರ ಅಕ್ಕನ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ‌.

ಪಟ್ಟಾಭಿರಾಮ ಸೋಮಯಾಜಿ ನಿಧನಕ್ಕೆ ಮಂಗಳೂರು ನಾಗರಿಕ ಸಂಘಟನೆಗಳ ಸಂತಾಪ
ಪ್ರೊ. ಪಟ್ಟಾಭಿರಾಮ ಸೋಮಯಾಜಿ ಯವರನ್ನು ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತರಾಗಿದ್ದರು.

ಕನ್ನಡ ಸಾಹಿತ್ಯದ ಪ್ರಖರ ವಿಮರ್ಶಕರಾಗಿದ್ದರು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ಚಿಂತಕರಾಗಿ ಬೌದ್ದಿಕ ವಲಯದಲ್ಲಿ ಹೆಸರು ಮಾಡಿದ್ದರು.

ಹಿಂದುತ್ವದ ಕೋಮುವಾದದ ಅಪಾಯವನ್ನು ಬಹಳ ನಿಶಿತವಾಗಿ ವಿರೋಧಿಸಿದ್ದರು. ಅಲ್ಪಸಂಖ್ಯಾತರ ಪರಿಸ್ಥಿತಿ ಅತ್ಯಂತ ಅಪಾಯದಲ್ಲಿದೆ ಎಂಬ ಆತಂಕ ಅವರನ್ನು ಕಳವಳಕ್ಕೀಡು ಮಾಡಿತ್ತು.

ತಾನು ಪ್ರತಿಪಾದಿಸುತ್ತಿದ್ದ ನಿಲುವುಗಳಿಗೆ ತೋರಿದ ಬದ್ದತೆಗಾಗಿ ಹಿಂದುತ್ವದ ಕೋಮುವಾದಿಗಳಿಂದ ತೀವ್ರ ದಾಳಿಗೂ ಒಳಗಾಗಿದ್ದರು.

ಇಂತಹ ದಿಟ್ಟ ನಿಲುವು ಈ ಕಾಲದಲ್ಲಿ ಬಹಳ ಅಪರೂಪವಾದದ್ದು. ಅತ್ಯಂತ ಮಾನವೀಯರಾಗಿದ್ದ ಪಟ್ಟಾಭಿಯವರ ಅಗಲಿಕೆಯು ಕರ್ನಾಟಕದ ಕೋಮುವಾದ ವಿರೋಧಿ ಚಳವಳಿಗೆ ದೊಡ್ಡ ನಷ್ಟ.

ಮಂಗಳೂರಿನ ಜನಪರ ಚಳವಳಿಗಳು, ಸೌಹಾರ್ದ ವೇದಿಕೆಗಳು ಅವರ ನಿಧನದ ಸಂದರ್ಭ ಗೌರವ ಪೂರ್ವಕ ಸಂತಾಪಗಳನ್ನು ಸಲ್ಲಿಸಿದೆ.

ಮುನೀರ್ ಕಾಟಿಪಳ್ಳ (ಡಿವೈಎಫ್ಐ ರಾಜ್ಯಾಧ್ಯಕ್ಷ),ವಾಸುದೇವ ಉಚ್ಚಿಲ (ಸಮುದಾಯ ಕರ್ನಾಟಕ, ಮಂಗಳೂರು),ಪ್ರೊ. ರಾಜೇಂದ್ರ ಉಡುಪ (ನಿವೃತ್ತ ಪ್ರಾಧ್ಯಾಪಕರು, NITK),ಕೆ ಯಾದವ ಶೆಟ್ಟಿ (ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ),ಡಾ. ಕೃಷ್ಣಪ್ಪ ಕೊಂಚಾಡಿ (ಪ್ರಗತಿಪರ ಚಿಂತಕರ ವೇದಿಕೆ),ಪ್ರೊ. ನರೇಂದ್ರ ನಾಯಕ್ (ಖ್ಯಾತ ವಿಚಾರವಾದಿಗಳು),ಮನೋಜ್ ವಾಮಂಜೂರು,ಸುನಿಲ್ ಕುಮಾರ್ ಬಜಾಲ್ (ಪ್ರಧಾನ ಕಾರ್ಯದರ್ಶಿ, ಸಿಐಟಿಯು ದಕ್ಷಿಣ ಕನ್ನಡ),ಯಶವಂತ ಮರೋಳಿ (ಅಧ್ಯಕ್ಷರು, ಅಖಿಲ ಭಾರತ ವಕೀಲರ ಸಂಘ, ಮಂಗಳೂರು),ನವೀನ್ ಸೂರಿಂಜೆ (ಅಭಿಮತ ಮಂಗಳೂರು).,ವಿದ್ಯಾ ದಿನಕರ್ (ಮಹಿಳಾ ಸಂಘಟನೆಗಳ ಒಕ್ಕೂಟ, ಮಂಗಳೂರು)ಎಂ ದೇವದಾಸ್ (ದಲಿತ ಸಂಘರ್ಷ ಸಮಿತಿ, ದಕ್ಷಿಣ ಕನ್ನಡ),ಮಂಜುಳಾ ನಾಯಕ್ (ಸಾಮರಸ್ಯ ಮಂಗಳೂರು), ಎಸ್‌ಡಿಪಿಐ ಹೀಗೆ ಹತ್ತು ಹಲವು ಸಂಘಟನೆಗಳು, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ನೇತಾರರು ಅಗಲಿದ ಸೋಮಾಯಾಜಿಗೆ ಸಂತಾಪ ಸೂಚಿಸಿದ್ದಾರೆ.

DAKSHINA KANNADA

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

Published

on

ಮಂಗಳೂರು: ಮುಲ್ಕಿ  ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ  ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಎಂದು ಗುರುತಿಸಲಾಗಿದೆ.

abhilash

ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದಾರೆ. ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ.   ಈಜು ಅರಿತಿದ್ದ  ಅಭಿಲಾಶ್ ಅವರನ್ನು ರಕ್ಷಿಸಲು ಮುಂದಾಗಿದ್ದಾನೆ. ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್  ಧಾವಿಸಿ ಧನುಷ್ ಮತ್ತು ಜೀವನ್ ರವರ ನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್ ಡಿ ಆರ್ ಎಫ್ ತಂಡ,ಕರಾವಳಿ  ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.

Continue Reading

DAKSHINA KANNADA

ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!

Published

on

ಮಂಗಳೂರು: ಹೂವುಗಳ ಅಲಂಕಾರದಿಂದ ದೇವರ ಕೋಣೆ ಸುಂದರವಾಗಿ ಕಾಣಿಸುತ್ತದೆ. ಅಲ್ಲದೇ ದೇವರ ಪೂಜೆ ಪೂರ್ಣವೆನಿಸುತ್ತದೆ. ಹೂವುಗಳು ಮನೆಯ ಶಕ್ತಿಯನ್ನು ಬದಲಾಯಿಸುತ್ತದೆ. ಆದರೆ ಅದೇ ಹೂಗಳು ನಿಮ್ಮ ಮನೆಯಲ್ಲಿ ದೋಷಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ.

ಒಣಗಿದ ಹೂವುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಅಥವಾ ಅದನ್ನು ತೆಗೆಯದೇ ಹಾಗೇ ಬಿಟ್ಟರೆ, ಅದು ನಿಮ್ಮ ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಒಣಗಿದ ಅಥವಾ ಬಾಡಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ದೇವರಿಗೆ ಆಗಿರಬಹುದು ಅಥವಾ ಮನೆಯಲ್ಲೇ ಆಗಿರಬಹುದು ಯಾವಾಗಲೂ ಪರಿಮಳಯಕ್ತ ಹೂವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು.

ತಾಜಾ ಹೂವುಗಳಿಗೆ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಅವುಗಳಿಂದ ಉತ್ಪತ್ತಿಯಾಗುವ ಶಕ್ತಿಯು ಧನಾತ್ಮಕವಾಗಿ ನಮ್ಮ ಸುತ್ತಮುತ್ತಲಿನ ಸ್ಥಳವನ್ನು ಬದಲಾಯಿಸುತ್ತದೆ. ತಾಜಾ ಹೂವುಗಳು ಇರುವಲ್ಲೆಲ್ಲಾ ತಮ್ಮ ಸುತ್ತಲಿನ ಜೀವಿಗಳನ್ನು ಸಕಾರಾತ್ಮಕವಾಗಿರಿಸುತ್ತದೆ. ಅದೇ ಹೂವುಗಳು ಒಣಗಲು ಪ್ರಾರಂಭವಾದಾಕ್ಷಣ ಅದರಿಂದ ನಕಾರಾತ್ಮಕ ಕಂಪನಗಳು ಹರಡಲು ಪ್ರಾರಂಭವಾಗುತ್ತದೆ.

ಪೂಜೆಯಲ್ಲಿ ಒಣಗಿದ ಹೂವುಗಳನ್ನು ಬಳಸುವುದರಿಂದ ಆ ಪೂಜೆಯಿಂದ ಯಾವುದೇ ರೀತಿಯ ಫಲವನ್ನು ನಮಗೆ ಅನುಭವಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಪೂಜೆಯು ಯಾವುದೇ ಶುಭ ಫಲವನ್ನು ಪಡೆಯುವುದಿಲ್ಲ. ಬದಲಾಗಿ ಅಶುಭ ಫಲಗಳನ್ನು ಅನುಭವಿಸುವಂತಾಗುತ್ತದೆ.

ಅದಕ್ಕಾಗಿಯೇ ಹೂವುಗಳನ್ನು ಒಣಗುತ್ತಿದ್ದಂತೆ ಅವುಗಳನ್ನು ತಕ್ಷಣವೇ ಅಲ್ಲಿಂದ ಬದಲಾಯಿಸಬೇಕು. ಒಂದು ವೇಳೆ ಒಣಗಿದ ಹೂವುಗಳು ಇದ್ದರೆ ಅದು ಆರೋಗ್ಯದ ಮೇಲೆಯೂ ಮತ್ತಷ್ಟು ಕೆಟ್ಟ ಪರಿಣಾಮ ಬೀರಬಹುದು.

Continue Reading

DAKSHINA KANNADA

ಎಸ್ ಎಸ್ ಎಲ್ ಸಿ ಫಲಿತಾಂಶ: ಜಿಯಾ ಸ್ವೀಡಲ್ ಲಸ್ರಡೊಗೆ 599 ಅಂಕ

Published

on

ಪುತ್ತೂರು : ಸುದಾನ ರೆಸಿಡೆನ್ಶಿಯಲ್ ಸ್ಕೂಲ್, ನೆಹರು ನಗರ, ಮಂಜಲ್ಪಡ್ಪು ಇಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ
ಜಿಯಾ ಸ್ವೀಡಲ್ ಲಸ್ರಡೊ 599 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಕೆದಿಲ ಗ್ರಾಮದ ಕಲ್ಲಾಜೆ ನಿವಾಸಿ ಪಾಟ್ರಿಕ್ ಲಸ್ರಡೊ, ಅಮಿತಾ ಲಸ್ರಡೊ ದಂಪತಿ ಪುತ್ರಿ.

Continue Reading

LATEST NEWS

Trending