International news
ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು
Published
2 months agoon
By
NEWS DESK4ಮಂಗಳೂರು / ಕೇಪ್ ಕ್ಯಾನವೆರೆಲ್ : ಇತ್ತೀಚೆಗೆ ಬಾಹ್ಯಕಾಯಕ್ಕೆ ತೆರಳಿದ್ದ ಗಗನಯಾತ್ರಿಗಳು ಸುರಕ್ಷಿತವಾಗಿ ಭಾನುವಾರ(ಸೆ.15) ಸಂಜೆ ಭೂಮಿಗೆ ಬಂದಿಳಿದಿದ್ದಾರೆ. ಸ್ಪೇಸ್ ಎಕ್ಸ್ ಸಹಯೋಗದೊಂದಿಗೆ ಈ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಾಗಿತ್ತು.
ಇದು ಪ್ರಪಂಚದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ ಕಾರ್ಯಕ್ರಮವಾಗಿತ್ತು. ಇದರಲ್ಲಿ ಇಬ್ಬರು ನಾಸಾ ಪೈಲಟ್ ಗಳು ಸೇರಿ ಒಬ್ಬ ಸ್ಪೇಸ್ ಎಕ್ಸ್ ಉದ್ಯೋಗಿ ಹಾಗೂ ಬಿಲಿಯನೇರ್ ಜೇರೆಡ್ ಐಸಾಕ್ ಮನ್ ಇದ್ದರು.
ಇವರನ್ನುಹೊತ್ತಿದ್ದ ನೌಕೆ ಭಾನುವಾರ ಸಂಜೆ ಮೆಕ್ಸಿಕೊ ಕೊಲ್ಲಿಯಲ್ಲಿ ಯಶಸ್ವಿಯಾಗಿ ಇಳಿಯಿತು. ಬಿಲಿಯನೇರ್ ಜೇರೆಡ್ ಐಸಾಕ್ ಮನ್ ಬಾಹ್ಯಾಕಾಶ ನಡೆಸಿದ ಮೊದಲ ಖಾಸಗಿ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಖಾಸಗಿಯಾಗಿ ಆಯೋಜಿಸಲಾಗಿದ್ದ ‘ವಿಶ್ವದ ಮೊದಲ ಬಾಹ್ಯಾಕಾಶ ನಡಿಗೆ’ಯು ಯಶಸ್ವಿಯಾಗಿದೆ.
ಸಾಮಾನ್ಯವಾಗಿ ತರಬೇತಿ ಹೊಂದಿದ ಗಗನಯಾತ್ರಿಗಳನ್ನು ಮಾತ್ರವೇ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಆದರೆ, ಅವರ ಹೊರತಾಗಿ ಸಾಮಾನ್ಯರೂ ಬಾಹ್ಯಾಕಾಶಕ್ಕೆ ಹೋಗಿರುವುದು ಅಪರೂಪದ ಘಟನೆ.
ಇದನ್ನೂ ಓದಿ : ವಾರ ಕಳೆದ್ರೂ ವೈರಲ್ ಫೀವರ್ ಗುಣ ಆಗ್ತಿಲ್ವಾ? ಈ ಮನೆಮದ್ದು ಪ್ರಯತ್ನಿಸಿ, ಜ್ವರದೊಂದಿಗೆ ಮೈಕೈನೋವು ಮಾಯವಾಗುತ್ತೆ
ಐಸಾಕ್ ಮನ್ ಕುರಿತು :
ಭೂಮಿಯಿಂದ 740 ಕಿ.ಮೀ ದೂರದ ಕಕ್ಷೆಯಲ್ಲಿ ‘ಬಾಹ್ಯಾಕಾಶ ನಡಿಗೆ’ ಯಶಸ್ವಿಯಾಗಿ ನಡೆಯಿತು. ಬಾಹ್ಯಾಕಾಶ ನಡಿಗೆ ಗುರುತಿಸಲಾಗಿದ್ದ ಅನುಕೂಲಕರ ಸ್ಥಳದಲ್ಲಿ ನೌಕೆಯು ನಿಂತಿತು. ಇದರಿಂದ ಹೊರಬಂದ ಐಸಾಕ್ ಮನ್ ಬಾಹ್ಯಾಕಾಶ ನಡಿಗೆಯನ್ನು ಸಂಭ್ರಮಿಸಿದ್ದರು. 41 ವರ್ಷದ ಐಸಾಕ್ ಮನ್ ಅವರು ‘ಶಿಫ್ಟ್ 4’ ಎಂಬ ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ. ಇದುವರೆಗೆ 12 ದೇಶಗಳ ಸುಮಾರು 263 ಜನರು ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದ್ದಾರೆ. 1965ರಲ್ಲಿ ರಷ್ಯಾದ ಅಲೆಕ್ಸಿ ಲಿಯೋನೊವ್ ಮೊದಲ ಬಾರಿಗೆ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದರು
You may like
International news
WATCH : ಗರ್ಭಿಣಿಯಾದ 9 ವರ್ಷದ ಬಾಲಕಿ; ಬೇಬಿ ಬಂಪ್ ವೀಡಿಯೋ ವೈರಲ್
Published
3 days agoon
19/11/2024By
NEWS DESK4ಮಂಗಳೂರು/ಇರಾಕ್: ಸಣ್ಣ ವಯಸ್ಸಿನಲ್ಲಿ ಆಟ-ಪಾಠ ಅಂತ ಮಕ್ಕಳು ಬೆಳೆಯೋದು ಸಾಮಾನ್ಯ. ಆದರೆ ಇಲ್ಲೊಂದು ಕಡೆ 9 ವರ್ಷದ ಪುಟ್ಟ ಬಾಲಕಿ ಗರ್ಭಿಣಿಯಾಗಿ ಆಶ್ಚರ್ಯಪಡಿಸಿರೋದು ಸುಳ್ಳಲ್ಲ. ಭಾರತೀಯರಿಗೆ ಈ ಸಂಗತಿ ಆಶ್ಚರ್ಯ ಎನಿಸಿದರೂ ಇರಾಕ್ ದೇಶಕ್ಕೆ ಹೊಸದಲ್ಲ. ಯಾಕೆಂದರೆ, ಇರಾಕ್ ದೇಶ ಮದುವೆ ವಿಚಾರವಾಗಿ ಹೊಸ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಮದುವೆ ವಯಸ್ಸಲ್ಲಿ ಇಳಿಕೆ!
ಸಮಾಜದಲ್ಲಿ ಅಸಮಾನತೆ ಮತ್ತು ಮಕ್ಕಳ ಶೋಷಣೆ ಜಾಸ್ತಿಯಾಗಿದೆ. ಇದರ ನಡುವೆ ಇರಾಕ್ ಸರ್ಕಾರವು ತನ್ನ ದೇಶದ ವಿವಾಹ ಕಾನೂನಿನಲ್ಲಿ ಬದಲಾವಣೆ ಮಾಡಲು ಹೊರಟಿದೆ ಎಂದು ಹೇಳಲಾಗುತ್ತಿದೆ. ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18 ವರ್ಷದಿಂದ 9 ವರ್ಷಕ್ಕೆ ಇಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇರಾಕ್ ನ ಈ ವಿಚಿತ್ರ ಕಾನೂನಿಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೊಸ ಕಾನೂನಿನಿಂದ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಗರ್ಭಿಣಿಯರಾಗುತ್ತಿದ್ದಾರೆ.
ಇದನ್ನೂ ಓದಿ : ಅಂತೂ ಇಂತೂ ನಡೀತು ಮದುವೆ; ವರನ ದಿಬ್ಬಣಕ್ಕೆ ನೆರವಾದ ಭಾರತೀಯ ರೈಲ್ವೇ
ವೈರಲ್ ವೀಡಿಯೋದಲ್ಲಿ ಏನಿದೆ?
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುವ ಹುಡುಗಿಗೆ, ಏನೂ ಅರಿಯದ 9 ವರ್ಷ. ಈ ಬಾಲಕಿ ಪ್ರೆಗ್ನೆಂಟ್ ಆಗಿದ್ದು ಅದೇ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾಳೆ. ಒಂದು ಕೈಯಲ್ಲಿ ಹೊಟ್ಟೆ ಹಿಡಿದು, ಇನ್ನೊಂದು ಕೈಯಲ್ಲಿ ಬಣ್ಣಗಳನ್ನು ಉಗುಳುತ್ತಿರುವ ಪಟಾಕಿ ಸಿಡಿಸುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ವೈರಲ್ ಆಗಿರುವ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
International news
ಪಾಕಿಸ್ತಾನ: ರೈಲು ನಿಲ್ದಾಣದಲ್ಲಿ ಬಾಂ*ಬ್ ಸ್ಫೋ*ಟ; 20 ಜನರು ಸಾ*ವು
Published
2 weeks agoon
09/11/2024By
NEWS DESK4ಮಂಗಳೂರು/ಪೇಶಾವರ : ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ(ನ.9) ಬಾಂ*ಬ್ ದಾ*ಳಿ ನಡೆದಿದೆ. ಘಟನೆಯಲ್ಲಿ ಕನಿಷ್ಠ 20 ಜನರು ಸಾ*ವನ್ನಪ್ಪಿದ್ದು, 30 ಕ್ಕೂ ಅಧಿಕ ಮಂದಿ ಗಾ*ಯಗೊಂಡಿದ್ದಾರೆ.
ರೈಲು ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನವೇ ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಸ್ಫೋ*ಟ ಸಂಭವಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಜಾಫರ್ ಎಕ್ಸ್‌ಪ್ರೆಸ್ ಬೆಳಗ್ಗೆ 9 ಗಂಟೆಗೆ ಪೇಶಾವರಕ್ಕೆ ಹೊರಡಬೇಕಿತ್ತು. ಆದರೆ, ಆಗಮನ ತಡವಾಗಿತ್ತು. ಸ್ಫೋ*ಟ ಸಂಭವಿಸಿದಾಗ ರೈಲು ಇನ್ನೂ ಪ್ಲಾಟ್‌ಫಾರ್ಮ್‌ಗೆ ಬಂದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಯಾರಿಗಾದ್ರೂ ಹಳೆಯ ಬಟ್ಟೆಗಳನ್ನು `ದಾನ’ ಮಾಡುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ..
ನಿಲ್ದಾಣದಲ್ಲಿ ಸಾಮಾನ್ಯ ಜನಸಂದಣಿ ಇತ್ತು. ಆದರೆ, ಸ್ಫೋ*ಟದ ಪ್ರಮಾಣ ಹೆಚ್ಚಿದ್ದರಿಂದ ಸಾ*ವು-ನೋ*ವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
International news
ಏನಾಶ್ಚರ್ಯ! ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ
Published
2 weeks agoon
07/11/2024By
NEWS DESK4ಮಂಗಳೂರು/ರಿಯಾದ್ : ಸೌದಿ ಅರೇಬಿಯಾ ಮರಳುಗಾಡನ್ನು ಹೊಂದಿರುವ ಪ್ರದೇಶ. ಸುಡುವ ಬಿಸಿಲಿರುವ ಮರುಭೂಮಿಯಲ್ಲಿ ಹಿಮಪಾತವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಹಿಮಪಾತವಾಗಿದೆ. ಮರಳು ಗುಡ್ಡಗಳ ಮೇಲೆ ಹಿಮಗಳ ರಾಶಿ ಕಾಣಿಸುತ್ತಿದೆ. ಅಲ್ -ಜಾವ್ನ್ ಪ್ರಾಂತ್ಯದ ಉತ್ತರ ಗಡಿಪ್ರದೇಶಗಳಾದ ರಿಯಾದ್, ಮೆಕ್ಕಾ, ಆರ್ಸಿ, ತಬೂಕ್ ಮತ್ತು ಅಲ್ ಬಹಾಹ್ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಮತ್ತು ಹಿಮ ಬೀಳುತ್ತಿದೆ.
ಮರುಭೂಮಿಯಲ್ಲಿ ಹಿಮ ಮತ್ತು ಮಳೆಯಾಗುತ್ತಿರುವುದು ಅಚ್ಚರಿ ಉಂಟು ಮಾಡಿದ್ದು, ಇದರ ವೀಡಿಯೊ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹಿಮ ಬೀಳಲು ಕಾರಣವೇನು?
ಅರಬ್ಬಿ ಸಮುದ್ರದಲ್ಲಿ ಉಂಟಾದ ಕಡಿಮೆ ಒತ್ತಡದ ಪರಿಣಾಮ ಒಮಾನ್‌ಗೂ ಅವರಿಸಿದೆ. ಇದರಿಂದಾಗಿ ಶುಷ್ಕತೆಯಿಂದ ಇರುವ ಪ್ರದೇಶದಲ್ಲಿ ತೇವಾಂಶದಿಂದ ಕೂಡಿರುವ ಗಾಳಿ ಬೀಸುತ್ತಿದೆ. ಹೀಗಾಗಿ ಸೌದಿ ಅರೇಬಿಯಾ ಮತ್ತು ನೆರೆಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಾದ್ಯಂತ ಗುಡುಗು, ಆಲಿಕಲ್ಲು ಮಳೆ, ಹಿಮ ಬೀಳಲು ಕಾರಣವಾಗಿದೆ ಎಂದು ಯುಎಇಯ ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪ್ರತಿಕೂಲ ಹವಾಮಾನ ಇರುವ ಕಾರಣ ಅಲ್-ಜಾವ್‌ನಾದ್ಯಂತ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ, ತೀವ್ರ ಗಾಳಿ ಬೀಸಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಅಪರೂಪದ ವಿದ್ಯಮಾನ :
ಮರುಭೂಮಿಯಲ್ಲಿ ಹಿಮ ಬೀಳುವುದು ತೀರಾ ಅಪರೂಪದ ವಿದ್ಯಮಾನವಾಗಿದೆ. ಆದರೆ ಹಿಮ ಬೀಳುವುದೇ ಇಲ್ಲ ಎನ್ನುವಂತಿಲ್ಲ ಎಂಬುದು ತಜ್ಞರ ಮಾಹಿತಿ.
ಕೆಲವು ವರ್ಷಗಳ ಹಿಂದೆ ಸಹರಾ ಮರುಭೂಮಿ ಪ್ರದೇಶದ ಪಟ್ಟಣದಲ್ಲಿ ತಾಪಮಾನ 58 ಡಿಗ್ರಿಗೆ ಏರಿಕೆಯಾಗಿತ್ತು. ಆದರೆ ಏಕಾಏಕಿ ಆದ ಹಿಮಪಾತದಿಂದ ತಾಪಮಾನ ಇಳಿಕೆಯಾಗಿ ಮೈನಸ್ 2 ಡಿಗ್ರಿಗೆ ತಲುಪಿತ್ತು. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಈ ರೀತಿ ವಿದ್ಯಮಾನವು ಸಂಭವಿಸುತ್ತದೆ. ಹವಾಮಾನ ವೈಪರೀತ್ಯಗಳ ಪರಿಣಾಮಗಳಿಗೆ ಪಶ್ಚಿಮ ಏಷ್ಯಾವು ಹೆಚ್ಚು ಒಳಗಾಗುತ್ತವೆ.
ಇದನ್ನೂ ಓದಿ : ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಹೊಸ ರೀಲ್ಸ್ ಹಂಚಿಕೊಂಡ ನಿವೇದಿತಾ ಗೌಡ
ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ವಾತಾವರಣದ ಪರಿಸ್ಥಿತಿಗಳಲ್ಲೂ ಬದಲಾವಣೆಯಾಗುತ್ತವೆ. ಆದ್ದರಿಂದ ಮರುಭೂಮಿಗಳಲ್ಲಿ ಹಿಮಪಾತ ಸೇರಿದಂತೆ ಇಂತಹ ಅಸಾಮಾನ್ಯ ಹವಾಮಾನ ಘಟನೆಗಳು ಆಗಾಗ ಆಗುತ್ತವೆ ಎಂಬುದು ತಜ್ಞರ ಉವಾಚ.
LATEST NEWS
‘ಓಲಾ ಎಲೆಕ್ಟ್ರಿಕ್ ಕಂಪನಿ’ಯಿಂದ 500 ಉದ್ಯೋಗಿಗಳು ವಜಾ
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?
ನೀವು ಹೀಗೆ ಮಾಡಿದ್ರೆ ‘ಗೂಗಲ್ ಪೇ’ನಲ್ಲಿ ಸುಲಭವಾಗಿ 1,000 ರೂಪಾಯಿ ಪಡೆಯಬಹುದು
ತಾಯಂದಿರಿಂಲೇ ಮಕ್ಕಳ ಅ*ಪಹರಣ; ಉದ್ದೇಶ ಕೇಳಿದ್ರೆ ನೀವೆ ಶಾಕ್ ಆಗ್ತೀರ !!
ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಎಕ್ಸ್‌ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
Trending
- LATEST NEWS1 day ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS3 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS1 day ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ