Connect with us

    DAKSHINA KANNADA

    ಶ್ರೀ ಚೈತನ್ಯ ಶಾಲೆಗೆ ಪ್ರತಿಷ್ಟಿತ NDCA ರಾಷ್ಟ್ರೀಯ ಪ್ರಶಸ್ತಿಯ ಗರಿ..!

    Published

    on

    ಮಂಗಳೂರು : ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಉತ್ತರ ದೆಹಲಿ ಮೂಲದ ಸಾಂಸ್ಕೃತಿಕ ಸಂಸ್ಥೆ NDCA ಯು ತಮ್ಮ ಹತ್ತನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ 2022 23 ನೇ ಸಾಲಿನ ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಯೆಂದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯನ್ನು ಹಾಗೆ ಶ್ರೀಮತಿ ಸೀಮಾ ಬೊಪ್ಪಣ್ಣ ಅವರನ್ನು ಭಾರತದ ಅತ್ಯುತ್ತಮ ಶೈಕ್ಷಣಿಕ ಆಡಳಿತ ನಿರ್ದೇಶಕಿಯೆಂದು ಘೋಷಣೆ ಮಾಡಿದೆ.

    ಕಳೆದ ಹಲವು ದಶಕಗಳಿಂದ ಉತ್ತಮ ಪರೀಕ್ಷಾ ಫಲಿತಾಂಶವನ್ನು, ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣವನ್ನು ಮತ್ತು ವಿಶ್ವದಾದ್ಯಂತ ಅವಶ್ಯವಾದ ಶಿಕ್ಷಣ ಕ್ರಮವನ್ನು ಅನುಸರಿಸುತ್ತಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿರುವುದಾಗಿ NDCA ಸಂಸ್ಥೆಯು ತಿಳಿಸಿದೆ.

    ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಆಡಳಿತ ನಿರ್ದೇಶಕಿಯಾದ ಸೀಮಾ ಬೊಪ್ಪಣ್ಣ ಅವರು ಈ ಪ್ರಶಸ್ತಿಯನ್ನು ತೆಲಂಗಾಣ ರಾಜ್ಯದ ಶಿಕ್ಷಣ ಸಚಿವರಾದ  ಸಬಿತಾ ಇಂದ್ರ ರೆಡ್ಡಿ ಮತ್ತು NDCA ಸಂಸ್ಥೆಯ ಪ್ರತಿನಿಧಿಯಾದ  ಭಾಗೀ ನಾಗೇಂದ್ರ ಗೌಡ ಅವರಿಂದ ತಾಜ್ ಡೆಕ್ಕನ್ ಹೋಟೆಲ್, ಬಂಜಾರ ಹಿಲ್ಸ್, ಹೈದರಾಬಾದ್‌ನಲ್ಲಿ ಸ್ವೀಕರಿಸಿದ್ದಾರೆ.

    ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಕಾರ್ಯದರ್ಶಿಗಳಾದ ರಾಹುಲ್ ಬೊಜ್ಜ ಲೋಕಸಭಾ ಸದಸ್ಯರಾದ  ಸಮುದ್ರಲ ವೇಣುಗೋಪಾಲಚಾರಿ, ತೆಲಂಗಾಣ ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷರಾದ ಉಪ್ಪಾಳ ಶ್ರೀನಿವಾಸ ಗುಪ್ತಾ ಅವರು ಭಾಗವಹಿಸಿದ್ದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ಮತ್ತು ಶೈಕ್ಷಣಿಕ ಆಡಳಿತ ನಿರ್ದೇಶಕಿಯಾದ ಸೀಮಾ ಬೊಪ್ಪಣ್ಣ ಅವರ ಕಾರ್ಯಕ್ಷಮತೆ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಅಭಿನಂದಿಸಿದ್ದಾರೆ.

    ಈ ಸಂದರ್ಭದಲ್ಲಿ ತಮ್ಮ ಪೋಷಕರಿಂದ ಆಶೀರ್ವಾದವನ್ನು ಪಡೆದ ಶ್ರೀಮತಿ ಸೀಮಾ ಬೊಪ್ಪಣ ಅವರು ನಮ್ಮ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗದವರ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಹಾಗೂ ನಮ್ಮ ಶಾಲೆಯಲ್ಲಿ ನಡೆಸುತ್ತಿರುವ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಈ ಪ್ರಶಸ್ತಿ ದೊರೆಯಲು ಕಾರಣ ಎಂದಿದ್ದಾರೆ. ಅಲ್ಲದೆ ಇಂತಹ ಕಾರ್ಯವನ್ನು ಗುರುತಿಸಿ ಅಭಿನಂದಿಸಿದ NDCA ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುತ್ತ ಈ ಪ್ರಶಸ್ತಿಯು ನಮ್ಮ ಜವಾಬ್ದಾರಿಗಳನ್ನು ಇನ್ನೂ ಹೆಚ್ಚಿಸಿದೆ ಎಂದಿದ್ದಾರೆ.

    ಈ ಕಾರ್ಯಕ್ರಮದಲ್ಲಿ NDCA ಸಂಸ್ಥೆಯ ಕಾರ್ಯದರ್ಶಿಗಳು, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಬಿ. ಎಸ್. ರಾವ್ ,  ಝಾನ್ಸಿ ಲಕ್ಷ್ಮಿ ಬಾಯಿ , ಆಡಳಿತ ನಿರ್ದೇಶಕರಾದ ನಾಗೇಂದ್ರ , ಸುಷ್ಮಾ , ಶ್ರೀಧರ್ , ಕೇಂದ್ರ ಕಛೇರಿಯ ಸಿಬ್ಬಂದಿಗಳು, ಎಜಿಎಂ ಗಳು, ಪ್ರಾಂಶುಪಾಲರು, ಡೀನ್‌ಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    DAKSHINA KANNADA

    ಕರಾವಳಿ ಉತ್ಸವದ ಅಂಗವಾಗಿ ಸಿನೆಮಾ ಹಬ್ಬ; ಫಿಲ್ಮ್ ಫೆಸ್ಟಿವಲ್ ಉದ್ಘಾಟಿಸಿದ ಹಿನ್ನಲೆ ಗಾಯಕ ಗುರುಕಿರಣ್

    Published

    on

    ಮಂಗಳೂರು : ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಚಾಲನೆ ನೀಡಿದ್ದಾರೆ. ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನಲ್ಲಿ ಇಂದು(ಜ.2) ಮತ್ತು ನಾಳೆ ಫಿಲ್ಮ್ ಫೆಸ್ಟಿವಲ್ ಅಯೋಜಿಸಲಾಗಿದೆ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಮೇಯರ್ ಮನೋಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಗುರುಕಿರಣ್ ದೀಪ ಬೆಳಗಿಸಿ ಈ ಫಿಲ್ಮ್ ಫೆಸ್ಟಿವಲ್ ಉದ್ಘಾಟಿಸಿದ್ದಾರೆ.

    ಭಾರತ್ ಮಾಲ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಜನಮೆಚ್ಚುಗೆ ಪಡೆದ 9 ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯಾಗಿ ಉಚಿತ ಸಿನೆಮಾ ವೀಕ್ಷಿಸುವ ಅವಕಾಶ ಸಿಗಲಿದೆ.

    ಇಂದು ನಾಲ್ಕು ಕನ್ನಡ ಸಿನೆಮಾ ಹಾಗೂ ನಾಳೆ ನಾಲ್ಕು ಕನ್ನಡ ಮತ್ತು ಒಂದು ಕೊಂಕಣಿ ಸಿನೆಮಾ ಪ್ರದರ್ಶನವಾಗಲಿದೆ. ಫಿಲ್ಮ್ ಫೆಸ್ಟಿವಲ್ ಉದ್ಘಾಟನೆಯಾದ ಬಳಿಕ ಅರಿಷಡ್ವರ್ಗ ಕನ್ನಡ ಸಿನೆಮಾ ಪ್ರದರ್ಶನವಾಗಿದ್ದು, ಹಲವರು ಸಿನೆಮಾ ವೀಕ್ಷಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾರತ್‌ ಸಿನೆಮಾಸ್‌ ನ ಬಾಲಕೃಷ್ಣ ಶೆಟ್ಟಿ, ಸುಬ್ರಾಯ ಪೈ ಮೊದಲಾದವರು ಉಪಸ್ಥಿತರಿದ್ದರು.

    ಯಾವೆಲ್ಲ ಸಿನಿಮಾ?

    ಜ.2ರಂದು 10ಕ್ಕೆ ಕನ್ನಡದ “ಅರಿಷಡ್ವರ್ಗ, 12.30ಕ್ಕೆ “19-20-21′ (ಕನ್ನಡ) ಪ್ರದರ್ಶನಗೊಂಡಿದ್ದು, ಸಂಜೆ 6.30ಕ್ಕೆ ಮಧ್ಯಂತರ(ಕನ್ನಡ), ರಾತ್ರಿ 8ಕ್ಕೆ “ಕಾಂತಾರ(ಕನ್ನಡ) ಪ್ರದರ್ಶನಗೊಳ್ಳುವವು.

    ಜ.3ರಂದು ಬೆಳಗ್ಗೆ 10.15ಕ್ಕೆ ಸಾರಾಂಶ(ಕನ್ನಡ) , 12.45ಕ್ಕೆ ತರ್ಪಣ(ಕೊಂಕಣಿ), ಮಧ್ಯಾಹ್ನ 3.15ಕ್ಕೆ ಶುದ್ಧಿ(ಕನ್ನಡ), ಸಂಜೆ 5.45ಕ್ಕೆ ಕುಬಿ ಮತ್ತು ಇಯಾಲ(ಕನ್ನಡ), ರಾತ್ರಿ 8ಕ್ಕೆ “ಗರುಡ ಗಮನ ವೃಷಭ ವಾಹನ'(ಕನ್ನಡ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.

    ಹಲವು ಕಾರ್ಯಕ್ರಮ ಆಯೋಜನೆ :

    ಜ. 4 ಮತ್ತು 5 ರಂದು ಕದ್ರಿ ಪಾರ್ಕಿನಲ್ಲಿ ಯುವ ಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂದು ಸಂಜೆ 6 ರಿಂದ 9 ರ ತನಕ ಸ್ಥಳೀಯ ಯುವ ಕಲಾವಿದರಿಂದ ಮ್ಯೂಸಿಕಲ್‌ ನೈಟ್‌ ಜರಗಲಿದೆ. ಅಲ್ಲದೆ, ಜ. 4  ರಂದು ಅಪರಾಹ್ನ 3 ರಿಂದ 6 ರ ತನಕ ಕಾರ್‌- ಬೈಕ್‌ ಎಕ್ಸ್‌ಪೊ ಏರ್ಪಡಿಸಲಾಗಿದೆ.

    ಇದನ್ನೂ ಓದಿ : ಇನ್ಮುಂದೆ ನಾನು ಮಹಿಳೆಯರನ್ನು ನೋಡುವುದೇ ಇಲ್ಲ; ಹೊಸ ವರ್ಷಕ್ಕೆ ಖ್ಯಾತ ಡೈರೆಕ್ಟರ್ ಟ್ವೀಟ್ ವೈರಲ್ !

    ಜ. 5 ರಂದು ಬೆಳಗ್ಗೆ 7 ರಿಂದ 8.30 ರ ತನಕ ವಾಯಲಿನ್‌ ವಾದಕರಿಂದ ‘ಉದಯ ರಾಗ’ ಕಾರ್ಯಕ್ರಮ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆ ತನಕ ಶ್ವಾನ ಪ್ರದರ್ಶನ ನಡೆಯಲಿದೆ. ಸುತ್ತ ಮುತ್ತಲ 2- 3 ಜಿಲ್ಲೆಗಳ ನಾಯಿಗಳ ಮಾಲಕರು ಶ್ವಾನಗಳನ್ನು ಪ್ರದರ್ಶಿಸಲಿದ್ದಾರೆ. ಪೊಲೀಸ್‌ ಶ್ವಾನ ದಳದ ಆಕರ್ಷಕ ಪ್ರದರ್ಶನ ಕೂಡ ಇರಲಿದೆ.

    Continue Reading

    DAKSHINA KANNADA

    ಚಲಿಸುತ್ತಿದ್ದ ಅಟೋ ಗೆ ಅಡ್ಡ ಬಂದ ನಾಯಿ; ಅ*ಪಘಾತ ತಪ್ಪಿಸುವ ಯತ್ನದಲ್ಲಿ ಯಕ್ಷಗಾನ ಕಲಾವಿದನಿಗೆ ಗಾಯ

    Published

    on

    ಕಿನ್ನಿಗೋಳಿ: ಚಲಿಸುತ್ತಿದ್ದ ಅಟೋ ಒಂದಕ್ಕೆ ನಾಯಿ ಅಡ್ದ ಬಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಿನ್ನಿಗೋಳಿಯ ರಾಜರತ್ನಾಪುರದಲ್ಲಿ ನಡೆದಿದೆ.

    ಗಾಯಗೊಂಡ ಆಟೋ ಚಾಲಕನನ್ನು ಕಟೀಲು ಮಲ್ಲಿಗೆಯಂಗಡಿ ಬಳಿಯ ನಿವಾಸಿ ಕಟೀಲು ಮೇಳದ ಕಲಾವಿದ ಆನಂದ್ ಎಂದು ಗುರುತಿಸಲಾಗಿದೆ. ಗಾಯಾಳು ಆನಂದ್ ಆಟೋದಲ್ಲಿ ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಹೋಗುತ್ತಿದ್ದು ರಾಜರತ್ನಾಪುರ ಬಳಿ ನಾಯಿ ಅಡ್ಡ ಬಂದಿದೆ.

    ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಉರುಳಿದ ಶಾಲಾ ಬಸ್; ಓರ್ವ ವಿದ್ಯಾರ್ಥಿ ಬ*ಲಿ

    ಈ ಸಂದರ್ಭ ಅ*ಪಘಾತ ತಪ್ಪಿಸಲು ಆಟೋ ಚಾಲಕ ಯತ್ನ ನಡೆಸಿದಾಗ ಆಟೋ ಪಲ್ಟಿಯಾಗಿದ್ದು ಸಮೀಪದ ಪೊದೆಯೊಳಗೆ ಆಟೋ ಬಿದ್ದಿದೆ. ಆಟೋ ಪಲ್ಟಿಯಾದ ರಭಸಕ್ಕೆ ,ಚಾಲಕನಿಗೆ ಗಂ*ಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ಆಟೋಗೆ ಸಂಪೂರ್ಣ ಹಾನಿಯಾಗಿದೆ.

    Continue Reading

    DAKSHINA KANNADA

    ಕರಾವಳಿ ಉತ್ಸವಕ್ಕೆ ಸಿದ್ದವಾದ ಮಲ್ಟಿಪ್ಲೆಕ್ಸ್; ಇಂದು ಮತ್ತು ನಾಳೆ ನಡೆಯಲಿದೆ ಚಲನಚಿತ್ರೋತ್ಸವ

    Published

    on

    ಮಂಗಳೂರು: ಕರಾವಳಿ ಉತ್ಸವಕ್ಕೆ ಇನ್ನಷ್ಟು ರಂಗು ತುಂಬಲು ಇದೇ ಮೊದಲ ಬಾರಿಗೆ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ.

    ಇಂದು ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನ ಮಲ್ಪಿಪ್ಲೆಕ್ಸ್ ಪರದೆಯಲ್ಲಿ ಸಿನೆಮಾಗಳನ್ನು ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇಂದು ಮತ್ತು ನಾಳೆ ಜನ ಮೆಚ್ಚುಗೆ ಪಡೆದ ಒಟ್ಟು ಒಂಬತ್ತು ಸಿನೆಮಾಗಳ ಪ್ರದರ್ಶನ ನಡೆಯಲಿದೆ.

    ಇದನ್ನೂ ಓದಿ: ಕರಾವಳಿ ಉತ್ಸವದಲ್ಲಿ ಸೃಷ್ಠಿಯಾದ ಕೃತಕ ಅರಣ್ಯ

    ಮುಂಜಾನೆ ಹತ್ತರಿಂದ ಆರಂಭವಾಗುವ ಈ ಸಿನೆಮಾಗಳು ರಾತ್ರಿ 8 ಗಂಟೆಯ ಶೋ ತನಕ ವೀಕ್ಷಿಸಲು ಅವಕಾಶ ಇದೆ. ಚಿತ್ರ ವೀಕ್ಷಣೆಗೆ ಉಚಿತ ಪ್ರವೇಶವಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯಲ್ಲಿ ಪ್ರವೇಶ ನೀಡಲಾಗುತ್ತದೆ.

    ಕನ್ನಡ, ತುಳು, ಕೊಂಕಣಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೆ ಇಂದು ಸಂಜೆ ಕರಾವಳಿ ಉತ್ಸವ ಮೈದಾನದಲ್ಲಿ ಬೆಂಗಳೂರಿನ ಮೆಲ್ಲೋಟ್ರಿ ಖ್ಯಾತಿಯ ರಂಜನ್ ಬ್ಯೂರಾ ಮತ್ತು ಬಳಗದವರಿಂದ ವಾದ್ಯ ಸಂಗೀತ ಕಾರ್ಯಕ್ರಮ ಕೂಡಾ ನಡೆಯಲಿದೆ.

    Continue Reading

    LATEST NEWS

    Trending