Connect with us

    DAKSHINA KANNADA

    ಮಂಗಳೂರು: ಖಾಸಾಗಿ ನರ್ಸಿಂಗ್ ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವನೆ – 137 ವಿದ್ಯಾರ್ಥಿನಿಯರು ಆಸ್ಪತ್ರೆಗೆ..!

    Published

    on

    ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿರುವ ಖಾಸಾಗಿ ಆಸ್ಪತ್ರೆಯ ಸಿಟಿ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್‌ ನಲ್ಲಿ ವಿಷಾಹಾರ ಸೇವನೆಯಿಂದ 100 ಕ್ಕೂ ಅಧಿಕ ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿದ್ದು, ಕೆಎಂಸಿ, ಸಿಟಿ ಆಸ್ಪತ್ರೆ ಸೇರಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

    ಮಾಂಸಾಹಾರ ಸೇವಿಸಿದ್ದ ವಿದ್ಯಾರ್ಥಿನಿಯರಲ್ಲಿ ಮಧ್ಯಾಹ್ನ ವಾಂತಿ, ಭೇದಿ ಕಾಣಿಸಿಕೊಂಡಿತ್ತು.

    ಹೊಟ್ಟೆನೋವಿನಿಂದ ನರಳುತ್ತಿದ್ದ ವಿದ್ಯಾರ್ಥಿಯರನ್ನು ನಗರದ ಸಿ.ಟಿ. ಆಸ್ಪತ್ರೆ, ಮಂಗಳಾ ನರ್ಸಿಂಗ್ ಹೋಂ, ಕೆಎಂಸಿ ಹಾಗೂ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.

    ಎಲ್ಲಾ ವಿದ್ಯಾರ್ಥಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಯಾರು ಭಯ ಪಡುವ ಅಗತ್ಯವಿಲ್ಲ ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ. ಅಶೋಕ್   ಮಾಹಿತಿ ನೀಡಿದ್ದಾರೆ.

    ವಿಷಾಹಾರ ಸೇವನೆಯ ವಿದ್ಯಾರ್ಥಿನಿಯರನ್ನು ದಾಖಲು ಮಾಡಿದ ಸಿಟಿ ಆಸ್ಪತ್ರೆ ಬಳಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿ ಕುಮಾರ್, ಡಿಸಿಪಿಗಳು ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ವಿಚಾರಣೆ  ಮಾಡುತ್ತಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಎಜೆ ಆಸ್ಪತ್ರೆಯಲ್ಲಿ 52, ಕೆಎಂಸಿ ಜ್ಯೋತಿ 18, ಯುನಿಟಿ ಆಸ್ಪತ್ರೆಯಲ್ಲಿ 14, ಸಿಟಿ ಆಸ್ಪತ್ರೆಯಲ್ಲಿ 8 , ಮಂಗಳ ಆಸ್ಪತ್ರೆಯಲ್ಲಿ ಮೂರು, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ  42  ಹೀಗೆ ಒಟ್ಟು ಸೇರಿ 137 ಜನ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಮಂಗಳೂರು 137 ನರ್ಸಿಂಗ್ ವಿದ್ಯಾರ್ಥಿನಿಯರ ವಿಷಾಹಾರ ಸೇವನೆ ಬಗ್ಗೆ ವೈದ್ಯರು- ಪೊಲೀಸ್ ಕಮಿಷನರ್ ಏನಾಂದ್ರು,,!!?

     

     

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಸಾಧನೆ ಮೆರೆದ ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು

    Published

    on

    ಮಂಗಳೂರು : ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಿದರು.

    20 ರಾಜ್ಯಗಳಲ್ಲಿರುವ 120 ಶಾಖೆಯಲ್ಲಿ ಏಕಕಾಲಕ್ಕೆ 10,000 ವಿದ್ಯಾರ್ಥಿಗಳು ನೂರು ದಿನ ವಿಶೇಷ ತರಬೇತಿ ಪಡೆದು, 600 ಸೂತ್ರಗಳನ್ನು ಹೇಳುವುದರ ಮುಖಾಂತರ ಮೂರನೇ ಬಾರಿಗೆ ಇಲ್ಲಿನ ವಿದ್ಯಾರ್ಥಿಗಳು ಐತಿಹಾಸಿಕ ದಾಖಲೆ ಸೃಷ್ಠಿಸಿದ್ದಾರೆ.

    ಇದನ್ನೂ ಓದಿ : ಕಾರ್ಕಳ: ಮಗುವಿನಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆ

    ಅದರಲ್ಲಿ ವಿಶೇಷವಾಗಿ ಮಂಗಳೂರು ನಗರದಲ್ಲಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ  118 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮವಾದ ಸಾಧನೆ ಮಾಡಿದ್ದಾರೆ. ಸಾಧನೆಗೆ ಪಾಲಕರ ಪ್ರೋತ್ಸಾಹ,  ಶಿಕ್ಷಕರ ನಿರಂತರ ತರಬೇತಿ ಮುಖ್ಯವಾಗಿದೆ ಎಂದು ಶಾಲೆಯ ವ್ಯವಸ್ಥಾಪಕ ಕೆ. ಸುನಿಲ್ ಕುಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗಿಯಾದ ಎಲ್ಲಾ ಮಕ್ಕಳ ಪ್ರತಿಭೆ ಪ್ರಜ್ವಲಿಸುವಂತಾಗಲಿ ಎಂದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹಾರೈಸಿದೆ.

    Continue Reading

    DAKSHINA KANNADA

    ಮಂಗಳೂರು : ಜಾನುವಾರು ಕಳ್ಳತನ ; ಆರೋಪಿಗಳು ಬಂಧನ

    Published

    on

    ಮಂಗಳೂರು : ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕೊಳಂಬೆ ಕೊಂಚಾರು ಬದ್ರಿಯಾನಗರದ  ಪೈಜಲ್ ಕೊಂಚಾರ್ (40) ಮತ್ತು ಕೋಡಿಯ ಸುಹೈಬ್ ಅಕ್ತರ್ (24)  ಎಂಬವರನ್ನು ಕಾವೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

    ಆರೋಪಿಗಳಿಂದ   ಕಾರು  ಹಾಗೂ ಸ್ಕೂಟರ್‌ನ್ನು ವಶಪಡಿಸಿದ್ದಾರೆ.

    ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.   ಆರೋಪಿಗಳ ಪೈಕಿ  ಪೈಜಲ್ ವಿರುದ್ಧ  ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ 2  ಪ್ರಕರಣಗಳು ದಾಖಲಾಗಿದೆ.

    ಪೈಜಲ್ ವಿರುದ್ಧ  ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜ್ಜೆ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು, ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಮತ್ತು  ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

    ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿಗಳನ್ನು ಬಂಧಿಸಲಾಗಿದೆ.

    Continue Reading

    BANTWAL

    ಬಂಟ್ವಾಳ: ಟೆಂಪೋ ಡಿ*ಕ್ಕಿ ಹೊಡೆದು ಮೂರು ವರ್ಷದ ಮಗು ಸಾ*ವು

    Published

    on

    ಬಂಟ್ವಾಳ: ನಿಲ್ಲಿಸಿದ್ದ ಟೆಂಪೋವೊಂದು ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಆ ವೇಳೆ ಆಟವಾಡುತ್ತಿದ್ದ ಮುರು ವರ್ಷದ ಮಗು ಚಕ್ರದ*ಡಿಗೆ ಸಿಲುಕಿ ಮೃ*ತಪಟ್ಟ ಘಟನೆ ಬುಧವಾರ (ನ.6) ಬಂಟ್ವಾಳದ ಲೊರೆಟ್ಟೋಪದವಿನ ಟಿಪ್ಪುನಗರದಲ್ಲಿ ನಡೆದಿದೆ.

    ಫರಂಗಿಪೇಟೆ ಸಮೀಪದ ಪತ್ತನಬೈಲು ನಿವಾಸಿ ಆಶೀಕಾ (3) ಮೃ*ತ ಮಗು.

    ಮಗು ತನ್ನ ಅಜ್ಜಿ ಮನೆಯಲ್ಲಿದ್ದು, ಮನೆಯ ಹೊರಗೆ ಮಗು ಆಡುತ್ತಿದ್ದ ವೇಳೆ ಅಂಗಳದಲ್ಲಿ ನಿಲ್ಲಿಸಿದ್ದ ಟೆಂಪೋ ಒಮ್ಮೆಯೇ ಹಿಂದೆ ಬಂದ ಕಾರಣ ದುರ್ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಗಂಭೀರ ಗಾ*ಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending