BIG BOSS
ಬಿಗ್ಬಾಸ್ ಮನೆಗೆ ಬಂದ ಧನು ಮುದ್ದಿನ ಕೂಸು; ಅಪ್ಪನಿಗೆ ಮಗಳಿಂದ ಎನರ್ಜಿ ಬೂಸ್ಟ್..!
Published
2 weeks agoon
By
NEWS DESK2ಬರೀ ಕಿತ್ತಾಟ, ಗಲಾಟೆಯಿಂದ ತುಂಬಿರುತ್ತಿದ್ದ ಬಿಗ್ಬಾಸ್ ಮನೆ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ವೀಕ್ಷಕರಿಗೆ ಸ್ಪೆಷಲ್ ಮನರಂಜನೆಯ ಬೂಸ್ಟ್ ಸಿಗ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗ್ತಿದೆ.
ಅಂತೆಯೇ ಧನರಾಜ್ ಆಚಾರ್ಯ ಅವರ ಕೂಡು ಕುಟುಂಬ ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದೆ. ಇಡೀ ಕುಟುಂಬವನ್ನು ಕಂಡ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಹುಲಿ ಕುಣಿತದ ಸ್ಟೆಪ್ಸ್ ಹಾಕಿದ್ದಾರೆ.
ವಿಶೇಷ ಅಂದರೆ ಅವರ ಮುದ್ದಿನ ಮಗಳು ಕೂಡ ಬಿಗ್ಬಾಸ್ ಮನೆಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಇದನ್ನು ನೋಡಿದ ಧನು, ಪ್ಲೀಸ್ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್ಬಾಸ್ಗೆ ಮನವಿ ಮಾಡಿಕೊಂಡಿದ್ದಾರೆ. ಧನು ಭಾವುಕರಾಗಿದ್ದನ್ನು ನೋಡಿದ ಬಿಗ್ಬಾಸ್, ಕೊನೆಗೂ ಮಗುವನ್ನು ಎತ್ತಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಧನು, ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ. ಅಂದ್ಹಾಗೆ ಧನರಾಜ್-ಪ್ರಜ್ಞಾ ದಂಪತಿಗೆ ಸೆಪ್ಟೆಂಬರ್ 20 ರಂದು ಹೆಣ್ಣು ಮಗು ಜನಿಸಿದೆ.
ಇನ್ನು, ಪತ್ನಿ ಪ್ರಜ್ಞಾ ಧನುಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ. ಇವತ್ತು ರಾತ್ರಿ ಈ ಎಪಿಸೋಡ್ ಪ್ರಸಾರವಾಗಲಿದೆ.
BIG BOSS
ಈ ವಾರ ಮನೆಯಿಂದ ಹೊರ ಬರುವ ಕಂಟೆಸ್ಟೆಂಟ್ಸ್‌ಗಳು ಇವರೇ ?
Published
11 hours agoon
18/01/2025By
NEWS DESK3ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇದೀಗ ಸೆಮಿ ಫಿನಾಲೆ ವಾರ ಮುಕ್ತಾಯವಾಗುತ್ತಾ ಬಂದಿದೆ. ಇಂದು ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯ್ತಿ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಇದು ನಾಮಿನೇಟ್ ಆಗಿರುವ ಸ್ಪರ್ಧಿಗಳ ಆಟವನ್ನು ನಿರ್ಧಾರ ಮಾಡಲಿದೆ.
ಇನ್ನೊಂದು ಕಡೆ ಮಧ್ಯವಾರದಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹಾಗೆ ಮಾಡಿಲ್ಲ. ಈಗ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯೋದು ಪಕ್ಕಾ ಆಗಿದೆ. ಇಂದು (ಜ.18) ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಹೊರ ಹೋಗುವುದು ಪಕ್ಕಾ ಎನ್ನಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳಲು ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಮುಂದಿನ ವೀಕೆಂಡ್‌ನಲ್ಲಿ ಫಿನಾಲೆ ನಡೆಯಲಿದೆ. ಅಲ್ಲಿಯವರೆಗೆ ಯಾರು ಇರುತ್ತಾರೆ ಹಾಗೂ ಯಾರು ಹೋಗುತ್ತಾರೆ ಎಂದು ಊಹಿಸೋದು ಕೂಡ ಕಷ್ಟ ಎಂಬಂತಾಗಿದೆ. ಹೀಗಿರುವಾಗಲೇ ಶನಿವಾರ ಸ್ಪರ್ಧಿಗಳಿಗೆ ಒಂದು ಶಾಕಿಂಗ್ ವಿಚಾರ ಇರಲಿದೆ ಎಂದು ಹೇಳಲಾಗುತ್ತಿದೆ.
ಕೆಲವು ವರದಿಗಳ ಪ್ರಕಾರ ಇಂದು ಶೋ ಆರಂಭಕ್ಕೂ ಮೊದಲೇ ಅಥವಾ ಶೋ ಕೊನೆಯಲ್ಲಿ ಎಲಿಮಿನೇಷನ್ ನಡೆಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾನುವಾರ ಕೂಡ ಒಂದು ಎಲಿಮಿನೇಷನ್ ನಡೆಯಲಿದೆ. ಈ ವಾರ ಒಟ್ಟಾರೆ ಇಬ್ಬರು ಅಥವಾ ಮೂವರು ಹೊರ ಹೋಗಲಿದ್ದಾರೆ.
ಇದನ್ನೂ ಓದಿ: ಮಂಥರೆಯಾಗಿ ಮೊದಲ ಬಾರಿ ಯಕ್ಷಗಾನದಲ್ಲಿ ಮಿಂಚಿದ ನಟಿ ಉಮಾಶ್ರೀ
ಸದ್ಯ ಹನುಮಂತ ಅವರು ಎಲಿಮಿನೇಷನ್‌ನಿಂದ ಬಚವ್ ಆಗಿದ್ದಾರೆ. ಮೋಕ್ಷಿತಾ ಪೈ ಅವರನ್ನು ಹನುಮಂತ ಸೇವ್ ಮಾಡಿದ್ದು, ಫಿನಾಲೆ ವಾರ ತಲುಪಿದ್ದಾರೆ. ಇನ್ನು ಡಬಲ್ ಎಲಿಮಿನೇಷನ್ ಇರುವ ಕಾರಣ ನಾಮಿನೇಟ್ ಆಗಿರುವ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ಮೊಗದಲ್ಲಿ ಆತಂಕ ಕಾಡುತ್ತಿದೆ. ನಗು ಎನ್ನುವುದು ಮಾಯವಾಗಿ ಕಣ್ಣೀರು ಬಾಕಿ ಉಳಿದಿದೆ. ಕೊನೆ ಹಂತಕ್ಕೆ ಬಂದು ಹೊರ ನಡೆದರೆ ಹೇಗೆ ಎಂದು ಯೋಚನೆಯಲ್ಲಿ ತೊಡಗಿದ್ದಾರೆ. ಹನುಮಂತು, ಮೋಕ್ಷಿತಾ ಅವರನ್ನು ಉಳಿಸಿಕೊಂಡಿದ್ದು ಧನರಾಜ್‌ಗೆ ಕೈಕೊಟ್ಟಿದ್ದಾರೆ.
ಈ ವಾರ ಯಾರಿಗೆ ಮನೆಯಿಂದ ಗೇಟ್‌ಪಾಸ್ ?
ಉಗ್ರಂ ಮಂಜು, ರಜತ್ ಮತ್ತು ಭವ್ಯಾ ಗೌಡ ಅವರ ಆಟಕ್ಕೆ ಹೋಲಿಕೆ ಮಾಡಿದರೆ ಗೌತಮಿ ಈ ವಾರ ಹೊರ ಹೋಗೋದು ಬಹುತೇಕ ಖಚಿತ. ಅಷ್ಟೇ ಅಲ್ಲದೆ, ಅವರಿಗೆ ಫ್ಯಾನ್ಸ್ ಫಾಲೋವಿಂಗ್ ಕೂಡ ತೀರಾ ಕಡಿಮೆ ಇದೆ. ಇನ್ನು ಇವರನ್ನು ಹೊರತುಪಡಿಸಿ ಧನರಾಜ್ ಅವರು ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ.
ಆಟದ ವೈಖರಿ, ಮನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಇವೆಲ್ಲವನ್ನೂ ಗಮನಿಸಿದರೆ ಧನರಾಜ್ ಉತ್ತಮವಾಗಿದ್ದಾರೆ. ಆದರೆ ಈ ವಾರದ ಟಾಸ್ಕ್ ಒಂದರಲ್ಲಿ ನಿಯಮದ ಅರಿವಿಲ್ಲದೆ, ಕನ್ನಡಿ ನೋಡಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದರು. ಈ ಒಂದು ತಪ್ಪಿನಿಂದಾಗಿ ಅವರಿಗೆ ಓಟಿಂಗ್ ವ್ಯವಸ್ಥೆಯಲ್ಲಿ ಪೆಟ್ಟು ಬೀಳುವ ಸಾಧ್ಯತೆ ಇದೆ.
ಅಲ್ಲದೆ ನಾಮಿನೇಟ್ ಆದ ಪ್ರತಿ ಸ್ಪರ್ಧಿಗಳಿಗೆ ವಾರದಲ್ಲಿ 5 ದಿನ ಓಟ್ ಮಾಡುವ ಅವಕಾಶವಿರುತ್ತದೆ. ಆದರೆ ಈ ಬಾರಿ ಧನರಾಜ್ ಅವರಿಗೆ 3 ದಿನವಷ್ಟೇ ಅದರ ಅವಕಾಶ ಸಿಗಲಿದೆ. ಹೀಗಾಗಿ ಕಡಿಮೆ ಓಟ್ ಇವರ ಪಾಲಾಗುವ ಸಾಧ್ಯತೆ ಇದೆ. ಹೀಗಾಗಿ ಈ ವಾರ ಗೌತಮಿ ಮತ್ತು ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ.
BIG BOSS
ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ಕುತೂಹಲ ಕೆರಳಿಸಿದ ಎಲಿಮಿನೇಷನ್
Published
1 day agoon
17/01/2025By
NEWS DESK3ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11′ ಯಶಸ್ವಿಯಾಗಿ ಮುನ್ನುಗುತ್ತಿದ್ದು, ಫೈನಲ್ ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಇದೇ ಸೀಸನ್ ನಿಂದ ಎಲಿಮಿನೇಟ್ ಆಗಿದ್ದ ಕೆಲ ಸ್ಪರ್ಧಿಗಳು ಮತ್ತೆ ದೊಡ್ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಸೀಸನ್ 10ರ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಹೋಗಿದ್ದಾರೆ. ಅಲ್ಲದೇ ಚೆಂದನವನದ ತಾರೆಗಳಾದ ಅದಿತಿ, ಶರಣ್ ಅವರು ಹನುಮಂತುಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್ ನೀಡಿ ಶುಭ ಹಾರೈಸಿದ್ದರು.
ಆದರೆ ಡಬಲ್ ಎಲಿಮಿನೇಶನ್ನಿಂದ ಶಾಕ್ ಆಗಿದ್ದ ಮನೆಮಂದಿಗೆ, ಇದೇ ಸೀಸನ್‌ನ ಎಲಿಮಿನೇಟ್ ಆದ ಸ್ಪರ್ಧಿಗಳು ಮತ್ತೆ ಮನೆಗೆ ಅತಿಥಿಗಳಾಗಿ ಆಗಮಿಸಿರುವುದು ಮತ್ತೆ ಆರಂಭದಲ್ಲಿದ್ದ ಖುಷಿ, ಸಂತೋಷ ಅದೇ ಸಡಗರ ಮರಳಿ ಬಂದಂತೆ ಆಗಿದೆ. ಇದರಿಂದ ಖುಷಿ ಪಟ್ಟಿರುವ ಹಾಲಿ ಸ್ಪರ್ಧಿಗಳು ಒಬ್ಬರನ್ನ ಒಬ್ಬರು ಎತ್ತಿಕೊಂಡು, ತಬ್ಬಿಕೊಂಡು ಸಖತ್ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: ಈ ವಾರಾಂತ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಡಬಲ್ ಧಮಾಕ
ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸ ಅತಿಥಿಗಳಾಗಿ ಮನೆಗೆ ವಾಪಸ್ ಆಗಿದ್ದಾರೆ. ಕೂಡಿಟ್ಟ ನೆನಪುಗಳು, ಸಿಹಿ-ಕಹಿ ಅನುಭವಗಳು, ಕೆಟ್ಟ ಘಟನೆಗಳು ಸಾಕಷ್ಟು ಇವೆ. ಸದ್ಯ ಮನೆಯೊಳಗಡ ಬಂದಿರುವ ಎಲಿಮಿನೇಟ್ ಸ್ಪರ್ಧಿಗಳು, ಈಗ ಉಳಿದಿರುವ ಸ್ಪರ್ಧಿಗಳಿಗೆ ಎನರ್ಜಿ ಬೂಸ್ಟ್ ಕೊಡಲಿದ್ದಾರೆ.
ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳಿಗೆ ತಮ್ಮ ತಪ್ಪುಗಳನ್ನು ತಕ್ಷಣ ತಿದ್ದಿಕೊಳ್ಳುವಂತೆ, ಕೆಲವೇ ಕೆಲವು ದಿನಗಳು ಬಾಕಿ ಇರುವುದರಿಂದ ಸ್ಪರ್ಧಿಗಳು ಸಖತ್ ಚಾಣಕ್ಷತೆಯಿಂದ ಆಡಬೇಕು ಎಂದು ಮನವರಿಕೆ ಮಾಡಲಿದ್ದಾರೆ. ಆದರೂ ಡಬಲ್ ಎಲಿಮಿನೇಷನ್ ಶಾಕ್‌ನಲ್ಲಿರುವ ಸ್ಪರ್ಧಿಗಳಿಗೆ, ಎಲಿಮಿನೇಟ್ ಆದ ಸ್ಪರ್ಧಿಗಳ ಆಗಮನದಿಂದ ಮತ್ತೆ ಮಿಡ್ ವೀಕ್ ಎಲಿಮಿನೇಶನ್ ಭಯ ಕಾಡುತ್ತಿದೆ.
ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಮನೆ ಖಾಲಿ ಮಾಡುತ್ತಿದ್ದಾರೆ. ಆದರೆ ದೊಡ್ಮನೆಯಲ್ಲಿ ಉಳಿದಿರುವ 7 ಸ್ಪರ್ಧಿಗಳಲ್ಲಿ 16 ನೇ ವಾರ ಒಬ್ಬರಲ್ಲ, ಇಬ್ಬರೂ ಎಲಿಮಿನೇಟ್ ಆಗಿ ಹೊರ ಬರಬಹುದು ಎಂಬುದು ಖಚಿತವಾಗಿದೆ.
ವಿಕೇಂಡ್ ನಲ್ಲಿ ಡಬಲ್ ಎಲಿಮಿನೇಷನ್ ಎಂಬುದು ಬಿಗ್ ಬಾಸ್ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈಗಗಾಲೇ ಹನುಮಂತ ಫೈನಲ್ ಪ್ರವೇಶಿಸಿದ್ದು, ರಜತ್, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಭವ್ಯಾ, ಮಂಜು, ಧನರಾಜ್ ಇವರಲ್ಲಿ ಯಾರು ಟಾಪ್ 5ರಲ್ಲಿ ಉಳಿಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್ನಲ್ಲಿ ಧನರಾಜ್ ಆಚಾರ್ಯ ಗೆದ್ದುಕೊಂಡು ಈ ವಾರದ ನಾಮಿನೇಷನ್ನಿಂದ ಸೇಫ್ ಆಗಿದ್ದರು. ಬಿಗ್ಬಾಸ್ ಕೊಟ್ಟ ಕೊನೆಯ ಟಾಸ್ಕ್ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಫಜಲ್ ಗೇಮ್ ಆಡಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಬಿಗ್ಬಾಸ್ ಮಿಡ್ ವೀಕ್ ಎಲಿಮಿನೇಷನ್ ತಡೆ ಹಿಡಿದಿದ್ದರು.
ಇದನ್ನೂ ಓದಿ: ಫಿನಾಲೆಗೆ ಡೇಟ್ ಫಿಕ್ಸ್; ಈ ಸಲ ಬಿಗ್ ಬಾಸ್ ಗೆಲ್ಲುವವರು ಯಾರು ?
ಆದರೆ ವೀಕೆಂಡ್ ಡಬಲ್ ಎಲಿಮಿನೇಷನ್ ಸ್ಪರ್ಧಿಗಳ ಎದೆ ಬಡಿತ ಹೆಚ್ಚಿಸುವಂತೆ ಮಾಡಿದೆ. ನಾಳೆ ನಡೆಯುವ ಕಿಚ್ಚನ ಪಂಚಾಯ್ತಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಲಿದ್ದು, ಏಳು ಸ್ಪರ್ಧಿಗಳ ಪೈಕಿ ಯಾವ ಇಬ್ಬರೂ ಸ್ಪರ್ಧಿಗಳು ತಮ್ಮ ಆಟ ಅಂತ್ಯಗೊಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
LATEST NEWS
ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ
ಭಾರತೀಯರಿಗೆ ಬಿಗ್ ಶಾ*ಕ್; ಸೌದಿ ಅರೇಬಿಯಾದಲ್ಲಿ ಹೊಸ ವೀಸಾ ನಿಯಮಗಳು ಜಾರಿ
ಅಮೆರಿಕ ಗಡಗಡ… ಒಳಾಂಗಣದಲ್ಲಿ ಟ್ರಂಪ್ ಪ್ರಮಾಣವಚನ
ಸುಖ ದಾಂಪತ್ಯ ಜೀವನಕ್ಕೆ ಸರಳ ಸೂತ್ರಗಳು ಇಲ್ಲಿದೆ
WATCH : ಆ ಒಂದು ರೀಲ್ಸ್ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ
ಈ ವಾರ ಮನೆಯಿಂದ ಹೊರ ಬರುವ ಕಂಟೆಸ್ಟೆಂಟ್ಸ್‌ಗಳು ಇವರೇ ?
Trending
- BIG BOSS6 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS4 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS4 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
- BIG BOSS5 days ago
ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?