Connect with us

LATEST NEWS

ಶಾಸಕರ ತರಬೇತಿ ಶಿಬಿರದ ಬಗ್ಗೆ ಪೂರ್ವಾಗ್ರಹಪೀಡಿತ ಹೇಳಿಕೆ ಸರಿಯಲ್ಲ: ಸ್ಪೀಕರ್ ಯು.ಟಿ. ಖಾದರ್

Published

on

ಮಂಗಳೂರು : ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ ನಡೆಸುವ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಧ್ಯಾತ್ಮಿಕ ಚಿಂತಕರಿಗೆ ಆಹ್ವಾನ ನೀಡಿದ್ದೇವೆ. ಎಲ್ಲ ಸಂಪನ್ಮೂಲ ವ್ಯಕ್ತಿಗಳು ಇನ್ನೂ ನಮಗೆ ಸಮ್ಮತಿ ಸೂಚಿಸಿಲ್ಲ. ಕೆಲವರು ಮಾತ್ರ ಒಪ್ಪಿಗೆ ನೀಡಿದ್ದಾರೆ.

ಇವರ ಭಾಗವಹಿಸುವಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವ್ಯತಿರಿಕ್ತವಾದ ಮಾತುಗಳು ಕೇಳಿಬರುತ್ತಿದೆ. ತರಬೇತಿ ಶಿಬಿರವನ್ನು ನೋಡದೇ ಈಗಲೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಮಂಗಳೂರಿನಲ್ಲಿ ನಿನ್ನೆ ಮಾತನಾಡಿದ ಅವರು, ತರಬೇತಿ ಶಿಬಿರದಲ್ಲಿ ಏನಾದರೂ ಕುಂದು- ಕೊರತೆಗಳಿದ್ದಲ್ಲಿ ಸಲಹೆ, ಸೂಚನೆಗಳನ್ನು ನೀಡಿದ್ದಲ್ಲಿ ಸರಿಪಡಿಸುತ್ತೇವೆ.

ಈಗಲೇ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ತಪ್ಪು. ಶ್ರೀ ರವಿಶಂಕರ್ ಗುರೂಜಿಯವರನ್ನು ನಾನು ಭೇಟಿ ಮಾಡಿದ ತಕ್ಷಣ ಶಾಸಕರ ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ ಎಂದು ಗುಲ್ಲೆಬ್ಬಿಸುವುದು ತಪ್ಪು.

ನನಗೆ ಹಿಂದಿನಿಂದಲೂ ಅವರೊಂದಿಗೆ ಆತ್ಮೀಯತೆ ಇದೆ. ಅವರ ಒಡನಾಡಿಯಾಗಿದ್ದೇನೆ. ಅಲ್ಲದೆ ಅವರು ಈಗ ಅಮೆರಿಕದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮದಲ್ಲಿದ್ದಾರೆ. ದೇಶದಲ್ಲಿಯೇ ಇಲ್ಲದ ಅವರ ಬಗ್ಗೆ ಇಲ್ಲಸಲ್ಲದ ಮಾತನಾಡುವುದು ಸರಿಯಲ್ಲ ಎಂದರು.

ಈ ಬಗ್ಗೆ ನನ್ನಲ್ಲಿ ಸ್ಪಷ್ಟೀಕರಣ ಕೇಳದೆ ಹೇಳಿಕೆಗಳನ್ನು ಕೊಡುವವರಿಗೆ ನಾನೇನು ಹೇಳಲು ಹೋಗುವುದಿಲ್ಲ. ಆದ್ದರಿಂದ ತರಬೇತಿ ಕ್ಯಾಂಪ್ ಮುಗಿದ ಬಳಿಕ ಅದರ ಸಾಧಕ- ಬಾಧಕಗಳು, ಸಲಹೆ- ಸೂಚನೆಗಳನ್ನು ನೀಡಿದರೆ ಅದನ್ನು ಸ್ವಾಗತಿಸಲು ತಯಾರಿದ್ದೇವೆ‌ ಎಂದು ಯು.ಟಿ. ಖಾದರ್ ಹೇಳಿದರು‌.

ತರಬೇತಿ ಶಿಬಿರದಲ್ಲಿ ನೂತನ ಶಾಸಕರಿಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲು ಹೆಚ್.ಕೆ.ಪಾಟೀಲ್, ಬಿ.ಎಲ್.ಶಂಕರ್, ಕೃಷ್ಣ ಬೈರೇಗೌಡ, ಟಿ.ಬಿ. ಜಯಚಂದ್ರ ಅವರನ್ನು ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಅವರನ್ನೂ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

Ancient Mangaluru

ಮೇ.10 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನೆ

Published

on

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನಾ ಸಮಾರಂಭ ಮೇ 10 ರಂದು ಮಧ್ಯಾಹ್ನ 12 ಗಂಟೆಗೆ ಮುಲ್ಕಿಯ ಲಘುವಿ ಕಾಂಪ್ಲೆಕ್ಸ್ ಮುಖ್ಯರಸ್ತೆ ಪಕ್ಷಿಕೆರೆಯಲ್ಲಿ ನಡೆಯಲಿದೆ.

ಮುಲ್ಕಿ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಪಕ್ಷಿಕೆರೆ ಸಂತ ಜುದರ ಪುಣ್ಯಕ್ಷೇತ್ರ ಧರ್ಮಗುರು ಅತಿ ವಂದನೀಯ ಗುರುಗಳು ಮೆಲ್ವಿನ್ ನೊರೊಹ್ನಾ ದ್ವೀಪ ಪ್ರಜ್ವಲಿಸಲಿದ್ದಾರೆ. ಪಕ್ಷಿಕೆರೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀ ಕೆ.ಸೀತಾರಾಮ್ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಗಣಕೀಕೃತ ಬ್ಯಾಂಕಿಂಗ್ ಗೆ ಚಾಲನೆ ನೀಡಲಿದ್ದಾರೆ. ಪಕ್ಷಿಕೆರೆ, ಎಸ್ ಕೋಡಿ, ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಹರಿಪಾದೆ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ಎರಡನೇ ಸ್ಥಾನ

ಸಮಾಜಸೇವಕ ಧನಂಜಯ ಶೆಟ್ಟಿಗಾರ್ ಇ-ಮುದ್ರಾಂಕ ಸೇವೆಗೆ, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಆವರ್ತನ ಠೇವಣಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ ಉಳಿತಾಯ ಖಾತೆಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಟ್ಟಡದ ಮಾಲಕ ಶ್ರೀನಿವಾಸ ಕೋಟ್ಯಾನ್ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.

Continue Reading

FILM

ಪ್ರಜ್ವಲ್ ಪ್ರಕರಣದ ನಡುವೆ ಖಾಸಗಿ ವೀಡಿಯೋ ವೈರಲ್; ಜ್ಯೋತಿ ರೈ ಹೇಳಿದ್ದೇನು?

Published

on

ಬೆಂಗಳೂರು : ಅತ್ತ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ. ಈ ನಡುವೆ ಖ್ಯಾತ ನಟಿ ಜ್ಯೋತಿ ರೈ ಅವರದ್ದೆನ್ನಲಾದ ಖಾಸಗಿ ವೀಡಿಯೋವೊಂದು ವೈರಲ್ ಆಗಿದೆ. ಒಂದಷ್ಟು ಅಶ್ಲೀಲ ವೀಡಿಯೋಗಳೂ ಸದ್ದು ಮಾಡುತ್ತಿವೆ.
ಜ್ಯೋತಿ ರೈ ಕನ್ನಡ ಕಿರುತೆರೆಯಲ್ಲಿ ಫೇಮಸ್ ನಟಿ. ಅಲ್ಲದೇ ತೆಲುಗು ಧಾರಾವಾಹಿಗಳಿಗೂ ಲಗ್ಗೆ ಇಟ್ಟಿದ್ದಾರೆ. ಇತ್ತೀಚೆಗೆ ಫೋಟೋಗಳಿಂದ ಭಾರೀ ಸುದ್ದಿಯಾಗುತ್ತಿದ್ದಾರೆ. ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಅವರದ್ದೆನ್ನಲಾದ ಖಾಸಗಿ ವೀಡಿಯೋಗಳು ಭಾರೀ ವೈರಲ್ ಆಗಿದೆ. ಫೇಸ್ ಬುಕ್, ವಾಟ್ಸ್ ಆ್ಯಪ್, ಟ್ವಿಟ್ಟರ್ ಖಾತೆಗಳಲ್ಲಿ ಅಶ್ಳೀಲ ಫೋಟೋ, ವೀಡಿಯೋಗಳು ಹರಿದಾಡುತ್ತಿವೆ. ಈ ಬಗ್ಗೆ ಇದೀಗ ಮೌನ ಮುರಿದಿರುವ ನಟಿ ಸ್ಪಷ್ಟನೆ ನೀಡಿದ್ದಾರೆ.

ಏನಂದ್ರು ಜ್ಯೋತಿ ರೈ?

ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡು ಪಡ್ಡೆಗಳ ನಿದ್ದೆಗೆಡಿಸುತ್ತಿದ್ದ ನಟಿ ಜ್ಯೋತಿ ರೈ ಅವರದ್ದೆನ್ನಲಾದ ಅಶ್ಲೀಲ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ಸ್ವತಃ ಜ್ಯೋತಿ ರೈ ಸ್ಪಷ್ಟನೆ ನೀಡಿದ್ದಾರೆ. ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ.
ನಾನು ಅಪರಿಚಿತ ವ್ಯಕ್ತಿಗಳಿಂದ ಈ ಸಂದೇಶಗಳನ್ನು ಸ್ವೀಕರಿಸಿ ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನ ಖ್ಯಾತಿ ಮತ್ತು ನನ್ನ ಕುಟುಂಬದ ಪ್ರತಿಷ್ಠೆಗೆ ಅಪಾಯದಲ್ಲಿರುವುದರಿಂದ ಈ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಸರಿಯಾದ ಮತ್ತು ತ್ವರಿತ ಕ್ರಮವನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ. ಅಲ್ಲದೆ, ಈ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ. ನಿಮ್ಮ ಪರಿಶೀಲನೆ ಮತ್ತು ತನಿಖೆಗಾಗಿ ನಾನು ಎಲ್ಲಾ ಬಳಕೆದಾರರ ಯೂಸರ್ ಐಡಿಗಳನ್ನು ಲಗತ್ತಿಸಿದ್ದೇನೆ.

ಈ ‘ಅಜ್ಞಾತ ಬಳಕೆದಾರರ’ ವಿರುದ್ಧ ಈ ಕೆಳಗಿನ ಅಪರಾಧಗಳನ್ನು ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 66 (ಇ) ಅಡಿಯಲ್ಲಿ ಖಾಸಗಿತನದ ಉಲ್ಲಂಘನೆಗಾಗಿ ಶಿಕ್ಷೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000, 2000 ರ ಸೆಕ್ಷನ್ 67 ರ ಅಡಿಯಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸಲು ಅಥವಾ ರವಾನಿಸಿದ ಕಾರಣ ಶಿಕ್ಷೆ, ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 67 (ಎ) ಅಡಿಯಲ್ಲಿ ಲೈಂಗಿಕ ಕ್ರಿಯೆಯನ್ನು ಒಳಗೊಂಡಿರುವ ವಸ್ತುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸಿದ ಕಾರಣ ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 509 ರ ಅಡಿಯಲ್ಲಿ ಮಹಿಳೆಯ ಘನತೆಯನ್ನು ಅವಮಾನಿಸುವ ಉದ್ದೇಶದಿಂದ ಪದಗಳು ಅಥವಾ ಕೆಲಸ ಮಾಡಿರುವ ಕಾರಣ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತೆಲುಗು ನಿರ್ದೇಶಕನ ಕೈ ಹಿಡಿದ ಜ್ಯೋತಿ:

ಜ್ಯೋತಿ ರೈ ತೆಲುಗು ನಿರ್ದೇಶಕ ಸುಕುಮಾರ್ ಪೂರ್ವಜ್ ಅವರೊಂದಿಗೆ ಸಹ ಜೀವನ ನಡೆಸುತ್ತಿದ್ದ ಬಗ್ಗೆ ಗಾಸಿಪ್ ಹರಿದಾಡುತ್ತಿತ್ತು. ಆದದ ಬಳಿಕ ವಿವಾಹವಾಗಿರುವ ಬಗ್ಗೆ ಸ್ವತಃ ತಿಳಿಸಿ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ನಟಿ ಜ್ಯೋತಿ ರೈ ತನ್ನ 20 ನೇ ವಯಸ್ಸಿನಲ್ಲಿ ಮೊದಲ ಮದುವೆಯಾಗಿದ್ದರು. ನಂತರ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಆಕೆಗೆ 11 ವರ್ಷದ ಮಗನಿದ್ದಾನೆ.

Continue Reading

LATEST NEWS

ನಿರ್ಜನ ಪದೇಶದಲ್ಲಿ ಮಧ್ಯರಾತ್ರಿ ಎಣ್ಣೆ ಪಾರ್ಟಿ ..! ಬಾಟಲಿಯಲ್ಲಿ ಚುಚ್ಚಿ ಯುವಕನ ಕೊಲೆ.!!

Published

on

ಗದಗ/ಮಂಗಳೂರು: ರಾತ್ರಿ ಪೂರ್ತಿ ಎಣ್ಣೆ ಪಾರ್ಟಿ ಮಾಡಿ ಕೊನೆಗೆ ಜೊತೆಯಲ್ಲಿದ್ದವನನ್ನೇ ಕೊಲೆಗೈದ ಘಟನೆ ಮುಂಡರಗಿ ತಾಲೂಕಿನ ಕೆಹೆಚ್‌ಬಿ ಕಾಲೋನಿಯಲ್ಲಿ ನಡೆದಿದೆ.

subhash nayaka

ಮುಂದೆ ಓದಿ..; ಮಂಗಳೂರು: ಸರಕಾರಿ ಹಾಸ್ಟೆಲ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ.!!

ಮೂವರು ಯುವಕರು ನಿರ್ಜನ ಪ್ರದೇಶದಲ್ಲಿ ಗುಂಡು ಪಾರ್ಟಿಯಲ್ಲಿ ತೊಡಗಿದ್ದರು. ಆದರೆ ಅದೇ ದಿನ ಮಧ್ಯರಾತ್ರಿ ಸುಭಾಷ್ ನಾಯಕ(23) ಎಂಬಾತನ ಕೊಲೆಯಾಗಿದೆ. ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಪಾರ್ಟಿಯಲ್ಲಿದ್ದ ಇಬ್ಬರು ಘಟನೆ ಬಳಿಕ ತಲೆಮರಿಸಿಕೊಂಡಿದ್ದಾರೆ. ಈ ಬಗ್ಗೆ ಮಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ತಲೆಮರಿಸೊಕೊಂಡವರಿಗೆ ಶೋಧ ಕಾರ್ಯ ನಡೆಯುತ್ತಿದೆ.

Continue Reading

LATEST NEWS

Trending