Connect with us

    DAKSHINA KANNADA

    ಕುಲಪತಿ ಹುದ್ದೆ ಕೊಡಿಸುವುದಾಗಿ ದುಡ್ಡು ಪಡೆದು ವಂಚನೆ : ನ್ಯಾಯಾಂಗ ಬಂಧನದಲ್ಲಿದ್ದ ಪ್ರಸಾದ್ ಗೆ ನ್ಯಾಯಾಲಯದಿಂದ ಜಾಮೀನು..! 

    Published

    on

    ಮಂಗಳೂರು: ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿವಿಯ ಪ್ರಾಧ್ಯಾಪಕ ಜಯಶಂಕರ್ ಅವರಿಗೆ ೧೭.೫೦ ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ಹುದ್ದೆಯನ್ನು ಕೊಡಿಸದೇ ಹಣವನ್ನೂ ಮರಳಿಸದೇ ಜೀವ ಬೆದರಿಕೆ ಹಾಕಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರಗೆ ನ್ಯಾಯಾಲಯದಿಂದ   ಜಾಮೀನು ಮಂಜೂರು ಆಗಿದೆ.ನನ್ನನ್ನು ವಿನಾ ಕಾರಣ ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಒಬ್ಬ ಸರಕಾರಿ ಪ್ರಾಧ್ಯಾಪಕ ಕುಲಪತಿ ಹುದ್ದೆಗೆ ಲಂಚ ಕೊಡುವುದೆಂದರೆ ಅವರು ಕೂಡಾ ಅಪರಾಧ ಎಸಗಿದಂತೆ ಆಗಿದೆ.

    ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರಸಾದ್ ತನ್ನ ವಕೀಲರ ಮೂಲಕ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಮಂಗಳೂರಿನ ೭ನೇ ಜೆ ಎಂ ಎಫ್‌ಸಿ ನ್ಯಾಯಾಲಯ ಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿದೆ.

    ತನಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರ ಪರಿಚಯವಿದೆ. ಅವರ ಪ್ರಭಾವವನ್ನು ಬಳಸಿಕೊಂಡು ತಾನು ಹುದ್ದೆ ಕೊಡಿಸುವುದಾಗಿ ಹೇಳಿ ಪ್ರಸಾದ್ ಅತ್ತಾವರ ವಂಚನೆ ಎಸಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

    ಅಲ್ಲದೆ ಪ್ರಸಾದ್ ಅತ್ತಾವರ್‌ ವಿವಿಧ ರಾಜಕೀಯ ಗಣ್ಯರೊಂದಿಗೆ ಇರುವ ಭಾವಚಿತ್ರವನ್ನು ಕೂಡಾ ಸಾಮಾಜಿಕ ತಾಲ ತಾಣದಲ್ಲಿ ಬಿಡುಗಡೆಗೊಳಿಸಲಾಗಿತ್ತು.

    ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ್‌ನನ್ನು ಬಂಧಿಸಲಾಗಿತ್ತು. ಇದೀಗ ಪ್ರಸಾದ್ ಅತ್ತಾವರ್‌ಗೆ ಮಂಗಳೂರಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    BANTWAL

    ಉಳಾಯಿಬೆಟ್ಟು ದರೋಡೆ ಪ್ರಕರಣ : 10 ಜನರ ಬಂಧನ

    Published

    on

    ಜೂನ್ 21 ರಂದು ಉಳಾಯಿಬೆಟ್ಟಿನ ಪೆರ್ಮಂಕಿಯ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣದ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 7.45 ರ ಸುಮಾರಿಗೆ ಮುಸುಕುಧಾರಿ ವ್ಯಕ್ತಿಗಳು ಪದ್ಮನಾಭ ಕೋಟ್ಯಾನ್ ಅವರಿಗೆ ಚೂರಿಯಿಂದ ಹಲ್ಲೆ ಮಾಡಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.

    ಗುತ್ತಿಗೆದಾರ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆಗೆ ನುಗ್ಗಿದ್ದ ದರೋಡೆಕೋರರು ಇಲ್ಲಿ ಅಪಾರ ಪ್ರಮಾಣದ ಹಣ ಹಾಗೂ ನಗದು ಅಡಗಿಸಿ ಇಡಲಾಗಿದೆ ಎಂಬ ಹಿನ್ನೆಲೆಯಲ್ಲಿ ದರೋಡೆ ನಡೆಸಿದ್ದಾರೆ. ದರೋಡೆ ನಡೆದ ಬಳಿಕ ಮನೆಯ ಸಿಸಿ ಟಿವಿ ಪರಿಶೀಲಿಸಿದ ಪೊಲೀಸರಿಗೆ ಇದು ಉದ್ಯಮಿಯ ಪರಿಚಯದವರದೇ ಕೃತ್ಯ ಎಂಬುವುದು ಕೂಡಾ ಅರ್ಥವಾಗಿದೆ. ಹೀಗಾಗಿ ಮೊದಲಿಗೆ ಉದ್ಯಮಿಯ ಜೊತೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನೀರುಮಾರ್ಗದ ವಸಂತ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ. ಅರೋಪಿ ವಸಂತ ಜೊತೆಯಲ್ಲಿ ನೀರುಮಾರ್ಗದ ಇನ್ನೋರ್ವ ಆರೋಪಿ ರಮೇಶ್ ಪೂಜಾರಿ ಹಾಗೂ ಅಡ್ಯನಡ್ಕದ ರೇಮಂಡ್ ಡಿಸೋಜಾ ಎಂಬವರು ಮಾಹಿತಿದಾರರಾಗಿ ಕೆಲಸ ಮಾಡಿದ್ದಾರೆ. ಇವರ ಜೊತೆ ಕಾಸರಗೋಡು ಜಿಲ್ಲೆಯ ಉಪ್ಪಳದ ಬಾಲಕೃಷ್ಣ ಶೆಟ್ಟಿ ಕೂಡಾ ಕೈ ಜೋಡಿಸಿ ಕೇರಳದ ದರೋಡೆ ತಂಡಕ್ಕೆ ಮಾಹಿತಿ ರವಾನಿಸಿದ್ದಾನೆ.

    ಈ ನಾಲ್ಕು ಆರೋಪಿಗಳು ನೀಡಿದ ಮಾಹಿತಿ ಪ್ರಕಾರ, ಕೇರಳದ ಬಿಜು ಹಾಗೂ ಸತೀಶ್ ಬಾಬು ಎಂಬ ಕ್ರಿಮಿನಲ್ ಗಳು ತಮ್ಮ ಎರಡು ತಂಡದ ಸದಸ್ಯರನ್ನು ದರೋಡೆ ನಡೆಸಲು ಮಂಗಳೂರಿಗೆ ಕಳುಹಿಸಿದ್ದಾರೆ. ಈ ದರೋಡೆಯ ಸಂಚಿನಲ್ಲಿ ಒಟ್ಟು ಹದಿನೈದು ಜನರು ಭಾಗಿಯಾಗಿದ್ದು, ಸದ್ಯ ಹತ್ತು ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಜಾಕಿರ್, ವಿನೋಜ್ ಪಿಕೆ, ಸಜೀಶ್, ಶಿಜೋ ದೇವಸ್ಸಿ, ಸತೀಶ್ ಬಾಬು, ಬಿಜು ಕೇರಳದವರಾಗಿದ್ದರೆ, ಉಳಿದ ನಾಲ್ವರೂ ಕರ್ನಾಟಕದವರಾಗಿದ್ದಾರೆ.

    ಉದ್ಯಮಿ ಮನೆಯಲ್ಲಿ ಕೋಟ್ಯಂತರ ರೂಪಾಯಿಯ ಚಿನ್ನ ಹಾಗೂ ನಗದು ಇದೆ ಎಂದು ಈ ದರೋಡೆಗೆ ಸಂಚು ರೂಪಿಸಲಾಗಿತ್ತು. ದರೋಡೆ ನಡೆಸಿದ ಆರೋಪಿಗಳು ಬಚ್ಚಿಟ್ಟ ಚಿನ್ನಾಭರಣ ನೀಡುವಂತೆ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರಿಗೆ ಚಾಕುವಿನಿಂದ ಹಲ್ಲೆ ಕೂಡಾ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಹಾಗೂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು

    Continue Reading

    DAKSHINA KANNADA

    ಈ ಗಿಡ ನಿಮ್ಮ ಮನೆಯಲ್ಲಿದ್ದರೆ, ಜೇಬು ಫುಲ್ ಖಾಲಿ ಖಾಲಿ..!

    Published

    on

    ಕಳ್ಳಿ ಗಿಡ ಮುಳ್ಳುಗಳಿಂದ ಕೂಡಿದ್ದರೂ, ಬಹಳ ಆಕರ್ಷಕ ಮತ್ತು ಸುಂದರವಾಗಿರುತ್ತದೆ. ಹಾಗಾಗಿ ಜನರು ಮನೆಯಲ್ಲಿ ಕಳ್ಳಿ ಗಿಡ ಇಡಲು ಬಯಸುತ್ತಾರೆ. ಆದರೆ ಮನೆಯಲ್ಲಿ ಕಳ್ಳಿ ಗಿಡ ನೆಡುವುದು ಶುಭವಲ್ಲ. ಈ ಸಸ್ಯವನ್ನು ಎಂದಿಗೂ ಮಲಗುವ ಕೋಣೆ ಅಥವಾ ಪೂಜಾ ಕೋಣೆಯಲ್ಲಿ ಇಡಬಾರದು. ಮನೆಯಲ್ಲಿ ಕಳ್ಳಿ ಗಿಡಗಳನ್ನು ಹೆಚ್ಚು ನೆಡಬೇಡಿ. ಒಣಗಿದ ಕಳ್ಳಿ ಗಿಡವನ್ನು ಸಹ ಮನೆಯಲ್ಲಿ ಇಡಬಾರದು. ಕಳ್ಳಿ ಗಿಡವನ್ನು ಮನೆಯಲ್ಲಿ ಏಕೆ ನೆಡಬಾರದು ಎಂಬುದನ್ನು ತಿಳಿಯೋಣ.

    ನಕಾರಾತ್ಮಕ ಶಕ್ತಿ

    ಕಳ್ಳಿ ಗಿಡಗಳಲ್ಲಿನ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಮುಳ್ಳುಗಳನ್ನು ಅಡೆತಡೆ ಮತ್ತು ಸಂಘರ್ಷಗಳ ಪ್ರತೀಕವೆಂದು ಹೇಳಲಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಅಶಾಂತಿ ಮತ್ತು ಜಗಳ ಉಂಟಾಗುವ ಸಾಧ್ಯತೆಯಿದೆ.

    ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು

    ಮನೆಯಲ್ಲಿ ಕಳ್ಳಿ ಗಿಡಗಳನ್ನು ಇಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಳ್ಳಿ ಗಿಡದಲ್ಲಿನ ಮುಳ್ಳನ್ನು ಮುಟ್ಟುವುದರಿಂದ ಗಾಯವಾಗುವುದರ ಜೊತೆಗೆ ತಲೆನೋವು, ಆಯಾಸ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

    ಸಂಬಂಧಗಳಲ್ಲಿ ಒತ್ತಡ

    ಈ ಗಿಡದಿಂದ ಸಂಬಂಧಗಳಲ್ಲಿ ಒತ್ತಡ ಮತ್ತು ಮನಸ್ತಾಪ ಉಂಟಾಗಬಹುದು. ಮುಳ್ಳುಗಳನ್ನು ಕೋಪದ ಸಂಕೇತವೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಸದಸ್ಯರ ನಡುವೆ ಉದ್ವಿಗ್ನತೆ ಸೃಷ್ಟಿಯಾಗುತ್ತದೆ.

    ಆರ್ಥಿಕ ಸಮಸ್ಯೆ

    ಮನೆಯಲ್ಲಿ ಕಳ್ಳಿ ಗಿಡವನ್ನು ನೆಡುವುದರಿಂದ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಮುಳ್ಳುಗಳನ್ನು ಅಡೆತಡೆಗಳ ಸಂಕೇತವೆಂದು ಹೇಳಲಾಗುತ್ತದೆ. ಇದರಿಂದಾಗಿ ನಿಮಗೆ ಧನ ಲಾಭವಾಗದೇ ಇರಬಹುದು. ಹಾಗಾಗಿ ನೀವು ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು.

    Continue Reading

    DAKSHINA KANNADA

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಪ್ಪಿನಂಗಡಿ ಶಾಖೆ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    Published

    on

    ಮಂಗಳೂರು  : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಉಪ್ಪಿನಂಗಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ, ಜೆಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪಿನಂಗಡಿ,  ಜೆಸಿಐ ಉಪ್ಪಿನಂಗಡಿ ಇವರ ಸಹಯೋಗದೊಂದಿಗೆ ಹಲಸು ಹಬ್ಬ – 2024 ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಜುಲೈ 7 ರಂದು ರವಿವಾರ ಬೆಳಗ್ಗೆ ಸಮಯ 9.30 ರಿಂದ ಅಪರಾಹ್ನ 2 ಗಂಟೆಯ ವರೆಗೆ ಉಪ್ಪಿನಂಗಡಿ ಎಚ್. ಎಮ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.


    ಈ ವೈದ್ಯಕೀಯ ಶಿಬಿರದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆ ನಾಟೆಕಲ್ ದೇರಳಕಟ್ಟೆ ಇವರ ನುರಿತ ವೈದರ ತಂಡದವರಿಂದ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ಮಧುಮೇಹ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ , ಕೀಲು ಮತ್ತು ಗಂಟು ನೋವು ತಪಾಸಣೆ, ಮೂಲವ್ಯಾಧಿ ತಪಾಸಣೆ, ಸ್ತ್ರೀ ಮತ್ತು ಪ್ರಸೂತಿ ತಪಾಸಣೆ, ಉಚಿತ ಔಷಧಿ ವಿತರಣೆ, ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ಹಾಗೂ ಇತರ ವೈದ್ಯಕೀಯ ಸೌಲಭ್ಯವಿರಲಿದೆ.

    ಇದನ್ನೂ ಓದಿ : ಅತಿಯಾದ ಕೆಲಸದ ಒತ್ತಡ..! ರೋಬೋಟ್ ಸೂಸೈ*ಡ್‌..?

    ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ  ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

     

    Continue Reading

    LATEST NEWS

    Trending