Connect with us

  LATEST NEWS

  ಮದುವೆಗೂ ಮೊದಲು ಹುಡುಗರು ಹುಡುಗಿಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ!

  Published

  on

  ಮಂಗಳೂರು: ಮದುವೆ, ಸಂಸಾರ ಹಾಗೂ ಮಕ್ಕಳು ಎಲ್ಲವೂ ಸರಿಯಾದ ಸಮಯಕ್ಕೆ ಆದರೇನೇ ಚಂದ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ಮದುವೆಯನ್ನು ಮುಂದಕ್ಕೆ ಹಾಕುವವರೇ ಹೆಚ್ಚಾಗಿದ್ದಾರೆ. ಮದುವೆಗೆ ವಧು ಹುಡುಕುತ್ತಿರುವಾಗ, ಮನೆಯ ಹಿರಿಯರು ಹುಡುಗಿಯ ಮನೆಗೆ ಹೋಗುವ ಸಂಪ್ರದಾಯವಿದೆ. ಹುಡುಗಿ ನೋಡುವ ಶಾಸ್ತ್ರದ ಬಳಿಕ ಹುಡುಗ ಮತ್ತು ಹುಡುಗಿ ಪರಸ್ಪರ ಮಾತನಾಡಲು ಅವಕಾಶವಿರುತ್ತದೆ. ಈ ವೇಳೆ ಆಕೆಯ ಬಳಿ ಈ ಪ್ರಶ್ನೆಗಳನ್ನು ಕಡ್ಡಾಯವಾಗಿ ಕೇಳಲೇ ಬೇಕಂತೆ. ಹುಡುಗಿಯು ನೀಡುವ ಉತ್ತರವು ಈಕೆಯು ತನಗೆ ಸಂಗಾತಿಯಾಗಲು ಅರ್ಹಳೇ ಎನ್ನುವುದಕ್ಕೆ ಸ್ಪಷ್ಟತೆಯೂ ಸಿಗುತ್ತದೆಯಂತೆ.

  ಯಾವ ರೀತಿಯ ಜೀವನ ಸಂಗಾತಿಯ ಬೇಕೆಂದು ಪ್ರಶ್ನಿಸಿ

  ತಮ್ಮ ಜೀವನ ಸಂಗಾತಿಯ ಕುರಿತು ಎಲ್ಲರೂ ಕನಸುಗಳನ್ನು ಕಟ್ಟಿರುತ್ತಾರೆ. ಹೀಗಾಗಿ ಹುಡುಗರು ಹುಡುಗಿಯ ಬಳಿ ಯಾವ ರೀತಿಯ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಪಡೆಯಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳುವುದು ಒಳ್ಳೆಯದು. ಆಕೆಯ ಉತ್ತರಕ್ಕೆ ತಕ್ಕಂತೆ ನೀವಿದ್ದರೆ ನೀವು ಅವರಿಗೆ ಸರಿಯಾದ ಸಂಗಾತಿಯಾದಂತೆಯೇ ಎನ್ನುವುದು ನಿಮಗೆ ತಿಳಿಯುತ್ತದೆ.

  ಇಷ್ಟ ಕಷ್ಟಗಳ ಬಗ್ಗೆ ತಿಳಿಯಿರಿ

  ಹುಡುಗ ಹುಡುಗಿಯ ಮಾತುಕತೆಯ ವೇಳೆಯಲ್ಲಿ ತನ್ನ ಇಷ್ಟ ಕಷ್ಟಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು. ಹುಡುಗಿಯ ಇಷ್ಟವೇನು ಎನ್ನುವುದು ತಿಳಿಯುವುದು ಮುಖ್ಯ. ಇಬ್ಬರ ಇಷ್ಟ ಕಷ್ಟಗಳು ಒಂದೇಯಾಗಿದ್ದರೆ ಮದುವೆಯ ನಿರ್ಧಾರಕ್ಕೆ ಹೋಗಬಹುದು. ಒಂದು ವೇಳೆ ಇಬ್ಬರ ಇಷ್ಟಗಳು ತದ್ವಿರುದ್ದವಾಗಿದ್ದರೆ ಸಂಬಂಧವನ್ನು ಮುಂದುವರೆಸುವುದೇ ಬೇಡವೇ ಎನ್ನುವುದರ ಬಗ್ಗೆ ನಿಮಗೆ ಸ್ಪಷ್ಟ ಚಿತ್ರಣವು ಸಿಗುತ್ತದೆ.

  ಸೇವಿಸುವ ಆಹಾರದ ಬಗ್ಗೆ ಮಾತನಾಡಿ

  ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ನಿಮ್ಮ ಭವಿಷ್ಯದ ಜೀವನ ಸಂಗಾತಿಯ ಬಳಿ ಸಸ್ಯಾಹಾರಿ ಅಥವಾ ಮಾಂಸಾಹಾರಿಯೇ? ಎನ್ನುವ ಪ್ರಶ್ನೆಗಳನ್ನು ಕೇಳಲೇಬೇಕು. ಇಬ್ಬರ ಆಹಾರ ಹಾಗೂ ಅಭಿರುಚಿಗಳು ಬೇರೆ ಬೇರೆಯಾಗಿದ್ದರೆ ಬದುಕು ಕಷ್ಟವೆನಿಸುತ್ತದೆ.

  ಭವಿಷ್ಯದ ಯೋಜನೆಯ ಬಗ್ಗೆ ಪ್ರಶ್ನಿಸಿ

  ಈಗಿನ ಕಾಲದಲ್ಲಿ ಬಹುತೇಕ ಹುಡುಗಿಯರು ಉದ್ಯೋಗದಲ್ಲಿರುತ್ತಾರೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಕೆಲವೊಮ್ಮೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಇರಬಹುದು. ಆದರೆ ಕೆಲ ವಿವಾಹದ ಬಳಿಕ ಉದ್ಯೋಗಕ್ಕೆ ಹೋಗಬೇಕು, ಹೀಗೆ ಜೀವನ ನಡೆಯಬೇಕು ಎಂದು ಕೊಂಡಿರುತ್ತಾರೆ. ಪರಸ್ಪರ ಪ್ರಶ್ನಿಸಿ ಉತ್ತರ ಕಂಡುಕೊಂಡರೆ ಇಬ್ಬರಿಗೂ ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಇಬ್ಬರ ಜೀವನದ ಗುರಿಗಳು ವಿರುದ್ಧ ದಿಕ್ಕಿನಲ್ಲಿದ್ದರೆ ಜೊತೆಯಾಗಿ ಬದುಕಲು ಕಷ್ಟವಾಗಬಹುದು. ಈ ಪ್ರಶ್ನೆಯನ್ನು ಮದುವೆಗೂ ಮುಂಚಿತವಾಗಿ ಕೇಳುವುದು ಸೂಕ್ತ.

  LATEST NEWS

  ವಿದ್ಯುತ್ ತಂತಿಯಲ್ಲಿ ಜೀ*ವ ಕಳೆದುಕೊಂಡ ಹೆಬ್ಬಾವು..!

  Published

  on

  ಮಂಗಳೂರು ( ಉಳ್ಳಾಲ ) : ವಿದ್ಯುತ್ ಕಂಬ ಏರಿದ ಹೆಬ್ಬಾವೊಂದು ವಿದ್ಯುತ್ ಪ್ರವಹಿಸಿ ಸಾ*ವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಈ ಘಟನೆ ನಡೆದಿದ್ದು, ಮುಂಜಾನೆ ವಿದ್ಯುತ್ ಶಾರ್ಟ್ ಆದ ಸದ್ದು ಕೇಳಿ ಹೊರ ಬಂದ ಮನೆಯವರಿಗೆ ಈ ದೃಶ್ಯ ಕಂಡು ಬಂದಿದೆ.

   

  ಬೃಹತ್ ಗಾತ್ರದ ಈ ಹೆಬ್ಬಾವು ವಿದ್ಯುತ್ ಕಂಬ ಏರಿದ್ದು ಯಾರೂ ಗಮನಿಸಿರಲಿಲ್ಲ. ಮಳೆಯ ಕಾರಣದಿಂದ ಮನೆಯೊಳಗೆ ಇದ್ದ ಜನರಿಗೆ ಶಾರ್ಟ್ ಸರ್ಕ್ಯೂಟ್ ಸದ್ದಿನಿಂದ ವಿಚಾರ ಗೊತ್ತಾಗಿದೆ. ಮಾಹಿತಿ ಪಡೆದು ಆಗಮಿಸಿದ ವಿದ್ಯುತ್ ಇಲಾಖೆಯ ಸಿಬ್ಬಂದಿ ಹೆಬ್ಬಾವಿನ ಕಳೇಬರವನ್ನು ಕಂಬದಿಂದ ತೆರವು ಮಾಡಿದ್ದಾರೆ.

  Continue Reading

  DAKSHINA KANNADA

  ಕಳ್ಳರನ್ನು ಹಿಡಿದ 60 ರ ವೃದ್ಧೆ..!

  Published

  on

  ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರಿನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

  ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

  ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  Continue Reading

  DAKSHINA KANNADA

  ಜುಲೈ 16. ದ.ಕ, ಉಡುಪಿ ಶಾಲಾ ಕಾಲೇಜಿಗೆ ರಜೆ..!

  Published

  on

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು,ಸೋಮವಾರ ಜುಲೈ 15 ರಂದು ರಜೆ ನೀಡಲಾಗಿತ್ತು. ನಾಳೆ (ಜುಲೈ 16 )ಕೂಡಾ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 15 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.

  ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಕೆಲೆವಡೆ ಶಾಲೆಯ ಗೋಡೆ ಕುಸಿತವಾಗಿದ್ದು, ಕೆಲವೆಡೆ ಗಾಳಿಗೆ ಶಾಲೆಯ ಹೆಂಚು ಹಾರಿ ಹೋಗಿದೆ. ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿದೆ.

  ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 16 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
  ಭಾನುವಾರದಿಂದ ಶಾಲೆಗೆ ನಿರಂತರ ರಜೆ ಅನುಭವಿಸಿದ ಮಕ್ಕಳಿಗೆ ಬುಧವಾರ ಮೊಹರಂ ಪ್ರಯುಕ್ತ ಸರ್ಕಾರಿ ರಜೆ ಕೂಡ ಸಿಗಲಿದೆ. ಗುರುವಾರದಿಂದ ಮಳೆ ಕಡಿಮೆ ಆಗುವ ಸೂಚನೆ ಇದೆ.

  Continue Reading

  LATEST NEWS

  Trending