Thursday, September 29, 2022

ಬೆಂಗಳೂರು: ಸಾರ್ವಜನಿಕರಿಗೆ ಕಿರಿಕಿರಿ ಆಗುವ ಧ್ವನಿವರ್ಧಕ ತೆರವಿಗೆ ಡಿಜಿಪಿ ಸೂಚನೆ

ಬೆಂಗಳೂರು:ಸಾರ್ವಜನಿಕರಿಗೆ ಕಿರಿಕಿರಿ ಆಗುವ ಧ್ವನಿವರ್ಧಕ ತೆರವಿಗೆ ಡಿಜಿಪಿ ಸೂಚನೆ

ರಾಜ್ಯದ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಶಬ್ಧ ಮಾಲಿನ್ಯದಿಂದ ತೊಂದರೆ ಉಂಟಾಗಿದ್ದರೆ, ಪರಿಶೀಲಿಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಸೂಚಿಸಿದೆ.

ರಾಜ್ಯಾದ್ಯಂತ ಮಸೀದಿಗಳಲ್ಲಿ ಅನಧಿಕೃತವಾಗಿ ಧ್ವನಿವರ್ಧಕ ಅಳವಡಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗಿದ್ದು, ಕೂಡಲೇ ತೆರವುಗೊಳಿಸಬೇಕು.

ಮುಸ್ಲಿಮರು ಸಲ್ಲಿಸುವ ಪ್ರಾರ್ಥನೆಯಲ್ಲಿ ಹೆಚ್ಚು ಧ್ವನಿ ಮಾಡುತ್ತಿರುವ ಧ್ವನಿವರ್ಧಕಗಳ ಮೇಲೆ ನಿರ್ಬಂಧ ಹೇರುವಂತೆ ಡಿಜಿಪಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಜಿಪಿ ಪರವಾಗಿ ಎಐಜಿಪಿ ಸುತ್ತೋಲೆ ಹೊರಡಿಸಿದ್ದಾರೆ.

ಬೆಂಗಳೂರಿನ ವಕೀಲ ಹರ್ಷ ಮುತಾಲಿಕ್ ಮನವಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ರಥಬೀದಿಯ ಶಾರದಾ ಮಹೋತ್ಸವದಲ್ಲಿ ಸಾಮೂಹಿಕ ಕುಂಕುಮಾರ್ಚನೆ

ಮಂಗಳೂರು: ನಗರದ ರಥಬೀದಿಯಲ್ಲಿ 100ನೇ ವರ್ಷಾಚರಣೆ ಸಂಭ್ರಮ ಆಚರಿಸುತ್ತಿರುವ ಮಂಗಳೂರು ಶ್ರೀ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಸಹಸ್ರ ಚಂಡಿಕಾ ಮಹಾಯಾಗವನ್ನು ಆಯೋಜಿಸಲಾಗಿದೆ.ಇದರ ಅಂಗವಾಗಿ ಸಾಮೂಹಿಕ ಕುಂಕುಮಾರ್ಚನೆ ಕೂಡಾ ನೆರವೇರಿಸುತ್ತಿದ್ದು ನೂರಾರು ಮಾತೃವರ್ಗ...

ಮಂಗಳೂರು: ಖಾಸಗಿ ಬಸ್ಸುಗಳಲ್ಲಿ ಕನ್ನಡ ನಾಮಫಲಕ ಇನ್ಮುಂದೆ ಕಡ್ಡಾಯ-ತುಳು ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು: ಮಂಗಳೂರಿನ ಬಸ್‌ಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದನ್ನು ಆಕ್ಷೇಪಿಸಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ವತಿಯಿಂದ ಇಂದು ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರು...

ಮುಂದಿನ ವರ್ಷ ಅ.1ರಿಂದ ಕಾರ್‌ನಲ್ಲಿ 6 ಏರ್‌ಬ್ಯಾಗ್ಸ್‌ ಕಡ್ಡಾಯ..!

ನವದೆಹಲಿ: ಪ್ರಯಾಣಿಕರ ಸುರಕ್ಷತೆಯ ದೃಷ್ಠಿಕೋನದಲ್ಲಿ ಇನ್ನು ಮುಂದಿನ ವರ್ಷದಿಂದ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಈ ನಿಯಮ ಅಧಿಕೃತವಾಗಿ 2023ರ ಅ.1 ರಿಂದ ಜಾರಿಗೆ ಬರಲಿದೆ.ಈ ಬಗ್ಗೆ...