Connect with us

    MANGALORE

    ಪೊಲೀಸ್ ಕಮಿಷನರ್ಸ್ ಕಪ್‌ 2022ಗೆ ಚಾಲನೆ: 10 ತಂಡಗಳು ಭಾಗಿ

    Published

    on

    ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಕಮಿಷನರ್ಸ್ ಕಪ್‌ 2022ಗೆ ಚಾಲನೆ ನೀಡಲಾಯಿತು.


    ಮಂಗಳೂರು ಸಿಟಿ ಪೊಲೀಸ್‌, ಫಾಯರ್‌, ಸಿಎಎಸ್‌ಎಫ್‌, ಕೆಎಸ್‌ಆರ್‌ಪಿ, ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್‌,

    ಎಕ್ಸೈಸ್‌ ಡಿಪಾರ್ಟ್‌ಮೆಂಟ್, ಫಾಯರ್‌ ಎಂಡ್ ಎಮರ್ಜೆನ್ಸಿ ಸರ್ವೀಸಸ್‌, ಕೋಸ್ಟ್‌ಗಾರ್ಡ್‌, ಕರ್ನಾಟಕ ಫಾರೆಸ್ಟ್‌ ಡಿಪಾರ್ಟ್‌ಮೆಂಟ್‌ ಸಹಿತ ಒಟ್ಟು 8 ತಂಡಗಳು ಈ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡವರು.

    ಮುಂಜಾನೆ 7 ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕ್ರೀಡಾ ಕೂಟದ ವಿಜೇತರಿಗೆ ಟ್ರೋಫಿ ವಿತರಣೆ ನಡೆಯಲಿದೆ. ಟ್ರೋಫಿ ವಿಜೇತರಿಗೆ ಮೊದಲ ಬಹುಮಾನವಾಗಿ 20, 000 ರೂಪಾಯಿ ನಗದು,

    ದ್ವಿತೀಯ ಬಹುಮಾನವಾಗಿ 10, 000 ನಗರದು ಹಾಗೂ ಟ್ರೋಫಿ ಜೊತೆಗೆ ಅತ್ಯುತ್ತಮ ದಾಂಡಿಗ, ಅತ್ಯುತ್ತಮ ಎಸೆತಗಾರ, ಆಲ್‌ರೌಂಡರ್‌ ಪ್ರಶಸ್ತಿ ನೀಡಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್‌ ಶಶಿಕುಮಾರ್ ತಿಳಿಸಿದ್ದಾರೆ.

    LATEST NEWS

    ನವಮಂಗಳೂರು ಬಂದರಿನಲ್ಲಿ ‘ಸುರಕ್ಷತೆ’ ಕಾರ್ಯಾಗಾರ

    Published

    on

    ಮಂಗಳೂರು: ‘ದಕ್ಕೆ ಕೆಲಸ ಮತ್ತು ಅಪಾಯಕಾರಿ ರಾಸಾಯನಿಕಗಳ ನಿರ್ವಹಣೆಯಲ್ಲಿ ಸುರಕ್ಷತೆ’ ಎಂಬ ವಿಷಯದ ಕುರಿತಂತೆ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆಧೀನ ಸಂಸ್ಥೆ ಕಾರ್ಖಾನೆಗಳ ಸಲಹಾ ಸೇವೆ ಮತ್ತು ಕಾರ್ಮಿಕ ಸಂಸ್ಥೆಗಳ ಮಹಾನಿರ್ದೇಶನಾಲಯದ ಆಶ್ರಯದಲ್ಲಿ ಪಣಂಬೂರಿನ ನವ ಮಂಗಳೂರು ಬಂದರು ಪ್ರಾಧಿಕಾರದ ಸಹಯೋಗದಲ್ಲಿ ಇಂದು ಏರ್ಪಡಿಸಲಾಗಿತ್ತು.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಎನ್‌.ಎಂ.ಪಿ.ಎ. ಅಧ್ಯಕ್ಷ ಡಾ. ವೆಂಕಟರಮಣ ಆಕ್ಕರಾಜು, ಎಂ.ಆರ್.ಪಿ.ಎಲ್‌. ನಿರ್ದೇಶಕ ನಂದಕುಮಾರ್‌ ವೇಲಾಯುಧನ್‌ ಪಿಳ್ಳೆ, ದಕ್ಕೆ ಸುರಕ್ಷತಾ ಚೀಫ್‌ ಇನ್ಸ್‌ಪೆಕ್ಟರ್‌ ಸುಮಿತ್‌ ರೋಯ್‌, ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ, ಚೀಫ್‌ ವಿಜಿಲೆನ್ಸ್‌ ಆಫೀಸರ್‌ ಪದ್ಮನಾಭ ಆಚಾರ್‌, ದಕ್ಕೆ ಸುರಕ್ಷತಾ ವಿಭಾಗದ ನಿರ್ದೇಶಕ ವಿಪುಲ್‌ ಮಿಶ್ರಾ, ಟ್ರಾಫಿಕ್‌ ಮ್ಯಾನೇಜರ್‌ ಸತೀಶ್‌ ಕುಮಾರ್‌ ಅವರು ಉಪಸ್ಥಿತರಿದ್ದರು.

    ಕಾರ್ಯಾಗಾರವನ್ನು ಎನ್‌.ಎಂ.ಪಿ.ಎ. ಅಧ್ಯಕ್ಷ ಡಾ. ವೆಂಕಟರಮಣ ಆಕ್ಕರಾಜು ಅವರು ಉದ್ಘಾಟಿಸಿ ಮಾತನಾಡಿ ಬಂದರು ಮೂಲಕ ಸರಕು ಆಮದು ಅಥವಾ ರಫ್ತು ಮಾಡುವಾಗ ಅವುಗಳ ನಿರ್ವಹಣೆಯನ್ನು ಎಚ್ಚರಿಕೆಯಿಂದ ಮಾಡ ಬೇಕಾಗುತ್ತದೆ. ಅಪಾಯಕಾರಿ ಸರಕು ಆಗಿದ್ದಲ್ಲಿ ಬಹಳಷ್ಟು ಮುನ್ನಚ್ಚರಿಕೆ ಅಗತ್ಯ. ತಂತ್ರಜ್ಞಾನವನ್ನು ಬಳಸಿದರೆ ಸುಲಭವಾಗಿ ನಿರ್ವಹಣೆ ಮಾಡ ಬಹುದು. ಸುರಕ್ಷಾ ಕ್ರಮಗಳನ್ನು ಅನುಸರಿಸುವುದರಿಂದ ದಕ್ಷತೆಯನ್ನು ಹೆಚ್ಚಿಸ ಬಹುದು ಮತ್ತು ಅವಘಡಗಳನ್ನು ಕಡಿಮೆ ಮಾಡಬಹುದು. ಕಾರ್ಮಿಕರಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಅವರಿಗೆ ಸುರಕ್ಷಾ ಉಪಕರಣಗಳನ್ನು ನೀಡುವ ಅಗತ್ಯವಿದೆ. ನವ ಮಂಗಳೂರು ಬಂದರಿನಲ್ಲಿ ಇದುವರೆಗೆ ಸರಕು ನಿರ್ವಹಣೆ ಸಂದರ್ಭ ಇದುವರೆಗೆ ಯಾವುದೇ ಸಾವು ಸಂಭವಿಸಿದ ಘಟನೆ ನಡೆದಿಲ್ಲ ಎನ್ನುವುದು ಹೆಮ್ಮೆಯ ಸಂಗತಿ ಎಂದರು.

    ಮುಖ್ಯ ಅತಿಥಿ ನಂದ ಕುಮಾರ್ ಮಾತನಾಡಿ, ದಕ್ಕೆಯಲ್ಲಿ ಕೆಲಸ ಮಾಡುವ ಸಂದರ್ಭ ಹೆಚ್ಚು ಸುರಕ್ಷತಾ ಕ್ರಮ ಅನುಸರಿಸ ಬೇಕು. ಕಾರ್ಮಿಕರ ರಕ್ಷಣೆ ಮತ್ತು ಸರಕು ರಕ್ಷಣೆಯ ಜತೆಗೆ ಪರಿಸರ ಸಂರಕ್ಷಣೆಯ ಬಗ್ಗೆಯೂ ಗಮನ ಹರಿಸ ಬೇಕಾಗುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಖಾನೆಗಳ ಸಲಹಾ ಸೇವೆ ಮತ್ತು ಕಾರ್ಮಿಕ ಸಂಸ್ಥೆಗಳ ಮಹಾ ನಿರ್ದೇಶನಾಲಯದ ಮಹಾ ನಿರ್ದೇಶಕ ಆಲೋಕ್‌ ಮಿಶ್ರಾ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ದಿಕ್ಸೂಚಿ ಭಾಷಣ ಮಾಡಿದರು.

    Continue Reading

    LATEST NEWS

    ಮಂಗಳೂರು: ಸೆ. 20 ರಿಂದ 22 ರವರೆಗೆ ಬಿಗ್ ಬ್ರಾಂಡ್ಸ್‌ ಎಕ್ಸ್‌ಪೊ-2024 ಪ್ರದರ್ಶನ

    Published

    on

    ಮಂಗಳೂರು: ಉದ್ಯಮಿಗಳ ಮತ್ತು ವೃತ್ತಿಪರರ ಸಂಘಟನೆ ಬಿಸ್‌ನೆಸ್‌ ನೆಟ್‌ವರ್ಕ್ ಇಂಟರ್ ನ್ಯಾಶನಲ್‌ – ಬಿಎನ್ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಗ್ ಬ್ರಾಂಡ್ಸ್ ಎಕ್ಸ್‌ಪೊ – 2024 ಪ್ರದರ್ಶನ ಸಪ್ಟೆಂಬರ್‌ 20 ರಿಂದ 22 ರ ತನಕ ಮಂಗಳೂರಿನ ಎಂ.ಜಿ. ರಸ್ತೆಯ ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಏರ್ಪಡಿಸಲಾಗಿದೆ.

    ಬಿಎನ್‌ಐ ಕಾರ್ಯ ನಿರ್ವಾಹಕ ನಿರ್ದೇಶಕ ಗಣೇಶ್ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್‌, ಆಭರಣಗಳು, ವಿಮೆ, ಗಾರ್ಮೆಂಟ್ಸ್‌, ಐಟಿ ಉತ್ಪನ್ನಗಳು, ಸಾಫ್ಟ್‌ವೇರ್‌, ಕಚೇರಿ ಮತ್ತು ಗೃಹ ಪೀಠೋಪಕರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ 120 ಕ್ಕೂ ಆಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನ ಇರುತ್ತದೆ. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ ಎಂದರು.

    ಎಕ್ಸ್ ಪೊ ಅಧ್ಯಕ್ಷ ಮೋಹನ್‌ ರಾಜ್‌ ಮಾತನಾಡಿ ಬಿಎನ್ಐ ಮಂಗಳೂರು- ಉಡುಪಿ ಜಗತ್ತಿನ ಉದ್ಯಮಿಗಳ ಸಂಘಟನೆ ಬಿಸ್‌ನೆಸ್‌ ನೆಟ್‌ವರ್ಕ್ ಇಂಟರ್ ನ್ಯಾಶನಲ್‌ ನ ಭಾಗವಾಗಿದ್ದು, ನೂರಕ್ಕೂ ಅಧಿಕ ವಿವಿಧ ವ್ಯಾಪಾರ- ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 310 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ವರ್ಷದ ಎಕ್ಸ್‌ಪೊ ಈ ಸರಣಿಯ 3ನೇ ಆವೃತ್ತಿಯಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಬಿಎನ್ ಐ ಸದಸ್ಯ ಮಹೇಶ್ ಶೆಟ್ಟಿ, ನಿರ್ದೇಶಕ ಸುನಿಲ್ ದತ್ ಪೈ, ಪ್ರಜ್ವಲ್ ಶೆಟ್ಟಿ, ಡಾ. ಸಚಿನ್ ನಡ್ಕ ಉಪಸ್ಥಿತರಿದ್ದರು.

    Continue Reading

    LATEST NEWS

    ಮಂಗಳೂರು: ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದ ಗೋಮಾತೆ.!!

    Published

    on

    ಮೂಲ್ಕಿ: ಎರಡು ತಲೆ ಇರುವು ಕರುವೊಂದು ಜನನವಾದ ಘಟನೆ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬವರ ಮನೆಯಲ್ಲಿ ನಡೆದಿದೆ.

    ಜಯರಾಮ ಜೋಗಿ ಅವರ ಮನೆಯ ಹಸು ಎರಡು ತಲೆಹೊಂದಿರುವ ಕರುವಿಗೆ ಜನ್ಮನೀಡಿದೆ. ಪಶು ವೈದ್ಯರು ಹಸುವಿನ ಹೆರಿಗೆ ಮಾಡಿಸಿದ್ದು, ಕುರುವಿನ ಆರೋಗ್ಯ ಸ್ಥಿರವಾಗಿದೆ. ಕರುವಿಗೆ ಎರಡು ತಲೆ ಇದ್ದು ಒಂದೇ ದೇಹ ಇದೆ.

    ಒಟ್ಟು ನಾಲ್ಕು ಕಣ್ಣುಗಳಿದ್ದು ಮಧ್ಯಭಾಗದಲ್ಲಿರುವ ಎರಡು ಕಣ್ಣುಗಳು ಚಲನೆಯಲ್ಲಿಲ್ಲ. ಎರಡು ಬಾಯಿ ಇದೆ. ಎರಡು ತಲೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದ ಈ ಕರುವಿಗೆ ವೈದ್ಯರ ಸಲಹೆಯಂತೆ ಫೀಡಿಂಗ್ ಬಾಟಲ್ ಮೂಲಕ ಹಾಲನ್ನು ನೀಡಲಾಗುತ್ತಿದೆ.

    Continue Reading

    LATEST NEWS

    Trending