Connect with us

    LATEST NEWS

    ಅಮೆಜಾನ್‌ ಪಾರ್ಸೆಲ್‌ನಲ್ಲಿ ಬಂತು ವಿಷಕಾರಿ ನಾಗರ ಹಾವುಗಳು..!

    Published

    on

    ಇ-ಕಾಮರ್ಸ್‌ ಸೈಟ್‌ಗಳ ಮೂಲಕ ಜನರು ತಮಗಿಷ್ಟವಾದ ವಸ್ತು ಆರ್ಡರ್‌ ಮಾಡುವುದು ಇತ್ತೀಚಿನ ದಿನದಲ್ಲಿ ಮಾಮೂಲಾಗಿದೆ. ಅದೇ ರೀತಿ ಹಲವು ಬಾರಿ ತಾವು ಮಾಡಿದ ಆರ್ಡರ್‌ಗೆ ಬದಲಾಗಿ ಕಲ್ಲು, ಕಬ್ಬಿಣ ಬಂದ ಉದಾಹರಣೆಗಳೂ ಕೂಡಾ ಇದೆ. ಆದ್ರೆ ಇದೀಗ ಅಮೇಜಾನ್‌ ಮೂಲಕ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಆರ್ಡರ್ ಮಾಡಿದ ದಂಪತಿಗೆ ಬಂದ ಪಾರ್ಸೆಲ್‌ನಲ್ಲಿ ಎರಡು ನಾಗರ ಹಾವುಗಳು ಕಂಡು ಬಂದಿರುವುದು ಆತಂಕ ಸೃಷ್ಠಿಸಿದೆ.

    ಬೆಂಗಳೂರಿನ ಸರ್ಜಾಪುರದಲ್ಲಿ ವಾಸವಾಗಿರುವ ಸಾಫ್ಟ್‌ವೇರ್ ಉದ್ಯೋಗದಲ್ಲಿರುವ ದಂಪತಿ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಬುಕ್ ಮಾಡಿದ್ದರು. ಹೀಗೆ ಆರ್ಡರ್ ಮಾಡಿದ್ದ ವಸ್ತು ಡೆಲಿವೆರಿ ಪಡೆದುಕೊಂಡ ದಂಪತಿ ಅದನ್ನು ಓಪನ್ ಮಾಡಿದ್ದಾರೆ. ಈ ವೇಳೆ ಬಾಕ್ಸ್‌ ಒಳಗೆ ಎರಡು ನಾಗರ ಹಾವು ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ಹಾವು ನೋಡಿ ತಕ್ಷಣ ಬಾಕ್ಸ್‌ ಬಂದ್ ಮಾಡಿದ್ರೂ ಹೊರಬರಲು ಯತ್ನಿಸಿದ್ದ ಹಾವು ಬಾಕ್ಸ್‌ಗೆ ಅಳವಡಿಸಿದ್ದ ಗಮ್‌ಟೇಪ್‌ಗೆ ಅಂಟಿಕೊಂಡಿದೆ. ಈ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ದಂಪತಿ ಬಾಕ್ಸ್‌ ಡೆಲಿವರಿ ಮಾಡಿದ ಹುಡುಗನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.

    ಈ ಬಗ್ಗೆ ಅಮೆಜಾನ್ ಕಂಪೆನಿಗೆ ದೂರು ನೀಡಿದಾಗ ಎಕ್ಸ್‌ಬಾಕ್ಸ್‌ ಕಂಟ್ರೋಲರ್‌ಗೆ ನೀಡಿದ ಹಣವನ್ನು ಮರುಪಾವತಿ ಮಾಡಿದೆ. ಆದ್ರೆ ವಿಷಕಾರಿ ಹಾವುಗಳನ್ನು ಬಾಕ್ಸ್‌ನಲ್ಲಿ ಹಾಕಿ ಕಳುಹಿಸಿದವರು ಯಾರೂ ? ಹಾಗೂ ಬಾಕ್ಸ್ ಓಪನ್ ಮಾಡುವಾಗ ಹಾವು ಕಚ್ಚಿ ಪ್ರಾಣಕ್ಕೆ ತೊಂದರೆ ಆಗಿದ್ದರೆ ಹೊಣೆ ಯಾರು? ಎಂಬ ವಿಚಾರವಾಗಿ ಚಕಾರ ಎತ್ತಿಲ್ಲ. ಬದಲಾಗಿ ಎಕ್ಸ್‌ ಖಾತೆಯಲ್ಲಿ ತಪ್ಪಾದ ಆರ್ಡರ್‌ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ. ಹೀಗಾಗಿ ಪಾರ್ಸೆಲ್ ಸ್ವೀಕರಿಸಿದ ದಂಪತಿ ಮಾಡಿಕೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಅಮೆಜಾನ್‌ ಕಂಪೆನಿ ಹಾಗೂ ಅದರ ವಿತರಕ ಪಾಲುದಾರ ಕಂಪೆನಿ ತಕ್ಷಣ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

    LATEST NEWS

    ಚಿಕ್ಕ ಪುಟ್ಟ ಮಕ್ಕಳನ್ನು ಕಾಡುತ್ತಿದೆ ವೈರಲ್ ಫಿವರ್..! 200ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ

    Published

    on

    ಬಾಗಲಕೋಟೆ/ಮಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಖಾಯಿಲೆಗಳು ವಕ್ಕರಿಸಿಕೊಳ್ಳುತ್ತದೆ.  ವಾತಾವರಣ ಹೆಚ್ಚಳದಿಂದ ವೈರಲ್ ಫಿವರ್ ಹಾವಳಿ ಕೂಡಾ ಹೆಚ್ಚಾಗುತ್ತಿದೆ. ಒಂದು ಕಡೆ ಡೆಂಗ್ಯೂ ಆಂತಕವಾದ್ರೆ ಇದೀಗ ವೈರಲ್ ಫಿವರ್ ಕಾಟ ಚಿಕ್ಕ ಪುಟ್ಟ ಮಕ್ಕಳ ಜೀವ ಹಿಂಡುತ್ತಿದೆ.

    ಈ ಮಧ್ಯೆ ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹೌದು, ಜಿಲ್ಲೆಯಲ್ಲಿ ಪುಟಾಣಿ ಮಕ್ಕಳು ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಶೀತ, ಕೆಮ್ಮು, ನೆಗಡಿ ಹಾಗೂ ಉಸಿರಾಟ ತೊಂದರೆಯಿಂದ ಮಕ್ಕಳು ಹೈರಾಣಾಗುತ್ತಿದ್ದಾರೆ.

    ಡೆಂಗ್ಯೂ ಜ್ವರದಿಂದ ಮಗುವಿನ ಜೀವಾಂ*ತ್ಯ..! ಸರ್ಕಾರಿ ಆಸ್ಪತ್ರೆ ಅಭಿವೃದ್ದಿಗೆ ತಂದೆಯ ಮನವಿ..!

    ಜಿಲ್ಲೆಯಲ್ಲಿ ಪ್ರತಿ ದಿನ 200ಕ್ಕೂ ಅಧಿಕ ಮಕ್ಕಳು ವೈರಲ್ ಫಿವರ್ ಗೆ ತುತ್ತಾಗಿ, ಜಿಲ್ಲೆಯ ಸರಕಾರಿ, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.  ವೈರಲ್ ಫೀವರ್ ಹರಡುವುದರಿಂದ ಪೋಷಕರು ಮಕ್ಕಳ ಬಗ್ಗೆ ಭಯಭೀತರಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ಕಳುಹಿಸುವುದಕ್ಕಿಂತ ಮನೆಯಲ್ಲಿ ಇರುವುದು ಒಳ್ಳೆಯದು ಅಂತ ಅನ್ನಿಸುತ್ತಿದೆ ಎಂದು ಪೋಷಕರು ಹೇಳುತ್ತಿದ್ದಾರೆ.

    ಇನ್ನು ಮಕ್ಕಳಿಗೆ ಚಳಿಯಾಗದಂತೆ, ಬಿಸಿಲಿಗೆ ಹೆಚ್ಚಾಗಿ ಓಡಾಡದಂತೆ ತಡೆಯಬೇಕು. ಮಕ್ಕಳ ಬಗ್ಗೆ ಹೆಚ್ಚು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ವೈರಲ್ ಫೀವರ್ ತಡೆಯಲು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.

    ಒಟ್ಟಿನಲ್ಲಿ ಮಕ್ಕಳು ಮತ್ತು ವೃದ್ಧರು ಈ ವೈರಲ್ ಫೀವರ್‌ಗೆ ಹೈರಾಣಾಗುತ್ತಿದ್ದಾರೆ. ಜ್ವರ ಬರುವ ಮೊದಲೇ ಮುಂಜಾಗೃತಾ ಕ್ರಮ ಕೈಗೊಂಡರೆ ಇದರಿಂದ ಪಾರಾಗಬಹುದಾಗಿದೆ.

    Continue Reading

    DAKSHINA KANNADA

    ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಭೇಟಿ ಮಾಡಿದ ಸಂಸದ ಚೌಟ

    Published

    on

    ಮಂಗಳೂರು : ಕರಾವಳಿ ಕಂಡ ಹಿರಿಯ ಮುತ್ಸದ್ದಿ, ನೇರ ನುಡಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ತೆರಳಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಶೀರ್ವಾದ ಪಡೆದು ಪಡೆದು ವಿದ್ಯಮಾನಗಳ ಕುರಿತು ಮಾತನಾಡಿದರು.

    ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಗೋವಿಂದ ಪ್ರಭು, ಜಿಲ್ಲಾ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

    Continue Reading

    LATEST NEWS

    ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃ ವಿಯೋಗ

    Published

    on

    ಕೋಟ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ ವಯೋಸಹಜ ಅಸೌಖ್ಯದಿಂದ ನಿನ್ನೆ(ಜೂ.30) ನಿಧ*ನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.

    ಮೃ*ತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧ*ನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಇದನ್ನೂ ಓದಿ : ‘ಎಲ್ಲಾ ಹಣೆಬರಹ..ನಾವೇನು ಮಾಡೋಕ್ಕಾಗಲ್ಲ…’ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    Continue Reading

    LATEST NEWS

    Trending