Connect with us

    LATEST NEWS

    ಗಾಂಧಿ ಜಯಂತಿ: ರಾಜ್ ಘಾಟ್ ನಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿ ಗಣ್ಯರಿಂದ ಪುಷ್ಪ ನಮನ

    Published

    on

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ರಾಜ್ ಘಾಟ್ ನಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ.

    ನವದೆಹಲಿಯ ರಾಜ್ ಘಾಟ್ ನಲ್ಲಿರುವ ಮಹತ್ಮಾ ಗಾಂಧಿ ಸಮಾಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ರಾಜ್ ಘಾಟ್ ನಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಇತರ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

    ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮೋದಿಯವರು, ಪೂಜ್ಯ ಬಾಪು ಅವರ ಜನ್ಮದಿನದಂದು ಎಲ್ಲಾ ದೇಶವಾಸಿಗಳ ಪರವಾಗಿ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಸತ್ಯ, ಸಾಮರಸ್ಯ ಮತ್ತು ಸಮಾನತೆಯ ಆಧಾರದ ಮೇಲೆ ಅವರ ಜೀವನ ಮತ್ತು ಆದರ್ಶಗಳು ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿಯಾಗಿ ಉಳಿಯುತ್ತವೆ ಎಂದು ಹೇಳಿದ್ದರು.

    ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಆತಿಶಿಸೇರಿದಂತೆ ಹಲವು ಗಣ್ಯರು ರಾಜ್ಘಾಟ್ನಲ್ಲಿರುವ ಗಾಂಧೀಜಿ ಅವರ ಸಮಾಧಿಗೆ ನಮನ ಸಲ್ಲಿಸಿದರು.

    DAKSHINA KANNADA

    ಸಿಎಂ ರಾಜಿನಾಮೆ ನೀಡಬೇಕು; ಕ್ಯಾಪ್ಟನ್‌ ಬ್ರಿಜೇಶ್ ಚೌಟ ಒತ್ತಾಯ

    Published

    on

    ಮಂಗಳೂರು: ಸಿದ್ದರಾಮಯ್ಯ 14 ಸೈಟ್ ವಾಪಾಸ್‌ ಕೊಟ್ಟಿರುವುದು ಅವರಿಗೆ ಅವರ ತಪ್ಪಿನ ಅರಿವಾದಂತೆ ಇದೆ. ಅವರು ಬದುಕುಳಿಯುವ ಕೊನೆಯ ಯತ್ನವಾಗಿ ಕಾಣುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.


    ಸಂವಿಧಾನದ ಆಶಯಗಳಿಗೆ ಗೌರವ ನೀಡಬೇಕು ಕೇವಲ ಕುರ್ಚಿಗೆ ಅಂಟಿಕೊಂಡಿರುವುದಲ್ಲ . ಸಿದ್ದರಾಮಯ್ಯ ಕೇವಲ ಕುರ್ಚಿಗಾಗಿಯೇ ಇರುವಂತೆ ಮಾಡುತ್ತಾರೆ ಎಂದು ಹೇಳಿದರು.
    ಆಮಿಷಗಳಿಗೆ ಜನರನ್ನು ಒಳಪಡಿಸುತ್ತಾ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ. ಕಿಂಚಿತ್ತೂ ಆಭಿವೃದ್ಧಿ ಕಾಣುತ್ತಿಲ್ಲ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ. ದಲಿತರ ಜಾಗವನ್ನು ಕಬಳಿಸಿ, ಪತ್ನಿ ಹೆಸರಿಗೆ ಸೈಟ್ ಮಾಡಿಕೊಂಡಿದ್ದಾರೆ ಎಂದರು.

    Continue Reading

    LATEST NEWS

    ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿ ಆಗುತ್ತಾ? ಹೀಗೆ ಮಾಡಿ

    Published

    on

    ಮಂಗಳೂರು: ಗ್ಯಾಸ್ ಸಿಲಿಂಡರ್ ಅನ್ನು ಇಂದಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಪ್ರತಿಯೊಬ್ಬರ ಬಳಿಯೂ ಅಡುಗೆ ಅನಿಲ ಸಿಲಿಂಡರ್ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದ ನಂತರ ಸೌದೆ ಒಲೆಯಲ್ಲಿ ಅಡುಗೆ ಕಾಲ ಮರೆಯಾಗಿದ್ದು, ಗ್ಯಾಸ್ ಅನ್ನೇ ಬಳಸುತ್ತಿದ್ದಾರೆ. ಆದರೆ ಗ್ಯಾಸ್ ಸಿಲಿಂಡರ್ ಬೇಗನೇ ಖಾಲಿಯಾಗುವ ಸಮಸ್ಯೆ ಹೆಚ್ಚಿನವರು ಎದುರಿಸುತ್ತಿದ್ದಾರೆ. ನಿಮಗು ಕೂಡ ಇದೇ ಸಮಸ್ಯೆ ಆಗುತ್ತಿದ್ದರೆ ಕೆಲವು ತಂತ್ರಗಳನ್ನು ಅನುಸರಿಸಿ ಅನಿಲವನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಅದು ಹೇಗೆ?, ನೋಡೋಣ.

    1. ಬರ್ನರ್: ಅಡುಗೆ ಮಾಡುವಾಗ ಹಲವರಿಗೆ ಬರ್ನರ್ ಅನ್ನು ಮೇಲಕ್ಕೆ ತಿರುಗಿಸುವ ಅಭ್ಯಾಸವಿರುತ್ತದೆ. ಇದರಿಂದಾಗಿ ನಿಮ್ಮ ಗ್ಯಾಸ್ ಬೇಗನೆ ಖಾಲಿಯಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ನೀವು ಏನನ್ನಾದರೂ ಬಿಸಿಮಾಡಲು ಅಥವಾ ಬೇಯಿಸಲು ಬಯಸಿದರೆ, ಕೆಳಭಾಗವು ಸುಡುವಂತೆ ಬರ್ನರ್ ಅನ್ನು ತಿರುಗಿಸಿ. ಇದರಿಂದ ಎಲ್ ಪಿಜಿ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.

    2. ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು: ನಿಮ್ಮ ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಕಾಲಕಾಲಕ್ಕೆ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಗ್ಯಾಸ್ ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಇದಕ್ಕಾಗಿ ನಿಮ್ಮ ಅನಿಲದ ಬೆಂಕಿಯ ಬಣ್ಣವನ್ನು ಗಮನಿಸುವುದರ ಮೂಲಕ ತಿಳಿಯಬಹುದು. ಅನಿಲ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿದರೆ ನಿಮ್ಮ ಬರ್ನರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲದಿದ್ದರೆ ಕೆಂಪು/ಹಳದಿ/ಕಿತ್ತಳೆ ಬಣ್ಣ ಬಂದರೆ ನಿಮ್ಮ ಬರ್ನರ್ ಸ್ವಚ್ಛವಾಗಿಲ್ಲ ಎಂದರ್ಥ.

    3. ಪಾತ್ರೆ ಒದ್ದೆಯಾಗಿರಬಾರದು: ಅಡುಗೆ ಮಾಡಲು ಪಾತ್ರೆಯನ್ನು ಬರ್ನರ್‌ನಲ್ಲಿ ಇರಿಸುವಾಗ ಒಣಗಿರಬೇಕು. ಅದರಲ್ಲಿ ನೀರಿನ ಅಂಶ ಇದ್ದರೆ ಆವಿಯಾಗಲು ಸಮಯ ತೆಗೆದುಕೊಳ್ಳಬಹುದು. ಇದು ಅನಿಲವನ್ನು ವ್ಯರ್ಥ ಮಾಡುತ್ತದೆ. ಸಂದರ್ಭಕ್ಕೆ ತಕ್ಕಂತೆ ನೀವು ಬೆಂಕಿಯನ್ನು ಕಡಿಮೆ ಮಾಡಬಹುದು. ಹೆಚ್ಚಿನ ಬೆಂಕಿ ಹೆಚ್ಚು ಅನಿಲವನ್ನು ಬಳಸುತ್ತದೆ.

    4. ಪ್ರೆಶರ್ ಕುಕ್ಕರ್: ಪ್ರೆಶರ್ ಕುಕ್ಕರ್ ಬಳಸುವುದರಿಂದ ಗ್ಯಾಸ್ ಉಳಿತಾಯ ಮಾಡಬಹುದು. ಓಪನ್-ಪಾಸ್ ಅಡುಗೆಗೆ ಹೋಲಿಸಿದರೆ ಒತ್ತಡದ ಸ್ಟೀಮ್ ಆಹಾರವು ವೇಗವಾಗಿ ಬೇಯಿತ್ತದೆ. ಇದರಿಂದ ಗ್ಯಾಸ್ ಉಳಿತಾಯವೂ ಆಗುತ್ತದೆ.

    5. ಗ್ಯಾಸ್ ಲೀಕ್: ಸಾಮಾನ್ಯವಾಗಿ ಕೆಲವು ಸಿಲಿಂಡರ್ನಲ್ಲಿ ಸಣ್ಣ ಪ್ರಮಾಣದ ಗ್ಯಾಸ್ ಲೀಕ್ ಆಗಿರುತ್ತದೆ. ಗ್ಯಾಸ್ ರೆಗ್ಯುಲೇಟರ್, ಪೈಪ್, ಬರ್ನರ್ ಪರಿಶೀಲಿಸಬೇಕು. ಹಾನಿಗೊಳಗಾದ ಗ್ಯಾಸ್ ಲೈನ್ ನೀವು ಅಡುಗೆ ಮಾಡದಿದ್ದರೂ ಸಹ ಅನಿಲವನ್ನು ವ್ಯರ್ಥ ಮಾಡಬಹುದು. ಇದು ಅಪಘಾತಗಳಿಗೂ ಕಾರಣವಾಗಬಹುದು.

    6. ನೆನೆಸುವುದು: ಅಕ್ಕಿ ಮತ್ತು ಬೇಳೆಕಾಳುಗಳನ್ನು ಬೇಯಿಸುವ ಮೊದಲು ನೆನೆಸಿಡಬೇಕು. ಹಾಗೆ ನೆನೆಸಿಟ್ಟು ಬೇಯಿಸಿದರೆ ಬೇಗ ಬೇಯುತ್ತದೆ. ಇದು ಸಿಲಿಂಡರ್ ಅನ್ನು ಉಳಿಸುತ್ತದೆ.

    7. ಫ್ರಿಡ್ಜ್ ನಲ್ಲಿರುವ ಸಾಮಾಗ್ರಿಗಳು: ನಮ್ಮಲ್ಲಿರುವ ದೊಡ್ಡ ಅಭ್ಯಾಸವೆಂದರೆ ಎಲ್ಲವನ್ನೂ ಫ್ರಿಜ್ ನಲ್ಲಿಡುವುದು. ಉದಾಹರಣೆಗೆ ಹಾಲು. ಅದನ್ನು ಫ್ರಿಡ್ಜ್ನಿಂದ ತೆಗೆದು ನೇರವಾಗಿ ಕುದಿಸಲು ಇಡಬೇಡಿ. ಆಗ ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಡುಗೆಗೆ ಬೇಕಾದ ಸಾಮಾಗ್ರಿಗಳು ಫ್ರಿಡ್ಜ್ ನಲ್ಲಿದ್ದರೆ ಮೊದಲು ಹೊರ ತೆಗೆಯಬೇಕು. ಕೂಲಿಂಗ್ ಕಡಿಮೆಯಾಗುವವರೆಗೆ ಸಮಯ ತೆಗೆದುಕೊಂಡು ನಂತರ ಬೆಚ್ಚಗಾಗಲು ಇಟ್ಟರೆ ಬೇಗನೆ ಕುದಿಯುತ್ತದೆ.

    Continue Reading

    LATEST NEWS

    ದಸರಾ ಪ್ರಯುಕ್ತ ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

    Published

    on

    ಮಂಗಳೂರು: ದಸರಾ ಹಬ್ಬದ ಸಂದರ್ಭದ ಪ್ರಯಕ್ತ ಬೆಂಗಳೂರಿನಿಂದ ಕರಾವಳಿಗೆ ಬರಲು ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ.

    ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಉಪಯೋಗವಾಗುವಂತೆ ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರ ನೆರವಿಗೆ ವಿಶೇಷ ರೈಲು ಓಡಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಡಿದ ಮನವಿಯಂತೆ ನೈಋತ್ಯ ರೈಲ್ವೇ ಅ. 10 ಹಾಗೂ ಅ. 12ರಂದು ವಿಶೇಷ ರೈಲುಗಳನ್ನು ಹೊರಡಿಸುವುದಾಗಿ ಪಕಟಿಸಿದೆ.

    ಈ ಮನವಿಯನ್ನು ಸಂಸದರ ಗಮನಕ್ಕೆ ಕುಂದಾಪುರ ರೈಲು ಹಿತರಕ್ಷಣ ಸಮಿತಿಯ ಗಣೇಶ್ ಪುತ್ರನ್ ಅವರು ಬಸ್ ಮತ್ತು ಈಗಿರುವ ರೈಲುಗಳ ಟಿಕೆಟ್ ಸಂಪೂರ್ಣ ಖಾಲಿಯಾದ ಬಗ್ಗೆ ತಿಳಿಸಿದ್ದರು. ಇದಕ್ಕೆ ತತ್‌ಕ್ಷಣವೇ ಸ್ಪಂದಿಸಿದ ಸಂಸದರು ರೈಲ್ವೇ ಇಲಾಖೆಗೆ ನವರಾತ್ರಿ ವಿಶೇಷ ರೈಲುಗಳ ಪ್ರಯಾಣಕ್ಕೆ ಸೂಚನೆ ನೀಡಿದ್ದರು. ಮೈಸೂರಿನಿಂದ ಮೆಜೆಸ್ಟಿಕ್ ಮಾರ್ಗವಾಗಿ ಒಂದು ರೈಲು ಮತ್ತೂಂದು ರೈಲು ಯಶವಂತಪುರದಿಂದ ಹೊರಡಲಿದೆ. ಈ ಬಗ್ಗೆ ಸಂಸದರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದಾರೆ.

    ರೈಲಿನ ವೇಳಾಪಟ್ಟಿ ಹೀಗಿದೆ:

    ಅ. 10 ಗುರುವಾರ ರಾತ್ರಿ 12.30ಕ್ಕೆ ಯಶವಂತಪುರದಿಂದ ಹೊರಡುವ ರೈಲು (ನಂ. 06569) ಪಡೀಲ್‌ ಬೈಪಾಸ್‌ ಮೂಲಕ ಶುಕ್ರವಾರ ಬೆ. 11.30ಕ್ಕೆ ಉಡುಪಿ ತಲುಪಿ ಸಂಜೆ 4ಕ್ಕೆ ಕಾರವಾರ ತಲುಪಲಿದೆ.

    ಅ. 11ರ ಶುಕ್ರವಾರ ರಾತ್ರಿ 11.30ಕ್ಕೆ ಕಾರವಾರದಿಂದ ಹೊರಡುವ ರೈಲು (06570) ಕುಂದಾಪುರ ಮಧ್ಯ ರಾತ್ರಿ 2ಕ್ಕೆ ಉಡುಪಿ 2.40 ತಲುಪಿ ಮರುದಿನ ಮಧ್ಯಾಹ್ನ 1ಕ್ಕೆ ಯಶವಂತಪುರ ಹಾಗೂ ಸಂಜೆ 4.40ಕ್ಕೆ ಮೈಸೂರು ತಲುಪಲಿದೆ.

    06585 ರೈಲು:

    ಅ. 12ರ ಶನಿವಾರ ರಾತ್ರಿ 9.20ಕ್ಕೆ ಮೈಸೂರಿನಿಂದ ಹೊರಟು (06585) ಮೆಜೆಸ್ಟಿಕ್‌ನಿಂದ ರಾತ್ರಿ 12.20 ಹಾಗೂ 12.40ಕ್ಕೆ ಯಶವಂತಪುರದಿಂದ ಹೊರಟು ಪಡೀಲ್‌ ಬೈಪಾಸ್‌ ಮೂಲಕ ರವಿವಾರ ಬೆ. 11.30ಕ್ಕೆ ಉಡುಪಿ ತಲುಪಿ 4ಕ್ಕೆ ಕಾರವಾರ ತಲುಪಲಿದೆ.

    ಅ.13ರ ರವಿವಾರ ರಾತ್ರಿ 11.30ಕ್ಕೆ ಕಾರವಾರದಿಂದ ಹೊರಟು (06586) ಉಡುಪಿಗೆ ಮಧ್ಯರಾತ್ರಿ 2.40 ತಲುಪಿ ಅ. 14ರ ಸೋಮವಾರ ಮಧ್ಯಾಹ್ನ ಯಶವಂತಪುರ 1ಕ್ಕೆ ಮತ್ತು ಸಂಜೆ 4.40ಕ್ಕೆ ಮೈಸೂರು ಸಂಜೆ 4.40 ಕ್ಕೆ ತಲುಪಲಿದೆ.

    Continue Reading

    LATEST NEWS

    Trending