Friday, March 24, 2023

ಹಾಡು ನಿಲ್ಲಿಸಿ ಇಹಲೋಕ ತ್ಯಜಿಸಿದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ..!

ಭಾರತ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ​ ನಿಧನರಾಗಿದ್ದಾರೆ. ತಮಿಳುನಾಡಿನ ಚೆನ್ನೈನ ತಮ್ಮ ಮನೆಯಲ್ಲಿ ವಾಣಿ ಜಯರಾಂ​ ಕೊನೆಯುಸಿರೆಳೆದಿದ್ದಾರೆ. 

ಚೆನ್ನೈ : ಭಾರತ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ​ ನಿಧನರಾಗಿದ್ದಾರೆ. ತಮಿಳುನಾಡಿನ ಚೆನ್ನೈನ ತಮ್ಮ ಮನೆಯಲ್ಲಿ ವಾಣಿ ಜಯರಾಂ​ ಕೊನೆಯುಸಿರೆಳೆದಿದ್ದಾರೆ.

ವಾಣಿಜಯರಾಂ ಕನ್ನಡ, ಹಿಂದಿ ತೆಲುಗು,ತಮಿಳು,ಮಲಯಾಳಂ,ಮರಾಠಿ,ಓಡಿಯಾ,ಗುಜರಾತಿ ಹಾಗೂ ಬಂಗಾಳಿ ಭಾಷೆಯಲ್ಲಿ ಸುಮಾರು 10000 ಕ್ಕೂ ಹೆಚ್ಚು ಹಾಡುಗಳನ್ನು ತಮ್ಮ ಕಂಠಸಿರಿಯಿಂದ ಹೊರ ಹೊಮ್ಮಿಸಿದ್ದಾರೆ.

1945 ರಲ್ಲಿ ತಮಿಳುನಾಡಿನ ವೆಲ್ಲೋರ್‌ ಎಂಬಲ್ಲಿ ಹುಟ್ಟಿದ ವಾಣಿ ಜಯರಾಂ ಬಾಲ್ಯದಿಂದಲೇ ಸಂಗೀತದಲ್ಲಿ ಅಭಿರುಚಿ ಹೊಂದಿದ್ದರು.

ಮದ್ರಾಸ್ ವಿವಿ ವಿದ್ಯಾರ್ಥಿ ಆಗಿದ್ದ ವಾಣಿ ಅವರು ತಮ್ಮ ವ್ಯಾಸಂಗ ಪೂರ್ಣಗೊಳಿಸಿದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು.

ವಿವಾಹದ ಬಳಿಕ ಚೆನ್ನೈನಿಂದ ವಾಣಿಜ್ಯ ನಗರಿ ಮುಂಬೈಗೆ ಸ್ಥಳಾಂತರಗೊಂಡ ಇವರು ಪತಿಯ ಸಹಕಾರದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದು ಅದನ್ನೂ ಕರಗತ ಮಾಡಿಕೊಂಡರು.

1971 ರಿಂದ ಚಿತ್ರಗೀತೆಗಳಿಗೆ ಹಾಡಲು ಆರಂಭಿಸಿದ ಇವರು ಭಾರತದ ಪ್ರಮುಖ ಭಾಷೆಗಳ ಮೇರು ಗಾಯಕರೊಂದಿಗೆ ಹಾಡಿದ್ದಾರೆ.

ಇತ್ತೀಚಗಷ್ಟೇ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು.

LEAVE A REPLY

Please enter your comment!
Please enter your name here

Hot Topics