Thursday, December 2, 2021

ಉಡುಪಿ: ಅಕ್ಕಿ ಚೀಲ ಸಾಗಿಸುತ್ತಿದ್ದ ಪಿಕಪ್‌ ಟಯರ್‌ ಸ್ಪೋಟಗೊಂಡು ಪಲ್ಟಿ

ಉಡುಪಿ: ಕೋಟೇಶ್ವರದಿಂದ ಮಂಗಳೂರಿಗೆ ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಸ್ಫೋಟಗೊಂಡು, ಪಲ್ಟಿಯಾದ ಘಟನೆ ಮಂಗಳವಾರ ಪಡುಬಿದ್ರಿ ಕಿರು ಸೇತುವೆ ರಾ.ಹೆ 66 ರಲ್ಲಿ ಸಂಭವಿಸಿದೆ.


ಪಿಕಪ್ ವಾಹನ ಚಾಲಕನ ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿದ್ದು, ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.
ಪಿಕಪ್ ವಾಹನದಲ್ಲಿ ಕೋಟೇಶ್ವರದಿಂದ ಮಂಗಳೂರಿಗೆ ಟೈಗರ್ ಬ್ರಾಂಡ್ ಅಕ್ಕಿ ಹೇರಿಕೊಂಡು ಬರುತ್ತಿದ್ದು, ಇದ್ದಕ್ಕಿದಂತೆ ಟಯರ್ ಸ್ಫೋಟಗೊಂಡು ರಸ್ತೆಗೆ ಉರುಳಿ ಬಿದ್ದಿದೆ.

ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸದೆ ಇದ್ದುದರಿಂದ ಬಾರೀ ದುರಂತವೊಂದು ತಪ್ಪಿದೆ ಎನ್ನುತ್ತಾರೆ ಅಪಘಾತಕ್ಕೊಳಗಾದ ಪಿಕಪ್ ಚಾಲಕ. ಅಕ್ಕಿ ಚೀಲಗಳು ಒಡೆದು ಹೋಗಿ ಅಕ್ಕಿ ರಸ್ತೆ ಎಲ್ಲೆಡೆ ಚೆಲ್ಲಿದೆ.

ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ರಸ್ತೆಗಡ್ಡವಾಗಿ ಉರುಳಿದ ವಾಹನ ತೆರವು ಕಾರ್ಯ ನಡೆಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...