Connect with us

    DAKSHINA KANNADA

    ನಾರಾಯಣಗುರು ವೃತ್ತದ ಕಡೆಗಣನೆ; ಸಿಡಿದೆದ್ದ ಬಿರುವೆರ್ ಕುಡ್ಲದ ನಾಯಕ..!

    Published

    on

    ಮಂಗಳೂರು: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಮುನ್ನಲೆಗೆ ಬಂದಿದ್ದ ನಾರಾಯಣಗುರು ವೃತ್ತ ಈಗ ಚರ್ಚೆಗೆ ಕಾರಣವಾಗಿದೆ. ಕೇವಲ ರಾಜಕೀಯವಾಗಿ ಮಾತ್ರ ನಾರಾಯಣಗುರುಗಳನ್ನು ಬಳಕೆ ಮಾಡಿಕೊಳ್ಳಲಾಯಿತಾ ಎಂಬ ಚರ್ಚೆಗಳು ನಡಿತಾ ಇದೆ.


    ಇದಕ್ಕೆ ಕಾರಣ ಸದ್ಯ ನಾರಾಯಣಗುರು ವೃತ್ತದಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲ ಅದರ ನಿರ್ವಹಣೆಯೂ ನಡಿತಾ ಇಲ್ಲ. ಇದರಿಂದ ರಾತ್ರಿ ಹೊತ್ತಿನಲ್ಲಿ ವಾಹನಗಳು ವೃತ್ತಕ್ಕೆ ಡಿಕ್ಕಿಯಾಗಿ ವೃತ್ತ ಕೂಡಾ ಹಾಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು. ಈ ವಿಚಾರವಾಗಿ ಬಿರುವೆರ ಕುಡ್ಲದ ನಾಯಕ ಹಾಗೂ ನಾರಾಯಣಗುರು ವೃತ್ತದ ರೂವಾರಿ ಉದಯ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುಗಳಿಗೆ ಮಾಲಾರ್ಪಣೆ ಮಾಡಿ ಇಲ್ಲಿಂದಲೇ ರೋಡ್ ಶೋ ಆರಂಭಿಸಿದ್ದರು. ಈ ವೇಳೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತಾದರೂ ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಉದಯ ಪೂಜಾರಿಯವರನ್ನು ಹಾಗೂ ಕುದ್ರೋಳಿ ಕ್ಷೇತ್ರದವರನ್ನು ಕಡೆಗಣಿಸಲಾಗಿತ್ತು. ಸ್ವತಃ ಉದಯ ಪೂಜಾರಿ ಈ ವಿಚಾರವಾಗಿ ಮಾದ್ಯಮಗಳ ಮುಂದೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಬಿಲ್ಲವ ಯುವಕರು ಯೋಚಿಸಿ ಮತ ಹಾಕಿ ಎಂದು ಕರೆ ಕೂಡಾ ನೀಡಿದ್ದರು.

    ಉದಯ ಪೂಜಾರಿಯವರ ನೇತೃತ್ವದಲ್ಲಿ ಹಲವು ಹೋರಾಟಗಳ ಬಳಿಕ ನಾರಾಯಣಗುರು ವೃತ್ತ ನಿರ್ಮಾಣವಾಗಿತ್ತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಪ್ತನಾಗಿರುವ ಉದಯ ಪೂಜಾರಿಯನ್ನು ಕೇವಲ ರಾಜಕೀಯ ಕಾರಣಕ್ಕಾಗಿ ದೂರ ಇಡಲಾಗಿತ್ತು. ಅಷ್ಟು ಮಾತ್ರವಲ್ಲದೆ ನಾರಾಯಣಗುರು ವೃತ್ತ ನಿರ್ಮಾಣದಲ್ಲಿ ಉದಯ ಪೂಜಾರಿ ಪಾಲು ಏನು ಇಲ್ಲಾ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿಕೆ ಕೂಡಾ ನೀಡಿದ್ದರು. ಇದೆಲ್ಲವೂ ಅಂದು ರಾಜ್ಯ ಮಟ್ಟದ ಸುದ್ದಿಯಾಗಿತ್ತು. ಇಷ್ಟೆಲ್ಲಾ ಮಾಡಿದವರು ಇಂದು ನಾರಾಯಣಗುರು ವೃತ್ತವನ್ನು ಕಡೆಗಣಿಸಿದ್ದಾರೆ ಎಂಬ ಆರೋಪವನ್ನು ಉದಯ ಪೂಜಾರಿ ಮಾಡಿದ್ದಾರೆ.

    ನಾರಾಯಣಗುರುಗಳ ಬಗ್ಗೆ ಭಕ್ತಿ ಗೌರವ ಇರುವುದಾಗಿ ಬಿಂಬಿಸಿಕೊಂಡ ನಾಯಕರು ಈಗ ಗುರುಗಳನ್ನು ಮರೆತಿದ್ದಾರೆ ಎಂದು ಉದಯ ಪೂಜಾರಿ ಮತ್ತೆ ಅಸಮಾಧನ ಹೊರಹಾಕಿದ್ದಾರೆ. ಚುನಾವಣಾ ಸಮಯದಲ್ಲಿ ಗುರುಗಳನ್ನು ಹಾಡಿ ಹೊಗಳಿದವರು ಈಗ ಕನಿಷ್ಠ ಗುರುಗಳ ವೃತ್ತದ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದ್ದಾರೆ. ಎಲ್ಲಾ ಬಿಟ್ಟು ನಾರಾಯಣಗುರು ವೃತ್ತದ ನಿರ್ವಹಣೆಯನ್ನೇ ಮರೆತು ಬಿಟ್ಟಿದ್ದು, ಕನಿಷ್ಠ ಲೈಟ್ ಕೂಡಾ ಇಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಟೆಸ್ಟ್‌ ಡ್ರೈವ್ ನೆಪದಲ್ಲಿ ಶೋ ರೂಮ್‌ ಬೈಕ್‌ ಸಮೇತ ಪರಾರಿ..! ಹುಡುಕಿ ಕೊಡಲು ಮನವಿ.

    Published

    on

    ಬಂಟ್ವಾಳ : ಯಾವುದೇ ವಾಹನ ಖರೀದಿ ಮಾಡಬೇಕಾದ್ರೂ ಒಂದು ಬಾರಿ ಟೆಸ್ಟ್‌ ಡ್ರೈವ್ ಮಾಡೋದು ಮಾಮೂಲಿ ವಿಚಾರ. ಹೀಗಾಗಿ ಗಿರಾಕಿ ಬಂದು ವಾಹನ ಇಷ್ಟಪಟ್ಟು ಟೆಸ್ಟ್‌ ಡ್ರೈವ್ ಕೇಳಿದ್ರೆ ಶೋ ರೂಮ್‌ ನವರು ಕೂಡಾ ಅದಕ್ಕೆ ಅವಕಾಶ ಕೊಡ್ತಾರೆ. ಆದ್ರೆ ಇಲ್ಲೊಬ್ಬ ಗಿರಾಕಿ ಶೋರೂಮ್‌ ಬೈಕ್‌ ನಲ್ಲಿ ಟೆಸ್ಟ್‌ ಡ್ರೈವ್ ಹೋಗಿದ್ದು ಮತ್ತೆ ಶೋ ರೂಮ್‌ಗೆ ವಾಪಾಸಾಗದೆ ಜೂಟ್ ಆಗಿದ್ದಾನೆ.

    ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಶೋ ರೂಮ್‌ ಒಂದರಲ್ಲಿ ಈ ಘಟನೆ ನಡೆದಿದೆ. ಯಮಹಾದ ಯಶಸ್ವಿ ರೈಸ್‌ ಶೋರೂಮ್‌ನಲ್ಲಿ ಈ ಘಟನೆ ನಡೆದಿದ್ದು ಬೈಕ್ ಸಮೇತ ಗಿರಾಕಿ ನಾಪತ್ತೆಯಾಗಿದ್ದಾನೆ. ಬೈಕ್ ಖರೀದಿಗೆ ಬಂದಿದ್ದ ಯುವಕ ಟೆಸ್ಟ್‌ ಡ್ರೈವ್ ಕೇಳಿದ್ದು, ಶೋ ರೂಮಿನಲ್ಲಿದ್ದ ನೀಲಿ ಬಣ್ಣದ R15 V ತೆಗೆದುಕೊಂಡು ಹೋಗಿದ್ದ. ಆದರೆ ಹಲವು ಸಮಯ ಕಳೆದರೂ ಆತ ವಾಪಾಸು ಬಾರದೇ ಇದ್ದಾಗ ಸಿಬ್ಬಂದಿಗೆ ಅನುಮಾನ ಬಂದಿದೆ. ವಿಚಾರಿಸಿದಾಗ ಆತ ಬೈಕ್ ಸಮೇತ ಮಂಗಳೂರು ಕಡೆ ಪ್ರಯಾಣಿಸಿದ ಮಾಹಿತಿ ಲಭ್ಯವಾಗಿದೆ.

    ನೀಲಿ ಬಣ್ಣದ ಹೊಸ R15 V ಬೈಕ್ ಕಾಣ ಸಿಕ್ಕರೆ ತಕ್ಷಣ ಮಾಹಿತಿ ನೀಡಿದ ಅಂತ ಶೋ ರೂಮ್ ಮಾಲೀಕರು ಮನವಿ ಮಾಡಿದ್ದಾರೆ. ಮೊಬೈಲ್ ಸಂಖ್ಯೆ 9164160081/89706260754 ಇದಕ್ಕೆ ಮಾಹಿತಿ ನೀಡಿ ಅಂತ ಮನವಿ ಮಾಡಿಕೊಂಡಿದ್ದಾರೆ.

    Continue Reading

    DAKSHINA KANNADA

    ಸಿದ್ಧಕಟ್ಟೆ: ಕರಾವಳಿಯ ಇತಿಹಾಸ ಸೃಷ್ಟಿಸಿದ ರೋಟರಿ ಕಂಬಳ ಕೂಟ

    Published

    on

    ಸಿದ್ಧಕಟ್ಟೆ: ಕರಾವಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮರಿ ಕೋಣಗಳ ವಿಭಾಗದ ಕಂಬಳವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಲೋರೆಟ್ಟೋ ಹಿಲ್ಸ್‌ ರೋಟರಿ ಕ್ಲಬ್‌ ವತಿಯಿಂದ ಆಯೋಜಿಸಲಾಗಿತ್ತು.

    ಸಬ್‌ ಜ್ಯೂನಿಯರ್ ವಿಭಾಗದ ಹಗ್ಗ ಮತ್ತು ನೇಗಿಲು ವಿಭಾಗದಲ್ಲಿ ಈ ಕಂಬಳ ಓಟ ನಡೆದಿದ್ದು, ಸುಮಾರು 85 ಜೋಡಿ ಕೋಣಗಳು ಈ ಕಂಬಳ ಕೂಟದಲ್ಲಿ ಭಾಗವಹಿಸಿದೆ. ಕೊಡಂಗೆ ವೀರ ವಿಕ್ರಮ ಜೋಡುಕರೆಯಲ್ಲಿ ಈ ಹೊಸ ಪ್ರಯೋಗ ನಡೆಸಲಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ.


    ರೋಟರಿಕ್ಲಬ್‌ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಳದ ಮುಕ್ತೇಸರರಾದ ಎಂ ಪದ್ಮರಾಜ್ ಬಳ್ಳಾಲ್‌ ಅವರು ಕರೆಯನ್ನು ಉದ್ಘಾಟಿದರು.

    ಈ ವೇಳೆ ಮಾತನಾಡಿದ ರೋಟರು ಅಧ್ಯಕ್ಷ ಸುರೇಶ್ ಶೆಟ್ಟಿ ಇದು ಎಲ್ಲಾ ಸಂಘಟನೆಗಳಿಗೂ ಹೊಸ ದಿಕ್ಕು ತೋರಿಸಿದ ಕೂಟವಾಗಿದ್ದು, ಈ ಹೊಸ ಪ್ರಯೋಗಕ್ಕೆ ಎಲ್ಲರಿಂದಲೂ ಉತ್ತಮ ಬೆಂಬಲ ಸಿಕ್ಕಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಸಬ್‌ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ 79 ಜೊತೆ ಹಾಗೂ ಹಗ್ಗ ವಿಭಾಗದಲ್ಲಿ 6 ಜೊತೆಗಳು ಭಾಗವಹಿಸುವ ಮೂಲಕ ಕಂಬಳ ಕೂಟ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

     

    ಹಿರಿಯ ವೈದ್ಯ ಡಾ.ಪ್ರಭಾಚಂದ್ರ ಜೈನ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ ಕಾರಂತ್, ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಸಹಾಯಕ ಗವರ್ನರ್ ಡಾ.ಮುರಳಿಕೃಷ್ಣ, ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಮೂಡುಬಿದ್ರೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಜೈನ್, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸ್ಯಾಂಕ್ಟಿಸ್ ಶುಭ ಹಾರೈಸಿದರು.

     

    ಕಂಬಳದಲ್ಲಿ ಭಾಗವಹಿಸಿದ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ 79 ಜೊತೆ ಮತ್ತು ಹಗ್ಗ ವಿಭಾಗದಲ್ಲಿ 6 ಜೊತೆ ಸೇರಿದಂತೆ ಒಟ್ಟು 85 ಜೋಡಿ ಮರಿ ಕೋಣಗಳು ಪಾಲ್ಗೊಂಡು ಗಮನ ಸೆಳೆಯಿತು.

    Continue Reading

    DAKSHINA KANNADA

    ವಿದ್ಯುತ್ ತಂತಿಯೊಂದಿಗೆ ಸಾ*ಹಸ : ಸಾ*ವಿಗೀಡಾದ ವ್ಯಕ್ತಿ

    Published

    on

    ಬೆಳ್ತಂಗಡಿ : ನಾರವಿ ಗ್ರಾಮದ ನಜೋಡಿ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ, ವ್ಯಕ್ತಿಯೋರ್ವರು ಮೃ*ತಪಟ್ಟ ಘಟನೆ ಅ.19 ರಂದು ನಡೆದಿದೆ.


    ಮೃ*ತಪಟ್ಟ ವ್ಯಕ್ತಿ ಮೋಂಟ ಮಲೆಕುಡಿಯ (76) ಎಂದು ಗುರುತಿಸಲಾಗಿದೆ.

    ಮನೆ ಸಮೀಪವಿರುವ ಎಲ್‌.ಟಿ ವಿದ್ಯುತ್ ಲೈನ್‌ನ ಮೇಲೆ ಬಿದ್ದ ತೆಂಗಿನ ಗರಿಯನ್ನು ದೋಂಟಿಯ ಮೂಲಕ ತೆಗೆಯಲು ಹೋದ ಸಂದರ್ಭ ಲೈನ್ ಶಾರ್ಟ್ ಆಗಿ ತಂತಿ ತುಂಡಾಗಿ ನೆಲಕ್ಕೆ ಬಿದ್ದು ಅದನ್ನು ಬೇರ್ಪಡಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಗಲಿದೆ ಎಂದು ಶಂಕಿಸಲಾಗಿದೆ.

     

     

    ಇದನ್ನೂ ಓದಿ: ಸುಳ್ಯ: ಶಂಕಿತ ಇಲಿ ಜ್ವರಕ್ಕೆ ಯುವಕ ಮೃತ್ಯು

     

    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending