Connect with us

    LATEST NEWS

    ಸ್ಥಳ-ಸಮಯದ ಕಾರಣ, ಕೇವಲ12 ರಾಜ್ಯ ಮಾತ್ರ ಆಯ್ಕೆ: ರಕ್ಷಣಾ ಸಚಿವಾಲಯ

    Published

    on

    ದೆಹಲಿ: ದೆಹಲಿ ಗಣರಾಜ್ಯೋತ್ಸವದ ಪರೇಡ್‌ನ ಸ್ತಬ್ಧಚಿತ್ರಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. 12 ರಾಜ್ಯಗಳು ಮತ್ತು ಒಂಬತ್ತು ಸಚಿವಾಲಯಗಳ ಸ್ತಬ್ಧಚಿತ್ರಗಳು ಪರೇಡ್‌ನಲ್ಲಿ ಭಾಗವಹಿಸುತ್ತವೆ.


    ಸೀಮಿತ ಸ್ಥಳ ಮತ್ತು ಸಮಯದ ಕಾರಣದಿಂದಾಗಿ 12 ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಶನಿವಾರ ಶಿಬಿರದಲ್ಲಿದ್ದ ರಕ್ಷಣಾ ಸಚಿವಾಲಯದ ಪಿಆರ್ ಒ ನಂಬಿಬೌ ಮರಿನ್ಮಾಯಿ ಹೇಳಿದ್ದಾರೆ.
    “ಹಲವು ರಾಜ್ಯಗಳು ಈ ಬಗ್ಗೆ ದನಿಯೆತ್ತಿವೆ. ನಮಗೆ ಸೀಮಿತ ಸ್ಥಳ, ಸೀಮಿತ ಸಮಯವಿದೆ. ಕಲೆ, ಸಂಗೀತ, ಸಂಸ್ಕೃತಿ ಮತ್ತು ಇತರ ಪರಿಣತಿಯ ತಜ್ಞರ ಸಮಿತಿ ಇದೆ.

    ಸಮಿತಿಯು ಈ ವಿಷಯಗಳನ್ನು ಪರಿಶೀಲಿಸಿದೆ. ಸ್ತಬ್ಧಚಿತ್ರ ಪ್ರದರ್ಶಿಸಲು ನಾವು 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಆದರೆ ಸ್ಥಳ ಮತ್ತು ಸಮಯದ ಕಾರಣ, ನಾವು 12 ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ.

    ಬೇರೆ ಯಾವುದೇ ಕಾರಣವಿಲ್ಲ, ”ಎಂದು ಮರಿನ್ಮಾಯಿ ಹೇಳಿದರು. ಪರೇಡ್‌ಗೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದರು.

    LATEST NEWS

    2025 ರ ಮಹಾಶಿವರಾತ್ರಿ ಯಾವಾಗ ಗೊತ್ತಾ ? ಏನಿದರ ವಿಶೇಷತೆ ?

    Published

    on

    ಚಂದ್ರನ ತಿಂಗಳ ಹದಿನಾಲ್ಕನೇ ದಿನ ಅಥವಾ ಅಮವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ, ಇದನ್ನು ಮಹಾದೇವನ ಅತ್ಯಂತ ನೆಚ್ಚಿನ ಹಬ್ಬವೆಂದು ಪರಿಗಣಿಸಲಾಗಿದ್ದು, ‘ಮಹಾಶಿವರಾತ್ರಿ’ ಎನ್ನಲಾಗುತ್ತದೆ.

    ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದಲ್ಲಿ ಆಚರಿಸಲಾಗುತ್ತದೆ. ಶಿವನ ಶ್ರೇಷ್ಠತೆಯನ್ನು ಪುರಾಣಗಳು, ವೇದಗಳು ಮತ್ತು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿವರಿಸಲಾಗಿದೆ. ಮಹಾಶಿವರಾತ್ರಿಯ ರಾತ್ರಿ ಶಿವನು ಲಿಂಗರೂಪದಲ್ಲಿ ನೆಲೆಸುತ್ತಾನೆ. ಈ ದಿನ ಶಿವನ ಆರಾಧನೆಯು ಎಲ್ಲಾ ತೊಂದರೆಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಈ ವರುಷ (2025) ಮಹಾಶಿವರಾತ್ರಿ ಯಾವಾಗ ಮತ್ತು ಪೂಜೆಯ ಮಂಗಳಕರ ಸಮಯ ಯಾವುದು ಎಂಬುದನ್ನು ತಿಳಿಯೋಣ. ಕೌಟುಂಬಿಕ ಜೀವನ ಮತ್ತು ಲೌಕಿಕ ಮಹತ್ವಾಕಾಂಕ್ಷೆಗಳಲ್ಲಿ ಮುಳುಗಿರುವ ಜನರಿಗೆ ಮಹಾಶಿವರಾತ್ರಿಯನ್ನು ಆಚರಿಸುವ ಉದ್ದೇಶಗಳು ವಿಭಿನ್ನವಾಗಿವೆ. ಕೌಟುಂಬಿಕ ಜೀವನದಲ್ಲಿ ಮಗ್ನರಾಗಿರುವ ಜನರು ಮಹಾಶಿವರಾತ್ರಿಯನ್ನು ಶಿವನ ಮದುವೆಯ ಹಬ್ಬದಂತೆ ಆಚರಿಸುತ್ತಾರೆ. ಲೌಕಿಕ ಮಹತ್ವಾಕಾಂಕ್ಷೆಗಳಲ್ಲಿ ಮುಳುಗಿರುವ ಜನರು ಮಹಾಶಿವರಾತ್ರಿಯನ್ನು ಶಿವ ತನ್ನ ಶತ್ರುಗಳ ಮೇಲೆ ವಿಜಯ ಸಾಧಿಸಿದ ದಿನವೆಂದು ಆಚರಿಸುತ್ತಾರೆ.

    ಮಹಾಶಿವರಾತ್ರಿ ದಿನಾಂಕ :

    26 ಫೆಬ್ರವರಿ 2025 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಶಿವ ಮತ್ತು ಆದಿಶಕ್ತಿಯ ದೈವಿಕ ಶಕ್ತಿಗಳು ಒಟ್ಟಿಗೆ ಸೇರುತ್ತವೆ. ಮಹಾಶಿವರಾತ್ರಿಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ನಂಬಿಕೆಗಳಿವೆ. ಶಿವರಾತ್ರಿ ಮನುಷ್ಯನ ಆಧ್ಯಾತ್ಮಿಕ ಉತ್ತುಂಗವನ್ನು ತಲುಪಲು ಪ್ರಕೃತಿ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

    ಮುಹೂರ್ತ :

    ನಿಶಿತಾ ಕಾಲ ಪೂಜೆ ಸಮಯ -ತಡರಾತ್ರಿ 12:09 ರಿಂದ ರಾತ್ರಿ 12:59 ವರೆಗೆ, ಫೆಬ್ರವರಿ 27
    ಶಿವರಾತ್ರಿ ಪಾರಣ ಸಮಯ – 06:48 ಬೆಳಗ್ಗೆ – 08:54 ಬೆಳಗ್ಗೆ (27 ಫೆಬ್ರವರಿ)

    ಫಾಲ್ಗುಣ ಕೃಷ್ಣ ಚತುರ್ದಶಿ ದಿನಾಂಕ ಪ್ರಾರಂಭವಾಗುತ್ತದೆ – 26 ಫೆಬ್ರವರಿ 2025, ತಡರಾತ್ರಿ 11.08
    ಫಾಲ್ಗುಣ ಕೃಷ್ಣ ಚತುರ್ದಶಿ ದಿನಾಂಕ ಕೊನೆಗೊಳ್ಳುತ್ತದೆ – 27 ಫೆಬ್ರವರಿ 2025, ಬೆಳಿಗ್ಗೆ 8.54
    ರಾತ್ರಿ ಪ್ರಥಮ ಪ್ರಹಾರ ಪೂಜೆ ಸಮಯ – 06:19 PM – 09:26 PM
    ರಾತ್ರಿ ಎರಡನೇ ಪ್ರಹಾರ ಪೂಜೆ ಸಮಯ – 09:26 pm – 12:34 am
    ರಾತ್ರಿ ತೃತೀಯ ಪ್ರಹಾರ ಪೂಜೆ ಸಮಯ – 12:34 am – 03:41 am
    ರಾತ್ರಿ ಚತುರ್ಥಿ ಪ್ರಹಾರ ಪೂಜೆ ಸಮಯ – 03:41 am – 06:48 am

    Continue Reading

    LATEST NEWS

    ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು

    Published

    on

    ಮಂಗಳೂರು/ಕಾರವಾರ : ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ಸಮೀಪ ತರಕಾರಿ ತುಂಬಿದ್ದ ಲಾರಿ ಬುಧವಾರ ನಸುಕಿನ ಜಾವ ಪಲ್ಟಿಯಾಗಿ, ಅದರಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ.

     

    ಲಾರಿಯಲ್ಲಿ ತರಕಾರಿ ದಾಸ್ತಾನಿನ ಜೊತೆಗೆ 25ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು. ಇವರೆಲ್ಲಾ ಕುಮಟಾದಲ್ಲಿ ನಡೆಯುವ ವಾರದ ಸಂತೆಗೆ ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ತರಕಾರಿ ಸಾಗಿಸುವ ವೇಳೆ ಈ ದುರ್ಘಟನೆ ನಡೆದಿದೆ. ಮೃತರೆಲ್ಲರೂ ತರಕಾರಿ ವ್ಯಾಪಾರಿಗಳು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!

    ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಲಾರಿ ಉರುಳಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ ಎಂದು ಯಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

    Continue Reading

    DAKSHINA KANNADA

    ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!

    Published

    on

    ಮಂಗಳೂರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಯನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಓರ್ವನಿಗೆ ಪೊಲೀಸರು ಹಾರಿಸಿದ ಗುಂಡು ಕಾಲಿಗೆ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ಜ.17ರಂದು ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

         ಆರೋಪಿ ರಾಜೇಂದ್ರನ್

    ತಮಿಳುನಾಡು ಸಮೀಪದ ಪದ್ಮನೇರಿ ಗ್ರಾಮದಲ್ಲಿ ಬಂಧಿಸಿ ಕರೆತರಲಾಗಿದ್ದು ಇಂದು ಸ್ಥಳ ಮಹಜರು ನಡೆಸಲಾಗಿದೆ. ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಜಂಟಿಯಾಗಿ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಣಿವಣ್ಣನ್‌ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಿಸಿಬಿ ಇನ್‌ಸ್ಪೆಕ್ಟರ್‌ ರಫೀಕ್‌ ಅವರು ಆತನ ಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.

    ಪ್ರಮುಖ ಆರೋಪಿ ಮುರಗಂಡಿ ತೇವರ್

    ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ನಗರದ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    Continue Reading

    LATEST NEWS

    Trending