ಮಂಗಳೂರು: ಗಣರಾಜ್ಯೋತ್ಸವದ ಪರೇಡ್ ಸಮಿತಿ ನಿಯಮ ಉಲ್ಲಂಘನೆ ಮಾಡಿದ ರಾಜ್ಯಗಳ ಸ್ತಬ್ದಚಿತ್ರಗಳನ್ನು ನಿರಾಕರಿಸಿದೆ. ಇದರಲ್ಲಿ ಕೇರಳವಲ್ಲದೇ ಪಶ್ಚಿಮಬಂಗಾಳ, ತಮಿಳುನಾಡು ರಾಜ್ಯಗಳು ಸೇರಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ನಾರಾಯಣ ಗುರು ಸ್ತಬ್ಥ ಚಿತ್ರ ಪ್ರಸ್ತಾವನೆ ತಿರಸ್ಕಾರದ ಬಗ್ಗೆ ಟ್ವೀಟ್ ಮಾಡಿದ ಅವರು ‘ಗಣರಾಜ್ಯೋತ್ಸವದ ಪರೇಡ್ ಸಮಿತಿ ನಿಯಮ ಉಲ್ಲಂಘನೆ ಮಾಡಿದ ರಾಜ್ಯಗಳ ಸ್ತಬ್ದಚಿತ್ರಗಳನ್ನು ನಿರಾಕರಿಸಿದೆ.
ಇದರಲ್ಲಿ ಕೇರಳವಲ್ಲದೇ ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳು ಸೇರಿವೆ ಮೂಲಕ ನಿಯಮಾವಳಿ ಗೊತ್ತಿದ್ದೂ, ಬೇಕೆಂದೇ ತಿರಸ್ಕ್ರೃತಗೊಳ್ಳಲು ಕಮ್ಯುನಿಸ್ಟ್ ಸರ್ಕಾರ ಶಂಕರಾಚಾರ್ಯರ, ಜಟಾಯು, ನಾರಾಯಣ ಗುರುಗಳ ಚಿತ್ರವನ್ನ ವಿವಾದ ಸೃಷ್ಠಿಸಲು ಕಳುಹಿಸಿತ್ತು.
ಮತ್ತೊಂದು ಟ್ವೀಟ್‌ನಲ್ಲಿ, ನಾರಾಯಣ ಗುರುಗಳ ಹೆಸರನ್ನು ಅನಗತ್ಯವಾಗಿ ಪ್ರಸ್ತಾಪಿಸುತ್ತಾ, ಸಮಾಜವನ್ನು ಒಡೆಯುವ ಷಡ್ಯಂತ್ರಗಳು ಕೆಲದಿನಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಕೇರಳದ ಕಮ್ಯುನಿಸ್ಟ್ ಸರ್ಕಾರ ಉದ್ದೇಶಪೂರ್ವಕವಾಗಿ ನಾರಾಯಣ ಗುರುಗಳ ಹೆಸರನ್ನು ಬಳಸಿಕೊಂಡು ವಿವಾದ ಸೃಷ್ಠಿಸುವ ಕೆಲಸ ಮಾಡಿದೆ ಎಂದಿದ್ದಾರೆ.