Sunday, May 22, 2022

ಕಾರ್ಕಳ: ರಾಘವೇಂದ್ರ ಮಯ್ಯರಿಗೆ ಇಂದು ‘ಕುಂದೇಶ್ವರ ಸಮ್ಮಾನ್’ ಪ್ರಶಸ್ತಿ

ಉಡುಪಿ: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದಿಂದ ನೀಡಲಾಗುವ ಕುಂದೇಶ್ವರ ಸಮ್ಮಾನ್ -2022 ಪ್ರಶಸ್ತಿಗೆ ಯಕ್ಷಗಾನಗಂಧರ್ವ ರಾಘವೇಂದ್ರ ಮಯ್ಯ ಹಾಲಾಡಿ ಭಾಜನರಾಗಿದ್ದಾರೆ.


ಜ.23ರಂದು ಕುಂದೇಶ್ವರ ಕ್ಷೇತ್ರದ ಉತ್ಸವ ಸಂದರ್ಭ ಸಂಜೆ 6 ಗಂಟೆಗೆ ಸಾಂಕೇತಿಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ ಕದ್ರಿ ಯಕ್ಷಕೂಟದವರಿಂದ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.

ಯಕ್ಷಗಾನದಲ್ಲಿ ತನ್ನದೇ ಆದ ಶೈಲಿಯಿಂದ ಅಭಿಮಾನಿಗಳ ಸ್ನೇಹ-ವಿಶ್ವಾಸ-ಪ್ರೀತಿ ಗಳಿಸಿರುವ ಸ್ನೇಹಜೀವಿ-ಸರಳ ಸಜ್ಜನ ರಾಘವೇಂದ್ರ ಮಯ್ಯ ಹಾಲಾಡಿ ಅವರು‌ ಶ್ರೀ ಕಾಳಿಂಗ ನಾವಡರ ನೆನಪಿನ ಜತೆಗೆ ಯಕ್ಷಮಾತೆಯ ಸೇವೆಯಲ್ಲಿ 4 ದಶಕಗಳಿಂದ ತೊಡಗಿಸಿಕೊಂಡಿದ್ದಾರೆ.
ತಮ್ಮ ಹದಿನೈದನೇ ವಯಸ್ಸಿನಲ್ಲಿ ರಂಗಸ್ಥಳದಲ್ಲಿ ಭಾಗವತರಾಗಿ ಹೊರಹೊಮ್ಮಿದರು.


ಉಡುಪಿ ಜಿಲ್ಲೆ ಕುಂದಾಪುರದ ಹಾಲಾಡಿಯ ರಾಘವೇಂದ್ರ ಅವರು ಯಕ್ಷಗುರು ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಅವರ ಯಕ್ಷಗಾನ ಪ್ರತಿಭೆಯಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಬಂದವರು.

ಒಂಬತ್ತನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಉಪ್ಪೂರ ಬಳಿ ಭಾಗವತಿಕೆ ತರಬೇತಿ ಪಡೆದರು. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆಯ ಮಟ್ಟು ತಿಟ್ಟುಗಳನ್ನು ಕಲಿತರು.

ಮಯ್ಯ ಅವರು ಅಮೃತೇಶ್ವರಿ ಮೇಳದಲ್ಲಿ ಉಪ್ಪೂರರ ಜತೆ ಸಂಗೀತಗಾರನಾಗಿ ಸೇರಿ ತನ್ನ ಕಲಾಯಾನ ಶುರು ಮಾಡಿದರು. ಬಯಲಾಟ ಮೇಳಗಳಲ್ಲಿಯೂ ನಿರಂತರ ಒಡನಾಟ ಕಾಪಾಡಿಕೊಂಡರು.

ರಾಘವೇಂದ್ರ ಮಯ್ಯ ಅವರ ಯಕ್ಷರಂಗದ ಯಾನಕ್ಕೆ ಈಗ 40ರ ಹರೆಯ. ಅವರ ಹಾಡಿದ ಪದ್ಯಗಳು ಎಷ್ಟೋ ಜನರ ಮೊಬೈಲ್ ರಿಂಗ್‌ಟೋನ್‌ಗಳಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿ.

LEAVE A REPLY

Please enter your comment!
Please enter your name here

Hot Topics

ಮನಪಾ ವ್ಯಾಪ್ತಿಯಲ್ಲಿ 1 ಕೋಟಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಮಂಗಳೂರು: ಮಹಾನಗರ ಪಾಲಿಕೆಯ ಕದ್ರಿ ದಕ್ಷಿಣ ವಾರ್ಡಿನಲ್ಲಿ 1 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.ಈ ಕುರಿತು ಮಾತನಾಡಿದ ಅವರು, ಕದ್ರಿ...

ಕಾಂಗ್ರೆಸ್ ನಾರಾಯಣ ಗುರು ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಬಿಜೆಪಿ

ಮಂಗಳೂರು: ಕಾಂಗ್ರೆಸ್ ಮತ್ತು ಮಾಜಿ ಶಾಸಕ ಜೆ ಆರ್ ಲೋಬೋ ಅವರು ಗೊಂದಲ ಸೃಷ್ಟಿಸಿ ನಾರಾಯಣ ಗುರುಗಳ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್...

ಕಾಂಗ್ರೆಸ್‌ನಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ: ಬಿಜೆಪಿ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ? ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು? ಎಂದು ಕಾಂಗ್ರೆಸ್‌ ಅನ್ನು ಬಿಜೆಪಿ ಟ್ವೀಟ್‌ನಲ್ಲಿ ಕುಟುಕಿದೆ.ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ...