Friday, September 30, 2022

ಮಂಗಳೂರು: ಸುಳ್ಳು ಹೇಳಿ ನಂಬಿಸಿದ ವಂಚಕ-5,35,000 ರೂ. ಕಳೆದುಕೊಂಡ ಇಂಜಿನಿಯರ್‌..!

ಮಂಗಳೂರು: ಮಂಗಳೂರಿನ ವ್ಯಕ್ತಿಯೊಬ್ಬರಿಂದ ಮೊಬೈಲ್‌ ಒಟಿಪಿ ಪಡೆದು ಅವರ ಗೋವಾದ ಪಣಜಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ ಖಾತೆಯಿಂದ 5.35 ಲಕ್ಷ ರೂ. ವಂಚನೆ ಎಸಗಿದ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರಿನ ಸೈಬರ್‌ ಕ್ರೈಮ್‌ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಮಂಗಳೂರಿನ ಮಠದ ಕಣಿ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿಯೊಬ್ಭರು ಪುತ್ರನ ಜತೆ ವಾಸವಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತನ್ನ ಹೆಸರು ಸುನಿಲ್‌ ಶರ್ಮ ಎಂದು ಪರಿಚಯಿಸಿ ‘ನನ್ನ ಸಹೋದರ ನಿಮ್ಮ ಮೊಬೈಲ್ ನಂಬ್ರವನ್ನು ನನಗೆ ನೀಡಿದ್ದು ನೀವು ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ಸಮಯ ನನ್ನ ತಮ್ಮ ನಿಮ್ಮೊಂದಿಗೆ ವಿದ್ಯಾಭ್ಯಾಸವನ್ನು ಮಾಡಿರುತ್ತಾನೆ.

ಆ ನನ್ನ ಸಹೋದರನಿಗೆ ಆಪರೇಷನ್ ಮಾಡಲು ಸುಮಾರು 5 ಲಕ್ಷ ರೂಪಾಯಿಗಳ ಅಗತ್ಯವಿದೆ’ ಎಂದು ಹೇಳಿದ್ದಾನೆ. ಇದನ್ನು ಸತ್ಯ ಎಂದು ನಂಬಿದ ಈ ವ್ಯಕ್ತಿ ವಂಚಕ ಹೇಳಿದಂತೆ ಮಾಡಿದ್ದಾರೆ.

ಈ ವ್ಯಕ್ತಿಯ ಪಣಜಿ ಐಸಿಐಸಿಐ ಬ್ಯಾಂಕ್ ಖಾತೆಯ ಓಟಿಪಿ ನಂಬ್ರವನ್ನು ಪಡೆದ ವಂಚಕ ಡೆಬಿಟ್ ಕಾರ್ಡ್ ಮುಖಾಂತರ ಮೊದಲು 4,5 ಲಕ್ಷ ರೂ. ಹಾಗೂ ಬಳಿಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಒಟ್ಟು 5,35 ಲಕ್ಷ ರೂ. ವರ್ಗಾಯಿಸಿ ವಂಚಿಸಿದ್ದಾರೆ.

ಈ ವಂಚನೆ 2022 ಜನವರಿ 24 ರಂದು ನಡೆದಿದ್ದು, ಈ ಬಗ್ಗೆ ಗೋವಾ ರಾಜ್ಯದ ಪಣಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣವು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಮೂಲಕ ಸೈಬರ್‌ ಕ್ರೈಮ್‌ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಬಸ್ & ಸ್ಕೂಟರ್ ಢಿಕ್ಕಿ-ಸವಾರನಿಗೆ ಗಂಭೀರ ಗಾಯ

ಬಂಟ್ವಾಳ: ಬಸ್ಸು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಬೈಕ್...

ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಕುಸಿತ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ

ಬೈಂದೂರು: ಉಡುಪಿ ಜಿಲ್ಲೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ನಿರ್ಮಾಣ ಹಂತದ ಜೆಟ್ಟಿ ಕುಸಿತವಾದ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿದ ಅವರು 'ಜೆಟ್ಟಿಯ 150 ಮೀಟರಿಗೂ...

ಮಂಗಳೂರು: ರಥಬೀದಿ ವೆಂಕಟರಮಣ ದೇಗುಲಕ್ಕೆ ಪತ್ನಿ ಜೊತೆ ಭೇಟಿ ಕೊಟ್ಟ ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ

ಮಂಗಳೂರು: ನಗರದ ರಥಬೀದಿ ವೆಂಕಟರಮಣ ದೇವಸ್ಥಾನ, ಆಚಾರ್ಯಮಠ ವಠಾರದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿರುವ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ...