Connect with us

LATEST NEWS

ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡುವವರೇ ಎಚ್ಚರ: ಸದ್ಯದಲ್ಲೇ ಕಿಸೆಗೆ ಕತ್ತರಿ

Published

on

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ತರಿಸುವ ಫುಡ್‌ ಪ್ರೀಯರಿಗೆ ಶೀಘ್ರವೇ ಬೆಲೆ ಏರಿಕೆಯ ಬಿಸಿ ತಟ್ಟುವ ನಿರೀಕ್ಷೆ ಇದೆ.

ಆನ್‌ಲೈನ್‌ ಫುಡ್‌ ಡೆಲಿವರಿಯನ್ನೂ ಜಿಎಸ್‌ಟಿ ಅಡಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸೆಪ್ಟೆಂಬರ್‌ 17 ರಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.


ಒಂದು ವೇಳೆ ಚರ್ಚೆಯಲ್ಲಿ ಒಪ್ಪಿಗೆಯಾದರೇ ಆನ್‌ಲೈನ್‌ ಫುಡ್‌ ಡೆಲಿವರಿ ಕೂಡ ಜಿಎಸ್‌ಟಿ ಅಡಿಯಲ್ಲಿ ಬರಲಿದ್ದು, ಜೊಮ್ಯಾಟೋ, ಸ್ವಿಗ್ಗಿ ಮೂಲಕ ಆಹಾರ ತರಿಸುವವರ ಜೇಬು ಭಾರವಾಗಲಿದೆ.

ಆನ್‌ಲೈನ್‌ ಫುಡ್‌ ಡೆಲಿವರಿಗೂ ತೆರಿಗೆ ವಿಧಿಸಬೇಕು ಎಂದು ಜಿಎಸ್‌ಟಿ ಸಮಿತಿ, ಜಿಎಸ್‌ಟಿ ಕೌನ್ಸಿಲ್‌ಗೆ ಶಿಫಾರಸ್ಸು ಮಾಡಿದ್ದು,

ಡೈನ್‌ ಇನ್‌, ಡೋರ್ ಡೆಲಿವರಿ, ಟೇಕ್‌ ಅವೇ, ಸೆಂಟ್ರಲ್‌ ಕಿಚನ್‌ ಮುಂತಾದವುಗಳು ‘ರೆಸ್ಟೋರೆಂಟ್‌ ಸೇವೆಗಳ’ ಪರಿಧಿಯಲ್ಲಿ ಬರಲಿವೆಯಾ ಎನ್ನುವ ಚರ್ಚೆಯೂ ನಡೆಯಲಿದೆ.
ಆನ್‌ಲೈನ್‌ ಫುಡ್‌ ಡೆಲಿವರಿಗೆ ತೆರಿಗೆ ವಿಧಿಸಲು ಎರಡು ಪ್ರಸ್ತಾಪಗಳನ್ನು ಇಡಲಾಗಿದೆ. ಮೊದಲನೆಯದು, ಆನ್‌ಲೈನ್ ಡೆಲಿವರಿಯನ್ನು ‘ಡೀಮ್ಡ್‌ ಸಪ್ಲೈಯರ್ಸ್‌’ ಎಂದು ಪರಿಗಣಿಸುವುದು.

ಇದರಲ್ಲಿ ರೆಸ್ಟೋರೆಂಟ್‌ನಿಂದ ಡೆಲಿವರಿ ಪಾರ್ಟ್ನರ್‌ ವರೆಗಿನ ಸೇವೆಗೆ ಇನ್ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನೊಂದಿಗೆ ಶೇ.18 ರಷ್ಟು ತೆರಿಗೆ ವಿಧಿಸುವುದು. ಇನ್ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಇಲ್ಲದೇ ಶೇ.5 ರಷ್ಟು ತೆರಿಗೆ ವಿಧಿಸುವುದು.

LATEST NEWS

ಬಸ್‌ ಆಯ್ತು..ಟ್ರೈನ್ ಆಯ್ತು.! ವಿಮಾನದಲ್ಲೂ ಸೀಟ್‌ಗಾಗಿ ಪ್ರಯಾಣಿಕರ ಕಚ್ಚಾಟ.!! ಆಗಿದ್ದೇನು?

Published

on

ಕ್ಯಾಲಿಫೋರ್ನಿಯ: ನಾವು ಬಸ್ ಟ್ರೈನ್‌ಗಳಲ್ಲಿ ಸೀಟ್‌ಗಾಗಿ ಪ್ರಯಾಣಿಕರು ಹೊಡೆದಾಡುವ ದೃಶ್ಯ ನೋಡಿದ್ದೇವೆ. ಆದರೆ ಇಲ್ಲೊಂದು ಆಕಾಶದಲ್ಲಿ ಹಾರುವ ವಿಮಾನದಲ್ಲಿಯೂ ಕೂಡಾ ಇದೇ ರೀತಿ ಸೀಟ್‌ಗಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ. ತೈವಾನ್‌ನಿಂದ ಕ್ಯಾಲಿಫೋರ್ನಿಯಾ ಹೋಗುತ್ತಿದ್ದ ಇವಿಎ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಸೀಟ್‌ಗಾಗಿ ಮಾರಮಾರಿ ಹೊಡೆದಾಟ ನಡೆಸಿದ್ದಾರೆ. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ವೀಡಿಯೋ ಮಾಡಿದ್ದಾರೆ.

flight fight

ಅಷ್ಟಕ್ಕೂ ಆಗಿದ್ದೇನು?

ತೈವಾನ್‌ನಿಂದ ಕ್ಯಾಲಿಫೋರ್ನಿಯಾಗೆ ಸುದೀರ್ಘ11.5ಗಂಟೆಗಳ ಇವಿಎ ವಿಮಾನ ಪ್ರಯಾಣ ನಡೆಸುತ್ತಿತ್ತು. ಇನ್ನು ವಿಮಾನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಪಕ್ಕದ ಸೀಟ್‌ನಲ್ಲಿ ಕೂತವರು ನಿರಂತರವಾಗಿ ಕೆಮ್ಮುತ್ತಿದ್ದರು. ಹೀಗಾಗಿ ಈತ ಸೀಟ್ ಚೇಂಜ್ ಮಾಡಲು ಮುಂದಾಗಿದ್ದು, ಖಾಲಿ ಇದ್ದ ಸೀಟ್‌ನಲ್ಲಿ ಕುಳಿತುಕೊಳ್ಳುತ್ತಾನೆ. ಅಷ್ಟರಲ್ಲಾಗಲೇ ಮೊದಲೇ ಆ ಸೀಟ್‌ನಲ್ಲಿ ಕುಳಿತಿದ್ದ ವ್ಯಕ್ತಿ ಬಂದು ಸೀಟ್‌ ಬಿಟ್ಟುಕೊಡುವಂತೆ ಕೇಳುತ್ತಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ಹೊಡೆದಾಟಕ್ಕೆ ತಿರುಗುತ್ತದೆ.

WATCH VIDEO : ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ ಯುವಕ; ಈತ ತಬ್ಬಿಕೊಂಡ ಮರಗಳೆಷ್ಟು?

ಇನ್ನು ಇವರಿಬ್ಬರ ಜಗಳವನ್ನು ಬಿಡಿಸಲು ವಿಮಾನ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ಸಹ ಪ್ರಯಾಣಿಕರೂ ಕೂಡಾ ಜಗಳ ಬಿಡಿಸುವಲ್ಲಿ ಮುಂದಾಗಿದ್ದಾರೆ. ಇನ್ನೂ ಇವರಿಬ್ಬರ ಹೊಡೆದಾಟಕ್ಕೆ ಭಯಭೀತರಾದ ಪ್ರಯಾಣಿಕರು ಕಿರುಚಾಡುವುದನ್ನು ವೀಡಿಯೋದಲ್ಲಿ ಕೇಳಬಹುದು. ಇನ್ನು ಫ್ರಾನ್ಸಿಸ್ಕೊಗೆ ತಲುಪಿದ ಬಳಿಕ ಇವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಇನ್ನು ಈ ಸಂದರ್ಭದಲ್ಲಿ ವಿಮಾನ ಸಿಬಂದಿಗಳ ತಾಳ್ಮೆ ಹಾಗೂ ಕಾರ್ಯ ವೈಖರಿಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಡೆದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅತೀ ಹೆಚ್ಚು ವ್ಯೂವ್ಸ್‌ಗಳನ್ನು ಪಡೆದಿದೆ. ಇನ್ನು ಈ ವಿಡಿಯೋಗೆ ಜನರು ಕಮೆಂಟ್‌ಗಳನ್ನು ಹಾಕುತ್ತಿದ್ದು ಪ್ರಶ್ನೆಗಳ ಸುರಿಮಳೆ ಹರಿಸುತ್ತಿದ್ದಾರೆ.

 

 

 

 

Continue Reading

LATEST NEWS

WATCH VIDEO : ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ ಯುವಕ; ಈತ ತಬ್ಬಿಕೊಂಡ ಮರಗಳೆಷ್ಟು?

Published

on

ಮಂಗಳೂರು : ಗಿನ್ನೆಸ್ ದಾಖಲೆ ಮಾಡುವುದು ಹಲವು ಮಂದಿಯ ಕನಸಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಗಿನ್ನೆಸ್ ದಾಖಲೆ ಮಾಡುವ ಕಾರ್ಯ ಮಾಡುತ್ತಾರೆ. ಇಲ್ಲೊಬ್ಬ ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ್ದಾನೆ. ಘಾನಾದ ವಿದ್ಯಾರ್ಥಿ 29 ವರ್ಷದ ಅಬುಬಕರ್ ತಾಹಿರು ಮರಗಳನ್ನು ತಬ್ಬಿ ಗಿನ್ನೆಸ್ ದಾಖಲೆ ಬರೆದಾತ.

ಎಷ್ಟು ಮರಗಳನ್ನು ತಬ್ಬಿಕೊಂಡ ಗೊತ್ತಾ!?

ಮರಗಳನ್ನು ತಬ್ಬಿಕೊಳ್ಳುವ ಮೂಲಕ ವಿಶಿಷ್ಟ ರೀತಿಯಲ್ಲಿ ರೆಕಾರ್ಡ್ ಮಾಡಿದ್ದಾನೆ. ಈತ 1 ಗಂಟೆಯಲ್ಲಿ 1,123 ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನೆಸ್​ ವಿಶ್ವ ದಾಖಲೆ ಮಾಡಿದ್ದಾರೆ. ಅಮೆರಿಕಾದ ಅಲಬಾಮಾದಲ್ಲಿರುವ ಟುಸ್ಕೆಗೀ ರಾಷ್ಟ್ರೀಯ ಅರಣ್ಯದಲ್ಲಿ ಒಂದು ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡಿದ್ದಾನೆ.

ಕೃಷಿ ಸಮುದಾಯದಿಂದ ಬಂದಿರುವ ಅಬುಬಕರ್ ತಾಹಿರು ಪ್ರಕೃತಿ ಮತ್ತು ಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಯುವಕ. ಅರಣ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2023 ರಲ್ಲಿ ಉಎಸ್‌ಎಯ ಅಲಬಾಮಾದ ಆಬರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಮೂಲಕ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಅಬುಬಕರ್ ತಾಹಿರಿಗೆ ಪ್ರಕೃತಿ ಮೇಲಿನ ಆಸಕ್ತಿಯಿಂದಾಗಿಯೇ ಗಿನ್ನೆಸ್​ ವಿಶ್ವ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ : ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ವೀಡಿಯೋ ವೈರಲ್ :

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಅಬುಬಕರ್ ತಾಹಿರು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮೂರು ದಿನಗಳಲ್ಲಿ 9 ಲಕ್ಷದ 98 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವೀಡಿಯೋ ಭಾರೀ ವೈರಲ್​ ಆಗುತ್ತಿದೆ.

Continue Reading

Ancient Mangaluru

ಮೇ.10 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನೆ

Published

on

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನಾ ಸಮಾರಂಭ ಮೇ 10 ರಂದು ಮಧ್ಯಾಹ್ನ 12 ಗಂಟೆಗೆ ಮುಲ್ಕಿಯ ಲಘುವಿ ಕಾಂಪ್ಲೆಕ್ಸ್ ಮುಖ್ಯರಸ್ತೆ ಪಕ್ಷಿಕೆರೆಯಲ್ಲಿ ನಡೆಯಲಿದೆ.

ಮುಲ್ಕಿ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಪಕ್ಷಿಕೆರೆ ಸಂತ ಜುದರ ಪುಣ್ಯಕ್ಷೇತ್ರ ಧರ್ಮಗುರು ಅತಿ ವಂದನೀಯ ಗುರುಗಳು ಮೆಲ್ವಿನ್ ನೊರೊಹ್ನಾ ದ್ವೀಪ ಪ್ರಜ್ವಲಿಸಲಿದ್ದಾರೆ. ಪಕ್ಷಿಕೆರೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀ ಕೆ.ಸೀತಾರಾಮ್ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಗಣಕೀಕೃತ ಬ್ಯಾಂಕಿಂಗ್ ಗೆ ಚಾಲನೆ ನೀಡಲಿದ್ದಾರೆ. ಪಕ್ಷಿಕೆರೆ, ಎಸ್ ಕೋಡಿ, ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಹರಿಪಾದೆ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ಎರಡನೇ ಸ್ಥಾನ

ಸಮಾಜಸೇವಕ ಧನಂಜಯ ಶೆಟ್ಟಿಗಾರ್ ಇ-ಮುದ್ರಾಂಕ ಸೇವೆಗೆ, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಆವರ್ತನ ಠೇವಣಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ ಉಳಿತಾಯ ಖಾತೆಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಟ್ಟಡದ ಮಾಲಕ ಶ್ರೀನಿವಾಸ ಕೋಟ್ಯಾನ್ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.

Continue Reading

LATEST NEWS

Trending