ಎಚ್ಚರ! ಎಚ್ಚರ! ಈರುಳ್ಳಿಯಿಂದ ಹರಡುತ್ತೆಯಂತೆ ಈ ಸೋಂಕು..!
ನವದೆಹಲಿ ; ಇಡೀ ಜಗತ್ತಿಗೇ ಕಂಟಕಪ್ರಾಯವಾಗಿ ಕಾಡುತ್ತಿರುವ ಕೊರೊನಾವೈರಸ್ ಮಹಾಮಾರಿಯ ಹಿಡಿತದಿಂದ ಹೊರಬರಲಾಗದೆ ಜನ ಪರದಾಡುತ್ತಿದ್ದಾರೆ.
ಮಹಾಮಾರಿ ಕರೋನಾ ಜನ-ಜೀವನವನ್ನು ಅಸ್ಥವ್ಯಸ್ಥಗೊಳಿಸಿ ಛಿದ್ರಗೊಳಿಸಿದೆ.
ವಿಶ್ವಾದಾದ್ಯಂತ ಅಪಾರ ಸಾವು ಕಂಡಿದೆ. ಈ ಮಧ್ಯೆ ಹೊಸ ಸೋಂಕಿನ ಬಗ್ಗೆ ಅಘಾತಕಾರಿ ಸುದ್ದಿ ಹೊರಬಿದ್ದಿದೆ.
ಈ ಹೊಸ ಸೋಂಕು ಮನೆಯಲ್ಲಿರುವ ಈರುಳ್ಳಿಯಿಂದಲೇ ಹರಡುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಈ ಸೋಂಕು ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಂನಿಂದ ಹರಡುತ್ತಿದೆ ಎಂದು ತಿಳಿದು ಬಂದಿದೆ.
ಹೊಸ ಸೋಂಕು ಮನೆಯಲ್ಲಿರುವ ಈರುಳ್ಳಿ ಯಿಂದಲೇ ಹರಡುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕೊರೊನಾದಿಂದ ಅತೀ ಹೆಚ್ಚು ಸಾವು ನೋವುಗಳು ದಾಖಲಾಗಿರುವ ಅಮೆರಿಕ ಮತ್ತು ಕೆನಡಾದಲ್ಲಿ ಈ ಪ್ರಕರಣ ಪತ್ತೆಯಾಗಿದೆ. ಕರೋನಾ ಸಾಂಕ್ರಾಮಿಕ ಯುಗದಲ್ಲಿ ಬರುವ ಈ ಹೊಸ ಸೋಂಕಿನಿಂದ ಆರೋಗ್ಯ ಏಜೆನ್ಸಿಗಳು ಆಶ್ಚರ್ಯಚಕಿತರಾಗಿದ್ದಾರೆ.
ಅಮೆರಿಕದ 34 ರಾಜ್ಯಗಳಲ್ಲಿ ಈ ಸೋಂಕು ಹರಡಿದೆ. ಇಲ್ಲಿಯವರೆಗೆ ಒಟ್ಟು ನಾಲ್ಕು ನೂರು ಜನರು ಸೋಂಕಿಗೆ ಒಳಗಾಗಿದ್ದಾರೆ. ಕೆನಡಾದಲ್ಲಿ 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Salmonella Outbreak Update: Don’t eat, serve or sell recalled onions from Thomson International or food made from these onions. Check the list of brand names to see if you have recalled onions: https://t.co/1uvWO6f6cZ pic.twitter.com/U5ORm1d5V0
— CDC (@CDCgov) August 3, 2020