ಭೀಕರ ಚಳಿಗೆ ಅಮೆರಿಕ ತತ್ತರಿಸಿ ಹೋಗಿದ್ದು ಚಳಿ ಹಾಗೂ ಶೀತಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ವಿದ್ಯುತ್, ಹೆದ್ದಾರಿ ಹಾಗೂ ವಿಮಾನಯಾನ ಸೇವೆಗೂ ಅಡಚಣೆಯಾಗಿದೆ. 34 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.
ವಾಷಿಂಗ್ಟನ್: ಭೀಕರ ಚಳಿಗೆ ಅಮೆರಿಕ ತತ್ತರಿಸಿ ಹೋಗಿದ್ದು ಚಳಿ ಹಾಗೂ ಶೀತಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ವಿದ್ಯುತ್, ಹೆದ್ದಾರಿ ಹಾಗೂ ವಿಮಾನಯಾನ ಸೇವೆಗೂ ಅಡಚಣೆಯಾಗಿದೆ. 34 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.
ನ್ಯೂಯಾರ್ಕ್‌ನಲ್ಲಿ 12 ಮಂದಿ, ಕೊಲರಾಡೊದಲ್ಲಿ 4 ಸೇರಿ ಹವಾಮಾನ ಸಂಬಂಧಿತ ಸಾವುಗಳ ಸಂಖ್ಯೆ 34ಕ್ಕೆ ಏರಿದೆ ಎಂದು ವರದಿಯಾಗಿದೆ.
ಕ್ರಿಸ್‌ಮಸ್ ಸಂಭ್ರಮದ ನಡುವೆ ಶೀತಮಾರುತವು ಲಕ್ಷಾಂತರ ಮಂದಿಯನ್ನು ಸಂಕಷ್ಟಕ್ಕೆ ದೂಡಿದೆ.
ಲಕ್ಷಾಂತರ ಮಂದಿ ಅಮೆರಿಕನ್ನರು ವಿದ್ಯುತ್ ಇಲ್ಲದೆ ಕ್ರಿಸ್‌ಮಸ್ ಆಚರಿಸಿದ್ದಾರೆ. ಅಮೆರಿಕದ 48 ರಾಜ್ಯಗಳಲ್ಲಿ ತೀವ್ರ ಚಳಿ ಆವರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ವ್ಯಾಪಕ ಚಳಿ ಹಾಗೂ ಶೀತಮಾರುತದಿಂದ ಯುದ್ಧ ವಲಯದ ರೀತಿಯ ವಾತಾವರಣ ಸೃಷ್ಟಿಯಾಗಿದ್ದು, ರಸ್ತೆ ಬದಿಯಲ್ಲಿರುವ ವಾಹನಗಳ ಸ್ಥಿತಿ ಆಘಾತಕಾರಿಯಾಗಿದೆ.
ಚಂಡಮಾರುತಕ್ಕೆ ನ್ಯೂಯಾರ್ಕ್‍ನ ಬಫೆಲೋ ಸಂಪೂರ್ಣ ನಲುಗಿಹೋಗಿದೆ. ಕೊರೆಯುವ ಚಳಿಯಲ್ಲಿ ಜನ ನಡುಗುತ್ತಿದ್ದಾರೆ.
ಇದರ ಜತೆ ಬಲವಾದ ಗಾಳಿ ಬೀಸುತ್ತಿರುವುದರಿಂದ ಮರ-ಗಿಡಗಳು ಧರೆಗುರುಳುತ್ತಿವೆ. ಭಾರೀ ಹಿಮಪಾತದಿಂದ ಜನರಿಗೆ ವೈದ್ಯಕೀಯ ತುರ್ತುಸೇವೆ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕೆರೊಲಿನಾದಲ್ಲಿ 1,69,000 ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಬಫೆಲೋ ಉಪನಗರ ಚಿಕಾಗೋದಲ್ಲಿ ವೈದ್ಯಕೀಯ ತುರ್ತು ಚಿಕಿತ್ಸೆ ನೀಡಲು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗದೆ ತಮ್ಮ ಮನೆಗಳಲ್ಲೇ ಇದ್ದರೂ ಸಾವನ್ನಪ್ಪಿದ್ದಾರೆ.
ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ಚಂಡಮಾರುತವಾಗಿದೆ ಎಂದು ಅಲ್ಲಿನ ಜನ ಹೇಳಿದ್ದಾರೆ.
ದೇಶದ ರಸ್ತೆಗಳು ಹಾಗೂ ರಸ್ತೆಪಕ್ಕ ನಿಲ್ಲಿಸಿರುವ ವಾಹನಗಳೆಲ್ಲ ಮಂಜಿನಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿವೆ. ವಾಷಿಂಗ್ಟನ್‍ನಿಂದ ಫ್ಲೋರಿಡಾವರೆಗೆ ಹಲವು ರಾಜ್ಯಗಳವರೆಗೆ ತೀವ್ರ ಚಳಿ, ಚಂಡಮಾರುತ, ಹಿಮಪಾತ ಹಾಗೂ ಚಳಿಗಾಲದ ಎಚ್ಚರಿಕೆ ನೀಡಲಾಗಿದೆ.